ಆರ್‌ಸಿಬಿ ಬೌಲಿಂಗ್ ದಾಳಿಗೆ ಗುಜರಾತ್ ಪೆವಿಲಿಯನ್ ಪರೇಡ್ – 6ನೇ ವಿಕೆಟ್ ಕಳೆದುಕೊಂಡ ಜಿಟಿಗೆ ಕಷ್ಟ ಕಷ್ಟ

ಆರ್‌ಸಿಬಿ ಮತ್ತು ಜಿಟಿ ನಡುವೆ ಫೈನಲ್ ಪಂದ್ಯದಲ್ಲಿ ಗುಜರಾತ್ 6ನೇ ವಿಕೆಟ್ ಕಳೆದುಕೊಂಡಿದೆ. ಪವರ್‌ಪ್ಲೇನಲ್ಲಿ ಗುಜರಾತ್ ಪವರ್ ಕಸಿದುಕೊಂಡಿದ್ದಾರೆ ಆರ್‌ಸಿಬಿ ಬೌಲರ್ಸ್.
ಇದನ್ನೂ ಓದಿ:ಗುಜರಾತ್ ಟೈಟಾನ್ಸ್‌ನ ಮೂರನೇ ವಿಕೆಟ್ ಪತನ
ರಾಹುಲ್ ತೆವಾಟಿಯಾ ಔಟಾಗುವ ಮೂಲಕ ಗುಜರಾತ್ ಟೈಟಾನ್ಸ್ ತಂಡ ಸಂಕಷ್ಟದಲ್ಲಿದೆ. ರಸಿಕ್ ಸಲಾಮ್ ಮತ್ತೊಂದು ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 5 ಬಾಲ್‌ಗೆ 7 ರನ್ ಹೊಡೆದ ರಾಹುಲ್ ತೆವಾಟಿಯಾ ಔಟಾದರು
ಗುಜರಾತ್ ಟೈಟಾನ್ಸ್ ಪರ ಭರವಸೆ ಮೂಡಿಸಿದ ಬ್ಯಾಟರ್ ಆರ್ಷದ್ ಖಾನ್ ಔಟಾಗಿದ್ದಾರೆ. 6 ಬಾಲ್‌ಗಳಿಗೆ 15 ರನ್ ಗಳಿಸಿದ ಆರ್ಷದ್ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಇನ್ನು ಜೋಸ್ ಬಟ್ಲರ್ 23 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 19 ರನ್ ಗಳಿಸಿ ಔಟಾಗಿದ್ದಾರೆ. ಕೃನಾಲ್ ಪಾಂಡ್ಯ ಅವರು ಬಟ್ಲರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುಜರಾತ್ ಪರ ಜೋಸ್ ಬಟ್ಲರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದರು. ಬಟ್ಲರ್ ಔಟಾಗುತ್ತಿದ್ದಂತೆ ಗುಜರಾತ್ ಟೈಟಾನ್ಸ್ ತಂಡ ಸಂಕಷ್ಟದಲ್ಲಿದೆ.

ನೋಡಿರಿ

