T-20ಯಲ್ಲಿ 200 ರನ್ಸ್ ಟಾರ್ಗೆಟ್ – 2027ಕ್ಕೆ ವೈಭವ್ ಗೆ ₹50 ಕೋಟಿ ಬಿಡ್?
PAKನಲ್ಲೂ ಸೂರ್ಯವಂಶಿಯದ್ದೇ ಸದ್ದು!

ಟಿ-20 ಫಾರ್ಮೆಟ್ ಅಂದ್ರೇನೆ ಪವರ್ ಹಿಟ್ಟಿಂಗ್ ಫಾರ್ಮೆಟ್.. ವೆರಿ ಫಸ್ಟ್ ಬಾಲ್ನಿಂದಲೇ ಬೌಂಡರಿ ಟಾರ್ಗೆಟ್ ಮಾಡಿ ಬ್ಯಾಟ್ ಬೀಸ್ಬೇಕು. ಐಪಿಎಲ್ನಲ್ಲಂತೂ 180, 190 ಸ್ಟ್ರೈಕ್ ರೇಟ್ ಅಂದ್ರೂ ನಾರ್ಮಲ್ ಅನ್ನೋ ಥರ ಆಗೋಗಿದೆ. ಇದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಬಾಸ್ ಬೇಬಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಖದರ್. ಆಲ್ಮೋಸ್ಟ್ ಎವೆರಿ ಗೇಮ್ನಲ್ಲೂ 250 ಅಥವಾ ಅದಕ್ಕೂ ಮೇಲೆ ಸ್ಟ್ರೈಕ್ರೇಟ್ ಮೇಂಟೇನ್ ಮಾಡ್ತಾರೆ. ಆಲ್ರೆಡಿ ಅವ್ರ ಕರಿಯರ್ನ ಸೆಕೆಂಡ್ ಐಪಿಎಲ್ ಸೀಸನ್ನಲ್ಲೇ ದಶಕದ ದಾಖಲೆಗಳೂ ಪುಡಿ ಪುಡಿಯಾಗಿವೆ.
ಇದನ್ನೂ ಓದಿ : ಸೂರ್ಯವಂಶಿ ಸಿಡಿಲಿಗೆ SRH ಭಸ್ಮ – ವೈಭವ್ ಏಟಿಗೆ ದಾಖಲೆಗಳೂ ದಿಕ್ಕಾಪಾಲು
ವೈಭವ್ ಸೂರ್ಯವಂಶಿ. 15 ವರ್ಷದ ಬಾಲಕ. ವೈಭವ್ ವಯಸ್ಸಿಗಿಂತ ಜಾಸ್ತಿ ಕ್ರಿಕೆಟ್ ಎಕ್ಸ್ಪೀರಿಯನ್ಸ್ ಇರೋ ಲೆಜೆಂಡರಿ ಪ್ಲೇಯರ್ಗಳೇ ಐಪಿಎಲ್ ಅಖಾಡದಲ್ಲಿದ್ದಾರೆ. ದಿಗ್ಗಜ ಬ್ಯಾಟರ್ಗಳೂ ರೆಸ್ಪೆಕ್ಟ್ ಕೊಟ್ಟು ಆಡುವಂಥ ವರ್ಲ್ಡ್ ಕ್ಲಾಸ್ ಬೌಲರ್ಸ್ ಕೂಡ ಇದ್ದಾರೆ. ಆದ್ರೆ ಆಟ ಅಂತಾ ಬಂದಾಗ ಎಂಥದ್ದೇ ಬೌಲರ್ಸ್ ಇದ್ರೂ ಮಿನಿಮಮ್ ರೆಸ್ಪೆಕ್ಟ್ನೂ ಕೊಡದ ಸೂರ್ಯವಂಶಿ ಸಿಕ್ಸ್ಗಳ ಮೂಲಕವೇ ಬೌಲರ್ಗಳನ್ನ ಶೇಕ್ ಮಾಡ್ತಿದ್ದಾರೆ. ಹೈದ್ರಾಬಾದ್ ವಿರುದ್ಧ 29 ಬಾಲಲ್ಲಿ 97 ರನ್ ಗಳಿಸಿ ಔಟಾದ ವೈಭವ್ ವಿಶ್ವರೂಪಕ್ಕೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಸಾಕಷ್ಟು ಸ್ಟಾರ್ ಕ್ರಿಕೆಟರ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ವೈಭವ್ದೇ ಸದ್ದು, ಸುದ್ದಿ ಎಲ್ಲವೂ. ಹೀಗೆ ವಂಡರ್ ಕಿಡ್ ಆಗಿ ಕಾಣ್ತಿರೋ ಈ ವೈಭವ್ ಅಂತಿಂಥಾ ದಾಖಲೆ ಮೇಲೆ ಕಣ್ಣಿಟ್ಟಿಲ್ಲ. ಹೊಸದೊಂದು ಚರಿತ್ರೆಯ ಗುರಿ ಹೊತ್ತು ಬಂದಿದ್ದಾರೆ.
