ಅನುಷ್ಕಾ ಪೂಜಾ ಫಲ, RCB ವಿನ್ – LSGಯಿಂದ ಪಂತ್, ಪೂರನ್ OUT
SRH ಸೋಲಿಗೆ ಕಣ್ಣೀರಿಟ್ಟ ಕಾವ್ಯಾ

ಅನುಷ್ಕಾ ಪೂಜಾ ಫಲ, RCB ವಿನ್ – LSGಯಿಂದ ಪಂತ್, ಪೂರನ್ OUTSRH ಸೋಲಿಗೆ ಕಣ್ಣೀರಿಟ್ಟ ಕಾವ್ಯಾ

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: RCB Vs GT ಅಥವಾ RCB Vs RR – ಫೈನಲ್ ಫೈಟ್ TICKET ಯಾರಿಗೆ?

SRHನ್ನ ಸೋಲಿಸಿ ನಾಳೆ ನಡೆಯಲಿರೋ  ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ಅರ್ಹತೆ ಪಡೆದಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ 92 ರನ್‌ಗಳ ಸೋಲು ಕಂಡಿರುವ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ತಂಡ ಫೈನಲ್‌ಗಾಗಿ ಕಾದಾಟವನ್ನು ನಡೆಸಲಿದೆ. ಈ ಪಂದ್ಯ ನ್ಯೂ ಚಂಡೀಗಢ ಮೈದಾನದಲ್ಲಿ ನಡೆಯಲಿದ್ದು,  ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಮೇ 31 ರಂದು ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಕಾದಾಟವನ್ನು ನಡೆಸಲಿದೆ.

2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 47 ರನ್ ಗಳಿಂದ ಮಣಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ ಗೆ ತಲುಪಿದೆ. ಆದ್ರೆ ಈ ಪಂದ್ಯದಲ್ಲಿ ಸೋಲುತ್ತಿದ್ದಂತೆ ಎಸ್‌ಆರ್‌ಹೆಚ್ ಮಾಲಕಿ ಕಾವ್ಯಾ ಮಾರನ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಂಡದವರ ಜೊತೆ ಮಾತನಾಡುತ್ತಾ ಕಾವ್ಯಾ ಮಾರನ್ ಮೈದಾನದಲ್ಲೇ ಅಳುತ್ತಿರೋ ಫೋಟೋ ಸಖತ್ ವೈರಲ್ ಆಗ್ತಿದೆ.

ರವೀಂದ್ರ ಜಡೇಜಾ ಅವರು ನಿತೀಶ್‌ ಕುಮಾರ್‌ ರೆಡ್ಡಿಯ ವಿಕೆಟ್​ ಪಡೆದ ಬಳಿಕ ಐಕಾನಿಕ್ ‘ಪುಷ್ಪ’ ಗೆಸ್ಚರ್‌ ನೊಂದಿಗೆ ಸಂಭ್ರಮಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 11 ನೇ ಓವರ್‌ನಲ್ಲಿ, ನಿತೀಶ್ ಕುಮಾರ್ ರೆಡ್ಡಿ ಅವರು ಜಡೇಜಾ ಅವರ ಎಸೆತವನ್ನು ಸಿಕ್ಸರ್‌ಗಟ್ಟುವ ಪ್ರಯತ್ನದಲ್ಲಿ ಚೆಂಡನ್ನು ಡೀಪ್ ಮಿಡ್-ವಿಕೆಟ್ ಕಡೆಗೆ ಬಾರಿಸಿ ವಿಕೆಟ್‌ ಕಳೆದುಕೊಂಡರು. ಈ ವೇಳೆ ಜಡೇಜಾ ನಿತೀಶ್‌ ಕುಮಾರ್‌ ಕಡೆ ನೋಡಿ ‘ಪುಷ್ಪ’ ಸ್ಟೈಲ್‌ನಲ್ಲಿ ಸಂಭ್ರಮಿಸಿದ್ದಾರೆ.

