ನಿಮ್ಮ ಕಷ್ಟಗಳು ಕರಗಿ ಹೋಗಬೇಕಾ? – ಭಾನುವಾರ ಸೂರ್ಯದೇವನ ಈ ಮಂತ್ರಗಳನ್ನ ಪಠಿಸಿ

ನಿಮ್ಮ ಕಷ್ಟಗಳು ಕರಗಿ ಹೋಗಬೇಕಾ? –  ಭಾನುವಾರ ಸೂರ್ಯದೇವನ ಈ ಮಂತ್ರಗಳನ್ನ ಪಠಿಸಿ

ಭಾನುವಾರ ಸೂರ್ಯದೇವನ ದಿನ.  ಆತ್ಮವಿಶ್ವಾಸ, ಆರೋಗ್ಯ, ನಾಯಕತ್ವ, ಗೌರವ ಮತ್ತು ಜೀವನದ ಪ್ರಗತಿಗೆ ಸೂರ್ಯನ ಆಶೀರ್ವಾದ ಮುಖ್ಯವೆಂದು ನಂಬಲಾಗಿದೆ.  ಉದ್ಯೋಗ, ವ್ಯವಹಾರ ಮತ್ತು ಸಮಾಜದಲ್ಲಿ ಮಾನ-ಗೌರವ ಹೆಚ್ಚಲು ಭಾನುವಾರದ ಆರಾಧನೆ ಫಲಪ್ರದವೆಂದು ಹೇಳಲಾಗುತ್ತದೆ. ಸೂರ್ಯದೇವನ ಕೃಪೆ ಪಡೆಯಲು ಕೆಲವು ವಿಶೇಷ ನಿಯಮಗಳನ್ನು ಪಾಲಿಸುವುದರ ಜೊತೆಗೆ ಶಕ್ತಿಯುತ ಮಂತ್ರಗಳನ್ನು ಪಠಿಸುವುದು ಬಹಳ ಶುಭಕರವೆಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ರೆ ಆ ಮುಂತ್ರಗಳು ಯಾವೆಲ್ಲಾ ಅನ್ನೋದ್ದನ್ನ ನೋಡೋಣ ಬನ್ನಿ.

ಸರಳ ಸೂರ್ಯ ಮಂತ್ರ

ಓಂ ಸೂರ್ಯಾಯ ನಮಃ

ಸೂರ್ಯ ಅನುಗ್ರಹ ಮಂತ್ರ

ಓಂ ಘೃಣಿ ಸೂರ್ಯಾಯ ನಮಃ

ಸೂರ್ಯದೇವನ ಶಕ್ತಿಯುತ ಮಂತ್ರಗಳು

ಸೂರ್ಯ ಬೀಜ ಮಂತ್ರ

ಓಂ ಘೃಣಿಂ ಸೂರ್ಯಃ ಆದಿತ್ಯಃ

ಈ ಮಂತ್ರವನ್ನು ಪ್ರತಿದಿನ 11 ಅಥವಾ 108 ಬಾರಿ ಜಪಿಸುವುದರಿಂದ ಮನಶಾಂತಿ ಮತ್ತು ಆತ್ಮಬಲ ಹೆಚ್ಚುತ್ತದೆ ಎಂದು ನಂಬಲಾಗಿದೆ.

ಸೂರ್ಯ ಕೃಪಾ ಮಂತ್ರ

ಓಂ ಏಹಿ ಸೂರ್ಯ ಸಹಸ್ತ್ರಾಂಶೋಂ ತೇಜೋ ರಾಶೇ ಜಗತ್ಪತೇ, ಅನುಕಂಪಯೇಮಾಂ ಭಕ್ತ್ಯಾ, ಗೃಹಣಾಘೃಯ ದಿವಾಕರಃ

ಈ ಮಂತ್ರವು ಸೂರ್ಯದೇವನ ಕೃಪೆ ಮತ್ತು ಜೀವನದಲ್ಲಿ ಬೆಳವಣಿಗೆಗಾಗಿ ಪಠಿಸಲಾಗುತ್ತದೆ.

ಮನೋವಾಂಛಿತ ಫಲಪ್ರದ ಮಂತ್ರ

ಓಂ ಹ್ರೀಂ ಹ್ರೀಂ ಸೂರ್ಯಾಯ ಸಹಸ್ರಕಿರಣರಾಯ ಮನೋವಾಂಚಿತ ಫಲಮ್ ದೇಹಿ ದೇಹಿ ಸ್ವಾಹಾ

ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ.

ಸೂರ್ಯ ಆದಿತ್ಯ ಮಂತ್ರ

ಓಂ ಹ್ರೀಂ ಘೃಣಿಃ ಸೂರ್ಯ ಅದಿತ್ಯಃ ಕ್ಲೀಂ ಓಂ

ಈ ಮಂತ್ರವನ್ನು ಜಪಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎನ್ನಲಾಗುತ್ತದೆ.

ಸೂರ್ಯ ನಮಸ್ಕಾರ ಮಂತ್ರ

ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ

ಸೂರ್ಯಾರಾಧನೆಯಿಂದ ಏನೆಲ್ಲಾ ಲಾಭವಿದೆ ಗೊತ್ತಾ? 

ಹೆಚ್ಚಲಿರೋ ಆತ್ಮವಿಶ್ವಾಸ ಮತ್ತು ಧೈರ್ಯ

ಸರ್ಕಾರಿ ಕೆಲಸಗಳಲ್ಲಿ ಯಶಸ್ಸು

ಆರೋಗ್ಯ ಮತ್ತು ಉತ್ಸಾಹ ವೃದ್ಧಿ

ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ

ಉದ್ಯೋಗ ಹಾಗೂ ವ್ಯವಹಾರದಲ್ಲಿ ಪ್ರಗತಿ

Kishor KV

Leave a Reply

Your email address will not be published. Required fields are marked *