ಟಿ-20ಯಲ್ಲಿ 200 ರನ್ಸ್ ಹೊಡೆಯೋದು ವೈಭವ್ ಟಾರ್ಗೆಟ್!
ಆಲ್ರೆಡಿ ಐಪಿಎಲ್ನಲ್ಲಿ ಸೆಕೆಂಡ್ ಸೀಸನ್ನಲ್ಲೇ ಸಾಕಷ್ಟು ದಾಖಲೆಗಳನ್ನ ಬ್ರೇಕ್ ಮಾಡಿರೋ ಸೂರ್ಯವಂಶಿ ಈ ಫಾರ್ಮೆಟ್ನಲ್ಲಿ ಇತಿಹಾಸವನ್ನೇ ಸೃಷ್ಟಿಸೋ ಗುರಿ ಹೊಂದಿದ್ದಾರೆ. ಇಷ್ಟು ವರ್ಷಗಳ ಕಾಲ ಅಸಾಧ್ಯವಾಗಿರೋದನ್ನ ಸಾಧಿಸೋ ಪಣ ತೊಟ್ಟಿದ್ದಾರೆ. ಅಂದ್ರೆ ಟಿ-20 ಫಾರ್ಮೆಟ್ನಲ್ಲಿ ಸಿಂಗಲ್ ಗೇಮಲ್ಲಿ 200 ರನ್ಸ್ ಹೊಡಿಬೇಕು ಅನ್ನೋದು ಅವ್ರ ಮಹದಾಸೆ. ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇದನ್ನ ರಿವೀಲ್ ಮಾಡಿದ್ದಾರೆ. ಪ್ರಸ್ತುತ ಕ್ರಿಸ್ ಗೇಲ್ 2013ರಲ್ಲಿ ಆರ್‌ಸಿಬಿ ಪರ ಆಡುವಾಗ ಪುಣೆ ವಾರಿಯರ್ಸ್ ವಿರುದ್ಧ 66 ಬಾಲಲ್ಲಿ ಅಜೇಯ 175 ರನ್ಸ್ ಕಲೆ ಹಾಕಿದ್ರು. ಟಿ20 ದೇಶೀಯ ಪಂದ್ಯಗಳಲ್ಲಿ, ಫ್ರಾಂಚೈಸ್ ಕ್ರಿಕೆಟ್ ಅಥವಾ ಟಿ20ಐಗಳಲ್ಲಿ ಯಾವುದೇ ಆಟಗಾರ ಗೇಲ್ ಅವರ ಈ ದಾಖಲೆಯನ್ನ ಮೀರಿಲ್ಲ. ಆದರೆ ವೈಭವ್ ಈ ಟಾರ್ಗೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅದೆಲ್ಲಕ್ಕಿಂತ ಮೇನ್ ಆಗಿ ಟಿ20 ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಗಳಿಸುವ ಗುರಿ ಹೊಂದಿದ್ದಾರೆ. ಕೆವಿನ್ ಪೀಟರ್ಸನ್ ತಮ್ಮ ಯೂಟ್ಯೂಬ್ ಶೋ ದಿ ಸ್ವಿಚ್‌ನಲ್ಲಿ ಮಾತನಾಡುವಾಗ ಈ ವಿಚಾರವನ್ನ ರಿವೀಲ್ ಮಾಡಿದ್ದಾರೆ. ಹಾಗೇ ಸೂರ್ಯವಂಶಿ 20 ಓವರ್ಗಳವರೆಗೆ ಬ್ಯಾಟಿಂಗ್ ಮಾಡಿದ್ರೆ ಡಬಲ್ ಸೆಂಚುರಿ ಹೊಡಿತಾರೆ. ಆ ನಂಬಿಕೆ ನನಗಿದೆ ಅಂತಾ ಪೀಟರ್ಸನ್ ಕೂಡ ಭರವಸೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಹರಾಜಿಗೆ ಬಂದ್ರೆ ವೈಭವ್ ಗೆ ₹50 ಕೋಟಿ ಬಿಡ್ಡಿಂಗ್!
