ದೇವರು ಕಳಿಸಿದ ಕ್ರಿಕೆಟ್‌ ರಾಯಭಾರಿ ವೈಭವ್! – ಆರ್‌ಸಿಬಿ ಪ್ಲೇಯರ್ಸ್‌ಗಿಂತ ಸೂರ್ಯವಂಶಿಗೆ ಹೆಚ್ಚು ಹಣ?

ದೇವರು ಕಳಿಸಿದ ಕ್ರಿಕೆಟ್‌ ರಾಯಭಾರಿ ವೈಭವ್!  – ಆರ್‌ಸಿಬಿ ಪ್ಲೇಯರ್ಸ್‌ಗಿಂತ ಸೂರ್ಯವಂಶಿಗೆ ಹೆಚ್ಚು ಹಣ?

ನಿನ್ನ ಮನೆಯಲ್ಲಿ ಪ್ರಶಸ್ತಿಗಳನ್ನು ಇಡೋದಕ್ಕೆ ಒಂದು ದೊಡ್ಡ ಅಲ್ಮೆರಾ ಮಾಡಿಸ್ಬೇಕು.. ಇಷ್ಟೆಲ್ಲಾ ಪಡೆದಿರೋ ನಿನಗೆ ಇನ್ನು ಮುಂದೆಯೂ ದೊಡ್ಡ ದೊಡ್ಡ ಪ್ರಶಸ್ತಿಗಳು ಬರಬಹುದು.. ಅದಕ್ಕೆ ಮನೇಲಿ ಈಗಿರೋ ಅಲ್ಮೆರಾ ಸಾಕಾಗೋದಿಲ್ಲ ಎಂದು ವೈಭವ್‌ ಸೂರ್ಯವಂಶಿಗೆ ಐಪಿಎಲ್‌ನಲ್ಲಿ ಬಂದಿರೋ ಒಂದಾದ ಮೇಲೊಂದು ಟ್ರೋಫಿಗಳನ್ನು ನೋಡುತ್ತಾ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಹೇಳಿದಾಗ.. ಆಯ್ತು ಸರ್‌.. ಅಂತ ಮುಗ್ದವಾಗಿ ನಗುತ್ತಾ ಹೇಳಿದ್ದಾನೆ ವೈಭವ್‌ ಸೂರ್ಯವಂಶಿ.. ಈ 15ರ ಹುಡುಗ ಕ್ರಿಕೆಟ್‌ನ ವೈಭವವನ್ನೇ ಹೆಚ್ಚಿಸಿದ್ದಾನೆ.. ಟಿ20 ಕ್ರಿಕೆಟ್‌ಗೆ ಸೂರ್ಯನ ಮೆರುಗು ತಂದಿದ್ದಾನೆ.. ಆತನ ಬಗ್ಗೆ ಎಷ್ಟು ಹೇಳಿದ್ರೂ ಸಾಲದು.. ಅವನ ಪ್ರತಿಭೆಯನ್ನು ಎಷ್ಟು ಹೊಗಳಿದ್ರೂ ಕಡಿಮೆಯೇ.. ವೈಭವ್‌ ಸೂರ್ಯವಂಶಿಯ ಸೃಷ್ಟಿಸಿರುವುದು ಕೇವಲ ಸಿಕ್ಸರ್‌ಗಳ ದಾಖಲೆಯಲ್ಲ.. ಆತನ ಹೆಜ್ಜೆಯೇ ಕ್ರಿಕೆಟ್‌ ಲೋಕದಲ್ಲಿ ಹೊಸ ಬಿರುಗಾಳಿ ಎಬ್ಬಿಸುತ್ತಿದೆ.. ವೈಭವ್‌ ಸೂರ್ಯವಂಶಿ ಎಂಬ ಮೋಸ್ಟ್‌ ಸ್ಟೈಲಿಶ್‌ ಬ್ಯಾಟ್ಸ್‌ಮನ್‌್ ಐಪಿಎಲ್‌ನಲ್ಲಿ ಮಾಡಿರುವ ಸಾಧನೆಯ ಝಲಕ್‌ ಇಲ್ಲಿದೆ.

