ಜಿಗಿಯದ ಜಿತೇಶ್.. ಪವರ್ ಲೆಸ್ ಪಂತ್ – ಕೋಟಿಗಟ್ಟಲೆ ಕೊಟ್ರೂ ಕೈಕೊಟ್ಟ STARS
ಸೋತವರ ಸರ್ಜರಿಯಲ್ಲಿ ಯಾರೆಲ್ಲಾ ಔಟ್?

ಐಪಿಎಲ್ ಅಂದ್ರೆನೇ ಹಾಗೆ. ಇಲ್ಲಿ ಕೋಟಿಗಳಿಗೆ ಲೆಕ್ಕನೇ ಇಲ್ಲದಂತೆ ಬಿಡ್ಡಿಂಗ್ ಆಗುತ್ತೆ. ಸ್ಟಾರ್ ಪ್ಲೇಯರ್ಸ್ ಮೇಲಂತೂ ಜಿದ್ದಿಗೆ ಬಿದ್ದವ್ರಂತೆ ಹಣ ಸುರೀತಾರೆ. ಬಟ್ ರಿಯಾಲಿಟಿ ಏನಂದ್ರೆ ಹೀಗೆ ಕೋಟಿಗಳ ಲೆಕ್ಕದಲ್ಲಿ ಹಣ ಬಾಚಿಕೊಂಡವ್ರು ಆನ್ಫೀಲ್ಡ್ನಲ್ಲಿ ಕೈಕೊಟ್ಟಿದ್ದಾರೆ. ಯಾರು ಗೇಮ್ ಚೇಂಜರ್ಸ್ ಆಗ್ತಾರೆ ಅನ್ಕೊಂಡಿದ್ರೋ ಅವ್ರೇ ಅಟ್ಟರ್ಫ್ಲ್ಯಾಪ್ ಆಗಿದ್ದಾರೆ. ಹೀಗಾಗಿ ಸೋತು ಸುಣ್ಣವಾಗಿರೋ ತಂಡಗಳಲ್ಲಿ ಸರ್ಜರಿ ಲೆಕ್ಕಾಚಾರಗಳು ಸ್ಟಾರ್ಟ್ ಆಗಿವೆ.
ಇದನ್ನೂ ಓದಿ : RCB Vs GT ಅಥವಾ RCB Vs RR – ಫೈನಲ್ ಫೈಟ್ TICKET ಯಾರಿಗೆ?
10 ತಂಡಗಳಿಂದ ಸ್ಟಾರ್ಟ್ ಆದ 19ನೇ ಸೀಸನ್ ಐಪಿಎಲ್ ಜರ್ನಿ ಈಗ 3 ತಂಡಗಳಿಗೆ ಬಂದು ನಿಂತಿದೆ. ಹಾಗೇ ಇನ್ನು ಮೂರೇ ದಿನದಲ್ಲಿ ಈ ಆವೃತ್ತಿಯ ಚಾಂಪಿಯನ್ ಯಾರು ಅನ್ನೋದೂ ಗೊತ್ತಾಗುತ್ತೆ. ಮತ್ತೊಂದ್ಕಡೆ ಸೋತಿರೋ ತಂಡಗಳಲ್ಲಿ ಸೋಲಿನ ಕಾರಣಗಳನ್ನ ಹುಡುಕ್ತಿದ್ದಾರೆ. ಎಲ್ಲಿ ಎಡವಟ್ಟಾಯ್ತು, ಯಾರು ಕೈಕೊಟ್ರು, ಬಿಳಿಯಾನೆಗಳಂತೆ ಇರೋ ಸ್ಟಾರ್ಸ್ ಯಾರೆಲ್ಲಾ ಅನ್ನೋ ಶಾರ್ಟ್ ಲಿಸ್ಟ್ ರೆಡಿಯಾಗ್ತಿದೆ. ಇದ್ರಲ್ಲಿ ಕೆಲವ್ರು ತಂಡದಿಂದಲೇ ಹೊರಬೀಳೋ ಚಾನ್ಸಸ್ ಕೂಡ ಇದೆ.
ನಿರಾಸೆ ಮೂಡಿಸಿದ ಆಟಗಾರರು!
