ಎರಡನೇ ಸಲವೂ ಕಪ್ ನಮ್ದೇ – ಗುಜರಾತ್ ಟೈಟಾನ್ಸ್ ಸೋಲಿಸಿ RCB ಚಾಂಪಿಯನ್

ಎರಡನೇ ಸಲವೂ ಕಪ್ ನಮ್ದೇ – ಗುಜರಾತ್ ಟೈಟಾನ್ಸ್ ಸೋಲಿಸಿ RCB ಚಾಂಪಿಯನ್

ಎರಡನೇ ಸಲವೂ ಆರ್‌ಸಿಬಿಯೇ ಚಾಂಪಿಯನ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿ ಕಪ್ ಗೆದ್ದಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದ ಆರ್‌ಸಿಬಿ ಭರ್ಜರಿ ಜಯಭೇರಿ ಸಾಧಿಸಿದೆ.

ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ವಿರಾಟ್ ರೂಪಕ್ಕೆ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಜೊತೆಗೆ ಎರಡನೇ ಬಾರಿಗೆ ಕಪ್ ಗೆದ್ದಿದೆ. 156 ರನ್‌ಗಳ ಗುರಿ ಪಡೆದು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡಕ್ಕೆ ಆರಂಭ ಚೆನ್ನಾಗಿಯೇ ಸಿಕ್ಕಿತ್ತು. ಆದರೆ, ವೆಂಕಟೇಶ್ ಅಯ್ಯರ್ 16 ಬಾಲ್‌ಗೆ 32 ರನ್ ಗಳಿಸಿ ಔಟಾಗುತ್ತಿದ್ದಂತೆ ನಂತರ ಬಂದ ಬ್ಯಾಟರ್ಸ್ ಬ್ಯಾಕ್ ಟು ಬ್ಯಾಕ್ ಔಟಾದರು. ದೇವದತ್ ಪಡಿಕ್ಕಲ್ ಕೇವಲ ಒಂದು ರನ್ ಗಳಿಸಿ ಔಟಾಗುವ ಮೂಲಕ ಆರ್‌ಸಿಬಿ ಫ್ಯಾನ್ಸ್ ಗೆ ಬೇಸರ ಪಡಿಸಿದರು. ಇನ್ನು ಹೊಡಿಬಡಿ ಆಟಕ್ಕೆ ಹೆಸರಾದ ಕ್ಯಾಪ್ಟನ್ ರಜತ್ ಪಾಟೀದಾರ್ 13 ಬಾಲ್‌ಗೆ 15 ರನ್ ಗಳಿಸಿ ಔಟಾದರು. ಕೃನಾಲ್ ಪಾಂಡ್ಯ ಕೂಡಾ ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಒಂದು ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು ವೆಂಕಟೇಶ್ ಅಯ್ಯರ್ ದೊಡ್ಡ ಹೊಡೆತ ಹೊಡೆಯಲು ಯತ್ನಿಸಿ ಕ್ಯಾಚ್ ನೀಡಿದರು. ಟಿಮ್ ಡೇವಿಡ್ 17 ಬಾಲ್‌ಗೆ 24 ರನ್ ಗಳಿಸಿ ಔಟಾದರು.

ಈ ಹೈವೋಲ್ಟೇಜ್ ಕದನದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಆರ್​ಸಿಬಿ ಆರಂಭಿಕರು ಸ್ಫೋಟಕ ಆಟಕ್ಕೆ ಮುಂದಾದರು. ಇವರಿಬ್ಬರ ಸಿಡಿಲಬ್ಬದ ಬ್ಯಾಟಿಂಗ್​ನಿಂದ ಆರ್​ಸಿಬಿ ಕೇವಲ 3.3 ಓವರ್‌ಗಳಲ್ಲಿ 50 ರನ್​ಗಳ ಗಡಿ ದಾಟಿತು. ಈ ಮೂಲಕ ಆರ್​ಸಿಬಿ ಐಪಿಎಲ್ ಫೈನಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 50 ರನ್ ಬಾರಿಸಿದ ತಂಡವೆಂಬ ದಾಖಲೆ ಬರೆಯಿತು. ಅಲ್ಲದೆ ಇದೇ ಮೈದಾನದಲ್ಲಿ 2023 ರ ಐಪಿಎಲ್‌ನಲ್ಲಿ ಇದೇ ಗುಜರಾತ್ ವಿರುದ್ಧದ ಫೈನಲ್ ಪಂದ್ಯದಲ್ಲಿ 24 ಎಸೆತಗಳಲ್ಲಿ 50 ರನ್ ಬಾರಿಸಿದ್ದ ಸಿಎಸ್​ಕೆ ತಂಡದ ದಾಖಲೆಯನ್ನು ಮುರಿಯಿತು.

Sulekha