RCBಗೆ ರಸಿಕ್ ಸಲಾಂ ಲಕ್.. ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದೇಕೆ? – ಅಮ್ಮನ ಕನಸು.. ಕ್ರಿಕೆಟರ್ ಆಗಿದ್ಹೇಗೆ?

ರಸಿಕ್ ಸಲಾಂ.. RCBಯ ಈ ಯುವ ವೇಗಿ IPL ನಲ್ಲಿ ಅಮೋಘ ಪ್ರದರ್ಶನ ನೀಡ್ತಾ ಇದ್ದಾರೆ.. ವಿಧ್ವಂಸಕ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. RCBಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಿರುವ ರಸಿಕ್ ಸಲಾಂಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಐಪಿಎಲ್‌ನಲ್ಲಿ ಮಿಂಚುತ್ತಿರುವ ರಸಿಕ್ ಕ್ರಿಕೆಟ್ ಜರ್ನಿ ಅಷ್ಟು ಈಸಿಯಾಗಿರ್ಲಿಲ್ಲ.. ಈ ಹಿಂದೆ ಬಿಸಿಸಿಐ ರಸಿಕ್‌ನ ಎರಡು ವರ್ಷಗಳ ಕಾಲ ಕ್ರಿಕೆಟ್‌ನಿಂದ ಬ್ಯಾನ್ ಮಾಡಿತ್ತು. ಅಷ್ಟಕ್ಕೂ ರಸಿಕ್‌ನ ಈ ಹಿಂದೆ ಕ್ರಿಕೆಟ್‌ನಿಂದ ಬ್ಯಾನ್ ಮಾಡಿದ್ದು ಯಾಕೆ? ರಸಿಕ್ ಕ್ರಿಕೆಟ್ ಜರ್ನಿ ಹೇಗಿತ್ತು ಅನ್ನೋದನ್ನ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೆಂಗಳೂರು ಟು ಮಂಗಳೂರಿಗೆ ವಂದೇಭಾರತ್ ರೈಲಿಗೆ ಗ್ರೀನ್ ಸಿಗ್ನಲ್ – ಜೂನ್ 1 ರಿಂದ ಪ್ರಾಯೋಗಿಕ ಸಂಚಾರ
ರಸಿಕ್ ಸಲಾಂ ದಾರ್.. ಹಾಲಿ ಚಾಂಪಿಯನ್ RCB ತಂಡದ ಆಪದ್ಬಾಂಧವ ಅಂದ್ರೆ ಅಂದ್ರೆ ತಪ್ಪಾಗಲ್ಲ.. ತಂಡ ಸಂಕಷ್ಟದಲ್ಲಿದೆ ಅಂದಾಗ ತಾನು ಯಾವ ಪರಿಸ್ಥಿತಿಯಲ್ಲಿದ್ದೀನಿ ಅನ್ನೋದನ್ನ ಕೂಡ ಯೋಚನೆ ಮಾಡದೇ ಆಡ್ತಾರೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ, ವಾಂಖೇಡೆ ಸ್ಟೇಡಿಯಂನಲ್ಲಿ MI ವಿರುದ್ಧ ನಡೆದ ಪಂದ್ಯದಲ್ಲಿ ರಸಿಕ್ ಅವರ ಛಲ ಎದ್ದು ಕಾಣುತ್ತಿತ್ತು. ಸ್ನಾಯು ಸೆಳೆತದಿಂದ ಬಳಲುತ್ತಿದ್ದರೂ ಸಹ, ಅವರು ಮಾರಕ ಬೌಲಿಂಗ್ ಮಾಡಿದ್ರು. ಈ ಮೂಲಕ ತನ್ನನ್ನ ತಾನು ನಿರೂಪಿಸಿಕೊಂಡ್ರು. ಈ ಸೀಸನ್‌ನಲ್ಲಿ ರಸಿಕ್ ಒಟ್ಟು 11 ಪಂದ್ಯಗಳನ್ನ ಆಡಿದ್ದು, 16 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಈ ಮೂಲಕ RCB ಪೈನಲ್‌ಗೇರಲು ಇವರೂ ಕೂಡ ಕಾರಣವಾಗಿದ್ದಾರೆ. ಅಂದ್ಹಾಗೆ ಆರ್‌ಸಿಬಿ ತಂಡದಲ್ಲಿ ಮಿಂಚುತ್ತಿರುವ ಈ ಯಂಗ್ ಹೀರೋ ಸಾಕಷ್ಟು ಸವಾಲುಗಳನ್ನ ಫೇಸ್ ಮಾಡಿ ಈ ಹಂತಕ್ಕೆ ಬಂದಿರೋದು..
