RCBಯಲ್ಲಿ ಅನುಭವಿಗಳದ್ದೇ ಆರ್ಭಟ – ಕೊಹ್ಲಿ, ಭುವಿ, ಕೃನಾಲ್ ಸಕ್ಸಸ್ STARS
Daddy's HOME ಹವಾ ಹೇಗಿದೆ?

RCBಯಲ್ಲಿ ಅನುಭವಿಗಳದ್ದೇ ಆರ್ಭಟ – ಕೊಹ್ಲಿ, ಭುವಿ, ಕೃನಾಲ್ ಸಕ್ಸಸ್ STARSDaddy's HOME ಹವಾ ಹೇಗಿದೆ?

ಸೀಸನ್​ ಉದ್ದಕ್ಕೂ ಸಿಡಿದು ಕ್ವಾಲಿಫೈಯರ್​ 1ನಲ್ಲಿ ಕೇಕೆ ಹಾಕಿ ರಾಯಲ್ ಆಗೇ ಫೈನಲ್​ಗೆ ನುಗ್ಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಟೈಟಲ್ ಎತ್ತಿ ಹಿಡಿಯೋಕೆ ಇನ್ನೊಂದೇ ಹೆಜ್ಜೆ ದೂರದಲ್ಲಿದೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಇತಿಹಾಸ ಸೃಷ್ಟಿಸೋ ಹೊಸ್ತಿಲಲ್ಲಿದೆ. ಆರ್ ಸಿಬಿಯ ಈ ಸಕ್ಸಸ್​ಫುಲ್ ಜರ್ನಿಯಲ್ಲಿ ಎಲ್ಲಾ ಆಟಗಾರರ ಪರ್ಫಾಮೆನ್ಸ್​ನ ಅಪ್ರಿಶಿಯೇಟ್ ಮಾಡ್ಲೇಬೇಕು. ಅದ್ರಲ್ಲೂ ಈ ನಾಲ್ವರು ಅನುಭವಿಗಳ ಆಟ ಅಂತೂ ಎಕ್ಸ್​ಟ್ರಾರ್ಡಿನರಿ.

ಇದನ್ನೂ ಓದಿ : ಸೂರ್ಯವಂಶಿ ಸಿಡಿಲಿಗೆ SRH ಭಸ್ಮ – ವೈಭವ್ ಏಟಿಗೆ ದಾಖಲೆಗಳೂ ದಿಕ್ಕಾಪಾಲು

ಚೆನ್ನೈ ಸೂಪರ್ ಕಿಂಗ್ಸ್ ಟೀಂ ಐಪಿಎಲ್​ನಲ್ಲಿ ಡ್ಯಾಡೀಸ್ ಆರ್ಮಿ ಅಂತಾನೇ ಕರೆಸಿಕೊಳ್ತಿದ್ದ ಟೀಂ. ಅದಕ್ಕೆ ಕಾರಣ 2 ವರ್ಷಗಳ ಬ್ಯಾನ್ ಬಳಿಕ 2018ರಲ್ಲಿ ಮತ್ತೆ ಐಪಿಎಲ್​ಗೆ ಕಾಲಿಟ್ಟ ಚೆನ್ನೈ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು. ಌಂಡ್ ಇಂಟ್ರೆಸ್ಟಿಂಗ್ ಅಂದ್ರೆ ಆ ಸೀಸನ್​ನಲ್ಲಿ ಸೀನಿಯನ್ ಪ್ಲೇಯರ್​ಗಳ ದಂಡೇ ಅಲ್ಲಿತ್ತು. ಇದೇ ಕಾರಣಕ್ಕೆ ಚೆನ್ನೈ ತಂಡವನ್ನ ಡ್ಯಾಡೀಸ್ ಆರ್ಮಿ ಎನ್ನಲಾಗಿತ್ತು. ಈಗ ಬೆಂಗಳೂರು ತಂಡ ಡ್ಯಾಡೀಸ್ ಹೋಂ ಆಗಿದೆ. ಅಂದ್ರೆ ಓಜಿ ಗ್ಯಾಂಗ್ ಆರ್ಭಟದಿಂದಾಗಿ 2ನೇ ಕಪ್ ಗೆಲುವಿನ ಸನಿಹದಲ್ಲಿದ್ದಾರೆ. 35 ಅಥವಾ ಅದಕ್ಕಿಂತ ಜಾಸ್ತಿ ಏಜ್​ನ ನಾಲ್ವರು ಪ್ಲೇಯರ್​ಗಳೇ ಗೇಮ್ ಚೇಂಜರ್ಸ್ ಆಗ್ತಿದ್ದಾರೆ. ಬಿಸಿರಕ್ತದ ಯುವಕರ ನಡುವೆ ತಮ್ಮ ಎಕ್ಸ್​ಪೀರಿಯನ್ಸ್ ಮೂಲಕವೇ ಎಲ್ಲರ ಹುಬ್ಬೇರಿಸಿದ್ದಾರೆ. ಅದ್ರಲ್ಲಿ ನಂಬರ್ 1 ಕಿಂಗ್ ವಿರಾಟ್ ಕೊಹ್ಲಿ.

