ಐಪಿಎಲ್ ಮುಗಿಯುವ ಮುನ್ನವೇ ನಾಯಕತ್ವ ತ್ಯಜಿಸಿದ ಪಂತ್ – ರಿಷಭ್ ರಾಜೀನಾಮೆ ಅಂಗೀಕರಿಸಿದ LSG

ಐಪಿಎಲ್ ಮುಗಿಯುವ ಮುನ್ನವೇ ನಾಯಕತ್ವ ತ್ಯಜಿಸಿದ ಪಂತ್ – ರಿಷಭ್ ರಾಜೀನಾಮೆ ಅಂಗೀಕರಿಸಿದ LSG

ಇನ್ನೂ ಐಪಿಎಲ್ ಟೂರ್ನಿ ಮುಗಿದಿಲ್ಲ. ಆಗಲೇ ರಿಷಭ್ ಪಂತ್ ತಮ್ಮ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಸ್ಥಾನಕ್ಕೆ ತಕ್ಷಣದಿಂದಲೇ ಜಾರಿ ಬರುವಂತೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ:RCBಯಲ್ಲಿ ಅನುಭವಿಗಳದ್ದೇ ಆರ್ಭಟ – ಕೊಹ್ಲಿ, ಭುವಿ, ಕೃನಾಲ್ ಸಕ್ಸಸ್ STARS

ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ತಂಡದ ಕಳಪೆ ಪ್ರದರ್ಶನ, ಸತತ ಸೋಲು, ಜೊತೆಗೆ ತನ್ನ ವೈಫಲ್ಯ ಇವೆಲ್ಲಕ್ಕೂ ಹೊಣೆ ಹೊತ್ತ ರಿಷಭ್ ಪಂತ್ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ಲಖನೌ ತಂಡವು ಇದನ್ನು ದೃಢಪಡಿಸಿದೆ.

ಪಂತ್ ಅವರನ್ನು 2025ರ ಐಪಿಎಲ್ ಹರಾಜಿನಲ್ಲಿ ಲಖನೌ ತಂಡವು 27 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವಾಗಿತ್ತು. ಆದರೆ ಎರಡು ಋತುಗಳಲ್ಲಿ ಅವರು ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ವಿಫಲರಾದರು. ಈ ಬಾರಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ಮಾತ್ರ ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು ಎಲ್‌ಎಸ್‌ಜಿ ತಂಡ. ಅಂದರೆ 2025ರ ಪ್ರದರ್ಶನಕ್ಕಿಂತಲೂ ಈ ವರ್ಷದ ಪ್ರದರ್ಶನ ಮತ್ತಷ್ಟು ಕಳಪೆಯಾಗಿತ್ತು. 2025ರಲ್ಲಿ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಒಟ್ಟು 28 ಪಂದ್ಯಗಳಲ್ಲಿ 10 ಗೆಲುವುಗಳೊಂದಿಗೆ ಪಂತ್ ಟೂರ್ನಿಯಲ್ಲಿಯೇ ಕಳಪೆ ನಾಯಕರಾಗಿದ್ದರು.

ಲಖನೌ ಸೂಪರ್ ಜಯಂಟ್ಸ್ ತಂಡದ ಹೇಳಿಕೆ ಪ್ರಕಾರ, ರಿಷಭ್ ಪಂತ್ ಅವರು ತಂಡದ ನಾಯಕತ್ವದಿಂದ ವಿಮುಕ್ತಿ ನೀಡುವಂತೆ ಫ್ರಾಂಚೈಸಿ ಕೋರಿದ್ದಾರೆ. ತಂಡವು ಅವರ ಕೋರಿಕೆಯನ್ನು ಒಪ್ಪಿಕೊಂಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.  ರಿಷಭ್ ಅವರು ತಂಡದೊಂದಿಗೆ ಮಾತನಾಡಿ ಈ ಕೋರಿಕೆಯನ್ನು ಮುಂದಿಟ್ಟಿದ್ದರು. ನಾವು ಗೌರವಯುತವಾಗಿ ಅದನ್ನು ಅಂಗೀಕರಿಸಿದ್ದೇವೆ. ಈ ರೀತಿಯ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಎಂದಿಗೂ ಸುಲಭವಾಗಿರುವುದಿಲ್ಲ. ನಾಯಕರಾಗಿ ರಿಷಭ್ ಡ್ರೆಸ್ಸಿಂಗ್ ರೂಮ್‌ಗೆ ನೀಡಿರುವ ಎಲ್ಲಾ ಕೊಡುಗೆಗಳಿಗೆ ನಾವು ಕೃತಜ್ಞರಾಗಿದ್ದೇವೆ. ಈಗ ನಮ್ಮ ಗಮನವು ತಂಡದ ಸಾಮೂಹಿಕ ಪ್ರಗತಿಯ ಮೇಲಿದೆ. ಮತ್ತೆ ಪುಟಿದೇಳುವುದು ಮತ್ತು ತಂಡವನ್ನ ಮರುಸಂಘಟನೆ ಮಾಡುವ ಮೂಲಕ ಉತ್ತಮ ಮಟ್ಟವನ್ನು ತಲುಪುವುದು ನಮ್ಮ ಮುಂದಿರುವ ಗುರಿ ಎಂದು  ತಂಡದ ಮುಖ್ಯ ಕಾರ್ಯನಿರ್ವಾಹಕ ಅಥವಾ ಅಧಿಕಾರಿ ಮೂಡಿ ಅವರು ನೀಡಿದ ಪ್ರೆಸ್ ರಿಲೀಸ್‌ನಲ್ಲಿ ಹೇಳಿದ್ದಾರೆ.

ಇನ್ನು ರಿಷಭ್ ಪಂತ್ ಕೇವಲ ನಾಯಕತ್ವದಲ್ಲಿ ಮಾತ್ರವಲ್ಲ, ಬ್ಯಾಟಿಂಗ್ ಫಾರ್ಮ್ ನಲ್ಲೂ ಕೂಡ ಕಳಪೆ ಪ್ರದರ್ಶನ ನೀಡಿದ್ದರು. ರಿಷಭ್ ಪಂತ್ ನಾಯಕತ್ವದ ಮೇಲೆ ಚರ್ಚೆ ಶುರುವಾಗಿತ್ತು. ಲಕ್ನೋ ತಂಡದಿಂದ ಪಂತ್‌ಗೆ ಗೇಟ್‌ಪಾಸ್ ಸಿಗೋದು ಗ್ಯಾರಂಟಿ ಎಂಬ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಈಗ ರಿಷಭ್ ಪಂತ್ ತನ್ನ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Sulekha

Leave a Reply

Your email address will not be published. Required fields are marked *