ವೈಭವ್ ಸೂರ್ಯವಂಶಿಯವರ ಬ್ಯಾಟಿಂಗ್‌ನ್ನ ಸಚಿನ್ ತೆಂಡೂಲ್ಕರ್ ಹಾಡಿಹೊಗಳಿದ್ದಾರೆ.   “ವೈಭವ್‌ ಸೂರ್ಯವಂಶಿ ಅವರ ಬ್ಯಾಟ್ ಸ್ವಿಂಗ್ ಅತ್ಯಂತ ಅದ್ಭುತವಾಗಿದೆ. ಅದರಲ್ಲೂ ಕಾಲಿನ ಭಾಗಕ್ಕೆ ಬರುವ ಎಸೆತಗಳಿಗೆ ಜಾಗ ಸೃಷ್ಟಿಸಿಕೊಳ್ಳಲು ಅವರು ಮುಂಭಾಗದ ಕಾಲನ್ನು ಸುಂದರವಾಗಿ ಸರಿಸುವ ರೀತಿ ಇನ್ನಷ್ಟು ವಿಶೇಷವಾಗಿದೆ. ಇದೇ ಸ್ವಾತಂತ್ರ್ಯ ಅವರಿಗೆ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಲು ಸಹಕಾರಿಯಾಗಿದೆ. ಈ ಇನಿಂಗ್ಸ್ ನಿಜಕ್ಕೂ ಅದ್ಭುತಕ್ಕಿಂತ ಕಡಿಮೆಯಿರಲಿಲ್ಲ ಎಂದು ಸಚಿನ್‌ ತೆಂಡೂಲ್ಕರ್‌  ಪೋಸ್ಟ್ ಮಾಡಿದ್ದಾರೆ.   

ಯೂನಿವರ್ಸಲ್ ಬಾಸ್ ಗೇಲ್‌, ಬೇಬಿ ಬಾಸ್ ವೈಭವ್ ಸೂರ್ಯವಂಶಿಯನ್ನ ಹಾಡಿ ಹೊಗಳಿದ್ದಾರೆ. SRH ವಿರುದ್ಧದ ಪಂದ್ಯದಲ್ಲಿ ವೈಭವ್ ಅಬ್ಬರ ನೋಡಿದ  ಕ್ರಿಸ್ ಗೇಲ್  ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.   ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ, ಈತ ಹೊಸ ಸಿಕ್ಸರ್ ಮಷಿನ್ ಅಂತ ಗೇಲ್ ಬಣ್ಣಿಸಿದ್ದಾರೆ.

ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ವೈಭವ್ ಅವರ ಆಟವನ್ನು ಕೊಂಡಾಡಿದ್ದು, ಆತನ ಪೋಷಕರಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.  ಈ ಸೀಸನ್ ಆರಂಭದಲ್ಲಿ ಇದೇ ರೀತಿಯ ಎಸೆತಗಳನ್ನು ನೇರವಾಗಿ ಹೊಡೆಯಲು ಹೋಗಿ ಟಾಪ್ ಎಡ್ಜ್ ಆಗುತ್ತಿತ್ತು. ಆದರೆ ಒಂದೇ ಸೀಸನ್‌ನಲ್ಲಿ ಆತ ತನ್ನ ತಪ್ಪುಗಳನ್ನು ತಿದ್ದಿಕೊಂಡು ಥರ್ಡ್ ಮ್ಯಾನ್ ಮೇಲೆ ಸಿಕ್ಸರ್ ಬಾರಿಸುವ ಮಟ್ಟಿಗೆ ಬದಲಾಗಿದ್ದಾನೆ. ವೈಭವ್ ಸಾಮಾನ್ಯ ಆಟಗಾರನಲ್ಲ. ಅವನ ತಂದೆ-ತಾಯಿ ಏನು ಬೇಕಾದರೂ ಮಾಡಲಿ, ಆದರೆ ಮೊದಲು ಅವನಿಗೆ ತಗುಲಿರುವ ಕೆಟ್ಟ ದೃಷ್ಟಿಯನ್ನು ತೆಗೆಯಲಿ  ಎಂದು ಹೇಳಿದ್ದಾರೆ.

