RCBಗೆ ಕಪ್.. ಫ್ಯಾನ್ಸ್ FIRE – RED ARMYಯಲ್ಲಿ ಕಳೆದೋದ GT
ಹೇಗಿದೆ LOYAL FANS ನಗಾರಿ?

RCBಗೆ ಕಪ್.. ಫ್ಯಾನ್ಸ್ FIRE – RED ARMYಯಲ್ಲಿ ಕಳೆದೋದ GTಹೇಗಿದೆ LOYAL FANS ನಗಾರಿ?

ಕಪ್ ಇಲ್ಲ ಕಪ್ ಇಲ್ಲ ಅಂತಾ ಕೆಣಕುತ್ತಿದ್ದವ್ರೆಲ್ಲಾ ಈಗ ಹೊಟ್ಟೆಕಿಚ್ಚಿಂದ ಒದ್ದಾಡ್ತಿದ್ದಾರೆ. ಯಾಕಂದ್ರೆ ವರ್ಷ ತುಂಬೋ ಮೊದ್ಲೇ ಆರ್​ಸಿಬಿ 2 ಟ್ರೋಫಿ ಗೆದ್ದಾಯ್ತು. ಌಂಡ್ ಲಾಸ್ಟ್ 3 ಇಯರ್ಸ್​ನಲ್ಲಿ ಟೋಟಲ್ 4 ಟ್ರೋಫಿ ಬೇಟೆಯಾಡಿದೆ. ಸಿಂಹಿಣಿಯರು 2 ಕಪ್, ನಮ್ಮ ಲಯನ್ಸ್ 2 ಕಪ್. ಬೆಂಗಳೂರು ಟೀಂ ಕಪ್ ಗೆಲ್ಲದೆ ಇದ್ದಾಗ್ಲೇ ತಲೆಮೇಲೆ ಹೊತ್ತು ಮೆರೆಸಿದ್ದ ಫ್ಯಾನ್ಸ್ ಇನ್ನು ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಅಂದ್ರೆ ಬಿಡ್ತಾರಾ. ನಿನ್ನೆ ನೈಟ್ ಹಬ್ಬನೇ ಮಾಡಿಬಿಟ್ಟಿದ್ದಾರೆ. ಒಂದ್ಕಡೆ ಪ್ಲೇಯರ್ಸ್ ಕುಣಿದು ಕುಪ್ಪಳಿಸ್ತಿದ್ರೆ ಮತ್ತೊಂದ್ಕಡೆ ಅಭಿಮಾನಿಗಳು ಜಾತ್ರೆಯನ್ನೇ ಮಾಡಿದ್ದಾರೆ.

ಇದನ್ನೂ ಓದಿ : ಎರಡನೇ ಸಲವೂ ಕಪ್ ನಮ್ದೇ – ಗುಜರಾತ್ ಟೈಟಾನ್ಸ್ ಸೋಲಿಸಿ RCB ಚಾಂಪಿಯನ್

2025ರ ಜೂನ್ 3.. ಆರ್​ಸಿಬಿ ಪಾಲಿಗೆ ಐತಿಹಾಸಿಕ ಕ್ಷಣ. ಚೊಚ್ಚಲ ಟ್ರೋಫಿ ಗೆದ್ದು ಬೀಗಿದ ದಿನ. 2026ರ ಮೇ 31. ಎರಡನೇ ಟ್ರೋಫಿ ಎತ್ತಿ ಹಿಡಿದು ಇತಿಹಾಸ. ಐಪಿಎಲ್​ನಲ್ಲಿ ಈಗ ಅಕ್ಷರಶಃ ಆರ್​ಸಿಬಿ ಎರಾ ಸ್ಟಾರ್ಟ್ ಆಗಿದೆ. ಟ್ರೋಫಿ ಹತ್ತಿರಕ್ಕೆ ಬಂದು ಗೆಲ್ಲೋಕಾಗದೇ ಚೋಕರ್ಸ್ ಹಣೆಪಟ್ಟಿ ಹೊತ್ತವರು ಈಗ ಡಾಮಿನೇಷನ್ ಮಾಡ್ತಾ ಮೆರೀತಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಕಪ್ ಎತ್ತಿ ಹಿಡಿದಿದ್ದಾರೆ.

