ಶುಗರ್ ಇದ್ದವರು ಮೊಸರು ಸೇವಿಸಬಹುದಾ? – ಎಷ್ಟು ಪ್ರಮಾಣದಲ್ಲಿ ಸೇವಿಬೇಕು?

ಇತ್ತೀಚೆಗೆ ಡಯಾಬಿಟೀಸ್ ಅನ್ನೋದು ಸರ್ವೇ ಸಾಮಾನ್ಯ ಕಾಯಿಲೆಯಾಗಿದೆ. ಪ್ರತಿ ಮೂರು ವ್ಯಕ್ತಿಯಲ್ಲಿ ಒಬ್ಬರಿಗೆ ಡಯಾಬಿಟೀಸ್ ಕಂಡು ಬರುತ್ತಿದೆ ಎಂದು ಅಧ್ಯಯನ ಹೇಳುತ್ತಿದೆ. ಇಡೀ ವಿಶ್ವದಲ್ಲಿಯೇ ಭಾರತ ಡಯಬಿಟೀಸ್ ರಾಜಧಾನಿಯಾಗಿದೆ. ಡಯಾಬಿಟೀಸ್ ನಮ್ಮ ಗಮನಕ್ಕೆ ಬಾರದೇ ನಮ್ಮನ್ನು ಆವರಿಸಿಕೊಳ್ಳುತ್ತದೆ. ಆಹಾರ ಪದ್ದತಿಯಲ್ಲಿ ಸ್ವಲ್ವ ಹೆಚ್ಚುಕಮ್ಮಿಯಾದ್ರೂ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಡಯಾಬಿಟೀಸ್ ರೋಗಿಗಳು ಮೊಸರು ಸೇವಿಸಬಹುದೇ ಅಥವಾ ಬೇಡವೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿದೆ.
ಇದನ್ನೂ ಓದಿ: RR ರಿಯಲ್ ವಾರಿಯರ್ ವೈಭವ್ ಸೂರ್ಯವಂಶಿ – ಬಾಸ್ ಬೇಬಿ ಏಕಾಂಗಿಯಾಗಿ ಕಣ್ಣೀರು ಸುರಿಸಿದ್ಯಾಕೆ?
ಈಗಿನ ಕಾಲದಲ್ಲಿ ಆಹಾರ ಪದ್ಧತಿಯಲ್ಲಿ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಡಯಾಬಿಟೀಸ್ ರೋಗಿಗಳು ಮೊಸರು ಸೇವಿಸಬಹುದೇ ಅಥವಾ ಬೇಡವೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ರೀತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಮೊಸರು ಸೇವಿಸುವುದು ಡಯಾಬಿಟೀಸ್ ರೋಗಿಗಳಿಗೆ ಲಾಭಕರವಾಗಬಹುದು.
ಮೊಸರು ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಪ್ರೊಬಯೋಟಿಕ್ಸ್‌ಗಳಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಹೊಟ್ಟೆಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಕಡಿಮೆ ಕೊಬ್ಬಿನ ಹಾಗೂ ಸಕ್ಕರೆ ಸೇರಿಸದ ಮೊಸರು ಡಯಾಬಿಟೀಸ್ ನಿಯಂತ್ರಣಕ್ಕೆ ನೆರವಾಗುತ್ತದೆ ಅಂತಾ ತಜ್ಞರು ತಿಳಿಸಿದ್ದಾರೆ. ಮೊಸರಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ತಕ್ಷಣ ಏರಿಸುವುದಿಲ್ಲ.
ಆರೋಗ್ಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಲೇವರ್ಡ್ ಯೋಗರ್ಟ್ ಅಥವಾ ಹೆಚ್ಚು ಸಕ್ಕರೆ ಇರುವ ಮೊಸರನ್ನ ತಪ್ಪಿಸುವುದು ಉತ್ತಮ. ಬದಲಾಗಿ ಮನೆಯಲ್ಲೇ ತಯಾರಿಸಿದ ತಾಜಾ ಮೊಸರು ಸೇವಿಸುವುದು ಆರೋಗ್ಯಕರ ಆಯ್ಕೆಯಾಗುತ್ತದೆ. ಕಡಿಮೆ ಕೊಬ್ಬಿನ ಮೊಸರು ದೀರ್ಘಕಾಲ ಹೊಟ್ಟೆ ತುಂಬಿರುವ ಅನುಭವ ನೀಡುವುದರಿಂದ ಅನಗತ್ಯ ಆಹಾರ ಸೇವನೆಯನ್ನ ಕಡಿಮೆ ಮಾಡುತ್ತದೆ. ಇದು ತೂಕ ನಿಯಂತ್ರಣಕ್ಕೂ ಸಹಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮೊಸರಿನಲ್ಲಿರುವ ಪ್ರೊಬಯೋಟಿಕ್ಸ್ ಉತ್ತಮ ಬ್ಯಾಕ್ಟೀರಿಯಾಗಳನ್ನ ಹೆಚ್ಚಿಸಿ ಜೀರ್ಣಕ್ರಿಯೆ ಸುಧಾರಿಸಲು ನೆರವಾಗುತ್ತವೆ. ಜೊತೆಗೆ ದೇಹದ ಉರಿಯೂತವನ್ನ ಕಡಿಮೆ ಮಾಡಲು ಸಹ ಸಹಕಾರಿಯಾಗಬಹುದು. ಡಯಾಬಿಟೀಸ್ ರೋಗಿಗಳು ಮೊಸರನ್ನ ಮಧ್ಯಾಹ್ನದ ಊಟ ಅಥವಾ ಬೆಳಗಿನ ಉಪಹಾರದಲ್ಲಿ ಸೇರಿಸಿಕೊಳ್ಳಬಹುದು ಎಂದು ಪೌಷ್ಟಿಕ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಮೊಸರಿನೊಂದಿಗೆ ಸಕ್ಕರೆ, ಸಿಹಿ ಪದಾರ್ಥಗಳು ಅಥವಾ ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನ ಸೇರಿಸಬಾರದು ಎಂದು ಎಚ್ಚರಿಸಿದ್ದಾರೆ.
ತಜ್ಞರ ಅಭಿಪ್ರಾಯದಂತೆ ಡಯಾಬಿಟೀಸ್ ರೋಗಿಗಳು ತಮ್ಮ ಆರೋಗ್ಯ ಸ್ಥಿತಿ ಮತ್ತು ವೈದ್ಯರ ಸಲಹೆಯನ್ನ ಅನುಸರಿಸಿ ಆಹಾರ ಕ್ರಮ ರೂಪಿಸಿಕೊಳ್ಳುವುದು ಅತ್ಯಗತ್ಯ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಪದ್ಧತಿಯೊಂದಿಗೆ ಮೊಸರು ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿ ಆಗಬಹುದು ಎಂದು ತಿಳಿಸಿದ್ದಾರೆ.

ನೋಡಿರಿ