37 ವರ್ಷ.. 600+ ರನ್ಸ್.. ಫೀಲ್ಡಿಂಗ್ ನಲ್ಲೂ ಸಾಟಿಯಿಲ್ಲದ ಜೋಶ್!

ಕನ್ಸಿಸ್ಟೆನ್ಸಿ ಅನ್ನೋ ಪದಕ್ಕೆ ಮತ್ತೊಂದು ಅರ್ಥವೇ ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆ ಕಿಂಗ್ ವಿರಾಟ್ ಕೊಹ್ಲಿ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರೋ ಕೊಹ್ಲಿಗೆ ಈಗ 37 ವರ್ಷ. ಸದ್ಯಕ್ಕೆ ಆರ್​ಸಿಬಿಯ ಸೀನಿಯರ್ ಪ್ಲೇಯರ್. ಅಟ್ ದಿ ಸೇಮ್ ಟೈಂ ಬ್ಯಾಟಿಂಗ್​ನಲ್ಲಿ ನಂಬರ್ 1 ಪ್ಲೇಯರ್. ಐಪಿಎಲ್​ನಲ್ಲಿ ಒಟ್ಟಾರೆ 282 ಪಂದ್ಯಗಳಲ್ಲಿ 9261 ರನ್‌ಗಳನ್ನು ಗಳಿಸಿದ್ದಾರೆ. ಈ ವರ್ಷ 600 ರನ್ ಗಳಿಸಿ ತಂಡದ ಪರ ಹೈಸ್ಕೋರರ್ ಆಗಿದ್ದಾರೆ. ಮಾಡ್ರೆನ್​ ಕ್ರಿಕೆಟ್​ಗೆ ತಕ್ಕಂತೆ ತಮ್ಮ ಸ್ಟ್ರೈಕ್​ರೇಟ್​ನೂ ಟ್ಯೂನ್ ಮಾಡಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಅತ್ಯುನ್ನತ ಸೈಕ್ ರೇಟ್ 164.38 ರಲ್ಲಿ ಈ ಗಳಿಸಿದ್ದಾರೆ. ಇದು ಅವರ ವೃತ್ತಿಜೀವನದ ಐಪಿಎಲ್ ಸ್ಟೈಕ್ ರೇಟ್‌ಗಿಂತ 30 ರನ್‌ಗಳು ಹೆಚ್ಚು ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ 20 ಕ್ಕಿಂತ ಹೆಚ್ಚು. ಕೊಹ್ಲಿ ಬಗ್ಗೆ ಇನ್ನೊಂದು ವಿಚಾರ ಹೇಳಲೇಬೇಕು. ಅವ್ರ ಆಟ ದಿನೇದಿನೇ ಬೆಟರ್ ಆಗ್ತಿದೆಯೇ ಹೊರತು ನಂಗ್ ವಯಸ್ಸಾಯ್ತು ಅಂತಾ ಯಾವತ್ತೂ ಡಲ್ ಆಗಿಲ್ಲ. ಅದ್ರಲ್ಲೂ ಅವ್ರ ಫೀಲ್ಡಿಂಗ್ ಎಫರ್ಟ್ ಅಂತೂ ಮೆಚ್ಚಲೇಬೇಕು. ಫಿಟ್​ನೆಸ್ ಫ್ರೀಕ್ ಆಗಿರೋ ಕೊಹ್ಲಿ ಮೈದಾನದಲ್ಲಿ ಚಿರತೆಯಷ್ಟೇ ಚತುರ.

