RCBಗೆ ಸಾಲ್ಟ್ ಬೇಕಾ.. ವೆಂಕಿ ಸಾಕಾ -FINALಗೆ ಬೌಲಿಂಗ್ ಬ್ರಹ್ಮಾಸ್ತ್ರ ಯಾರು?
ಪ್ಲೇಯಿಂಗ್ 11 ಹೀಗಿದ್ರೆ ಕಪ್ ನಮ್ದು!

RCBಗೆ ಸಾಲ್ಟ್ ಬೇಕಾ.. ವೆಂಕಿ ಸಾಕಾ -FINALಗೆ ಬೌಲಿಂಗ್ ಬ್ರಹ್ಮಾಸ್ತ್ರ ಯಾರು?ಪ್ಲೇಯಿಂಗ್ 11 ಹೀಗಿದ್ರೆ ಕಪ್ ನಮ್ದು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಗುಜರಾತ್ ಟೈಟಾನ್ಸ್.. ಯಾರಾಗ್ತಾರೆ ಈ ಸೀಸನ್ ಚಾಂಪಿಯನ್ಸ್.. ಒಬ್ರು ಡಿಫೆಂಡಿಂಗ್ ಚಾಂಪಿಯನ್ಸ್ ಮತ್ತೊಬ್ರು ಐಪಿಎಲ್​ಗೆ ಕಾಲಿಟ್ಟ ಮೊದಲ ವರ್ಷವೇ ಕಪ್ ಗೆದ್ದು ಬೀಗಿದವ್ರು. ಈಗ 2ನೇ ಟ್ರೋಫಿ ಯಾರಿಗೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಭಾನುವಾರ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ : RCB Vs GT ಫೈನಲ್ ಫೈಟ್ – ಸುದರ್ಶನ್ ಬ್ಯಾಟ್ ಗೆ ಗಮ್ ಹಾಕ್ಬೇಕಾ?

ಆನ್ ಫೀಲ್ಡ್ ಌಕ್ಷನ್ ಸೀನ್ಸ್, ಎಮೋಷನ್ಸ್, ಸೆಂಟಿಮೆಂಟ್ಸ್, ಎಂಟರ್​ಟೇನ್​​ಮೆಂಟ್, ಹಾರ್ಟ್ ಬ್ರೋಕನ್ ಮೂಮೆಂಟ್ಸ್, ಲಾಸ್ಟ್ ಓವರ್ ಥ್ರಿಲ್ಲರ್, ಲಾಸ್ಟ್ ಬಾಲ್ ವಿನ್ನರ್.. ಅಬ್ಬಬ್ಬಾ ಅದೆಷ್ಟು ಎಕ್ಸೈಟ್​ಮೆಂಟ್ ಅದೆಷ್ಟು ಡ್ರಾಮಾ.. 2026ರ ಐಪಿಎಲ್ ಎಲ್ಲವನ್ನೂ ನೀಡಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಪೈಸಾ ವಸೂಲ್ ಮೂವಿ ಥರ ಕಂಪ್ಲೀಟ್ ಕಿಕ್ ಕೊಟ್ಟಿದೆ. ಇನ್ನೇನಿದ್ರೂ ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋದಷ್ಟೇ ಪ್ರಶ್ನೆ. ಈ ಪ್ರಶ್ನೆಗೆ ಭಾನುವಾರ ರಾತ್ರಿಯೊಳಗೆ ಉತ್ತರ ಸಿಗುತ್ತೆ. ಗುಜರಾತ್ ವಿರುದ್ಧ ಫೈನಲ್ ಪಂದ್ಯಕ್ಕೆ ಸಿದ್ಧವಾಗಿರೋ ಬೆಂಗಳೂರು ಈ ಸೀಸನ್​ನಲ್ಲಿ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಆಗಿ ಕಾಣ್ತಿದೆ. ಇನ್ನೇನಿದ್ರೂ ಫೈನಲ್ ಟಚ್ ಕೊಡೋದಷ್ಟೇ ಬಾಕಿ. ಹೀಗಾಗಿ ಯಾರನ್ನೆಲ್ಲಾ ಅಖಾಡಕ್ಕೆ ಇಳಿಸಬೇಕು ಅನ್ನೋ ಬಗ್ಗೆ ಚರ್ಚೆಯೂ ಜೋರಾಗಿದೆ.