ಆಟಗಾರ ಸಂಭಾವನೆ ರನ್ಸ್/ವಿಕೆಟ್ಸ್
ರಿಷಭ್ ಪಂತ್ ₹27 ಕೋಟಿ 312
ರುತುರಾತ್ ಗಾಯಕ್ವಾಡ್ ₹18 ಕೋಟಿ 337
ಸೂರ್ಯಕುಮಾರ್ ಯಾದವ್ $16.35 ಕೋಟಿ 270
ನಿಕೋಲಸ್ ಪೂರನ್ ₹21 ಕೋಟಿ 234
ಜಿತೇಶ್ ಶರ್ಮಾ ₹11 ಕೋಟಿ 90
ಅಕ್ಷರ್ ಪಟೇಲ್ ₹16.50 ಕೋಟಿ 134/10
ಹಾರ್ದಿಕ್ ಪಾಂಡ್ಯ $16.35 ಕೋಟಿ 226/4
ಕುಲ್ದೀಪ್ ಯಾದವ್ ₹13.25 ಕೋಟಿ 7
ಜಸ್ಪ್ರೀತ್ ಬುಮ್ರಾ ₹18 ಕೋಟಿ 4
ಅರ್ಷದೀಪ್ ಸಿಂಗ್ ₹18 ಕೋಟಿ 14
ಇಲ್ಲಿ ಹೇಳಿರುವಂಥ ಹತ್ತೂ ಆಟಗಾರರು ಕೂಡ ಹತ್ತು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿರೋ ಆಟಗಾರರು. ಇವ್ರ ಮೇಲೆ ಫ್ರಾಂಚೈಸಿಗಳಿಗೂ ತುಂಬಾನೇ ಹೋಪ್ಸ್ ಇರುತ್ತೆ. ಮೋಸ್ಟ್ ಆಫ್ ದಿ ಪ್ಲೇಯರ್ಸ್ ಇಂಟರ್ನ್ಯಾಷನಲ್ ಪಂದ್ಯಗಳನ್ನೂ ಆಡಿರುವಂಥದ್ರು. ಅದ್ರಲ್ಲೂ ಅಟ್ ಪ್ರಸೆಂಟ್ ಟೀಂ ಇಂಡಿಯಾ ಪರ ಆಡ್ತಾ ಇರೋರಿಗೂ ಈ ಬಾರಿಯ ಐಪಿಎಲ್ ಅಷ್ಟೇನು ಚೆನ್ನಾಗಿ ಆಗಿಲ್ಲ. ಇದೇ ಬಿಗ್ ಪ್ಲೇಯರ್ಗಳ ಕಳಪೆ ಪ್ರದರ್ಶನ ತಂಡಗಳಿಗೂ ನುಂಗಲಾರದ ತುತ್ತಾಗಿದೆ.
ಕಳಪೆ ಪ್ರದರ್ಶನ ಫ್ರಾಂಚೈಸಿಗೂ ಹೊರೆ!
ಸ್ಟಾರ್ ಪ್ಲೇಯರ್ಸ್ ಅಂದಾಗ ಅವ್ರ ಮೇಲೆಯೇ ಡಿಪೆಂಡೆನ್ಸಿ ಜಾಸ್ತಿ
ಪ್ಲೇಯಿಂಗ್ 11ನಲ್ಲಿ ಆಡಿಸಲೆಂದೇ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ
ಕಳಪೆ ಪ್ರದರ್ಶನ ಬಂದ್ರೂ ದಿಢೀರ್ ಅಂತಾ ಡ್ರಾಪ್ ಮಾಡೋಕೂ ಆಗಲ್ಲ
ಕ್ಯಾಪ್ಟನ್, ವಿಕೆಟ್ ಕೀಪರ್, ಓಪನರ್ ಹೀಗೆ ಜಬಾಬ್ದಾರಿಗಳ ಪ್ರೆಶರ್
ಬ್ಯಾಕಪ್ ಪ್ಲೇಯರ್ಸ್ ಇದ್ರೂ ಬದಲಾವಣೆ ಮಾಡುವುದು ಸುಲಭ ಇರಲ್ಲ

ನೋಡಿರಿ

