IPL ಗೆದ್ರೂ ಸೆಲೆಬ್ರೇಷನ್ ಇಲ್ಲ- RCB ಪ್ಲ್ಯಾನ್ ಹೇಗಿದೆ? ಕೊಹ್ಲಿನ ಕರೆಸ್ತಾರಾ ಡಿಕೆಶಿ?

IPL ಗೆದ್ರೂ ಸೆಲೆಬ್ರೇಷನ್ ಇಲ್ಲ-  RCB ಪ್ಲ್ಯಾನ್ ಹೇಗಿದೆ? ಕೊಹ್ಲಿನ ಕರೆಸ್ತಾರಾ ಡಿಕೆಶಿ?

ಒಂದ್ಕಡೆ ಡಿಕೆಶಿಗೆ ಸಿಎಂ ಪಟ್ಟ ಸಿಕ್ಕ ಖುಷಿ, ಮತ್ತೊಂದ್ಕಡೆ ಆರ್‌ಸಿಬಿ ಫೈನಲ್‌ಗೆ ಹೋಗಿದ್ದು ಕಪ್ ಗೆಲ್ಲೋ ಖುಷಿ. ಆರ್‌ಸಿಬಿ ಇವತ್ತು ಕಪ್ ಗೆದ್ದೇ ಗೆಲ್ಲುತ್ತೆ ಅಂತ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.. ಆರ್‌ಸಿಬಿ ಬಾಯ್ಸ್ ಆಡ್ತಾ ಇರೋ ಸ್ಪೀಡ್ ನೋಡಿದ್ರೆ ಕಪ್‌ ಗೆದ್ದೇ ಗೆಲ್ಲುತ್ತೆ. ಇವತ್ತು ಬೆಂಗಳೂರು ಹುಡುಗರು ಕಪ್ ಗೆದ್ರೆ ಆರ್‌ಸಿಬಿ ಬ್ಯಾಕ್ ಟೂ ಬ್ಯಾಕ್ ಕಪ್ ಗೆದ್ದ ಖುಷಿ ಅಭಿಮಾನಿಗಳಿಗೆ ತಡೆಯೋಕೆ ಆಗಲ್ಲ. ಜೋಷ್ ನೆಕ್ಸ್ಟ್ ಲವೆಲ್‌ನಲ್ಲಿ ಇರುತ್ತೆ.. ಯಾಕಂದ್ರೆ ನಾವು ಕಳೆದ ಸಲವೇ ಆದ ದುರಂತವನ್ನ ನೋಡಿದ್ದೇನೆ..18 ವರ್ಷ ಬಿಟ್ಟು ಕಪ್ ಗೆದ್ದ ಖುಷಿ 18 ಗಂಟೆ ಕೂಡ ಇರಲಿಲ್ಲ.. ಚಿನ್ನಸ್ವಾಮಿಯಲ್ಲಿ ನಡೆದ ದುರಂತ ಖುಷಿಯನ್ನ ನುಂಗಿ ಹಾಕ್ತು.. ಕಳೆದ ವರ್ಷದ ಕಹಿ ಘಟನೆಯನ್ನ ಒಮ್ಮೆ ನೆನಪಿಸಿಕೊಳ್ಳೋಣ.

ಜೂನ್ 3ರ ರಾತ್ರಿ.. 18 ವರ್ಷಗಳ ಮಹಾತಪಸ್ಸು ಈಡೇರಿದ ಗಳಿಗೆ. ಜಗದಗಲ ಇರೋ ಆರ್​ಸಿಬಿ ಅನ್ನೋ ಕಟ್ಟಾಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ರಾಯಲ್ ಪಡೆಗೆ ಲಾಯಲ್ ಆಗಿರುವಂಥ ಅಭಿಮಾನಿಗಳು ಟ್ರೋಫಿಯನ್ನ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ರು. ಆರ್‌ಸಿಬಿ ಮ್ಯಾನೇಜ್‌ಮೆಂಟ್‌, ಕರ್ನಾಟಕದ ಸರ್ಕಾರ, KACA ಸಲೆಬ್ರೇಷನ್‌ಗೆ ಪ್ಲ್ಯಾನ್ ಮಾಡಿತ್ತು. ಆದ್ರೆ ಕಳೆದ ವರ್ಷ ಜೂನ್ 4ರ ಸಂಜೆ ನಾಲ್ಕು ಗಂಟೆಯಷ್ಟ್ರಲ್ಲೇ ಮಾರಣಹೋಮ ನಡೆದಿತ್ತು. ಕಪ್ ಗೆದ್ದ ಖುಷಿ ಕನಿಷ್ಠ 18 ಗಂಟೆಗಳೂ ಉಳೀಲಿಲ್ಲ. 11 ಅಭಿಮಾನಿಗಳು ಕಾಲ್ತುಳಿತಕ್ಕೆ ಸಿಲುಕಿ ಜೀವವನ್ನೇ ಬಿಟ್ಟಿದ್ರು.  ಅವತ್ತು 4 ಗಂಟೆ ವೇಳೆ ಗೇಟ್ ನಂ. 20ರಲ್ಲಿ ನೂಕಾಟ ತಳ್ಳಾಟ ಜೋರಾಗಿತ್ತು. ಆಗ ಸಿಬ್ಬಂದಿ ಇದ್ದಕ್ಕಿದ್ದಂತೆ ಗೇಟ್ ಓಪನ್ ಮಾಡಿದ್ದಾರೆ. ಅಷ್ಟೇ ಆಗಿದ್ದು. ಜನ ಒಮ್ಮೆಲೇ ನುಗ್ಗಿದ್ದಾರೆ. ನೂಕಾಟ ತಳ್ಳಾಟ ಆಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಕೆಲವರು ಕಾಲಿಟ್ಟುಕೊಂಡು ಹೋಗಿದ್ದಾರೆ. ಪರಿಣಾಮ ಕಾಲಡಿ ಸಿಲುಕಿದ 11 ಜನ ಅಸ್ವಸ್ಥರಾಗಿ ಪ್ರಾಣವನ್ನೇ ಕಳ್ಕೊಂಡಿದ್ರು. ಫ್ರೀ ಟಿಕೆಟ್ ಮಾಡಿದ್ದೇ ಇದ್ದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: RCB ಕಪ್ ಗೆದ್ರೆ ಪಟಾಕಿ ಹೊಡಿಬೇಡಿ – ಪಂತ್‌ ರಾಜೀನಾಮೆ.. NEXT ಪಾಂಡ್ಯ?

ಬೆಂಗಳೂರಿನ ಇನ್ಸಿಡೆಂಟ್ ಬಳಿಕ ಬಿಸಿಸಿಐ ಕಳೆದ ವರ್ಷವೇ ಇಂತಹ ಘೋರ ಘಟನೆಗಳಿಗೆ ಕಡಿವಾಣ ಹಾಕಲು ಮುಂದಾಗಿತ್ತು. 11 ಜನರ ಸಾವಿನ ಹಿಂದೆ ಕೆಎಸ್​ಸಿಎ ಹಾಗೇ ಆರ್​ಸಿಬಿ ಫ್ರಾಂಚೈಸಿಯ ಎಡವಟ್ಟುಗಳು ಆಗಿರೋದನ್ನ ಕೂಡ ಗಮನಿಸಿ ಮುಂದಿನ ದಿನಗಳಲ್ಲಿ ಇಂತಾ ತಪ್ಪುಗಳು ಎಸಗದಂತೆ ಅಲರ್ಟ್ ಆಗಿತ್ತು. ಹಾಗೇ 2026ರ ಸೀಸನ್​ನ ಬಳಿಕ ಐಪಿಎಲ್ ಗೆಲ್ಲುವಂತ ವಿಜೇತ ತಂಡಗಳಿಗೆ ಒಂದಷ್ಟು ಗೈಡ್ ಲೈನ್ಸ್  ರಿಲೀಸ್ ಮಾಡಿತ್ತು. ವಿಜಯೋತ್ಸವ, ಪರೇಡ್ ನಡೆಸೋಕೆ ಮುಂದಾಗಿದ್ರೆ ಮೊದಲು ಐಪಿಎಲ್ ಹಾಗೇ ಬಿಸಿಸಿಐ ಮ್ಯಾನೇಜ್​ಮೆಂಟ್​ಗೆ ತಿಳಿಸಬೇಕು. ಕಾರ್ಯಕ್ರಮ ಎಲ್ಲಿ ಯಾವಾಗ ಎಷ್ಟು ಗಂಟೆಗೆ ಅನ್ನೋದನ್ನೆಲ್ಲಾ ತಿಳಿಸಿ ಮೇಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲೇಬೇಕು. ಯಾಕಂದ್ರೆ ಆರ್​ಸಿಬಿ ತಮ್ಮ ವಿಕ್ಟರಿ ಪರೇಡ್ ಬಗ್ಗೆ ಕಳೆದ ವರ್ಷ ಐಪಿಎಲ್ ಮ್ಯಾನೇಜ್​ಮೆಂಟ್ ಗಮನಕ್ಕೆ ತಂದಿರಲೇ ಇಲ್ಲ. ಅಲ್ದೇ  ಕಾರ್ಯಕ್ರಮ ಆಯೋಜನೆಗೂ ಮೊದಲು ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದ್ಯಾ, ಎಷ್ಟು ಜನ ಸೇರಬಹುದು, ಅಭಿಮಾನಿಗಳ ಸೇಫ್ಟಿಗೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಅನ್ನೋದ್ರ ಬಗ್ಗೆ ಮಾಹಿತಿ ಕೊಡ್ಬೇಕು. ಹಾಗೇ ಅಭಿಮಾನಿಗಳಿಗೆ ಕಾರ್ಯಕ್ರಮಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡ್ಬೇಕು. ಎಷ್ಟು ಗಂಟೆಗೆ ಪ್ರೋಗ್ರಾಂ ಇರುತ್ತೆ, ಎಷ್ಟು ಜನರಿಗೆ ಅವಕಾಶ ಇರುತ್ತೆ, ಟಿಕೆಟ್​ಗಳನ್ನ ಹೇಗೆ ಪಡೆಯಬೇಕು ಅನ್ನೋ ಬಗ್ಗೆ ಫ್ಯಾನ್ಸ್ಗೆ ಕ್ಲಾರಿಟಿ ಕೊಡ್ಬೇಕು. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಬಿಸಿಸಿಐನಿಂದ ಲಿಖಿತ ಅನುಮತಿ ಪಡೆದ ನಂತರವೇ ಆಚರಣೆಗೆ ಅವಕಾಶ ನೀಡಲಾಗುತ್ತದೆ. ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು ಎಂದು ಬಿಸಿಸಿಐ ತಿಳಿಸಿದೆ.