2026ನೇ ಸಾಲಿನ ಎಮರ್ಜಿಂಗ್‌ ಪ್ಲೇಯರ್‌ ಆಪ್‌ ದಿ ಸೀಸನ್‌ – ಸೂರ್ಯವಂಶಿ.. ಬೆಸ್ಟ್‌ ಸ್ಟ್ರೈಕ್‌ ರೇಟ್‌ ಆಫ್‌ ದಿ ಸೀಸನ್‌ –  ವೈಭವ್‌.. ಮೋಸ್ಟ್‌ ವ್ಯಾಲ್ಯುವೇಬಲ್‌ ಪ್ಲೇಯರ್‌ ಆಫ್‌ ದಿ ಸೀಸನ್‌.. ಸೂರ್ಯವಂಶಿ.. ಮೋಸ್ಟ್‌ ಸಿಕ್ಸಸ್‌ ಆಫ್‌ ದಿ ಸೀಸನ್‌- ವೈಭವ್‌.. ಅತಿಹೆಚ್ಚು ರನ್‌ ಗಳಿಸಿದ ಆರೆಂಜ್‌ ಕ್ಯಾಪ್‌ ಬ್ಯಾಟ್ಸ್‌ಮನ್‌ ಸೂರ್ಯವಂಶಿ.. ಸತತ ಎರಡನೇ ಬಾರಿ ಐಪಿಎಲ್‌ ಟೈಟಲ್‌ ಗೆದ್ದಿದ್ದು ಆರ್‌ಸಿಬಿ.. ಆದ್ರೆ ಒಬ್ಬ ಬ್ಯಾಟ್ಸ್‌ಮನ್‌ ಗಳಿಸಬಹುದಾದ ಅತಿಹೆಚ್ಚು ಫೋರ್‌ಗಳನ್ನು ಹೊರತುಪಡಿಸಿದ ಎಲ್ಲಾ ಪ್ರಶಸ್ತಿಗಳು ಸಿಕ್ಕಿದ್ದು ಸೂರ್ಯವಂಶಿಗೆ.. ಆತನ ವಯಸ್ಸು, ಈಗಷ್ಟೇ 25ಕ್ಕಿಂತ ಪಂದ್ಯ ಕಡಿಮೆ ಆಡಿರೋದ್ರಿಂದ, ಮೋಸ್ಟ್‌ ಎಮರ್ಜಿಂಗ್‌ ಪ್ಲೇಯರ್‌ ಆಫ್‌ ದಿ ಸೀಸನ್‌ ಪ್ರಶಸ್ತಿ ಬಂದ್ರೆ ಅಚ್ಚರಿ ಪಡಬೇಕಿರಲಿಲ್ಲ.. ಯಾಕಂದ್ರೆ, ಪ್ರತೀ ಸೀಸನ್‌ನಲ್ಲೂ ಒಬ್ಬರಲ್ಲ ಒಬ್ಬ ಯಂಗ್‌ ಟ್ಯಾಲೆಂಟ್‌ ಈ ಪ್ರಶಸ್ತಿಯನ್ನು ಪಡೀತಾ ಇರುತ್ತಾರೆ.. ಹಿಂದೆ ರೋಹಿತ್‌ ಶರ್ಮಾ, ಸಂಜು ಸ್ಯಾಮ್ಸನ್‌, ಅಕ್ಸರ್‌ ಪಟೇಲ್‌, ರಿಷಬ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಉಮ್ರಾನ್‌ ಮಲಿಕ್‌, ಯಶಸ್ವಿ ಜೈಸ್ವಾಲ್‌, ನಿತೀಶ್‌ ರೆಡ್ಡಿ, ಹೀಗೆ ಮೊದಲ ಅಥವಾ ಎರಡನೇ ಸೀಸನ್‌ನಲ್ಲಿ ಆಡಿದಾಗ ಈ ಆಟಗಾರರು ಎಮರ್ಜಿಂಗ್‌ ಪ್ಲೇಯರ್‌ ಪ್ರಶಸ್ತಿಯನ್ನು ಪಡೆದಿದ್ದರು.. ಅದೇ ಸಾಲಿನಲ್ಲಿ ವೈಭವ್‌ ಕೂಡ ಎಮರ್ಜಿಂಗ್‌ ಪ್ಲೇಯರ್‌ ಪ್ರಶಸ್ತಿ ಪಡೆದಿದ್ದರೆ ಅಚ್ಚರಿ ಪಡುವಂತದ್ದು