ಎರಡನೇ ಸಲ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ RCB –ಬೆಂಗಳೂರಲ್ಲಿ ಪಟಾಕಿ ಸಂಭ್ರಮ, ರಾತ್ರಿಯಿಡೀ ಸೆಲೆಬ್ರೇಷನ್

ಬೆಂಗಳೂರಿನ ಅಭಿಮಾನಿಗಳಿಗೆ ಮತ್ತೊಮ್ಮೆ ದೀಪಾವಳಿ ಹಬ್ಬ ಬಂದಿದೆ. ಎರಡನೇ ಸಲವೂ ಕಪ್ ಗೆದ್ದು ಬೀಗಿದೆ ಬೆಂಗಳೂರು ತಂಡ. ಈ ಬಾರಿ ಕೂಡಾ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಬೆಂಗಳೂರಿನಲ್ಲಿ ಪಟಾಕಿ ಸಂಭ್ರಮ ಕಂಡು ಬಂದಿದೆ. ರಾತ್ರಿಯಿಡೀ ಅಭಿಮಾನಿಗಳು ಸಂಭ್ರಮಿಸಿದರು.
ಇದನ್ನೂ ಓದಿ:ಎರಡನೇ ಸಲವೂ ಕಪ್ ನಮ್ದೇ – ಗುಜರಾತ್ ಟೈಟಾನ್ಸ್ ಸೋಲಿಸಿ RCB ಚಾಂಪಿಯನ್
ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಐಪಿಎಲ್ ಇತಿಹಾಸದಲ್ಲಿ ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ 3ನೇ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು, ಅದು ಕೂಡಾ ಗುಜರಾತ್ ನೆಲದಲ್ಲೇ ಅವರನ್ನು ಬಗ್ಗು ಬಡಿದ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭಿಸಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 155 ರನ್ಗಳಿಸಿತ್ತು. ಆರ್‌ಸಿಬಿ 156 ರನ್ಗಳ ಗುರಿಯನ್ನ ಕೇವಲ 18 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಹಾಗೂ ಮುಂಬೈ ಇಂಡಿಯನ್ಸ್ 2019 ಹಾಗೂ 2020ರಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಜಯಿಸಿತ್ತು. ಇದೀಗ ಆ ಸಾಲಿಗೆ ಆರ್‌ಸಿಬಿ ಕೂಡ ಸೇರಿಕೊಂಡಿದೆ.

ನೋಡಿರಿ

