ದಿಯಾ ಬೇಬಿ ಪಾತ್ರ ಅಂತ್ಯ –ಮಿಂಚುಗೆ ರಿಯಲ್ ಅಮ್ಮ ಭೂಮಿ ಅನ್ನೋ ಸತ್ಯ ಗೊತ್ತಾಗುತ್ತಾ?

ದಿಯಾ ಬೇಬಿ ಪಾತ್ರ ಅಂತ್ಯ –ಮಿಂಚುಗೆ ರಿಯಲ್ ಅಮ್ಮ ಭೂಮಿ ಅನ್ನೋ ಸತ್ಯ ಗೊತ್ತಾಗುತ್ತಾ?

ಅಮೃತಧಾರೆ ಈಗ ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದೆ. ಒಬ್ಬೊಬ್ಬರಂತೆ ವಿಲನ್ ಪಾತ್ರ ಅಂತ್ಯವಾಗುತ್ತಿದೆ. ಈ ಮಧ್ಯೆ ಜೈದೇವ್ ಪಾಪದ ಕೊಡ ತುಂಬುತ್ತಾ ಬಂದಿದೆ.

ಇದನ್ನೂ ಓದಿ:ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ ಸಿನಿಮಾ ಶೂಟಿಂಗ್ ಶುರು – ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್

ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಬೇಬಿ ಪಾತ್ರ ಮಾಡುತ್ತಿದ್ದಾರೆ ನಟಿ ಶ್ವೇತಾ. ಇತ್ತೀಚೆಗಷ್ಟೇ ಶ್ವೇತಾ ಅವರು ಮದುವೆಯಾಗಿದ್ದಾರೆ. ಹೀಗಾಗಿ ದಿಯಾ ಪಾತ್ರದಿಂದ ಶ್ವೇತಾ ಹೊರಬರುವ ಬದಲು ದಿಯಾ ಪಾತ್ರವನ್ನೇ ಎಂಡ್ ಮಾಡಿದ್ದಾರೆ ಸೀರಿಯಲ್ ನಿರ್ದೇಶಕರು. ಹೀಗಾಗಿ ಧಾರಾವಾಹಿಯಲ್ಲಿ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ. ಕೇಡಿ ಜೆಡಿ ದಿಯಾ ಬೇಬಿಯ ಕಥೆ ಮುಗಿಸಿದ್ದಾನೆ.

ಗೌತಮ್-ಭೂಮಿಕಾ ಕಳೆದುಕೊಂಡಿದ್ದ ಮಗಳು ಮಿಂಚು, ದತ್ತು ರೂಪದಲ್ಲಿ ಅವರ ಮನೆಯಲ್ಲೇ ಬೆಳೆಯುತ್ತಿರುವ ರಹಸ್ಯ ಜೈದೇವ್‌ ಗೆ ಗೊತ್ತಾಗಿದೆ. ಈ ರಹಸ್ಯ ದಿಯಾಗೂ ಗೊತ್ತಾಗಿದೆ. ದಿಢೀರ್ ಒಳ್ಳೆಯವಳಾದ ದಿಯಾ ಗೌತಮ್ ಮತ್ತು ಭೂಮಿಕಾಗೆ ಸತ್ಯ ಹೇಳಲು ಹೊರಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಜೈದೇವ್ ದಿಯಾಳನ್ನು ಸಾಯಿಸಿದ್ದಾನೆ.

ಮತ್ತೊಂದೆಡೆಗೌತಮ್ ಮಾವ ಲಕ್ಷ್ಮೀಕಾಂತ್​​ನ ಕಿಡ್ನ್ಯಾಪ್ ಮಾಡಿ ತನ್ನ ಬಳಿ ಇಟ್ಟುಕೊಂಡಿದ್ದಾನೆ ಜೈದೇವ್. ಮತ್ತೊಂದೆಡೆ ಲಕ್ಷ್ಮೀಕಾಂತ್ ಜೆಡಿ ಕೈಯಿಂದ ತಪ್ಪಿಸಿಕೊಳ್ಳಲು ನೋಡ್ತಿದ್ದಾನೆ. ಮಾವನಿಂದ ಗೌತಮ್‌ಗೆ ಸತ್ಯ ಗೊತ್ತಾಗುವ ಸಮಯ ಹತ್ತಿರ ಬಂದರೂ ಬರಬಹುದು.

ಮತ್ತೊಂದೆಡೆ ಮಹಿಮಾ ತಾಯ್ತನ ಸಿಗದ ನೋವಲ್ಲಿದ್ದಾಳೆ. ಹೀಗಾಗಿ ಭೂಮಿ ಮತ್ತು ಗೌತಮ್ ಮಿಂಚುವನ್ನು ಮಹಿಮಾ ಬಳಿ ಬಿಡಲು ನಿರ್ಧರಿಸಿದ್ದಾರೆ. ಆದರೆ, ಮಿಂಚುವೇ ಸ್ವಂತ ಮಗಳು ಅಂತಾ ಗೊತ್ತಾದ ಮೇಲೆ ಕಥೆ ಹೇಗೆ ಸಾಗುತ್ತದೆ ಎಂಬ ಕುತೂಹಲ ವೀಕ್ಷಕರದ್ದು.

Sulekha

Leave a Reply

Your email address will not be published. Required fields are marked *