ಆರ್​ಸಿಬಿ ಕ್ಯಾಂಪ್ ಸೇರಿ ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದಿದ್ದಕ್ಕೆ ಆಲ್​ರೌಂಡರ್ ಕೃನಾಲ್ ಪಾಂಡ್ಯ ಅಂತೂ ಗ್ರೌಂಡ್​ನಲ್ಲಿ ಫುಲ್ ಜೋಶ್​ನಲ್ಲಿದ್ರು. ತಮ್ಮ ಮಗನ ಜೊತೆ ಮಗುವಿನಂತೆಯೇ ಸಂಭ್ರಮಿಸಿದ್ರು.

ಸ್ಟೇಡಿಯಮ್​ನಿಂದ ಶುರುವಾದ ಸೆಲೆಬ್ರೇಷನ್ ಮೂಡ್​ ಹೋಟೆಲ್​ವರೆಗೂ ಸಾಗಿತ್ತು. ಡೋಲು ಬಡಿಯೋ ಮೂಲಕ ಹೋಟೆಲ್​ನಲ್ಲಿ ಚಾಂಪಿಯನ್ಸ್ ಭರ್ಜರಿ ಸ್ವಾಗತ ಕೋರಿದ್ರು. ಈ ವೇಳೆ ಕೃನಾಲ್ ಪಾಂಡ್ಯ, ರಜತ್ ಪಾಟಿದಾರ್, ಕಿಂಗ್ ಕೊಹ್ಲಿ ಸೇರಿದಂತೆ ಆಟಗಾರರೆಲ್ಲಾ ಕುಣಿದು ಕುಪ್ಪಳಿಸಿದ್ರು.

ಇನ್ನು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕೂಡ ಆರ್​ಸಿಬಿ ಗೆಲುವನ್ನ ಸಂಭ್ರಮಿಸಿದ್ರು. ಕ್ವಾಲಿಫೈಯರ್ 1 ಮ್ಯಾಚಲ್ಲಿ ಗ್ರೌಂಡ್​ನಲ್ಲಿ ಕುಳಿತು ಮ್ಯಾಚ್ ನೋಡಿದ್ದ ಕ್ರಿಸ್ ಗೇಲ್ ಫೈನಲ್ ಪಂದ್ಯವನ್ನ ಬಿಗ್ ಸ್ಕ್ರೀನ್ ನಲ್ಲಿ ನೋಡಿ ಎಂಜಾಯ್ ಮಾಡಿದ್ರು. ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದಿದ್ದಕ್ಕೆ ವಿಶ್ ಮಾಡಿದ್ರು.

ಇದೆಲ್ಲಾ ಪ್ಲೇಯರ್ಸ್ ಸಂಭ್ರಮ ಆದ್ರೆ ಫ್ಯಾನ್ಸ್ ವಿರಾಟ್ ಕೊಹ್ಲಿ ವಿನ್ನಿಂಗ್ ಸಿಕ್ಸ್ ಬಾರಿಸ್ತಾ ಇದ್ದಂತೆ ಬೆಂಗಳೂರಿನಲ್ಲಿ ಪಟಾಕಿಗಳದ್ದೇ ಸದ್ದು. ಉದ್ಯಾನನಗರಿಗ ಗಗನಚುಂಬಿ ಕಟ್ಟಡಗಳನ್ನೂ ದಾಟಿ ಪಟಾಕಿಗಳು ಆಗಸಲ್ಲಿ ಚಿತ್ತಾರ ಮೂಡಿಸಿದ್ವು.

