RR ರಿಯಲ್ ವಾರಿಯರ್ ವೈಭವ್ ಸೂರ್ಯವಂಶಿ – ಬಾಸ್ ಬೇಬಿ ಏಕಾಂಗಿಯಾಗಿ ಕಣ್ಣೀರು ಸುರಿಸಿದ್ಯಾಕೆ?

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಕ್ವಾಲಿಫೈಯರ್ ಟು ಪಂದ್ಯದಲ್ಲಿ ಎದುರಾಳಿಯಾದರೂ ಕೂಡಾ ಜಿಟಿ ಕಣ್ಣಿದ್ದಿದ್ದು ವೈಭವ್ ಸೂರ್ಯವಂಶಿ ಮೇಲೆ. ಹಗಲು ರಾತ್ರಿ ಜಿಟಿ ಬೌಲರ್ಸ್ ಮತ್ತು ಟೀಮ್ ಸೂರ್ಯವಂಶಿಯನ್ನ ಔಟ್ ಮಾಡೋದು ಹೇಗೆ ಎಂಬ ರಣತಂತ್ರ ರೂಪಿಸಿದ್ದರು. ಆದರೆ, ವೈಭವ್ ಮೇಲೆ ಬಿಟ್ಟ ಬಾಣ ಆರ್ ಆರ್ ಬ್ಯಾಟರ್ಸ್ ಪೆವಿಲಿಯನ್ ಪರೇಡ್‌ಗೆ ಕಾರಣವಾಗಿತ್ತು. ಆಗಲೇ ನೋಡಿ ಈ ವಂಡರ್ ಕಿಡ್ ಮತ್ತೊಮ್ಮೆ ಕ್ರಿಕೆಟ್ ಜಗತ್ತನ್ನೇ ತನ್ನತ್ತ ತಿರುಗುವಂತೆ ಮಾಡಿದ. ಬಾಲಿವುಡ್‌ನ ಬಿಗ್‌ಬಿಯಿಂದ ಹಿಡಿದು ಕ್ರಿಕೆಟ್ ದೇವರ ಮೆಚ್ಚುಗೆಗೆ ಪಾತ್ರವಾದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಾನೆಂಥಾ ಕ್ರಿಕೆಟರ್ ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:RCB Vs GT ಫೈನಲ್ ಫೈಟ್ – ಸುದರ್ಶನ್ ಬ್ಯಾಟ್ ಗೆ ಗಮ್ ಹಾಕ್ಬೇಕಾ?
ವಂಡರ್ ಕಿಡ್ ವೈಭವ್ ಸೂರ್ಯವಂಶಿ. ಲಾಸ್ಟ್ ಸೀಸನ್‌ನಲ್ಲಿ ಸೂರ್ಯವಂಶಿಯ ವೈಭವ ಬ್ಯಾಟಿಂಗ್ ನೋಡಿದವರು ಇದೆಲ್ಲಾ ಆರಂಭ ಶೂರತ್ವ. ನಂತರ ಹೆಸರಿಲ್ಲದಂತೆ ಮಾಯವಾಗ್ತಾನೆ ಅಂದರು. ನಂತರ ಈ ಸೀಸನ್‌ನಲ್ಲಿ ಬಾಸ್ ಬೇಬಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದಾಗ ರನ್ ಓಡಲು ಆಗಲ್ಲ. ಅದಕ್ಕೆ ಸಿಕ್ಸ್ ಫೋರ್ ಹೊಡೆದೇ ರನ್ ಮಾಡ್ತಾನೆ. ಕೊನೇ ತನಕ ನಿಲ್ಲೋದು ಗೊತ್ತಿಲ್ಲ, ಗೆಲುವಿಗೆ ಕೊಡುಗೆಯನ್ನೂ ನೀಡಲ್ಲ ಎಂದು ಟೀಕೆ ಮಾಡಿದರು. ಇದೆಲ್ಲಾ ಟೀಕೆ ಬಂದಿದ್ದು ಕೂಡಾ ಮಾಜಿ ಕ್ರಿಕೆಟರ್ಸ್ ಕಡೆಯಿಂದಲೇ.. ಆಗ ಟೀಕೆ ಮಾಡಿದವರು ಈಗ ನೀನು ರಿಯಲಿ ವಂಡರ್ ಕಿಡ್ ಅಂತಾ ಮೆಚ್ಚುಗೆಯ ಮಾತಾಡ್ತಿದ್ದಾರೆ. ಇಡೀ ತಂಡದ ರನ್ ಹೊರೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬ್ಯಾಟಿಂಗ್ ಮಾಡಿದ ವೈಭವ್ ನಿಜಕ್ಕೂ ಭಾರತಕ್ಕೆ ಸಿಕ್ಕ ವಂಡರ್ ಕ್ರಿಕೆಟರ್.. ವಯಸ್ಸನ್ನು ಅವಮಾನಿಸಿದಾಗ, ಸಾಮರ್ಥ್ಯದ ಬಗ್ಗೆ ಟೀಕೆ ಮಾಡಿದಾಗ, ಆಟವನ್ನು ಅನುಮಾನಿಸಿದಾಗಲೂ ಸೈಲೆಂಟ್ ಆಗಿಯೇ ಬ್ಯಾಟ್ ಮೂಲಕ ಉತ್ತರ ಕೊಟ್ಟ ವೈಭವ್ ಈಗ ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಆಟ ನಿಜಕ್ಕೂ ಒಬ್ಬ ವಾರಿಯರ್ ರೀತಿಯಿತ್ತು. ತನ್ನ ತಂಡಕ್ಕೋಸ್ಕರ ವೈಭವ್ ಆಡಿದ ರೀತಿ ಯಾವ ಅನುಭವಿ ಕ್ರಿಕೆಟರ್‌ಗೂ ಕಡಿಮೆಯಿರಲಿಲ್ಲ. ಯಾವ ತಂಡದ ನಾಯಕನಿಗಿಂತಲೂ ಕೂಡಾ. ಒಂದೆಡೆ ಪಟಪಟ ವಿಕೆಟ್ ಉದುರಿಹೋಗುತ್ತಿದೆ. ಗೆದ್ದರೆ ಫೈನಲ್‌ಗೆ ಎಂಟ್ರಿಯಾಗಬೇಕಿದ್ದ ಪಂದ್ಯ ಬೇರೆ. ರನ್ ಗಳಿಸಲೇಬೇಕಾದ ಒತ್ತಡ. ಆಗ ಹದಿಹರೆಯದ ಹುಡುಗನ ಮನಸಲ್ಲಿ ಅದೆಷ್ಟು ಜವಾಬ್ಜಾರಿಯಿತ್ತು ಅಂದರೆ ಅದಕ್ಕಾಗಿ ಒಂದೊಂದು ಬಾಲ್ ನೋಡಿಯೇ ಆಟವಾಡುತ್ತಿದ್ದ. ಸ್ಕೋರ್ ಗಾಗಿ ತಂಡದ ರನ್ ಹೊರೆ ಹೆಗಲಮೇಲಿಟ್ಟುಕೊಂಡೇ ಬ್ಯಾಟ್ ಬೀಸುತ್ತಿದ್ದ. ತಂಡದ ಮೊತ್ತ ಇನ್ನೂರರ ಗಡಿ ದಾಟಲು ವೈಭವ್ ಆಟ ನೆರವಾಗಿತ್ತು. ಹುಡುಗನ ತಾಳ್ಮೆಯ ಆಟಕ್ಕೆ ಇಡೀ ಸ್ಟೇಡಿಯಂ ಜನ ಎದ್ದು ನಿಂತು ಚಪ್ಪಾಳೆ ಮೂಲಕ ಸಪೋರ್ಟ್ ಮಾಡುತ್ತಿದ್ದರು. ಆದರೆ, ತಂಡಕ್ಕಾಗಿ ಜವಾಬ್ದಾರಿಯ ಇನ್ನಿಂಗ್ಸ್ ಆಡಿದ ಸೂರ್ಯವಂಶಿ ಇಲ್ಲೂ ಕೂಡಾ ಶತಕ ವಂಚಿತರಾದ್ರು.
