ಚಿನ್ನದ ಬೆಲೆ ಏರಿಕೆ.. ಸಿಗರೇಟ್ ಪ್ರಿಯರಿಗೆ ಬರೆ – ಯಾವ್ಯಾವ ಮೊಬೈಲ್ ಗಳ ದರ ಇಳಿಕೆ..!?

ಚಿನ್ನದ ಬೆಲೆ ಏರಿಕೆ.. ಸಿಗರೇಟ್ ಪ್ರಿಯರಿಗೆ ಬರೆ – ಯಾವ್ಯಾವ ಮೊಬೈಲ್ ಗಳ ದರ ಇಳಿಕೆ..!?

ಕೇಂದ್ರ ಸರ್ಕಾರದ ಬಜೆಟ್ ಅಂದ್ರೆ ಮಹಿಳೆಯರು ಕೂಡ ಕುತೂಹಲದಿಂದ ಕಾಯ್ತಿರ್ತಾರೆ. ಯಾವುದರ ದರ ದುಬಾರಿಯಾಗುತ್ತೆ. ಯಾವ್ಯಾವುದರ ಬೆಲೆ ಇಳಿಕೆಯಾಗುತ್ತೆ ಅಂತಾ ಕಾಯ್ತಿರ್ತಾರೆ. ಆದ್ರೆ ಈ ಸಲದ ಬಜೆಟ್ ಸ್ತ್ರೀಯರಿಗೆ ಬಿಗ್ ಶಾಕ್ ನೀಡಿದೆ. ಯಾಕಂದ್ರೆ ಈಗ್ಲೇ ಲಂಗು ಲಗಾಮಿಲ್ಲದೆ ಓಡ್ತಿರೋ ಚಿನ್ನದ ಬೆಲೆ ಇನ್ಮುಂದೆ ಮತ್ತಷ್ಟು ಹೆಚ್ಚಾಗಲಿದೆ. ಹಾಗಾದ್ರೆ ಈ ಸಲದ ಬಜೆಟ್​ನಲ್ಲಿ ಯಾವ್ಯಾವುದರ ಬೆಲೆ ಹೆಚ್ಚಳವಾಗಿದೆ. ಯಾವ್ಯಾವುದು ಇಳಿಕೆ ಆಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ರೈಲ್ವೆಗೆ ದಾಖಲೆ ಪ್ರಮಾಣದ ಅನುದಾನ ಘೋಷಣೆ – 400 ವಂದೇ ಭಾರತ್ ಹೊಸ ರೈಲುಗಳ ಪರಿಚಯ!

ಯಾವುದೆಲ್ಲಾ ಬೆಲೆ ಏರಿಕೆ!

ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ಬೆಲೆ ಏರಿಕೆ

ಸಿಗರೇಟ್ ಮೇಲಿನ ತೆರಿಗೆ ಶೇ.16ರಷ್ಟು ಹೆಚ್ಚಳ, ಪ್ರತಿ ಸಿಗರೇಟ್ ದರ 1ರಿಂದ 2 ರೂ. ಹೆಚ್ಚಳ ಸಾಧ್ಯತೆ

ಬೈಸಿಕಲ್​ಗಳ ದರ ದುಬಾರಿ

ಮಕ್ಕಳ ಆಟದ ಸಾಮಾನುಗಳ ದರ ಏರಿಕೆ

ವಿದೇಶಿ ವಾಹನಗಳ ಬೆಲೆ ಹೆಚ್ಚಳ

 

ಯಾವುದೆಲ್ಲಾ ಬೆಲೆ ಇಳಿಕೆ!

ಮೊಬೈಲ್ ಬಿಡಿಭಾಗಗಳ ಮೇಲಿನ ಆಮದು ಸುಂಕ ಇಳಿಕೆ, ಮೊಬೈಲ್​ಗಳ ದರ ಇಳಿಕೆ

ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ

ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ

ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ

ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ

suddiyaana