36 ವರ್ಷ.. 26 ವಿಕೆಟ್ಸ್.. ಬೆಂಕಿಯಾದ ಸ್ವಿಂಗ್ ಕಿಂಗ್ ಭುವಿ!

ಇನ್ನು ಈ ಸೀಸನ್​ನಲ್ಲಿ ಆರ್​ಸಿಬಿ ಪರ ಮ್ಯಾಚ್ ವಿನ್ನರ್ ಆಗಿರೋ ಭುವನೇಶ್ವರ್ ಕುಮಾರ್ ಕೂಡ ತಮ್ಮ ಕೆರಿಯರ್​ನ ಪೀಕ್​ನಲ್ಲಿರುವಂತೆ ಪರ್ಫಾಮ್ ಮಾಡ್ತಿದ್ದಾರೆ. 36 ವರ್ಷದ ಭುವನೇಶ್ವರ್ ವಿಂಟೇಜ್ ಸ್ಟಿಂಗ್ ಬೌಲಿಂಗ್ ಅನ್ನು ತೋರಿಸಿದ್ದಾರೆ. ಮೀರತ್​ನ ಈ ವೇಗಿ 2026ರ ಸೀಸನ್​ನಲ್ಲಿ 26 ವಿಕೆಟ್ಸ್ ಬೇಟೆಯಾಡಿದ್ದಾರೆ. ಪರ್ಪಲ್ ಕ್ಯಾಪ್ ರೇಸ್​ನಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಭುವಿಯವ್ರ ಈ ಯಶಸ್ಸಿನ ಸೀಕ್ರೆಟ್ ಹಾರ್ಡ್ ಲೆಂತ್ ಏರಿಯಾಗಳನ್ನೇ ಟಾರ್ಗೆಟ್ ಮಾಡಿ ರಭಸವಾಗಿ ನುಗ್ಗೋ ಅವರ ಬಾಲ್​ಗಳು. ಪ್ರತಿಸ್ಪರ್ಧಿ ಬ್ಯಾಟ್ಸ್‌ಮನ್‌ಗಳು ತಮ್ಮ ತೋಳುಗಳನ್ನು ಬಿಚ್ಚೋ ಮೊದ್ಲೇ ಚಾನ್ಸೇ ಕೊಡದೆ ವಿಕೆಟ್ ಎಗರಿಸ್ತಾರೆ. ಪವರ್‌ಪ್ಲೇ ವೇಳೆಯೇ ಭುವನೇಶ್ವರ್ ವಿಕೆಟ್ಸ್ ಬೇಟೆಯಾಡ್ತಾರೆ. ಡೆತ್ ಓವರ್​ನಲ್ಲೂ ಇಂಪ್ಯಾಕ್ಟ್ ಮಾಡೋ ಸ್ಪೆಷಲಿಸ್ಟ್ ಬೌಲರ್.

35 ವರ್ಷ.. ಕ್ರೂಶಿಯಲ್ ವಿಕೆಟ್ ಗಳ ಬೇಟೆಗಾರ ಹೇಜಲ್ ವುಡ್!