96 ರನ್.. ಸೆಂಚುರಿ ಜಸ್ಟ್ ಮಿಸ್.. ಮತ್ತದೇ ಶತಕ ವಂಚಿತ ಪಟ್ಟ.. ನರ್ವಸ್ ನೈಂಟಿ.. ಬಟ್.. ವೈಭವ್ ಸೂರ್ಯವಂಶಿಯನ್ನ ಇಲ್ಲಿ ಕೂಡಾ ಕಾಡಿದ್ದು ಕೊನೇ ಓವರ್ ತನಕ ಇರಬೇಕಿತ್ತು ಅನ್ನೋ ನಿರಾಶೆ ಮಾತ್ರ. ತಂಡದ ಮೊತ್ತ ಇನ್ನಷ್ಟು ಹೆಚ್ಚು ಮಾಡಬೇಕಿತ್ತು ಎಂಬ ಛಲ.. ಸೂರ್ಯವಂಶಿ 96 ರನ್‌ಗೆ ಔಟಾಗುತ್ತಿದ್ದಂತೆ ಒನ್‌ಸೈಗೇನ್ ಇಡೀ ಸ್ಟೇಡಿಯಂ ಸೈಲೆಂಟ್ ಆಗಿತ್ತು. ಇದು ಸೂರ್ಯವಂಶಿ ಎಂಬ ಪ್ರತಿಭಾವಂತ ಕ್ರಿಕೆಟರ್‌ಗೆ ಅಭಿಮಾನಿಗಳು ಕೊಟ್ಟ ಗೌರವ.. ಅಂದಹಾಗೆ ಈ ಹುಡುಗನಿಗೆ ನರ್ವಸ್ ನೈಂಟಿ ಅನ್ನೋದು ಮ್ಯಾಟರ್ ಆಗಲ್ಲ. ಯಾಕೆಂದರೆ, ವೈಭವ್ ಇನ್ನೂ ಆಡುತ್ತಾನೆ.. ಸೆಂಚುರಿ ಮೇಲೆ ಸೆಂಚುರಿ ಬಾರಿಸೋದು ಇದ್ದೇ ಇದೆ.. ಶತಕಗಳ ಸರದಾರ ಅನ್ನೋ ಪಟ್ಟ ಸೂರ್ಯವಂಶಿಗೆ ಸಿಕ್ಕೇ ಸಿಗುತ್ತದೆ. ಯಾಕೆಂದರೆ ಈತ ಹೀಗೆ ಬಂದು ಹಾಗೇ ಬ್ಯಾಟ್ ಬೀಸಿ ಹೋಗುವ ಕ್ರಿಕೆಟರ್ ಅಲ್ಲ. ಈತ ವಂಡರ್ ಕಿಡ್.. ತಂಡಕ್ಕಾಗಿ ಆಡುತ್ತಾನೆ. ದೇಶಕ್ಕಾಗಿ ಆಡುತ್ತಾನೆ. ಈತ ಬರೀ ಕ್ರಿಕೆಟ್‌ಗಾಗಿ ಸಾಧನೆ ಮಾಡುತ್ತಾನೆ. ಇನ್ನು ಗುಜರಾತ್ ಟೈಟಾನ್ಸ್ ವರ್ಸಸ್ ಆರ್ ಆರ್ ಮ್ಯಾಚ್‌ನಲ್ಲಿ ಸೋತನಂತರ ರಾಜಸ್ತಾನ್ ರಾಯಲ್ಸ್ ತಂಡದ ಪ್ರತಿಯೊಬ್ಬ ಆಟಗಾರರು ಕೂಡಾ ವೈಭವ್ ಬಳಿ ಬರುತ್ತಾರೆ. ಬೆನ್ನು ತಟ್ಟುತ್ತಾರೆ. ಇದೊಂಥರಾ ಸೋಲಿಗೆ ಕ್ಷಮೆ ಕೇಳುವ ರೀತಿಯಲ್ಲೇ ಕಂಡು ಬಂದಿತ್ತು. ಯಾಕೆಂದರೆ, ಸೋಲಿಗೂ ಕೆಲವೇ ಕ್ಷಣಗಳ ಮೊದಲು ವೈಭವ್ ಸೂರ್ಯವಂಶಿ ಏಕಾಂಗಿಯಾಗಿ ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಬಂದಿತ್ತು. ಇದನ್ನ ಗಮನಿಸಿದ ಆಟಗಾರರು ಒಂದು ರೀತಿಯಲ್ಲಿ ಕ್ಷಮೆ ಕೇಳುವಂತೆ ವೈಭವ್ ಹತ್ತಿರ ಬಂದು ಮೌನವಾಗಿದ್ದರು. ಇತ್ತ ಪ್ರಶಸ್ತಿ ಸಮಾರೋಪ ನಡೆಯುವ ಸಮಯದಲ್ಲೂ ಅಷ್ಟೇ. ಅತ್ತ ವೈಭವ್ ಏಕಾಂಗಿಯಾಗಿ ಕೂತು ಕಣ್ಣೀರು ಹಾಕುತ್ತಿದ್ದರು. ಈ ಭಾವುಕ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದೇನೇ ಇರಲಿ, ಬಾಸ್ ಬೇಬಿ ವೈಭವ್ ಸೂರ್ಯವಂಶಿಯ ಈ ಸೀಸನ್‌ನಲ್ಲಿ ಮಾಡಿರುವ ಬ್ಯಾಟಿಂಗ್ ಅದೆಷ್ಟೋ ಯಂಗ್‌ಸ್ಟರ್ಸ್‌ಗೆ ಸ್ಪೂರ್ತಿ, ಕಠಿಣ ಶ್ರಮವೇ ಈ ಆಟಕ್ಕೆ ಸಾಕ್ಷಿ.

ನೋಡಿರಿ

