RCB 2ನೇ ಟ್ರೋಫಿಗಿದೆ TASK – ಭುವಿ ಕೈಯಲ್ಲಿ ಚಾಂಪಿಯನ್ಸ್ ಸೀಕ್ರೆಟ್
GTಗೆ ಏನೆಲ್ಲಾ ಅಡ್ವಾಂಟೇಜ್ ಆಗುತ್ತೆ?

18ನೇ ಸೀಸನ್ನಲ್ಲಿ ಚೊಚ್ಚಲ ಕಪ್ ಗೆದ್ದ ಆರ್ಸಿಬಿಗೆ ಈ ಸೀಸನ್ ಕೂಡ ತುಂಬಾನೇ ಸ್ಪೆಷಲ್. ಟೇಬಲ್ ಟಾಪರ್.. 19ನೇ ಆವೃತ್ತಿಯ ಫಸ್ಟ್ ಫೈನಲಿಸ್ಟ್.. ಅದಕ್ಕಿಂತ ಮೇನ್ ಆಗಿ ಡಿಫೆಂಡಿಂಗ್ ಚಾಂಪಿಯನ್ಸ್.. ಡೇ ಒನ್ ಮ್ಯಾಚ್ನಿಂದ ಕ್ವಾಲಿಫೈಯರ್ 1 ಮ್ಯಾಚ್ವರೆಗೂ ಡಾಮಿನೇಷನ್ ಮಾಡ್ಕೊಂಡು ಬಂದಿರೋ ಬೆಂಗಳೂರು ಈ ಸಲನೂ ಕಪ್ ನಮ್ದು ಅಂತಾ ಹೇಳೋಕೆ ಇನ್ನೊಂದೇ ಹೆಜ್ಜೆ ದೂರದಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ ಫೈಟ್ಗೆ ವೇದಿಕೆ ಸಿದ್ಧವಾಗಿದೆ.
ಇದನ್ನೂ ಓದಿ : RR ರಿಯಲ್ ವಾರಿಯರ್ ವೈಭವ್ ಸೂರ್ಯವಂಶಿ – ಬಾಸ್ ಬೇಬಿ ಏಕಾಂಗಿಯಾಗಿ ಕಣ್ಣೀರು ಸುರಿಸಿದ್ಯಾಕೆ?
2026ರ ಐಪಿಎಲ್ ಚಾಂಪಿಯನ್ಸ್ ಉದಯಕ್ಕೆ ನರೇಂದ್ರ ಮೋದಿ ಸ್ಟೇಡಿಯಮ್ ಸಿದ್ಧವಾಗ್ತಿದೆ. ರಾಯಲ್ ಪಾಯಿಂಟ್ಸ್ ಟೇಬಲ್ನ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ ತಂಡಗಳೇ ಫೈನಲ್ನಲ್ಲೂ ಆಡೋದ್ರಿಂದ ಹೈವೋಲ್ಟೇಜ್ ಫೈಟ್ ಆಗೋದಂತೂ ಪಕ್ಕಾ. ಇಂಟ್ರೆಸ್ಟಿಂಗ್ ಅಂದ್ರೆ ಲಾಸ್ಟ್ ಸೀಸನ್ ಇದೇ ಸ್ಟೇಡಿಯಮ್ನಲ್ಲಿ ಆರ್ಸಿಬಿ ಕಪ್ ಗೆದ್ದು ಬೀಗಿತ್ತು. ಮತ್ತೊಂದ್ಕಡೆ ಗುಜರಾತ್ಗೆ ಇದು ಹೋಂ ಗ್ರೌಂಡ್. ತವರಿನ ಮೈದಾನದ ಅಡ್ವಾಂಟೇಜ್ ಪಡೆದು ಗೆದ್ದು ಬೀಗೋಕೆ ಅವ್ರೂ ಕಾಯ್ತಾ ಇರ್ತಾರೆ.
ಬೆಂಗಳೂರು ತಂಡದ ಪ್ಲಸ್ & ಮೈನಸ್!