ಹೌದು.. ರಸಿಕ್ ಸಲಾಂ ದಾರ್ ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಅಶ್ಮುಜಿ ಗ್ರಾಮದವರು. ತಂದೆ ಶಿಕ್ಷಕರು. ರಸಿಕ್‌ಗೆ ಬಾಲ್ಯದಿಂದಲೂ ಕ್ರಿಕೆಟರ್ ಆಗುವ ಕನಸಿತ್ತು. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಕ್ರಿಕೆಟ್ ತರಬೇತಿ ಪಡೆಯುತ್ತಿದ್ರು. ಆದ್ರೆ ರಸಿಕ್ ಸಂಬಂಧಿಕರಿಗೆ ಈತ ಕ್ರಿಕೆಟರ್ ಆಗೋದು ಇಷ್ಟ ಇರ್ಲಿಲ್ಲ.. ಕ್ರಿಕೆಟ್‌ನಿಂದ ಜೀವನ ನಡೆಸಲು ಸಾಧ್ಯ ಇಲ್ಲ.. ಬೇರೆನಾದ್ರೂ ಮಾಡು ಅಂತ ಹೇಳ್ತಾ ಬಂದಿದ್ರು. ಮತ್ತೊಂದ್ಕಡೆ ಅಂಡರ್ 19ನಲ್ಲಿ ಆಡುವ ಕನಸು ಕಂಡಿದ್ರು. ಆದ್ರೆ ಎಷ್ಟು ಬಾರಿ ಪ್ರಯತ್ನಿಸಿದ್ರೂ ಟೀಂ ಇಂಡಿಯಾಗೆ ಆಯ್ಕೆ ಆಗಿರ್ಲಿಲ್ಲ. ಹೀಗಾಗಿ ರಸಿಕ್ ಕ್ರಿಕೆಟ್ ಆಡೋದನ್ನ ಬಿಡಲು ನಿರ್ಧರಿಸಿದ್ರು. ಆದ್ರೆ ರಸಿಕ್ ಪ್ರತಿ ಸವಾಲಿನ ಹಿಂದೆ ಅವರ ತಂದೆ ತಾಯಿ ನಿಂತ್ರು. ಜಮ್ಮು ಮತ್ತು ಕಾಶ್ಮೀರದ U-19 ಆಯ್ಕೆ ಟ್ರಯಲ್ಸ್‌ಗೆ ಹಾಜರಾಗಲು ಒತ್ತಾಯಿಸಿದ್ರು. ಇದೇ ಟೈಮ್‌ನಲ್ಲೇ ರಸಿಕ್ ಪಾಲಿಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ದೇವರಾಗಿ ಬಂದ್ರು. ರಸಿಕ್ ಪ್ರತಿಭೆಯನ್ನು ಗುರುತಿಸಿ ಅವರನ್ನು ಹಿರಿಯರ ತಂಡಕ್ಕೂ ಸೇರಿಸಿದ್ರು. ರಣಜಿ ಟ್ರೋಫಿ ಟೂರ್ನಿಗಳಲ್ಲಿ ರಸಿಕ್ ಉತ್ತಮ ಸಾಧನೆ ಮಾಡಿದ್ರು. ರಸಿಕ್ 17ನೇ ವಯಸ್ಸಿಗೇ ಐಪಿಎಲ್ ನಲ್ಲಿ ಆಡುವ ಅವಕಾಶವನ್ನು ರಸಿಕ್ ಗಿಟ್ಟಿಸಿಕೊಂಡರು. 2019ರಲ್ಲಿ ರಸಿಕ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಐಪಿಎಲ್‌ನಲ್ಲಿ ಆಡಿದ ಜಮ್ಮು-ಕಾಶ್ಮೀರದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಈ ಟೈಮ್‌ನಲ್ಲೇ ರಸಿಕ್ ವಯೋಮಿತಿಗೆ ಸಂಬಂಧಿಸಿ ನಕಲಿ ಪ್ರಮಾಣಪತ್ರ ನೀಡಿದ್ದ ಪ್ರಕರಣದಲ್ಲಿ 2 ವರ್ಷ ಬ್ಯಾನ್ ಆದ್ರು. ರಸಿಕ್ ಭಾರತೀಯ ಅಂಡರ್ -19 ತಂಡಕ್ಕೆ ಆಯ್ಕೆಯಾಗಲು ಬಿಸಿಸಿಐಗೆ ನಕಲಿ ಜನನ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಇದನ್ನು ಗಮನಿಸಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಯು ರಸಿಕ್ ತನ್ನ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ಗೆ ಮಾಹಿತಿ ನೀಡಿತ್ತು. ಪರಿಣಾಮವಾಗಿ, ಬಿಸಿಸಿಐ ರಸಿಕ್‌ನ ಭಾರತ U-19 ತಂಡದಿಂದ ತೆಗೆದುಹಾಕಿದಲ್ಲದೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿತ್ತು.