ಜಗತ್ತಿನ ಶ್ರೀಮಂತ ಲೀಗ್ ಆಗಿರೋ ಐಪಿಎಲ್ನಲ್ಲಿ ಕೋಟಿ ಕೋಟಿ ಸಂಭಾವನೆ ಸಿಗುತ್ತೆ. ಇದೇ ಕಾರಣ ವಿದೇಶಗಳ ಸೂಪರ್ ಸ್ಟಾರ್ ಪ್ಲೇಯರ್ಸ್ ಕೂಡ ಐಪಿಎಲ್ ಅಂದ್ರೆ ಮುಗಿ ಬೀಳ್ತಾರೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಹೈಯೆಸ್ಟ್ ಬಿಡ್ಡಿಂಗ್ ಅಂದ್ರೆ ಅದು ರಿಚಭ್ ಪಂತ್. 2025ರ ಐಪಿಎಲ್ ಗೂ ಮುನ್ನ ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿ ಪಂತ್ ಮೇಲೆ 27 ಕೋಟಿ ಸುರಿದಿತ್ತು. ಐಪಿಎಲ್ನಲ್ಲಿ ಈವರೆಗೆ ಇದೇ ಹೈಯೆಸ್ಟ್ ಬಿಡ್ಡಿಂಗ್. ಆದ್ರೆ 2027ರ ಐಪಿಎಲ್ಗೂ ಮುನ್ನ ವೈಭವ್ ಸೂರ್ಯವಂಶಿ ಬಿಡ್ಡಿಂಗ್ಗೆ ಬಂದ್ರೆ 50 ಕೋಟಿ ಪಕ್ಕಾ ಬಿಡ್ ಕೂಗ್ತಾರೆ ಅಂತಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಹರಾಜಿನ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಹರಾಜಾಗಲಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರನ್ನು ಅಷ್ಟು ಸುಲಭಕ್ಕೆ ತಂಡದಿಂದ ರಿಲೀಸ್ ಮಾಡಲ್ಲ ಎಂದಿದ್ದಾರೆ. ಹಾಗೇ ವೀರೇಂದ್ರ ಸೆಹ್ವಾಗ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. 2025ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ವೈಭವ್ ಸೂರ್ಯವಂಶಿಯನ್ನು ₹1.1 ಕೋಟಿಗೆ ಖರೀದಿಸಿತ್ತು. ಈಗ ವೈಭವ್ ಏನಾದ್ರೂ ಹರಾಜಿಗೆ ಬಂದ್ರೆ ಹಿಂದೆ ಮುಂದೆ ನೋಡದೆ 30 ಕೋಟಿ ರೂಪಾಯಿ ಕೊಡೋಕೆ ನಾನು ರೆಡಿ ಎಂದಿದ್ದಾರೆ.
ಪಾಕ್ ಕ್ರಿಕೆಟರ್ ನಿಂದಲೂ ವೈಭವ್ ಬಗ್ಗೆ ಅಚ್ಚರಿಯ ಪೋಸ್ಟ್!
