ಮಳೆಗಾಲದ ಸಮಸ್ಯೆಗೆ ಇಲ್ಲಿದೆ ಪರಿಹಾರ – ಈ ಟಿಫ್ಸ್‌ಗಳನ್ನ ತಪ್ಪದೇ ಪಾಲಿಸಿ

ಮಳೆಗಾಲ ಹತ್ತಿರ ಬರುತ್ತಿದೆ. ಮಳೆ ಬಂದ್ರೆ ಅದ್ರೂ ಜೊತೆ ಸಾಕಷ್ಟು ಸಮಸ್ಯೆಗಳು ಬರುತ್ತೇವೆ. ಮಳೆಗಾಲದಲ್ಲಿ ಮನೆಯ ಸೋರಿಕೆ ತಡೆಗಟ್ಟಲು ಮತ್ತು ಡೆಂಗ್ಯೂನಂತಹ ಕಾಯಿಲೆಗಳಿಂದ ದೂರವಿರಲು ಈಗಲೇ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಸರಿಯಾದ ಪ್ಲಾನಿಂಗ್ ಇದ್ದರೆ ಮಳೆಗಾಲದಲ್ಲೂ ನಿಮ್ಮ ಮನೆ ಸುರಕ್ಷಿತವಾಗಿರುತ್ತದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಬಾಲ್ಕನಿ ಡ್ರೈನೇಜ್ ದೊಡ್ಡ ತಲೆನೋವು. ಪೈಪ್‌ಗಳಲ್ಲಿ ಕಸ ಅಥವಾ ಎಲೆಗಳು ಸಿಲುಕಿಕೊಂಡು ನೀರು ನಿಲ್ಲದಂತೆ ಈಗಲೇ ಸ್ವಚ್ಛಗೊಳಿಸಿ. ಕಿಟಕಿಗಳ ಫ್ರೇಮ್‌ಗಳ ಮೂಲಕ ನೀರು ಒಳಬರದಂತೆ ವಾಟರ್‌ಪ್ರೂಫ್ ಸೀಲಾಂಟ್ ಬಳಸಿ. ಮಳೆಗಾಲ ಆರಂಭವಾಗುವ ಮೊದಲೇ ಗೋಡೆಗಳಲ್ಲಿ ಬಿರುಕುಗಳಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ಇಂತಹ ಸಣ್ಣಪುಟ್ಟ ರಿಪೇರಿಗಳನ್ನು ಈಗಲೇ ಮಾಡಿಸಿದರೆ ಮುಂದೆ ಬರುವ ದೊಡ್ಡ ಖರ್ಚನ್ನು ತಪ್ಪಿಸಬಹುದು.
ಮನೆಯ ಸುತ್ತಮುತ್ತ ನೀರು ನಿಂತರೆ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ ಹರಡುವ ಭೀತಿ ಇರುತ್ತದೆ. ಆದ್ದರಿಂದ ಕಿಟಕಿಗಳಿಗೆ ಮೆಶ್ ಅಳವಡಿಸುವುದು ನಿಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇನ್ನು ಮಳೆಗಾಲದಲ್ಲಿ ಗಾಳಿಯಲ್ಲಿನ ತೇವಾಂಶದಿಂದಾಗಿ ಬಟ್ಟೆ ಮತ್ತು ಮರದ ಪೀಠೋಪಕರಣಗಳ ಮೇಲೆ ಬೂಸು (mould) ಬರುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಡಿಹ್ಯೂಮಿಡಿಫೈಯರ್ ಅಥವಾ ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಬಳಸಿ ಮನೆಯ ವಾತಾವರಣ ಫ್ರೆಶ್ ಆಗಿರುವಂತೆ ನೋಡಿಕೊಳ್ಳಿ.
ಗಾಳಿಯಲ್ಲಿನ ಅತಿಯಾದ ತೇವಾಂಶವು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕೂಲಿಂಗ್ ಸಿಸ್ಟಮ್‌ಗಳನ್ನು ಹಾಳುಮಾಡಬಹುದು. ಆದ್ದರಿಂದ ಸೀಲಿಂಗ್ ಫ್ಯಾನ್ ಮತ್ತು ಎಕ್ಸಾಸ್ಟ್ ಫ್ಯಾನ್‌ಗಳನ್ನು ಸರ್ವಿಸ್ ಮಾಡಿಸಿ. ಇನ್ನು ಗಿಡಗಳ ಪ್ರೇಮಿಗಳು ಮಳೆಗಾಲದಲ್ಲಿ ಗಿಡಗಳ ಬೇರು ಕೊಳೆಯದಂತೆ ಎಚ್ಚರ ವಹಿಸಬೇಕು. ಮಣ್ಣು ಹೆಚ್ಚು ಕಾಲ ಹಸಿಯಾಗಿರುವುದರಿಂದ ಅತಿಯಾಗಿ ನೀರು ಹಾಕಬೇಡಿ. ಗಿಡಗಳಿಗೆ ಸೋಂಕು ತಗುಲದಂತೆ ಫಂಗಲ್ ಸ್ಪ್ರೇಗಳನ್ನು ಬಳಸಿ.

ನೋಡಿರಿ

