RCB ಟಿಮ್ ಡೇವಿಡ್ BAN – ಗ್ರೌಂಡ್ ನಲ್ಲಿ ಚೇಷ್ಟೆ ಜಾಸ್ತಿಯಾಯ್ತಾ?
BCCI ಕೊಟ್ಟ ವಾರ್ನಿಂಗ್ ಏನು?

ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಆರ್‌ಸಿಬಿ ಪ್ಲೇಯರ್ಸ್ ಇನ್ನೂ ಸೆಲೆಬ್ರೇಷನ್ ಮೂಡ್ನಲ್ಲೇ ಇದ್ದಾರೆ. ಫ್ಯಾನ್ಸ್ ಕೂಡ ಗೆಲುವಿನ ಗುಂಗಲ್ಲೇ ತೇಲ್ತಿದ್ದಾರೆ. ಌಂಡ್ ಓವರ್ಸೀಸ್ ಪ್ಲೇಯರ್ಸ್ ಎಲ್ರೂ ತಮ್ಮ ತಮ್ಮ ರಾಷ್ಟ್ರಗಳಿಗೆ ಹೋಗೋಕೆ ಸಜ್ಜಾಗಿದ್ದಾರೆ. ಇಂಥಾ ಟೈಮಲ್ಲೇ ಆರ್ಸಿಬಿಯ ಸೂಪರ್ ಸ್ಟಾರ್ ಟಿಮ್ ಡೇವಿಡ್ಗೆ ಬ್ಯಾನ್ ಬಿಸಿ ತಟ್ಟಿದೆ. ಗ್ರೌಂಡ್ನಲ್ಲಿನ ಚೇಷ್ಟೆಗಳಿಗೆ ಬಿಸಿಸಿಐ ಬಿಗ್ ವಾರ್ನಿಂಗ್ ಕೊಟ್ಟಿದೆ.
ಇದನ್ನೂ ಓದಿ : RCBಗೆ ಕಪ್.. ಫ್ಯಾನ್ಸ್ FIRE – RED ARMYಯಲ್ಲಿ ಕಳೆದೋದ GT
ಆರ್‌ಸಿಬಿ ಅಂದ್ರೆ ಜಗತ್ತಿನ ಮೋಸ್ಟ್ ಫ್ಯಾನ್ ಬೇಸ್ಡ್ ಟೀಂ ಅನ್ನೋದು ಎಲ್ರಿಗೂ ಗೊತ್ತಿರೋದೇ. ಈ ಸಲ ಕಪ್ ಗೆದ್ಮೇಲೂ ಬರೀ ಭಾರತ ಅಷ್ಟೇ ಅಲ್ಲ ಪಾಕಿಸ್ತಾನದಲ್ಲೂ ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ನೇಪಾಳದಲ್ಲಂತೂ ಬೆಂಗಳೂರು ಟೀಂ ಕಪ್ ಗೆಲ್ಲಲಿ ಅಂತಾ ಹರಕೆ ಎಲ್ಲಾ ಹೊತ್ಕೊಳ್ತಾರೆ. ಸೋ ಇದು ಫ್ಯಾನ್ಸ್ಗೆ ತಂಡದ ಮೇಲಿರೋ ಕ್ರೇಜ್. ಇನ್ನು ಆರ್‌ಸಿಬಿ ಪ್ಲೇಯರ್ಸ್ ಕೂಡ ತುಂಬಾನೇ ಚಿಲ್ ಆಗಿ ಇರುವಂಥದ್ದು. ವಿರಾಟ್ ಕೊಹ್ಲಿ ಫೀಲ್ಡ್ನಲ್ಲಿ ಇರೋದನ್ನ ನೋಡಿದ್ಮೇಲೆ ಜೊತೆಲಿ ಇರೋರೆಲ್ಲಾ ಅದೇ ಮೈಂಡ್ಸೆಟ್ನಲ್ಲೇ ಇರ್ತಾರೆ. ಅಗ್ರೆಶನ್, ಕಾಮಿಡಿ, ಇಮಿಟೇಷನ್ ಎಲ್ಲವೂ ಇದ್ದದ್ದೇ. ಈ ವರ್ಷ ಟಿಮ್ ಡೇವಿಡ್ ಕೂಡ ಸಾಕಷ್ಟು ಫನ್ನಿ ಫನ್ನಿಯಾಗಿ ಇದ್ರು. ಆದ್ರೆ ಅವ್ರ ಕೆಲ ಚೇಷ್ಟೆಗಳು ಮಿತಿ ಮೀರಿತ್ತು. ಅದಕ್ಕೆ ಈಗ ಬ್ಯಾನ್ ಬಿಸಿ ತಟ್ಟಿದೆ.