ಇನ್ನು ಐಪಿಎಲ್ನಲ್ಲಿ ವಿಶ್ವದರ್ಜೆಯ ಬೌಲರ್ಗಳ ನೀರಿಳಿಸ್ತಿರೋ ವೈಭವ್ ಬಗ್ಗೆ ಕ್ರಿಕೆಟ್ ಲೋಕವೇ ಮಾತನಾಡ್ತಿದೆ. ಅಷ್ಟೇ ಯಾಕೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ಸ್ ಕೂಡ ವೈಭವ್ ಹವಾ ಕಂಡು ಬೆರಗಾಗಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಹೈದ್ರಾಬಾದ್ ವಿರುದ್ಧ 29 ಎಸೆತಗಳಲ್ಲಿ 5 ಬೌಂಡರಿ, 12 ಸಿಕ್ಸರ್ಗಳ ಸಹಿತ 334.48ರ ಸ್ಟ್ರೈಕ್ರೇಟ್ನಲ್ಲಿ 97 ರನ್ಸ್ ಗಳಿಸಿದ್ರು. ಈ ಪ್ರದರ್ಶನದ ಬಗ್ಗೆ ರಿಯಾಕ್ಟ್ ಮಾಡಿರೋ ಯೂಸುಫ್ ‘15 ವರ್ಷದ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ. ಶಾಹೀದ್ ಆಫ್ರಿದಿ ಯಂಗ್ ಆಗಿದ್ದಾಗ ನಿರ್ಭೀತ, ಸ್ಫೋಟಕ ಪ್ರದರ್ಶನ ನೀಡುತ್ತಿದ್ದನ್ನು ನೆನಪಿಸುತ್ತಾನೆ. ಭವಿಷ್ಯ ಇಲ್ಲಿದೆ ಅಂತಾ ಬರೆದುಕೊಂಡಿದ್ದಾರೆ.
ವೈಭವ್ ಈಗ ಅನ್ ಪ್ರೆಡಿಕ್ಟಬಲ್ ಪ್ಲೇಯರ್. 2026ರ ಸೀಸನ್ನಲ್ಲಿ ಸಾಕಷ್ಟು ದಾಖಲೆಗಳನ್ನ ಸೈಡ್ಗೆ ಸರಿಸಿದ್ದಾರೆ. ಅಷ್ಟೇ ಯಾಕೆ 15 ಪಂದ್ಯಗಳಲ್ಲಿ 45.33 ಸರಾಸರಿ ಮತ್ತು 242.85 ಸ್ಟ್ರೈಕ್ ರೇಟ್‌ನಲ್ಲಿ 680 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. 65 ಸಿಕ್ಸರ್ ಸಿಡಿಸಿ ಸೀಸನ್ನ ಅತೀ ಹೆಚ್ಚು ಸಿಕ್ಸರ್ಸ್ ದಾಖಲೆಯನ್ನೂ ಬರೆದಿದ್ದಾರೆ. ಇದೇ ಕಾರಣಕ್ಕೆ ವೈಭವ್ ಟೀಂ ಇಂಡಿಯಾಗೆ ಸೇರಲಿ ಅನ್ನೋ ಪ್ರೆಶರ್ ಕೂಡ ಜಾಸ್ತಿಯಾಗಿದೆ. ಒಟ್ನಲ್ಲಿ ಹೊಸ ತಲೆಮಾರಿನ ಬೆಂಕಿಚೆಂಡಿನಂತೆ ಸುಡ್ತಿರೋ ವೈಭವ್ ಜಗತ್ತನ್ನೇ ತನ್ನತ್ತ ಸೆಳೆದಿದ್ದಾರೆ. ಅವ್ರ ಬ್ಯಾಟಿಂಗ್ ನೋಡೋಕಂತ್ಲೇ ಜನ ಕಾಯೋ ಥರ ಹವಾ ಎಬ್ಬಿಸಿದ್ದಾರೆ.

ನೋಡಿರಿ