ಏನೂ ಇರಲಿಲ್ಲ.. ಈ ಹಿಂದೆ ರುತುರಾಜ್‌ ಗಾಯಕ್ವಾಡ್‌ ಮತ್ತು ಸಾಯಿ ಸುದರ್ಶನ್‌, ಎಮರ್ಜಿಂಗ್ ಪ್ಲೇಯರ್‌ ಜೊತೆಗೆ ಆರೆಂಜ್‌ ಕ್ಯಾಪ್ ಪ್ರಶಸ್ತಿ ಗಳಿಸಿದ್ದರು.. ರೋಹಿತ್‌ ಶರ್ಮಾ 2009ನೇ ಸಾಲಿನಲ್ಲಿ ಎಮರ್ಜಿಂಗ್‌ ಪ್ಲೇಯರ್‌ ಜೊತೆಗೆ ಮೋಸ್ಟ್‌ ವ್ಯಾಲ್ಯುವೇಬಲ್‌ ಪ್ಲೇಯರ್‌ ಅವಾರ್ಡ್‌ಗಳಿಸಿದ್ದರು.. ಆದ್ರೆ ಸೂರ್ಯವಂಶಿ ಮಾತ್ರ, ಎಮರ್ಜಿಂಗ್‌ ಪ್ಲೇಯರ್‌ ಜೊತೆಗೆ, ಬೆಸ್ಟ್‌ ಸ್ಟ್ರೈಕರ್‌,  MVP, ಅತಿಹೆಚ್ಚು ಸಿಕ್ಸಸ್‌, ಬೆಸ್ಟ್‌ ಸ್ಟ್ರೈಕ್‌ ರೇಟ್‌. ಆರೆಂಜ್‌ ಕ್ಯಾಪ್‌. ಹೀಗೆ ಸಾಲು ಸಾಲು ಪ್ರಶಸ್ತಿಗಳನ್ನು ಗಳಿಸಿರುವ ಏಕೈಕ ಆಟಗಾರನಾಗಿ ಹೊರಹೊಮ್ಮಿದ್ದಾರೆ.. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ 2026ನೇ ಸೀಸನ್‌ನಲ್ಲಿ ಅತಿಹೆಚ್ಚು ಸಿಕ್ಸಸ್‌ ಭಾರಿಸಿದ್ದು ಮಾತ್ರವಲ್ಲ.. ಐಪಿಎಲ್‌ನ ಇತಿಹಾಸದಲ್ಲೇ ಸಿಕ್ಸಸ್‌ ದಾಖಲೆ ಈಗ ವೈಭವ್‌ ಹೆಸರಿಗೆ ಸೇರಿದೆ.. 60ಕ್ಕಿಂತ ಹೆಚ್ಚು ಸಿಕ್ಸ್‌ ಭಾರಿಸಿರುವ ಏಕೈಕ ಆಟಗಾರ ವೈಭವ್‌ ಸೂರ್ಯವಂಶಿ.. ಈ ಬಾರಿಯ ಐಪಿಎಲ್‌ನಲ್ಲಿ ವೈಭವ್‌ ಹೊರತುಪಡಿಸಿದ್ರೆ ಉಳಿದ ಯಾವುದೇ ಆಟಗಾರ ಕೂಡ 50ಕ್ಕಿಂತ ಹೆಚ್ಚು ಸಿಕ್ಸ್‌ ಹೊಡೆದಿಲ್ಲ.. ಅವರ ನಂತರ ಸ್ಥಾನದಲ್ಲಿರುವ ಟೀಂ ಇಂಡಿಯಾದ ಟಿ20 ಸ್ಪೆಷಲಿಸ್ಟ್‌ ಅಭಿಷೇಕ್‌ ಶರ್ಮಾ ಹೊಡೆದಿರುವುದು 43 ಸಿಕ್ಸ್‌ಗಳನ್ನು.. ಅಂದ್ರೆ, ವೈಭವ್‌ ಸೂರ್ಯವಂಶಿ, ಈ ಸೀಸನ್‌ನಲ್ಲಿ ಅಭಿಷೇಕ್‌ ಶರ್ಮಾಗಿಂತ 29 ಸಿಕ್ಸರ್‌ಗಳನ್ನು ಹೆಚ್ಚುವರಿಯಾಗಿ ಭಾರಿಸಿದ್ದಾರೆ.. ಈ ಇಬ್ಬರ ನಡುವೆಯೇ ಸಿಕ್ಸ್‌ ಭಾರಿಸುವುದರಲ್ಲಿ ಯಾವುದೇ ರೀತಿಯ ಕಾಂಪಿಟೀಷನ್‌ ಕೂಡ ಇರಲಿಲ್ಲ, ಎನ್ನುವುದಕ್ಕೆ ಈ ಅಂಕಿಅಂಶ ಸಣ್ಣ ಉದಾಹರಣೆಯಷ್ಟೇ.. ಅಂದರೆ ಆಧುನಿಕ ಕ್ರಿಕೆಟ್‌ ಎಂದು ಕರೆಸಿಕೊಳ್ಳುವ ಟಿ20ಯ ಮಾದರಿಯನ್ನೇ ಅಭಿಷೇಕ್‌ ಶರ್ಮಾ ತನ್ನ ಅಬ್ಬರದ ಬ್ಯಾಟಿಂಗ್‌ನಿಂದ ಬದಲಿಸಿದ್ದಾರೆ ಎಂದು ಅಂದುಕೊಳ್ಳುತ್ತಿರುವ ಕಾಲದಲ್ಲೇ, ಅದು ಏನೂ ಅಲ್ಲ.. ನಾನ್‌ ತೋರಿಸ್ತೇನೆ ಆಧುನಿಕ ಕ್ರಿಕೆಟ್‌ನ ಹೊಸ ಮಾದರಿಯನ್ನು ಎಂಬಂತೆ ವೈಭವ್‌ ಸೂರ್ಯವಂಶಿ ತನ್ನ ಬ್ಯಾಟಿಂಗ್‌ ವೈಭವದ ಮೂಲಕ ಜಾಗತಿಕ ಕ್ರಿಕೆಟ್‌ಗೆ ಹೊಸ ಸಂದೇಶ ರವಾನಿಸಿದ್ದಾರೆ.. ಇವರು ಗಳಿಸಿರುವ ಅಷ್ಟೂ ಪ್ರಶಸ್ತಿಗಳು, ಬೌಲರ್‌ಗಳ ಕಡೆಗೆ ಸಣ್ಣದೊಂದು ದಯೆಯನ್ನೂ ತೋರದೆ, ಹೊಡೆದು ಹಾಕುವ ಹೊಸ ತಲೆಮಾರಿನ ಬ್ಯಾಟ್ಸ್‌ಮನ್‌ಗಳ ಮನಸ್ಥಿತಿಯನ್ನು ತೋರಿಸುತ್ತದೆ.. ನಿನ್ನೆ ಇಷ್ಟೆಲ್ಲಾ ಪ್ರಶಸ್ತಿ ಪಡೆದ ಮೇಲೆ ರವಿಶಾಸ್ತ್ರಿಯವರ ಜೊತೆ ಮಾತಾಡುತ್ತಾ ವೈಭವ್‌ ಹೇಳಿರುವುದು, ನನಗೆ ಭಯ ಅಂತ ಆಗೋದು, ಈ ರೀತಿಯ ಇಂಟರ್‌ವ್ಯೂಗಳ ಬಗ್ಗೆ ಅಂತ.. ಅದಕ್ಕೆ ರವಿಶಾಸ್ತ್ರಿ ಕೂಡ, ನಿನಗೂ ಭಯ ಅನ್ನೋದು ಇದ್ಯಾ? ಬೌಲರ್‌ಗಳ ವಿಚಾರದಲ್ಲಿ ಅಂದಾಗ.. ಹಾಗೇನೂ ಇಲ್ಲ.. ಬೌಲರ್‌ ಹಾಗೂ ಮೊದಲ ಬಾಲ್‌ ನನಗೆ ಹೊಡೆಯುವ ರೀತಿಯಲ್ಲಿ ಅನ್ನಿಸಿದ್ರೆ, ಮೊದಲ ಬಾಲನ್ನೇ ಸಿಕ್ಸ್‌ ಭಾರಿಸುತ್ತೇನೆ ಎಂದಿದ್ದಾರೆ.. ಅಂದರೆ, ಸೂರ್ಯವಂಶಿ, ತಾನು ಮೊದಲ ಎಸೆತವನ್ನೇ ಸಿಕ್ಸ್‌ ಭಾರಿಸಬೇಕು ಎಂದು ಬ್ಲೈಂಡ್‌ ಆಗಿ ಪ್ಲ್ಯಾನ್‌ ಮಾಡ್ಕೊಂಡು ಬಂದಿರಲ್ಲ.. ಹಾಗೆಯೇ ಮೊದಲ ಎಸೆತದಲ್ಲಿ ಸಿಕ್ಸ್‌ ಹೊಡೆಯದೆ, ಸುಮ್ಮನೆ ಡಿಫೆನ್ಸ್‌ ಆಗಿ ಆಡ್ಬೇಕು ಅಂತಾನೂ ಬರೋದಿಲ್ಲ..  