ಮುಂಬೈ ತಂಡದಿಂದ ಹಾರ್ದಿಕ್ ಪಾಂಡ್ಯ ತಲೆದಂಡ –ನಾಯಕನಾಗಿ ಬುಮ್ರಾ ಫಿಕ್ಸ್?

ಮುಂಬೈ ತಂಡದಿಂದ ಹಾರ್ದಿಕ್ ಪಾಂಡ್ಯ ತಲೆದಂಡ –ನಾಯಕನಾಗಿ ಬುಮ್ರಾ ಫಿಕ್ಸ್?

ಮುಂಬೈ ಇಂಡಿಯನ್ಸ್ ತಂಡ ತನ್ನ ಖದರ್ ಕಳೆದುಕೊಂಡಿದೆ. ಪ್ಲೇಆಫ್ ಹಂತದಲ್ಲೂ ಎದುರಾಳಿಗಳಿಗೆ ಟೆನ್ಷನ್ ಕೊಡುತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ 9ನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಭರ್ಜರಿ ಸರ್ಜರಿಗೆ ಮುಂದಾಗಿದೆ.

ಇದನ್ನೂ ಓದಿ:ಜಿಗಿಯದ ಜಿತೇಶ್.. ಪವರ್ ಲೆಸ್ ಪಂತ್ – ಕೋಟಿಗಟ್ಟಲೆ ಕೊಟ್ರೂ ಕೈಕೊಟ್ಟ STARS

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಿತ್ತು. ಹಿಟ್‌ಮ್ಯಾನ್ ರೋಹಿತ್ ಶರ್ಮಾ, ನಂಬರ್ ಒನ್ ಬೌಲರ್ ಜಸ್ಪ್ರೀತ್ ಬುಮ್ರಾ, ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಭರ್ಜರಿ ಫಾರ್ಮ್‌ನಲ್ಲಿರುವ ತಿಲಕ್‌ವರ್ಮಾ ಹೀಗೆ ಬಲಿಷ್ಠ ಟೀಮ್ ಕಟ್ಟಿಕೊಂಡು ಈ ಸೀಸನ್‌ಗೆ ಕಾಲಿಟ್ಟಿತ್ತು ಮುಂಬೈ ಇಂಡಿಯನ್ಸ್. ಆದರೆ, ಆಗಿದ್ದೇ ಬೇರೆ.  ಮುಂಬೈ ಇಂಡಿಯನ್ಸ್ ತಂಡವು 14 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಈ ನಾಲ್ಕು ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕಿಳಿದಿತ್ತು ಮುಂಬೈ ಇಂಡಿಯನ್ಸ್. ಇದರಿಂದ ಬೇಸತ್ತಿರುವ ಮುಂಬೈ ಮ್ಯಾನೇಜ್‌ಮೆಂಟ್ ಕೊನೆಗೂ ಮೇಜರ್ ಸರ್ಜರಿಗೆ ಮುಂದಾಗಿದೆ.

ಅತ್ಯಂತ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ​ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ  ಅವರ ತಲೆದಂಡವಾಗುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಎಕ್ಸ್​​ಪ್ರೆಸ್ ಸ್ಪೋರ್ಟ್ಸ್ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಕಳೆದ ಮೂರು ಸೀಸನ್​ಗಳಲ್ಲಿ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ಮೂರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪಾಂಡ್ಯ 38 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಎಂಐ ಪಡೆ ಗೆದ್ದಿರುವುದು ಕೇವಲ 15 ಮ್ಯಾಚ್​ಗಳಲ್ಲಿ ಮಾತ್ರ. ಅಂದರೆ ಬರೋಬ್ಬರಿ 23 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಬಲಿಷ್ಠ ತಂಡವೆಂದೇ ಫೇಮಸ್ ಆಗಿರುವ ಮುಂಬೈ ಇಂಡಿಯನ್ಸ್ ತನ್ನ ಹಳೆಯ ಖದರ್ ಕಳೆದುಕೊಂಡಿದೆ. ಹೀಗಾಗಿಯೇ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಇದೀಗ ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲು ನಿರ್ಧರಿಸಿದೆ. ಇನ್ನು ಹಾರ್ದಿಕ್ ಪಾಂಡ್ಯ ಜೊತೆ ಸೂರ್ಯಕುಮಾರ್ ಯಾದವ್ ಕೂಡಾ ತಂಡದಿಂದ ಹೊರಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ. ಸೂರ್ಯಕುಮಾರ್‌ ಕೂಡಾ ತಂಡದಿಂದ ಗೇಟ್‌ಪಾಸ್ ಪಡೆದುಕೊಂಡರೆ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಬಹುದು. ಬುಮ್ರಾ ಕಡೆ ಮುಂಬೈ ಪ್ರಾಂಚೈಸಿ ಒಲವು ತೋರಿದೆ ಎಂದು ವರದಿಗಳು ಹೇಳುತ್ತಿವೆ.

Sulekha

Leave a Reply

Your email address will not be published. Required fields are marked *