ಬೆಂಗಳೂರಿನಲ್ಲಂತೂ ಅಭಿಮಾನಿಗಳೆಲ್ಲಾ ರಸ್ತೆಗಿಳಿದು ಕುಣಿದು ಕುಪ್ಪಳಿಸಿದ್ರು. ಆರ್ ಸಿಬಿ ಆರ್ ಸಿಬಿ ಅಂತಾ ಘೋಷಣೆ ಕೂಗುತ್ತಾ ಸೆಲೆಬ್ರೇಟ್ ಮಾಡಿದ್ರು.

ಮತ್ತೊಂದ್ಕಡೆ ಟ್ರೋಫಿ ಹಿಡಿದು ಪ್ಲೇಯರ್ಸ್ ಮಾತ್ರ ಅಲ್ಲ ನಾವೂ ಎಂಜಾಯ್ ಮಾಡ್ತೀವಿ ಅಂತಾ ಕೆಲ ಫ್ಯಾನ್ಸ್ ಕೂಡ ಟ್ರೋಫಿ ಎತ್ಕೊಂಡೇ ಬಂದಿದ್ರು. ಬೈಕ್ ಮೇಲೆ ಕುಳಿತು ಟ್ರೋಫಿಯನ್ನ ತೋರಿಸುತ್ತಾ ನಾವೇ ಚಾಂಪಿಯನ್ಸ್ ಅಂತಾ ಮೆರವಣಿಗೆ ಮಾಡಿದ್ರು.

ಇನ್ನು ಗಣೇಶ್ ಗುರಿಯಲ್ಲಿ ಅಭಿಮಾನಿಯೊಬ್ಬ ಎಕ್ಸೈಟ್ ಮೆಂಟ್ ​ನಲ್ಲಿ ರಸ್ತೆಯಲ್ಲಿ ಅಳವಡಿಸಿದ್ದ ಕಂಬದ ಮೇಲೆ ಹತ್ತಿಬಿಟ್ಟಿದ್ದ. ಅವ್ನನ್ನ ಕೆಳಗಿಳಿಸೋಕೆ ಪೊಲೀಸರು ಲಾಠಿ ರುಚಿ ತೋರಿಸಬೇಕಾಯ್ತು. ಆದ್ರೆ ಪೊಲೀಸರ ಏಟಿಗೂ ಬಗ್ಗದ ಆತ ಮೇಲೆ ಮೇಲೆ ಹತ್ತಿ ಪೊಲೀಸರ ತಲೆಬಿಸಿ ಹೆಚ್ಚಿಸಿದ್ದ.

ಇನ್ನು ದಾವಣಗೆರೆಯಲ್ಲಿ ಸೆಲೆಬ್ರೇಷನ್ ವೇಳೆಯೂ ಫ್ಯಾನ್ಸ್ ಮಾನವೀಯತೆ ಮೆರೆದಿದ್ದಾರೆ. ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವಾಗ ಌಂಬುಲೆನ್ಸ್ ಬಂದಿದ್ದು ಈ ವೇಳೆ ಌಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ. ಌಂಬುಲೆನ್ಸ್ ಪಾಸ್ ಆದ್ಮೇಲೆ ಮತ್ತೆ ಕುಣಿದು ಕುಪ್ಪಳಿಸಿದ್ದಾರೆ.

