RCB ತಂಡದ 4ನೇ ವಿಕೆಟ್ ಪತನ – ವಿರಾಟ್ ಏಕಾಂಗಿ ಹೋರಾಟ, ಅರ್ಧಶತಕ ಸಿಡಿಸಿದ ಕಿಂಗ್ ಕೊಹ್ಲಿ

RCB ತಂಡದ 4ನೇ ವಿಕೆಟ್ ಪತನ – ವಿರಾಟ್ ಏಕಾಂಗಿ ಹೋರಾಟ, ಅರ್ಧಶತಕ ಸಿಡಿಸಿದ ಕಿಂಗ್ ಕೊಹ್ಲಿ

ಆರ್‌ಸಿಬಿ ತಂಡದ ಪರ ಕಿಂಗ್ ಕೊಹ್ಲಿ ಏಕಾಂಗಿ ಹೋರಾಟ ಮುಂದುವರೆಸಿದ್ದಾರೆ. ಜೊತೆಗೆ ಅರ್ಧಶತಕ ಸಿಡಿಸಿದ್ದಾರೆ. ಆರ್‌ಸಿಬಿ ಈಗಾಗಲೇ ನಾಲ್ಕು ವಿಕೆಟ್ ಕಳೆದುಕೊಂಡಿದೆ.

ಇದನ್ನೂ ಓದಿ:155 ರನ್‌ಗೆ ಗುಜರಾತ್ ಕಟ್ಟಿಹಾಕಿದ ಆರ್‌ಸಿಬಿ – ವಾಷಿಂಗ್ಟನ್ ಸುಂದರ್ ಅರ್ಧಶತಕ

ಆರ್‌ಸಿಬಿ ತಂಡ ಈಗಾಗಲೇ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಆದರೆ, ಒಂದೆಡೆ ವಿಕೆಟ್‌ಗಳು ಪಟಪಟ ಉದುರುತ್ತಿದ್ದರೂ ಕೂಡಾ ಕಿಂಗ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ದೇವದತ್ ಪಡಿಕ್ಕಲ್ ಕೇವಲ ಒಂದು ರನ್ ಗಳಿಸಿ ಔಟಾಗುವ ಮೂಲಕ ಆರ್‌ಸಿಬಿ ಫ್ಯಾನ್ಸ್ ಗೆ ಬೇಸರ ಪಡಿಸಿದರು. ಇನ್ನು ಹೊಡಿಬಡಿ ಆಟಕ್ಕೆ ಹೆಸರಾದ ಕ್ಯಾಪ್ಟನ್ ರಜತ್ ಪಾಟೀದಾರ್ 13 ಬಾಲ್‌ಗೆ 15 ರನ್ ಗಳಿಸಿ ಔಟಾದರು. ರಶೀದ್ ಖಾನ್ ಓವರ್​ನ ಎರಡನೇ ಎಸೆತದಲ್ಲೇ ರಜತ್ ಅವರನ್ನು ಔಟ್ ಮಾಡಿದರು. ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಿದ ರಜತ್ ರಬಾಡಗೆ ಕ್ಯಾಚ್ ನೀಡಿದರು.

ಕೃನಾಲ್ ಪಾಂಡ್ಯ ಕೂಡಾ ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಒಂದು ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು ವೆಂಕಟೇಶ್ ಅಯ್ಯರ್ ದೊಡ್ಡ ಹೊಡೆತ ಹೊಡೆಯಲು ಯತ್ನಿಸಿ ಕ್ಯಾಚ್ ನೀಡಿದರು. ಮೊಹಮ್ಮದ್ ಸಿರಾಜ್ ವೆಂಕಟೇಶ್ ಅಯ್ಯರ್ ವಿಕೆಟ್ ಪಡೆದುಕೊಂಡರು. ಇದೀಗ ಟಿಮ್ ಡೇವಿಡ್ ಜೊತೆ ಕೊಹ್ಲಿ ಗೆಲುವಿನ ಆಟ ಆಡಲು ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ಅರ್ಧಶತಕ ಸಿಡಿಸಿದ್ದು, ಬ್ಯಾಟಿಂಗ್ ಮುಂದುವರೆಸಿದ್ದಾರೆ.

Sulekha

Leave a Reply

Your email address will not be published. Required fields are marked *