ಪಿಂಜರ ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಹವಾ – ಬಾಲಿವುಡ್ನಲ್ಲಿ ಈಗ ಕನ್ನಡಿಗನ ಖದರ್

ಬಾಲಿವುಡ್ ಅಂಗಳದಲ್ಲಿ ಈಗ ಪಿಂಜರ ಸಾಂಗ್ ಗುಂಗು. ಅದರಲ್ಲೂ ಕನ್ನಡಿಗನ ಹೆಜ್ಜೆಯದ್ದೇ ಸದ್ದು. ಹೌದು. ಹಿಂದಿ ಸಿನಿಮಾ ಬಂದರ್ನಲ್ಲಿ ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪಿಂಜರ ಸಾಂಗ್ನಲ್ಲಿ ರಾಜ್ ಶೆಟ್ಟಿಯ ಸ್ಟೆಪ್ಸ್ ಬಾಲಿವುಡ್ ಮಂದಿಯ ಗಮನಸೆಳೆದಿದೆ.
ಇದನ್ನೂ ಓದಿ:ಚಾಮುಂಡಿ ಮುಂದೆ ಕ್ಷಮೆ ಕೇಳಿದ ರಣವೀರ್ ಸಿಂಗ್ – ದೈವದ ಅವಹೇಳನಕ್ಕೆ ಬಾಲಿವುಡ್ ನಟನ ಪಶ್ಚಾತ್ತಾಪ
ಬಾಲಿವುಡ್ ಹೀರೋ ಬಾಬಿ ಡಿಯೋಲ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಬಂದರ್ ನಲ್ಲಿ ಕನ್ನಡಿಗ ರಾಜ್ ಬಿ ಶೆಟ್ಟಿ ಕೂಡಾ ಸ್ಪೆಷಲ್ ರೋಲ್ ಮಾಡುತ್ತಿದ್ದಾರೆ. ಇದೀಗ ಬಂದರ್ ಸಿನಿಮಾದ ಪಿಂಜರ ಸಾಂಗ್ ರಿಲೀಸ್ ಆಗಿದೆ. ಈ ವಿಡಿಯೋ ಸಾಂಗ್ನಲ್ಲಿ ರಾಜ್ ಬಿ ಶೆಟ್ಟಿ ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.ಜೊತೆಗೆ ಹಾಡಿನಲ್ಲಿ ಸಿಕ್ಕಾಪಟ್ಟೆ ಜೋಶ್ನಲ್ಲಿ ರಾಜ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಜ್ ಹಾಕಿರುವ ಸ್ಟೆಪ್ಸ್, ಕನ್ನಡಿಗನ ಮ್ಯಾನರಿಸಂ ನೋಡಿ ಬಾಲಿವುಡ್ ಮಂದಿ ಖುಷಿಪಟ್ಟಿದ್ದಾರೆ.
ಅಮಿತ್ ತ್ರಿವೇದಿ ಮ್ಯೂಸಿಕ್ ಮತ್ತು ಸುದೀಪ್ ಶರ್ಮಾ ಬರಹದ ಪಿಂಜರ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ಬಂದರ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಜ್ಗಾಗಿಯೇ ಒಂದು ಹೈ-ವೋಲ್ಟೇಜ್ ಡ್ಯಾನ್ಸ್ ಸೀಕ್ವೆನ್ಸ್ ಕೂಡಾ ಇದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ನ ‘ಲಾರ್ಡ್’ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಒಬ್ಬ ವಯಸ್ಸಾದ ಟೆಲಿವಿಷನ್ ಸ್ಟಾರ್ ಆಗಿ ಬಾಬಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಕೂಡಾ ವಿಭಿನ್ನವಾಗಿದೆ.
ಕ್ರೈಮ್ ಥ್ರಿಲ್ಲರ್ ಬಂದರ್ ಸಿನಿಮಾದಲ್ಲಿ ಸನ್ಯಾ ಎಂ, ಸಪ್ನಾ, ಸಬಾ ಆಜಾದ್ ಮತ್ತು ನಿಖಿಲ್ ಡಿ ಅವರಂತಹ ಪ್ರತಿಭಾವಂತ ಕಲಾವಿದರಿದ್ದಾರೆ. ಈ ಸಿನಿಮಾ ಜೂನ್ 5, 2026 ರಂದು ರಿಲೀಸ್ ಆಗಲಿದೆ. ರಾಜ್ ಬಿ ಶೆಟ್ಟಿ ಅವರ ವಿಭಿನ್ನ ನಟನೆ ಮತ್ತು ಅನುರಾಗ್ ಕಶ್ಯಪ್ ಅವರ ರಾ ಸ್ಟೈಲ್ ಮೇಕಿಂಗ್ ನೋಡಲು ಅಭಿಮಾನಿಗಳು ಕಾಯತ್ತಿದ್ದಾರೆ.

ನೋಡಿರಿ