ರಸಿಕ್ ಸಂಕಷ್ಟ ಇಲ್ಲಿಗೆ ಮುಗಿಯಲಿಲ್ಲ. ರಸಿಕ್ ಶಿಕ್ಷೆಯ ಅವಧಿ ಮುಗಿಯುವ ಹೊತ್ತಿಗೆ ಕೋವಿಡ್ ಕಾಲ ಶುರುವಾಗಿತ್ತು. ಇದರಿಂದಾಗಿ ಅವರ ಕ್ರಿಕೆಟ್ ಜೀವನ ಎಂಡ್ ಆಗುತ್ತಾ ಅನ್ನೋ ಆತಂಕ ಮೂಡಿತ್ತು. ಅದರೂ ಎದೆಗುಂದದ ಅವರು ತಮ್ಮ ಹಿಂದಿನ ಎಲ್ಲ ತಪ್ಪನ್ನ ತಿದ್ದಿಕೊಂಡು ಮತ್ತೆ ಕಣಕ್ಕಿಳಿದರು. ಕೋವಿಡ್ ದಿನಗಳಲ್ಲಿ ತಮ್ಮ ಊರಿನ ನಿರ್ಜನ ಮೈದಾನದಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಅವರಿಗೆ ಮತ್ತೆ ಮರುಜನ್ಮ ಸಿಕ್ಕಿತು. 2022ರಲ್ಲಿ ರಸಿಕ್‌ರನ್ನು ಕೆಕೆಆರ್ ಖರೀಸಿತು. ಆದ್ರೆ ಕಳಪೆ ಫಾರ್ಮ್, ಇಂಜುರಿಯಿಂದಾಗಿ ಕೆಕೆಆರ್ ಟೀಂನಲ್ಲಿ ಯುವ ಆಟಗಾರನಿಗೆ ಆಡಲು ಅಷ್ಟೊಂದು ಚಾನ್ಸ್ ಸಿಕ್ಕಿರಲಿಲ್ಲ.. ಬಳಿಕ ಮತ್ತೆ ರಸಿಕ್ ಇಂಜುರಿಗೆ ತುತ್ತಾಗಿದ್ರು. ಇದ್ರಿಂದಾಗೇ 2023ರಲ್ಲಿ ಐಪಿಎಲ್ ನಲ್ಲಿ ಆಡೋ ಅವಕಾಶ ಕೈತಪ್ಪಿತು. 2024ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿಕೊಂಡರು. ಆ ಋತುವಿನಲ್ಲಿ ಎಂಟು ವಿಕೆಟ್ ಗಳಿಸಿ ಮಿಂಚಿದ್ರು. ಬಳಿಕ ಅಂದ್ರೆ 2025ರಲ್ಲಿ ರಸಿಕ್ ಅವರನ್ನು ಆರ್‌ಸಿಬಿ ತಂಡದ ಭಾಗವಾದ್ರು. RCB 6 ಕೋಟಿ ರುಪಾಯಿಗೆ ಈ ಯುವ ವೇಗಿಯನ್ನ ಖರೀಸಿತು. ಕಳೆದ ವರ್ಷ ಟೀಂನಲ್ಲಿ ಭುವನೇಶ್ವರ್ ಕುಮಾರ್, ಜೋಷ್ ಹೇಜಲ್‌ವುಡ್ ಮತ್ತು ಯಶ್ ದಯಾಳ್ ಇದ್ದ ಕಾರಣ ಅವರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಆದರೂ ಆಡಲು ಸಿಕ್ಕ ಎರಡು ಪಂದ್ಯಗಳಲ್ಲಿ ಒಂದು ವಿಕೆಟ್ ಕಬಳಿಸಿದ್ದರು. ಇನ್ನು ಈ ಸೀಸನ್‌ನಲ್ಲಿ ತಂಡದ ಎಡಗೈ ವೇಗಿ ಯಶ್ ದಯಾಳ್ ಅಲಭ್ಯರಾಗಿದ್ದಾರೆ. ಹೀಗಾಗಿ ಈ ಸೀಸನ್‌ನಲ್ಲಿ ರಸಿಕ್‌ಗೆ ಚಾನ್ಸ್ ಸಿಕ್ಕಿದೆ. ಸಿಕ್ಕ ಅವಕಾಶದಲ್ಲೇ ತನ್ನನ್ನ ತಾನೂ ಫ್ರೂವ್ ಮಾಡಿದ್ದಾರೆ, ಆರ್‌ಸಿಬಿ ಫ್ರಾಂಚೈಸಿ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಂಗ್ ಹೀರೋ ಕ್ರಿಕೆಟ್ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡ್ಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