ಫಿಲ್ ಸಾಲ್ಟ್ ಬರ್ತಾರಾ.. ವೆಂಕಿನೇ ಕಂಟಿನ್ಯೂ ಆಗ್ತಾರಾ?

ಈ ಸೀಸನ್​ನಲ್ಲಿ ಆರ್​ಸಿಬಿ ಪರ ಓಪನಿಂಗ್ ಜೋಡಿಯೇ ಪದೇಪದೆ ಚೇಂಜ್ ಆಗಿರುವಂಥದ್ದು. ಮೊದಲ ಆರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಆಡ್ತಾರೆ. ಆಮೇಲೆ ಇಂಜುರಿ ಅಂತಾ ಹೊರ ಬೀಳ್ತಾರೆ. ಆ ನಂತ್ರ ಜೇಕಬ್ ಬೆಥೆಲ್ ಬರ್ತಾರೆ. 7 ಇನ್ನಿಂಗ್ಸ್ ಆಡ್ತಾರೆ. ಒಂದೇ ಒಂದು ಮ್ಯಾಚಲ್ಲಿ 30ರ ಮೇಲೆ ರನ್ಸ್ ಹೊಡೆಯಲ್ಲ. ಟೋಟಲ್ ಆಗಿ 96 ರನ್ಸ್ ಬಂದಿದ್ದಷ್ಟೇ. ಇನ್ನೂ ಬೆಥೆಲ್​ಗೆ ಅವಕಾಶ ಕೊಟ್ರೆ ತಂಡಕ್ಕೇ ಬ್ಯಾಕ್ ಫೈರ್ ಆಗುತ್ತೆ ಅನ್ಕೊಂಡ ಫ್ರಾಂಚೈಸಿ ಕಳೆದ ಎರಡು ಪಂದ್ಯಗಳಲ್ಲಿ ವೆಂಕಟೇಶ್ ಅಯ್ಯರ್​ಗೆ ಮಣೆ ಹಾಕಿತ್ತು. ಕೊಹ್ಲಿ ಜೊತೆ ವೆಂಕಿ ಇನ್ನಿಂಗ್ಸ್ ಓಪನ್ ಮಾಡಿದ್ರು. ಹೈದ್ರಾಬಾದ್ ವಿರುದ್ಧ ಲೀಗ್​ನ ಕೊನೇ ಮ್ಯಾಚಲ್ಲಿ 19 ಬಾಲಲ್ಲೇ 44 ರನ್ಸ್ ಬಂದಿತ್ತು. ಌಂಡ್ ಗುಜರಾತ್ ವಿರುದ್ಧ ಕ್ವಾಲಿಫೈಯರ್ 1ನಲ್ಲಿ 7 ಬಾಲಲ್ಲೇ 19 ರನ್ಸ್ ಬಂದಿತ್ತು. ಎರಡೂ ಮ್ಯಾಚಲ್ಲೂ 230+ ಸ್ಟ್ರೈಕ್​ರೇಟ್. ಪವರ್ ಪ್ಲೇನಲ್ಲಿ ಬೇಕಿರೋ ಪವರ್ ಫುಲ್ ಪ್ರದರ್ಶನ ಇದು. ಆದ್ರೆ ಫಿಲ್ ಸಾಲ್ಟ್ ರಿಕವರ್ ಆಗಿ ಕಾಯ್ತಿದ್ದಾರೆ. ಲಾಸ್ಟ್ ಮ್ಯಾಚಲ್ಲೇ ಆಡಿಸ್ತಾರೆ ಅನ್ನೋ ನಿರೀಕ್ಷೆ ಇತ್ತು ಆಡ್ಸಿಲ್ಲ. ಹೀಗಾಗಿ ಫೈನಲ್ ಪಂದ್ಯಕ್ಕೆ ಸಾಲ್ಟ್​ಗೆ ಅವಕಾಶ ಕೊಡ್ತಾರಾ ಇಲ್ಲ ವೆಂಕಿಯನ್ನೇ ಕಂಟಿನ್ಯೂ ಮಾಡಿಸ್ತಾರಾ ಅನ್ನೋ ಕನ್ಫ್ಯೂಷನ್ಸ್ ಇದೆ. ಹಾಗೇ ಬೌಲಿಂಗ್ ಸ್ಕ್ವಾಡ್​ನಲ್ಲೂ ಒಂದಷ್ಟು ಲೆಕ್ಕಾಚಾರಗಳಿವೆ.