ಇನ್ನೂ  ಕಳೆದ ಸಲ ವಿಧಾನಸೌಧದ ಮುಂದೆ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡಲಾಗಿತ್ತು. ಆದ್ರೆ ಅಲ್ಲಿ ಫ್ಯಾನ್ಸ್‌ಗೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಆಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾಗಿಯಾಗಿದ್ರು. ಡಿಕೆಶಿನೇ ಮುಂದೆ ನಿಂತು ಆಟಗಾರರನ್ನ ವೆಲ್ಕಂ ಮಾಡಿದ್ರು. ಘಟನೆ ನಡೆದ ನಂತ್ರ ಇದ್ದಕ್ಕೂ ಸರ್ಕಾರಕ್ಕೂ ಸಂಬಂಧವೇ ಇಲ್ಲ ಅಂದಿದ್ರು. ಈಗ ಡಿಕೆಶ ಪಟ್ಟಾಭಿಷೇಕಕ್ಕೆ ತಯಾರಿ ನಡೆಯುತ್ತಿದೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರ ಮಾಡೋಕೆ ತಯಾರಿ ಆಗ್ತಿದೆ. ಇಂತಹ ಹೊತ್ತಲ್ಲಿ ಇವತ್ತು ಆರ್‌ಸಿಬಿ ಕಪ್ ಗೆದ್ರೆ, ವಿಜಯೋತ್ಸವ ಮಾಡೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಹೀಗಾಗಿ ಈ ಸಲ ಆರ್‌ಸಿಬಿ ಕಪ್ ಗೆದ್ದರೇ ಬೆಂಗಳೂರಿನಲ್ಲಿ ಸಲೆಬ್ರೇಷನ್ ನಡೆಯೋದು ಡೌಟ್‌.. ನಡೆದ್ರೂ ಕಳೆದ ಸಲ ಆದ ತಪ್ಪುಗಳನ್ನ ತಿದ್ದಿಕೊಂಡು ಟೈಂ ತೆಗೆದುಕೊಂಡು ಕಾರ್ಯಕ್ರಮಕ್ಕೆ ಪ್ಲ್ಯಾನ್ ಮಾಡಲಾಗುತ್ತೆ.

 

Kishor KV

Leave a Reply

Your email address will not be published. Required fields are marked *