ಇನ್ನು ಕೊಪ್ಪಳದಲ್ಲಿ ಅಂಗಡಿಗಳ ಮೇಲೆಲ್ಲಾ ಆರ್​ಸಿಬಿ ಫ್ಲ್ಯಾಗ್ ರಾರಾಜಿಸ್ತಾ ಇತ್ತು. ಜಾತ್ರೆ ರೇಂಜ್​ನಲ್ಲಿ ರೆಡ್ ಆರ್ಮಿಯ ಜೆರ್ಸೆಗಳು ಎಲ್ಲರ ಕಣ್ಸೆಳೆಯುತ್ತಿದ್ವು. ಇನ್ನು ಇದೆಲ್ಲದ್ರ ನಡುವೆ ಅಹಮದಾಬಾದ್​ನಲ್ಲಿ ಆರ್​ಸಿಬಿ ಅಭಿಮಾನಿಗಳ ಪ್ರವಾಹವೇ ಹರಿದಿತ್ತು. ಪಂದ್ಯ ಗುಜರಾಥ್​ನಲ್ಲಿ ನಡೆಯುತ್ತಿದ್ದು ಗುಜರಾಥ್ ತಂಡ ಕೂಡ ಫೈನಲ್​ಗೆ ಬಂದಿದ್ರೂ ಅಲ್ಲಿ ಸಪೋರ್ಟ್​ಗೆ ಬಂದಿದ್ದು ಆರ್​ಸಿಬಿ ಫ್ಯಾನ್ಸ್. ಅಂದ್ರೆ 80 ಪರ್ಸೆಂಡ್ ರೆಡ್ ಜೆರ್ಸಿಯೇ ಕಾಣ್ತಿತ್ತು.

ಹೀಗೆ ಬೆಂಗಳೂರು ಫ್ಯಾನ್ಸ್ ತಮ್ಮ ಅಚ್ಚುಮೆಚ್ಚಿನ ತಂಡದ ಗೆಲುವನ್ನ ತಮ್ಮ ಮನೆಯ ಹಬ್ಬದಂತೆ ಸೆಲೆಬ್ರೇಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಅವ್ರನ್ನ ಲಾಯಲ್ ಫ್ಯಾನ್ಸ್ ಅನ್ನೋದು. ಇನ್ನು ಇದೇ ಅಭಿಮಾನಿಗಳ ಕ್ರೇಜ್​ಗೆ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಹಾಗೇ ಸದ್ಯ ಕಾಮೆಂಟೇಟರ್ ಕೂಡ ಆಗಿರುವ ಇಯಾನ್ ಬಿಶಬ್ ಹಾಡಿ ಹೊಗಳಿದಿದ್ದಾರೆ. ದಿಸ್ ಈಸ್ ನಾಟ್ ಎ ಫ್ಯಾನ್ ಬೇಸ್.. ದಿ ಈಸ್ ಌನ್ ಆರ್ಮಿ ಎಂದಿದ್ದಾರೆ. ಆರ್​ಸಿಬಿ ಜೆರ್ಸಿಗಳ ನಡುವೆ ಹೋಂ ಟೀಂ ಗುಜರಾಥ್ ಸಪೋರ್ಟರ್ಸ್ ಯಾರನ್ನೂ ನಾನು ಸ್ಟೇಡಿಯಮ್​ನಲ್ಲೇ ನೋಡ್ಲೇ ಇಲ್ಲ ಅಂತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಬೆಂಗಳೂರು ಕಪ್ ಗೆದ್ದಾಯ್ತು. ಫ್ಯಾನ್ಸ್ ಕ್ರೇಜ್ ಮತ್ತಷ್ಟು ಹೆಚ್ಚಾಯ್ತು. ಕಪ್ ಇಲ್ಲ ಕಪ್ ಇಲ್ಲ ಅಂತಾ ಅಣಕ ಮಾಡ್ತಿದ್ದವ್ರೆಲ್ಲಾ ಈಗ ಬಿಲ ಸೇರ್ಕೊಂಡಿದ್ದಾರೆ. ಆರ್​ಸಿಬಿ ಬಾಯ್ಸ್ ಹವಾ ನೋಡಿದ್ರೆ ನೆಕ್ಸ್​ಟ್ ಸೀಸನ್​ನಲ್ಲಿ ಹ್ಯಾಟ್ರಿಕ್ ಹೊಡೆದ್ರೂ ಅಚ್ಚರಿ ಏನಿಲ್ಲ.

Shantha Kumari

Leave a Reply

Your email address will not be published. Required fields are marked *