ಇನ್ನು ಆರ್​ಸಿಬಿ ತಂಡದಲ್ಲಿರೋ ಮತ್ತೊಬ್ಬ ಎಕ್ಸ್​ಪೀರಿಯನ್ಸ್​ಡ್ ಹಂಟರ್ ಜೋಶ್ ಹೇಜಲ್​ವುಡ್. ಆಸ್ಟ್ರೇಲಿಯಾ ಮೂಲಕ ಹೇಜಲ್​ವುಡ್​ಗೆ ಸದ್ಯ 35 ವರ್ಷ. ಈ ಸೀಸನ್​ನಲ್ಲಿ ಆರಂಭದ ಮೂರು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ರು. ಆ ನಂತ್ರ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ಆರ್‌ಸಿಬಿಯ ಬೌಲಿಂಗ್ ಸ್ಟ್ರೆಂಥ್ ಹೆಚ್ಚಿಸಿದೆ. ಭುವನೇಶ್ವರ್ ಅವರಂತೆಯೇ, ಹ್ಯಾಜಲ್‌ವುಡ್ ವಿಕೆಟ್‌ ಟು ವಿಕೆಟ್‌ಗೆ ವೇಗವಾಗಿ ಬೌಲಿಂಗ್ ಮಾಡೋ ಆಟಗಾರನಾಗಿದ್ದು ಕ್ರೂಶಿಯಲ್ ವಿಕೆಟ್ಸ್ ನ ಬೇಟೆಯಾಡ್ತಾರೆ. ಹೌದು ಹೇಜಲ್ವುಡ್ ಲಾಸ್ಟ್ ಇಯರ್​ನಷ್ಟು ಸ್ಟ್ರಾಂಗ್ ಅನ್ನಿಸದೇ ಇದ್ರೂ ನಿರ್ಣಾಯಕ ಪಂದ್ಯಗಳಲ್ಲಿ ಬ್ರೇಕ್ ಥ್ರ್ಯೂ ತಂದುಕೊಡೋ ಸಾಮರ್ಥ್ಯ ಅಂತೂ ಇದೆ. ಈ ಸೀಸನ್ ನಲ್ಲಿ 13 ವಿಕೆಟ್ಸ್ ತಗೊಂಡಿದ್ದಾರೆ.

35 ವರ್ಷ.. ಬ್ಯಾಟಿಂಗ್ ಗೂ ಸೈ.. ಬೌಲಿಂಗ್ ಗೂ ಜೈ ಕೃನಾಲ್!

ಇನ್ನು ಆರ್ ಸಿಬಿಯಲ್ಲಿ ಸ್ಟ್ರಾಂಗ್ ಗೇಮ್ ಚೇಂಜರ್ ಅಂದ್ರೆ ಕೃನಾಲ್ ಪಾಂಡ್ಯ. ಎಂಥಾ ಪರ್ಫಾಮೆನ್ಸ್ ಅವ್ರ ಕಡೆಯಿಂದ. ಬ್ಯಾಟ್ ಕೊಡ್ಲಿ ಬಾಲ್ ಕೊಡ್ಲಿ. ಜಾದೂ ಮಾಡದೇ ಬಿಡೋ ಆಟಗಾರನೇ ಅಲ್ಲ. 35 ವರ್ಷದ   ಕೃನಾಲ್ ಪಾಂಡ್ಯ ಕೂಡ ತಮ್ಮ ಕೆರಿಯರ್​ನ ಪೀಕ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಎಡಗೈ ಸ್ಪಿನ್ ಬೌಲಿಂಗ್‌ನ ಹೊರತಾಗಿ, ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲಾ ಬ್ಯಾಟಿಂಗ್‌ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಿದ್ದಾರೆ. ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 28 ಎಸೆತಗಳಲ್ಲಿ 43 ರನ್ ಗಳಿಸಿದ್ರು. ಹಾಗೇ ಮುಂಬೈ ಇಂಡಿಯನ್ಸ್ ವಿರುದ್ಧ 73 ರನ್ ಗಳಿಸಿದ್ರು. ಈ ಸೀಸನ್ ನಲ್ಲಿ ಕೃನಾಲ್ ಆಟ ನಿಜಕ್ಕೂ ಅತ್ಯದ್ಭುತ. ಈ ಸೀಸನ್​ನಲ್ಲಿ 225 ರನ್ಸ್ ಕಲೆ ಹಾಕಿದ್ದಾರೆ. ಅದೂ ಕೂಡ 147+ ಸ್ಟ್ರೈಕ್ ರೇಟ್ ನಲ್ಲಿ. ಬೌಲಿಂಗ್ ಅಂತಾ ಬಂದಾಗ 13 ವಿಕೆಟ್ಸ್ ತಗೊಂಡಿದ್ದಾರೆ. 8.65ರ ಎಕಾನಮಿಯಲ್ಲಿ. ಈ ಮೂಲಕ ಆರ್ ಸಿಬಿ ಗೆಲುವಿನ ಹಿಂದೆ ಕೃನಾಲ್ ಕೊಡುಗೆ ಕೂಡ ತುಂಬಾನೇ ದೊಡ್ಡದಿದೆ.

Shantha Kumari

Leave a Reply

Your email address will not be published. Required fields are marked *