ಬದಲಿಗೆ, ಈ ಬಾಲ್‌ ಸಿಗುತ್ತೆ ಎನ್ನುವುದನ್ನು ಗಮನಿಸಿದ್ರೆ ಮಾತ್ರ ಅದಕ್ಕೆ ತಕ್ಕದಾದ ಟ್ರೀಟ್‌ಮೆಂಟ್‌ ಕೊಡ್ತಾರೆ.. ಬಹುಷಃ ಈ ಸೀಸನ್‌ನ ಆರಂಭದಲ್ಲಿ ಮೊದಲ ಎಸೆತವನ್ನು ಸಿಕ್ಸ್‌ಗೆ ಭಾರಿಸುವ ಕಡೆಗಷ್ಟೇ ವೈಭವ್‌ ಸಿಕ್ಸ್‌ಗೆ ಭಾರಿಸುವಂತೆ ಕಾಣ್ತಿತ್ತು.. ಆದ್ರೆ ಎಸ್‌ಆರ್‌ಹೆಚ್‌ ವಿರುದ್ಧ ಪ್ರಫುಲ್‌ ಹಿಂಗೆ, ಅವರ ಮೊದಲ ಎಸೆತದಲ್ಲೇ ಔಟ್‌ ಆದ್ಮೇಲೆ, ಸೂರ್ಯವಂಶಿಯ ಆಟದಲ್ಲಿ ಸಣ್ಣ ಬದಲಾವಣೆಯಾಗಿತ್ತು.. ಅದ್ರಿಂದಾಗಿಯೇ, ಸೂರ್ಯವಂಶಿ ನಂತರದ ಮ್ಯಾಚ್‌ಗಳಲ್ಲಿ, ನೊಡ್ಕೊಂಡು ಭಾರಿಸುವ ಸ್ಟ್ರಾಟಜಿಯ ಮೊರೆ ಹೋಗಿದ್ದರು..

ಇನ್ನು ಸೂರ್ಯವಂಶಿ ಸತತ ಎರಡನೇ ಬಾರಿಗೆ ಟಾಟಾದ ಕಾರು ಗೆದ್ದಿದ್ದಾರೆ.. ಡ್ರೈವಿಂಗ್‌ ಮಾಡೋಕೆ ಲೈಸೆನ್ಸ್‌ ಪಡೆಯೋ ವಯಸ್ಸಾಗದಿದ್ದರೂ, ವೈಭವ್‌ ತನ್ನ ಬ್ಯಾಟ್‌ ಮೂಲಕವೇ ಟಾಟಾ ಕಾರುಗಳನ್ನು ತನ್ನದಾಗಿಸಿಕೊಂಡಿದ್ದಾರೆ.. ಕಳೆದ ವರ್ಷ ಟಾಟಾ ಕರ್ವ್‌ ಕಾರು ಗೆದ್ದಿದ್ದ ವೈಭವ್‌, ಈ ವರ್ಷ ಟಾಟಾ ಸಿಯೆರಾ ಕಾರನ್ನು ತಮ್ಮದಾಗಿಸಿದ್ದಾರೆ.. ಸೂಪರ್‌ ಸ್ಟ್ರೈಕರ್‌ ಅವಾರ್ಡ್‌ ಮೂಲಕ ಈ ಎರಡೂ ಕಾರುಗಳು ಈಗ ವೈಭವ್‌ ಅವರ ಗ್ಯಾರೇಜ್‌ ಸೇರಿವೆ.. ಇನ್ನು ನಿನ್ನೆ ಒಂದೇ ದಿನ, 55 ಲಕ್ಷ ರುಪಾಯಿ ಹಣದ ಜೊತೆಗೆ ಟಾಟಾ ಸಿಯೆರಾದ ಟಾಪ್‌ ಎಂಡ್‌ ಕಾರು ಗಳಿಸಿದ್ದಾರೆ.. ಅಲ್ಲಿಗೆ ಐಪಿಎಲ್‌ನ ಟೈಟಲ್‌ ಗೆದ್ದ ಆರ್‌ಸಿಬಿ ತಂಡದ ಆಟಗಾರರಿಗೆ ಸಿಗುವ ಪ್ರೈಜ್‌ ಮನಿಯ ಹಣಕ್ಕಿಂತ ಜಾಸ್ತಿ ಗಳಿಕೆ ವೈಭವ್‌ಗೆ ಆಗಿದೆ.. ಯಾಕಂದ್ರೆ, ಟೈಟಲ್‌ ಗೆದ್ದ ತಂಡಕ್ಕೆ ಸಿಗುವ ಪ್ರೈಜ್‌ ಮನಿ 20 ಕೋಟಿ.. ಅದನ್ನು ತಂಡದ ಎಲ್ಲಾ ಆಟಗಾರರು ಅಂದ್ರೆ ಕೇವಲ ಪ್ಲೇಯಿಂಗ್‌ 11 ಮಾತ್ರವಲ್ಲ.. ಒಟ್ಟು 25 ಆಟಗಾರರ ಜೊತೆ ಹಂಚಿಕೊಂಡಾಗ ಒಬ್ಬೊಬ್ಬರಿಗೆ ತಲಾ 80 ಲಕ್ಷ ರುಪಾಯಿ ಸಿಗುತ್ತೆ.. ಇನ್ನು ಸಪೋರ್ಟಿಂಗ್‌ ಸ್ಟಾಪ್‌ ಜೊತೆಗೂ ಇದನ್ನು ಹಂಚಿಕೊಂಡರೆ, ಒಬ್ಬಬ್ಬರಿಗೆ ಸಿಗುವ ಹಣ ಮತ್ತಷ್ಟು ಕಡಿಮೆ ಆಗುತ್ತೆ.. ಆದ್ರೆ ವೈಭವ್‌ ಸೂರ್ಯವಂಶಿ ಒಬ್ಬನೇ, 55 ಲಕ್ಷ ರುಪಾಯಿಯ ಕ್ಯಾಷ್‌ ಮತ್ತು 25 ಲಕ್ಷ ರುಪಾಯಿಯಷ್ಟು ಮೌಲ್ಯದ ಕಾರು ಸೇರಿದ್ರೆ 80 ಲಕ್ಷ ರುಪಾಯಿಯಷ್ಟು ಗಳಿಕೆಯಾಗಿದೆ.. ಹೀಗೆ ಐಪಿಎಲ್‌ ಟೂರ್ನಮೆಂಟ್‌ ಶುರುವಾದ ನಾಲ್ಕುವರ್ಷದ ನಂತರ ಹುಟ್ಟಿದ ಹುಡುಗ, ಈಗ ಐಪಿಎಲ್‌ ಸರಣಿಯನ್ನೇ ಆಳುತ್ತಿದ್ದಾನೆ.. ಇದು ಆತನ ಮೊದಲ ಸಂಪೂರ್ಣ ಸೀಸನ್‌.. ಕಳೆದ ಬಾರಿ ಅರ್ಧದಿಂದ ಆಡಿದ್ದ ಸೂರ್ಯವಂಶಿ, ಮುಂದಿನ ಸೀಸನ್‌ಗಳಲ್ಲಿ ಇನ್ನು ಯಾವೆಲ್ಲಾ ಹೊಸ ದಾಖಲೆಗಳನ್ನು ಬರೆಯುತ್ತಾ ಹೋಗಬಹುದು ಎಂಬುದನ್ನು ನೋಡಬೇಕಿದೆ.. ಏನೇ ಆದ್ರೂ ಕ್ರಿಕೆಟ್‌ ಅಭಿಮಾನಿಗಳ ಪಾಲಿಗಂತೂ ವೈಭವ್‌ ಸೂರ್ಯವಂಶಿ, ವಂಡರ್‌ ಕಿಡ್‌ ಮಾತ್ರವಲ್ಲ.. ದೇವರೇ ಕಳಿಸಿರುವ ಕ್ರಿಕೆಟ್‌ನ ರಾಯಬಾರಿಯಂತೆ ಕಾಣ್ತಿದ್ದಾನೆ. ಹೀಗಾಗಿ ಆತನ ಆಟವನ್ನು ನೋಡುತ್ತಾ ಖುಷಿಪಡುವುದೇ ಕ್ರಿಕೆಟ್‌ ಪ್ರಿಯರಿಗೆ ಖುಷಿ..

 

Sulekha

Leave a Reply

Your email address will not be published. Required fields are marked *