ಚಾಂಪಿಯನ್ಸ್ ಮೈಂಡ್ ಸೆಟ್.. ಲೀಗ್ ನಲ್ಲಿ ಟಾಪ್-1 ಸ್ಥಾನ
ಕ್ವಾಲಿಫೈಯರ್ 1ನಲ್ಲಿ 92 ರನ್ ಗಳ ಬಿಗ್ ಮಾರ್ಜಿನ್ ವಿಕ್ಟರಿ
ಕೊಹ್ಲಿ ಅನುಭವ & ಪಾಟಿದಾರ್ ಆರ್ಭಟ ಚೆನ್ನಾಗಿ ವರ್ಕೌಟ್
ಓಪನರ್ ಟು ಫಿನಿಶರ್ಸ್ ವರೆಗೂ ತಂಡದಲ್ಲಿ ಸ್ಫೋಟಕ ಹಿಟ್ಟರ್ಸ್
ಬೌಲಿಂಗ್ ನಲ್ಲಿ ಎಲ್ಲರೂ ಕೂಡ ಫಾರ್ಮ್ ನಲ್ಲಿದ್ದು ಅದ್ಭುತ ಪ್ರದರ್ಶನ
ಮೈನಸ್ ಏನಂದ್ರೆ ಫೈನಲ್ ಪಂದ್ಯದ ಪ್ರೆಶರ್.. ಕೊಹ್ಲಿ ಔಟಾದ್ರೆ ಕಷ್ಟ
ಬೌಲಿಂಗ್ ನಲ್ಲಿ ಭುವಿ ಮೇಲೆಯೇ ಡಿಪೆಂಡೆನ್ಸಿ.. ಉಳಿದವ್ರು ದುಬಾರಿ
ಫೀಲ್ಡಿಂಗ್ ನಲ್ಲಿ ಎಲ್ಲಾ ಆಟಗಾರರಿಂದಲೂ ಸರಿಯಾದ ಸಪೋರ್ಟ್ ಇಲ್ಲ
ಆರ್ ಸಿಬಿ ಈ ಸೀಸನ್ ನಲ್ಲಿ ಗುಜರಾತ್ ವಿರುದ್ಧ ಮಾತ್ರವೇ ಆಲೌಟ್
ಆರ್ಸಿಬಿ ಈ ಸೀಸನ್ನಲ್ಲಿ ನೀಡಿದ ಪರ್ಫಾಮೆನ್ಸ್ ನೋಡಿದ್ರೆ ದೊಡ್ಡ ಸಮಸ್ಯೆಗಳೇನು ಇಲ್ಲ. ಆದ್ರೆ ಫೈನಲ್ ಮ್ಯಾಚ್ ಅನ್ನೋ ಪ್ರೆಶರ್ ತಲೆಯಿಂದ ತೆಗೆದು ನಾರ್ಮಲ್ ಗೇಮ್ ಆಡ್ಬೇಕು ಅಷ್ಟೇ. ಇನ್ನು ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್ಗೆ ನುಗ್ಗಿರೋ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ತಂಡದ ಪ್ಲಸ್ ಌಂಡ್ ಮೈನಸ್.
ಗುಜರಾತ್ ತಂಡದ ಪ್ಲಸ್ & ಮೈನಸ್!
ಹೋಮ್ ಗ್ರೌಂಡ್ ಅಡ್ವಾಂಟೇಜ್.. ಡಾಮಿನೇಷನ್ ಮೈಂಡ್ ಸೆಟ್
ಕ್ವಾಲಿಫೈಯರ್ 2ನಲ್ಲಿ 214 ರನ್ಸ್ ಚೇಸ್ ಮಾಡಿರೋದ್ರಿಂದ ಕಾನ್ಫಿಡೆನ್ಸ್
ಶುಭ್ ಮನ್ ಗಿಲ್ & ಸಾಯಿ ಸುದರ್ಶನ್ ಅದ್ಭುತ ಜೊತೆಯಾಟ
ಬೌಲಿಂಗ್ ಯುನಿಟ್ ನಲ್ಲಿ ಸಾಕಷ್ಟು ಅನುಭವಿಗಳ ದಂಡೇ ಇದೆ
ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ನಲ್ಲೂ ಲೀಡ್ ನಲ್ಲಿರೋ ಪ್ಲೇಯರ್ಸ್
ಗುಜರಾತ್ ನ ದೊಡ್ಡ ಸಮಸ್ಯೆಯೇ ಓಪನಿಂಗ್ ಜೋಡಿ ಮೇಲೆ ಡಿಪೆಂಡ್
ಮಿಡಲ್ ಆರ್ಡರ್ ನಲ್ಲಿ ಮ್ಯಾಚ್ ವಿನ್ನಿಂಗ್ ರನ್ಸ್ ಬರೋದು ಕಷ್ಟ
ಬೌಲಿಂಗ್ ನಲ್ಲಿ ರಶೀದ್ ಖಾನ್ ಇತ್ತೀಚೆಗೆ ತುಂಬಾ ದುಬಾರಿಯಾಗಿದ್ದಾರೆ

ನೋಡಿರಿ

