ಸಿದ್ದರಾಮಯ್ಯಗೆ ಎಐಸಿಸಿ ಮಹತ್ವದ ಹುದ್ದೆ – ಕಾಂಗ್ರೆಸ್ ಹೈಕಮಾಂಡ್‌ನಿಂದ ನೇಮಕ

ಸಿದ್ದರಾಮಯ್ಯಗೆ ಎಐಸಿಸಿ ಮಹತ್ವದ ಹುದ್ದೆ – ಕಾಂಗ್ರೆಸ್ ಹೈಕಮಾಂಡ್‌ನಿಂದ ನೇಮಕ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಹುದ್ದೆ ನೀಡಿದೆ. ಸಿದ್ದರಾಮಯ್ಯ ನೇಮಕಾತಿ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ:ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ರಾಜೀನಾಮೆ – ಸಚಿವರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಹುದ್ದೆ ನೀಡಿದೆ. ರಾಜ್ಯಸಭೆ ಅಥವಾ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಹೈಕಮಾಂಡ್ ಸಿದ್ದುಗೆ ಆಫರ್ ನೀಡಿತ್ತು. ಖುದ್ದು ರಾಹುಲ್ ಗಾಂಧಿಯವ್ರೇ ಸಿದ್ದರಾಮಯ್ಯರನ್ನು ರಾಜ್ಯಸಭೆಗೆ ಆಹ್ವಾನಿಸಿದ್ದರು. ಆದರೆ ಸಿದ್ದರಾಮಯ್ಯ ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿ, ಹೈಕಮಾಂಡ್ ಆದೇಶಿಸಿದೆ.

ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯಿಂದ ಸಿದ್ದರಾಮಯ್ಯ ನೇಮಕಾತಿ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ಆದೇಶಕ್ಕೆ ಸಹಿ ಮಾಡಿದ್ದಾರೆ. ಇದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿ ಮುಗಿದ ನಂತರ ಸಿದ್ದರಾಮಯ್ಯರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹುದ್ದೆಗೆ ಏರಿಸುವ ನಡೆಯಾಗಿದೆ. ಇದು ಪಕ್ಷದ ಉನ್ನತ ನಾಯಕತ್ವದ ನಿರ್ಧಾರವಾಗಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಅಧ್ಯಕ್ಷರು ಇದರ ಮುಖ್ಯಸ್ಥರಾಗಿರುತ್ತಾರೆ. ಪ್ರಸ್ತುತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇದರ ಮುಖ್ಯಸ್ಥರಾಗಿದ್ದಾರೆ.

CWC ಯು ಪಕ್ಷದ ಅತ್ಯುನ್ನತ ಅಧಿಕಾರ ಹೊಂದಿದೆ ಎಂದು ಪಕ್ಷದ ಸಂವಿಧಾನದಲ್ಲಿ ಉಲ್ಲೇಖವಿದೆ. CWC ಸದಸ್ಯರು ಪಕ್ಷದ ಉನ್ನತ ನಾಯಕರು ಆಗಿರುತ್ತಾರೆ. ರಾಜ್ಯಗಳಲ್ಲಿ ಪಕ್ಷದ ಬಲವರ್ಧನೆ, ನಾಯಕರ ನೇಮಕ ಮತ್ತು ಬದಲಾವಣೆಗಳಲ್ಲಿ ಸಲಹೆ ನೀಡುವುದು. ಲೋಕಸಭೆ, ವಿಧಾನಸಭೆ ಚುನಾವಣೆಗಳ ತಯಾರಿ ಮತ್ತು ನಿರ್ವಹಣೆ ಮಾಡುವುದು ಪ್ರಮುಖ ಕಾರ್ಯವಾಗಿದೆ.ಪಕ್ಷದ ವತಿಯಿಂದ ಮಾಧ್ಯಮ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವುದು, ಪಕ್ಷದ ಧ್ವನಿ ಎತ್ತುವುದು. ಅಧ್ಯಕ್ಷರು ಮತ್ತು ಹೈ ಕಮಾಂಡ್ ಗೆ ಸಲಹೆ ನೀಡುವುದು. ಇದು ಗೌರವಾನ್ವಿತ ಹುದ್ದೆ ಆಗಿದ್ದು, ಪಕ್ಷದ ಉನ್ನತ ನಾಯಕತ್ವದಲ್ಲಿ ಭಾಗವಹಿಸುವ ಅವಕಾಶ ನೀಡುತ್ತದೆ. ಸದಸ್ಯರು ಸಾಮಾನ್ಯವಾಗಿ ದೀರ್ಘಕಾಲದ ಅನುಭವಿ ನಾಯಕರು ಆಗಿರುತ್ತಾರೆ.

Sulekha

Leave a Reply

Your email address will not be published. Required fields are marked *