GT Vs RCB ಪಂದ್ಯದ ವೇಳೆ ನಟಿ ಅನುಷ್ಕಾ ಶರ್ಮಾ ಅವರ ಕೆಲವು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆರ್‌ಸಿಬಿ ಗೆಲುವಿನ ಹಿಂದಿನ ನಿಜವಾದ ಅದೃಷ್ಟ ಅನುಷ್ಕಾ ಶರ್ಮಾ ಅವರ ನಿರಂತರ ಪ್ರಾರ್ಥನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಪಂದ್ಯದ ವೇಳೆ ಅನುಷ್ಕಾ ಶರ್ಮಾ ಭಕ್ತಿಯಿಂದ ಕಣ್ಣು ಮುಚ್ಚಿ  ಡಿಜಿಟಲ್ ರಿಂಗ್ ಸಹಾಯದಿಂದ ನಿರಂತರವಾಗಿ ಮಂತ್ರಗಳನ್ನು ಪಠಿಸುತ್ತಿದ್ದರು. ಇದು  ಗೆಲುವಿಗೆ ಕಾರಣ ಅಂತ ಆರ್‌ಸಿಬಿ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

19ನೇ ಐಪಿಎಲ್ ಸೀಸನ್‌ನಲ್ಲಿ LSG ಕಳಪೆ ಪ್ರದರ್ಶನ ತೋರಿಸಿದ್ದು, ತಂಡದ ಓನರ್  ಸಂಜೀವ್ ಗೋಯೆಂಕಾ ಮುಂದಿನ ಸೀಸನ್‌ಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಲಕ್ನೋ ತಂಡದ ನಾಯಕ ರಿಷಭ್ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಮರಳಿ ಖರೀದಿಸಲು ಫ್ರಾಂಚೈಸಿ ಯೋಚಿಸುತ್ತಿದೆ. ಲಕ್ನೋ ತಂಡ ಸೇರಿದಾಗಿನಿಂದ ಪಂತ್ ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ   ಫೆಲ್ಯೂರ್ ಆಗಿದ್ದಾರೆ.

ಪಂತ್ ಜೊತೆ ನಿಕೋಲಸ್ ಪೂರನ್ ಮತ್ತು ಮಯಾಂಕ್ ಯಾದವ್‌ಗೂ ಕೂಡ ಕೊಕ್ ಕೊಡುವುದ್ದಕ್ಕೆ LSG ಮ್ಯಾನೇಜ್‌ಮೆಂಟ್ ಮುಂದಾಗಿದೆ. 21 ಕೋಟಿ ರೂಪಾಯಿ ನೀಡಿ ನಿಕೋಲಸ್ ಪೂರನ್ ಅವರನ್ನು ರಿಟೇನ್ ಮಾಡಿಕೊಂಡ್ರು, ಮಧ್ಯಮ ಕ್ರಮಾಂಕದಲ್ಲಿ ಫ್ಲಾಪ್ ಆಗಿದ್ದಾರೆ.  ಹಾಗೇ ಭಾರತದ ಯುವ ವೇಗಿ ಮಯಾಂಕ್ ಯಾದವ್ ಅವರನ್ನು 11 ಕೋಟಿಗೆ ರಿಟೇನ್ ಮಾಡಿದ್ರು, ಈ ಸೀಸನ್‌ನಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ.. ಹೀಗಾಗಿ ಇವರಿಬ್ಬರನ್ನೂ ಕೈ ಬಿಡುವ ಸಾಧ್ಯತೆ ಇದೆ.

ಮುಂಬೈ ಇಂಡಿಯನ್ಸ್‌  ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಆಟದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ.  ಬುಮ್ರಾ 2026 ರಲ್ಲಿ ಆಡಲು ₹18 ಕೋಟಿ ಪಡೆದಿದ್ದಾರೆ. ಆದ್ರೆ ಈ ಸೀಸನ್‌ನಲ್ಲಿ ಇವರು MI ಪರ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಉರುಳಿಸಿ ನೀರಸ ಪ್ರದರ್ಶನ ನೀಡಿದ್ದಾರೆ. ಇವರು ತೆಗೆದುಕೊಂಡ ಸಂಭಾವನೆ ಮತ್ತು ಇವರು ಪಡೆದ ವಿಕೆಟ್‌ ಲೆಕ್ಕ ಹಾಕಿ ನೋಡಿದ್ರೆ ಪ್ರತಿ ವಿಕೆಟ್‌ಗೆ ಮುಂಬೈ ಇಂಡಿಯನ್ಸ್ ₹4.50 ಕೋಟಿ ರೂ ಬುಮ್ರಾಗೆ ನೀಡಿದೆ.

 

 

Kishor KV

Leave a Reply

Your email address will not be published. Required fields are marked *