ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ ಸಿನಿಮಾ ಶೂಟಿಂಗ್ ಶುರು – ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್

ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ ಸಿನಿಮಾ ಶೂಟಿಂಗ್ ಶುರು – ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್

ಬಂಗಾಳ ಹುಲಿ, ದಾದಾ ಸೌರವ್ ಗಂಗೂಲಿಯವ ಬಯೋಪಿಕ್ ರೆಡಿಯಾಗುತ್ತಿದೆ. ಸೌರವ್ ಗಂಗೂಲಿ ಅವರ ಜೀವನ ಆಧಾರಿತ ದಾದಾ ಸಿನಿಮಾದ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ:RCB Vs GT ಅಥವಾ RCB Vs RR – ಫೈನಲ್ ಫೈಟ್ TICKET ಯಾರಿಗೆ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಶೂಟಿಂಗ್ ಆರಂಭವಾಗಿದೆ. ಬಯೋಪಿಕ್‌ಗೆ ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ ಅನ್ನೋ ಟೈಟಲ್ ನೀಡಲಾಗಿದೆ. ಗಂಗೂಲಿ ಪಾತ್ರಕ್ಕೆ ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್​ಕುಮಾರ್ ರಾವ್ ಬಣ್ಣಹಚ್ಚಿದ್ದಾರೆ. ಈ ಸಿನಿಮಾದ ಮುಂಬೈ ಶೆಡ್ಯೂಲ್ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಚಿತ್ರತಂಡ ಕೋಲ್ಕತ್ತಾದಲ್ಲಿ 15 ದಿನಗಳ ಕಾಲ ಬೀಡುಬಿಟ್ಟಿದ್ದು, ನಗರದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದೆ. ಗಂಗೂಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಈ ಭಾಗದಲ್ಲಿ ಸೆರೆಹಿಡಿಯಲಾಗುತ್ತಿದೆ. ಈ ಚಿತ್ರವು ಗಂಗೂಲಿಯವರ ಕ್ರಿಕೆಟ್ ಪಯಣ ಮತ್ತು ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲಲಿದೆ.

ಟೀಮ್ ಇಂಡಿಯಾದ ಸಾರ್ವಕಾಲಿಕ ಯಶಸ್ವಿ ನಾಯಕರಲ್ಲಿ ಸೌರವ್ ಗಂಗೂಲಿ ಕೂಡಾ ಒಬ್ಬರು. ಇದೀಗ ದಾದಾ ಬಯೋಪಿಕ್ ಪರದೆ ಮೇಲೆ ಬರುತ್ತಿದ್ದು, ಚಿತ್ರೀಕರಣ ನಡೆಯುವ ಜಾಗಕ್ಕೆ ಖುದ್ದು ಸೌರವ್ ಗಂಗೂಲಿ ಕೂಡಾ ಭೇಟಿ ನೀಡಿದ್ದರು. ತಮ್ಮ ನಿವಾಸ ಮತ್ತು ಈಡನ್ ಗಾರ್ಡನ್ಸ್‌ನಲ್ಲಿ ಚಿತ್ರೀಕರಣ ನಡೆಯುವಾಗ ಸೌರವ್ ಗಂಗೂಲಿ ಅವರೇ ಖುದ್ದಾಗಿ ಹಾಜರಿದ್ದು ಚಿತ್ರತಂಡಕ್ಕೆ ಸಲಹೆಗಳನ್ನು ನೀಡಿದ್ದಾರೆ. ಗಂಗೂಲಿ ಅವರ ಹುಟ್ಟೂರಾದ ಬೆಹಾಲಾದ ಸಣ್ಣ ಗಲ್ಲಿಗಳಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವವರೆಗಿನ ರೋಚಕ ಜರ್ನಿಯನ್ನು ಈ ಸಿನಿಮಾದಲ್ಲಿ ಸೆರೆಹಿಡಿಯಲಾಗುತ್ತಿದೆ. ಇತ್ತೀಚೆಗೆ ಸೌರವ್ ಗಂಗೂಲಿ ಅವರ ಬೆಹಾಲಾದ ಸ್ವಗೃಹದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಕೋಲ್ಕತ್ತಾದ ಐತಿಹಾಸಿಕ ‘ಈಸ್ಟ್ ಬೆಂಗಾಲ್ ಕ್ಲಬ್’ ಮೈದಾನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಗಂಗೂಲಿ ಅವರು ಆರಂಭಿಕ ದಿನಗಳಲ್ಲಿ ‘ಆರ್ಯನ್ ಕ್ಲಬ್’ ಪರ ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಇಲ್ಲಿ ಲೈವ್ ಆಗಿ ಮರುಸೃಷ್ಟಿಸಲಾಗಿದೆ. ಇದರೊಂದಿಗೆ ಕೋಲ್ಕತ್ತಾದ ಹೆಮ್ಮೆಯ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲೂ ಪ್ರಮುಖ ದೃಶ್ಯಗಳ ಶೂಟಿಂಗ್ ನಡೆದಿದೆ.

ಈ ಚಿತ್ರವನ್ನು ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಪಾತ್ರದಲ್ಲಿ ನಟಿ ತಾನ್ಯಾ ಮಾಣಿಕ್ತಲ ಕಾಣಿಸಿಕೊಳ್ಳಲಿದ್ದಾರೆ. ಗಂಗೂಲಿ ಅವರ ಕ್ರಿಕೆಟ್ ಬದುಕಿನ ಆಕ್ರಮಣಕಾರಿ ಆಟದ ಜೊತೆಗೆ ಅವರ ವೈಯಕ್ತಿಕ ಜೀವನದ ಸುಂದರ ಪ್ರೇಮಕಥೆಯೂ ಚಿತ್ರದಲ್ಲಿ ಅನಾವರಣಗೊಳ್ಳಲಿದೆ. ಚಿತ್ರದಲ್ಲಿ ಬಂಗಾಳಿ ಸಂಸ್ಕೃತಿಯ ನೇಟಿವಿಟಿಯನ್ನು ಕಾಪಾಡಿಕೊಳ್ಳಲು ಬಂಗಾಳಿ ಚಿತ್ರರಂಗದ ಪ್ರಮುಖ ನಟರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸೌರವ್ ಅವರ ತಾಯಿ ನಿರುಪಾ ಗಂಗೂಲಿ ಪಾತ್ರದಲ್ಲಿ ಅಪರಾಜಿತಾ ಆಧ್ಯಾ ಹಾಗೂ ತಂದೆ ಚಂಡಿ ಗಂಗೂಲಿ ಪಾತ್ರದಲ್ಲಿ ಹಿರಿಯ ನಟ ಶಾಶ್ವತ ಚಟರ್ಜಿ ನಟಿಸುತ್ತಿದ್ದಾರೆ.

Sulekha

Leave a Reply

Your email address will not be published. Required fields are marked *