ಮನೆಗೆ ಸುಖ, ಶಾಂತಿ ಮತ್ತು ಐಶ್ವರ್ಯ ಬೇಕಾ? – ಸೋಮವಾರ ಈ ವಸ್ತುಗಳನ್ನ ದಾನ ಮಾಡಿ

ಸೋಮವಾರ ಶಿವನ ವಾರ . ಈ ದಿನವನ್ನು ವಿಶೇಷವಾಗಿ ಶಿವನ ಪೂಜೆ, ಉಪವಾಸ, ದಾನ ಧರ್ಮ ಮತ್ತು ಮನಶಾಂತಿಯಿಗಾಗಿ ಸಮರ್ಪಿಸಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಈ ದಿನ ಬಿಳಿ ವಸ್ತುಗಳನ್ನು ದಾನ ಮಾಡಿದರೆ ಲಕ್ಷ್ಮೀ ಸಂತುಷ್ಟಳಾಗಿ ಮನೆಗೆ ಸುಖ, ಶಾಂತಿ ಮತ್ತು ಐಶ್ವರ್ಯವನ್ನು ನೀಡುತ್ತಾಳೆ. ಹಾಗಿದ್ರೆ ಯಾವೆಲ್ಲಾ ವಸ್ತುಗಳನ್ನ ಧಾನಮಾಡಬೇಕು ಅನ್ನೋದ್ದನ್ನ ನೋಡೋಣ.
ಬಿಳಿ ಬಟ್ಟೆಗಳ ದಾನ
ಸೋಮವಾರ ಬಡವರಿಗೆ, ನಿರ್ಗತಿಕರಿಗೆ ಅಥವಾ ಅಗತ್ಯವಿರುವವರಿಗೆ ಬಿಳಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಶಿವನಿಗೂ ಚಂದ್ರದೇವನಿಗೂ ಪ್ರಿಯವೆಂದು ಹೇಳಲಾಗುತ್ತದೆ. ಈ ದಾನದ ಫಲವಾಗಿ ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಮತ್ತು ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.
ಹಾಲಿನ ದಾನ ಮತ್ತು ಅಭಿಷೇಕ
ಶಿವನಿಗೆ ಹಾಲಿನ ಅಭಿಷೇಕ ಬಹಳ ಪ್ರಿಯ. ಆದ್ದರಿಂದ ಸೋಮವಾರ ಬೆಳಿಗ್ಗೆ ಸ್ನಾನ ಮಾಡಿದ ನಂತರ ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡುವುದು ಅತ್ಯಂತ ಪುಣ್ಯಕರವೆಂದು ಪರಿಗಣಿಸಲಾಗಿದೆ. ನಂತರ ಆ ಹಾಲನ್ನು ಅಥವಾ ಬೇರೆ ಹಾಲನ್ನು ಬಡ ಮಕ್ಕಳಿಗೆ, ವೃದ್ಧರಿಗೆ ಅಥವಾ ಅಗತ್ಯವಿರುವವರಿಗೆ ದಾನ ಮಾಡಬಹುದು. ಇದರಿಂದ ಶಿವನ ವಿಶೇಷ ಆಶೀರ್ವಾದ ದೊರೆಯುತ್ತದೆ ಹಾಗೂ ಕುಟುಂಬದಲ್ಲಿ ಆರೋಗ್ಯ ಮತ್ತು ಶಾಂತಿ ವೃದ್ಧಿಯಾಗುತ್ತದೆ.
ಅಕ್ಕಿ ಮತ್ತು ಅನ್ನದಾನ
ಸೋಮವಾರದಂದು ಅಕ್ಕಿ, ಅನ್ನ ಅಥವಾ ಹಾಲು-ಅಕ್ಕಿಯಿಂದ ತಯಾರಿಸಿದ ಪಾಯಸವನ್ನು ದಾನ ಮಾಡುವುದೂ ಬಹಳ ಮಂಗಳಕರ. ವಿಶೇಷವಾಗಿ ಬಡವರಿಗೆ ಅನ್ನದಾನ ಮಾಡಿದರೆ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಸತ್ಕೀರ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅನ್ನದಾನವನ್ನು ಎಲ್ಲಾ ದಾನಗಳಲ್ಲಿ ಶ್ರೇಷ್ಠವೆಂದು ಕೂಡ ಪರಿಗಣಿಸಲಾಗುತ್ತದೆ.
ಬೆಳ್ಳಿ ದಾನ
ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಮವಾರದಂದು ಬೆಳ್ಳಿಯನ್ನು ದಾನ ಮಾಡುವುದು ಅತ್ಯಂತ ಶುಭಕರ. ಜ್ಯೋತಿಷ್ಯದ ಪ್ರಕಾರ ಬೆಳ್ಳಿ ಚಂದ್ರನಿಗೆ ಸಂಬಂಧಿಸಿದ ಲೋಹವಾಗಿದ್ದು, ಇದನ್ನು ದಾನ ಮಾಡುವುದರಿಂದ ಜಾತಕದಲ್ಲಿರುವ ಚಂದ್ರನ ದುರ್ಬಲತೆ ಕಡಿಮೆಯಾಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಮಾಜದಲ್ಲಿ ಗೌರವ, ಕೀರ್ತಿ ಹಾಗೂ ಧನಲಾಭ ದೊರೆಯುತ್ತದೆ ಎಂಬ ನಂಬಿಕೆ ಇದೆ.

ನೋಡಿರಿ