ಜೇಕಬ್ ಡಫಿ ಓಕೆ.. ಸುಯಾಶ್ ಬದಲು ಶೆಫರ್ಡ್ ಬೇಕಾ?

ಇನ್ನು ಲಾಸ್ಟ್ ಮ್ಯಾಚಲ್ಲಿ ಆರ್​ಸಿಬಿ ಬೌಲಿಂಗ್ ತುಂಬಾನೇ ಸ್ಟ್ರಾಂಗ್ ಆಗಿ ಕಾಣ್ತಿತ್ತು. ಅದಕ್ಕೆ ಕಾರಣ ಫ್ರಾಂಚೈಸಿ ಲೆಕ್ಕಾಚಾರ. ಜೇಕಬ್ ಡಫಿ, ಜೋಶ್ ಹೇಜಲ್​ವುಡ್ ಹಾಗೇ ಭುವನೇಶ್ವರ್ ಕುಮಾರ್, ರಸಿಕ್ ಸಲಾಂ ದಾರ್ ಹಾಗೇ ಕೃನಾಲ್ ಪಾಂಡ್ಯ ಎಕ್ಸ್​ಟ್ರಾರ್ಡಿನರಿಯಾಗಿ ಪರ್ಫಾಮೆನ್ಸ್ ಮಾಡಿದ್ರು. ಬಟ್ ಇಂಪ್ಯಾಕ್ಟ್ ಪ್ಲೇಯರ್ ಆಗಿ 6ನೇ ಬೌಲರ್ ಆಗಿ ರೊಮ್ಯಾರಿಯೋ ಶೆಫರ್ಡ್ ನಿರಾಸೆ ಮೂಡಿಸಿದ್ರು. ಒಂದೇ ಓವರ್​ನಲ್ಲಿ 15 ರನ್ಸ್ ಕೊಟ್ಟಿದ್ರು. ಓಕೆ ಇಲ್ಲಿ ಶೆಫರ್ಡ್​ಗೆ ಬ್ಯಾಟಿಂಗ್ ಕೊಡ್ಬೋದು, ಬೌಲಿಂಗ್ 1 ಓವರ್ ಹಾಕಿಸ್ಬೋದು ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ. ಆದ್ರೆ ಶೆಫರ್ಡ್ ಈ ಸಲ ಯಾವುದ್ರಲ್ಲೂ ಪ್ರೂವ್ ಮಾಡಿಲ್ಲ. ಹೀಗಾಗಿ ಫಸ್ಟ್ ಬ್ಯಾಟಿಂಗ್ ಮಾಡಿ ಬಿಗ್ ಸ್ಕೋರ್ ಇತ್ತಂದ್ರೆ ಶೆಫರ್ಡ್ ಬದಲು ಸುಯಾಶ್ ಶರ್ಮಾರನ್ನ ಆಡಿಸೋದು ಬೆಸ್ಟ್ ಅನ್ಸುತ್ತೆ. ಯಾಕಂದ್ರೆ ಶೆಫರ್ಡ್​ಗಿಂತ ಸುಯಾಶ್ ಬೌಲಿಂಗ್​ನಲ್ಲಿ ಬೆಟರ್ ಇದ್ದಾರೆ.

ಫೈನಲ್ ಫೈಟ್ ಗೆ ಪ್ಲೇಯಿಂಗ್ 11

ವೆಂಕಟೇಶ್ ಅಯ್ಯರ್

ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಕೃನಾಲ್ ಪಾಂಡ್ಯ

ಜಿತೇಶ್ ಶರ್ಮಾ

ಟಿಮ್ ಡೇವಿಡ್

ಭುವನೇಶ್ವರ್ ಕುಮಾರ್

ಜೋಶ್ ಹೇಜಲ್ ವುಡ್

ಜೇಕಬ್ ಡಫಿ

ರಸಿಕ್ ದಾರ್

ರೊಮ್ಯಾರಿಯೋ ಶೆಫರ್ಡ್

Shantha Kumari

Leave a Reply

Your email address will not be published. Required fields are marked *