ಟಿಮ್ ಡೇವಿಡ್ ಗೆ ಬ್ಯಾನ್ ಶಿಕ್ಷೆ ನೀಡಿದ ಬಿಸಿಸಿಐ!
ಬೆಂಗಳೂರು ತಂಡದ ಸ್ಟಾರ್ ಆಟಗಾರ ಟಿಮ್ ಡೇವಿಡ್ಗೆ ಬಿಸಿಸಿಐ ಒಂದು ಪಂದ್ಯದಿಂದ ನಿಷೇಧದ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, 2 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ. ಹೀಗಾಗಿ ಟಿಮ್ ಡೇವಿಡ್ 2027 ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಬಿಸಿಸಿಐ ಇಂಥಾ ನಿರ್ಧಾರಕ್ಕೆ ಕಾರಣ ಗುಜರಾತ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿನ ವರ್ತನೆ. ಗುಜರಾತ್ ಬ್ಯಾಟಿಂಗ್ ವೇಳೆ, 10ನೇ ಓವರ್‌ನಲ್ಲಿ ಗುಜರಾತ್ ತಂಡದ ವಿಕೆಟ್ ಬಿದ್ದಾಗ ಡೇವಿಡ್ ಅಗ್ರೆಸ್ಸಿವ್ ಆಗಿ ವರ್ತಿಸಿದ್ದಾರೆ. ಅಂಪೈರ್ ನಿತಿನ್ ಮೆನನ್ ಅವರ ಕಡೆಗೆ ಐಸ್‌ಬ್ಯಾಗ್ ಎಸೆದಿದ್ದಾರೆ. ಈ ವರ್ತನೆ ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಶಿಕ್ಷೆಗೆ ಒಳಗಾಗಿದ್ದು ಡೇವಿಡ್ ತನ್ನ ತಪ್ಪನ್ನು ಒಪ್ಪಿಕೊಂಡು ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಹಾಗಂತ ಈ ಸೀಸನ್ ನಲ್ಲಿ ಟಿಮ್ ಡೇವಿಡ್ ಇದೊಂದೇ ಅಲ್ಲ ಸಾಕಷ್ಟು ಸಲ ಚೇಷ್ಟೆಗಳನ್ನ ಮಾಡಿದ್ದಾರೆ.
ಅಂಪೈರ್ ಕೈಗೆ ಬಾಲ್ ಕೊಡದೆ ಚೆಲ್ಲಾಟ.. ಗೆದ್ದಾಗ ಅಶ್ಲೀಲ ಸಂಭ್ರಮಾಚರಣೆ!
ಇನ್ನು ಇದೇ ಸೀಸನ್ನಲ್ಲೇ ಮುಂಬೈ ವಿರುದ್ಧದ ಪಂದ್ಯದಲ್ಲಿ ಟಿಮ್ ಡೇವಿಡ್ ಅಂಪೈರ್ ಜೊತೆ ತಮಾಷೆ ಮಾಡಲು ಹೋಗಿ ಅಮಾಸೆ ಮಾಡ್ಕೊಂಡಿದ್ರು. ಆರ್ ಸಿಬಿ ಇನ್ನಿಂಗ್ಸ್ ವೇಳೆ ಅಂಪೈರ್ ಗಳು ಚೆಂಡು ಬದಲಿಸಿದ್ದರಿಂದ ಅನುಮಾನಗೊಂಡ ಟಿಮ್ ಡೇವಿಡ್ ಚೆಂಡನ್ನು ತಿರುಗಿಸುತ್ತಾ ಚೆಕ್ ಮಾಡ್ತಿದ್ರು. ಔಟ್‌ಫೀಲ್ಡ್‌ನಲ್ಲಿ ತೇವಾಂಶ ಇದ್ದ ಕಾರಣ ಚೆಂಡು ಒದ್ದೆಯಾಗಿತ್ತು ಹಾಗಾಗಿ ಅಂಪೈರ್‌ಗಳು ನಿಯಮದಂತೆ ಹಳೆಯ ಚೆಂಡಿನ ಬಾಕ್ಸ್ ತರಿಸಿ ಹೊಸ ಚೆಂಡನ್ನು ಆಯ್ಕೆ ಮಾಡಿದು ಬೌಲ್ ಮಾಡಲು ತಿಳಿಸಿದರು.. ಅದೇ ವೇಳೆ ಆರ್‌ಸಿಬಿ ಬ್ಯಾಟರ್ ಟಿಮ್ ಡೇವಿಡ್ ಓಡಿ ಬಂದು ಅಂಪೈರ್ ಆಯ್ಕೆ ಮಾಡಿದ ಬಾಲನ್ನೇ ಕೈಗೆತ್ತಿಕೊಂಡ ಟಿಮ್ ಡೇವಿಡ್, ಅದರ ಆಕಾರ ಮತ್ತು ತೂಕವನ್ನು ಪದೇ ಪದೇ ತಿರುಗಿಸಿ ಪರೀಕ್ಷಿಸಲು ಶುರು ಮಾಡಿದರು. ಇದು ಕೂಡ ಅಂಪೈರ್ ಕರ್ತವ್ಯಕ್ಕೆ ಅಡ್ಡಿ ಅಂತಾ 1 ಡಿಮೆರಿಟ್ ಅಂಕ ನೀಡ್ಲಾಗಿತ್ತು. ಇನ್ನು ಇದೇ ಮುಂಬೈ ವಿರುದ್ಧದ ರಿವೇಂಜ್ ಮ್ಯಾಚ್ನಲ್ಲಿ ಮತ್ತದೇ ವಿವಾದ ಮಾಡ್ಕೊಂಡಿದ್ರು. ಕೊನೆಯ ಬಾಲಲ್ಲಿ ಆರ್‌ಸಿಬಿ ಗೆಲ್ತಾ ಇದ್ದಂತೆ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ಡಗೌಟ್‌ನ ಕಡೆಗೆ ನೋಡುತ್ತ ಅಶ್ಲೀಲ ಸನ್ನೆಯಿಂದ ಸೆಲೆಬ್ರೇಟ್ ಮಾಡಿದ್ರು. ಇದೂ ಕೂಡ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವರ್ತನೆಗೂ ದಂಡ ವಿಧಿಸಿ 2 ಡಿಮೆರಿಟ್ ಅಂಕ ನೀಡ್ಲಾಗಿತ್ತು. ಸೋ ಟೋಟಲ್ ಐದು ಡಿಮೆರಿಟ್ ಅಂಕ ಬಂದಿದ್ದಕ್ಕೆ ಒಂದು ಪಂದ್ಯದಿಂದ ನಿಷೇಧ ವಿಧಿಸಲಾಗಿದೆ.
ಪವರ್ಹಿಟ್ಟಿಂಗ್ ಗೆ ಹೆಸರಾಗಿರೋ ಟಿಮ್ ಡೇವಿಡ್ ಆರ್‌ಸಿಬಿ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಪ್ರತೀ ಮೂಮೆಂಟ್ನೂ ಎಂಜಾಯ್ ಮಾಡ್ತಾರೆ. ಮ್ಯಾಚ್ ವೇಳೆ ಬೌಂಡರಿ ಕುಷನ್ ಮೇಲೆ ಮಲ್ಗೋದು, ಸಿಂಹಗಳ ಜೊತೆ ಫೋಟೋ ಎಡಿಟ್ ಮಾಡಿ ಹಾಕೊಳ್ಳೋದು, ಫಿಲ್ ಸಾಲ್ಟ್ ರಿಕವರಿ ಫೋಟೋಗೆ ಫನ್ನಿ ಕಮೆಂಟ್ಸ್ ಮಾಡೋದು, ಈಗ ಆರ್‌ಸಿಬಿ ಚಾಂಪಿಯನ್ಸ್ ವಿಕ್ಟರಿ ಮತ್ತು ಸಿಂಹಗಳ ಫೋಟೋ ಇರೋ ಟೀ ಶರ್ಟ್ ಹಾಕ್ಕೊಂಡು ಇನ್ಸ್ಟಾದಲ್ಲೂ ಹಾಕಿಕೊಂಡಿದ್ದಾರೆ. ಆದ್ರೆ ಪಂದ್ಯದ ವೇಳೆ ಸ್ವಲ್ಪ ಓವರ್ ಆಯ್ತು ಅನ್ನೋ ಥರ ಬಿಹೇವ್ ಮಾಡಿ ಈಗ ಶಿಕ್ಷೆಗೆ ಗುರಿಯಾಗಿದ್ದಾರೆ. ಕ್ರಿಕೆಟ್ ಈಸ್ ಎ ಜೆಂಟಲ್ಮೆನ್ ಗೇಮ್. ಸೋ ನೆಕ್ಸ್ಟ್ ಸೀಸನ್ನಲ್ಲಿ ಸ್ವಲ್ಪ ಕೇರ್ಫುಲ್ ಆಗಿ ಇರ್ಬೇಕಾಗುತ್ತೆ. ಹಂಗಂತ ಮಷ್ಕಿರಿ ಮಾಡೋದೇ ಬೇಡ ಅಂತಲ್ಲ. ವಿರಾಟ್ ಕೊಹ್ಲಿ ಥರ ಲಿಮಿಟ್ಸ್ನಲ್ಲಿ ಇರ್ಬೇಕು. ಅತಿಯಾಗೋದು ಬೇಡ ಅಷ್ಟೇ.

ನೋಡಿರಿ

