ಸಂವಿಧಾನವೇ ನನ್ನ ಧರ್ಮ – ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದ ಸಿದ್ದರಾಮಯ್ಯ

ಸಂವಿಧಾನವೇ ನನ್ನ ಧರ್ಮ – ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯಾಗಿ ಕೊನೇ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜೀನಾಮೆ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರ ಮಾತುಗಳಲ್ಲಿ ತಾನು ನೀಡಿದ ಆಡಳಿತದ ವಿಚಾರದಲ್ಲಿ ತೃಪ್ತಿ ಎದ್ದುಕಾಣುತ್ತಿತ್ತು. ಇನ್ನು ಸುದ್ದಿಗೋಷ್ಠಿ ಆರಂಭಿಸುತ್ತಿದ್ದಂತೆ ಸಿದ್ದರಾಮಯ್ಯನವರು ಸಂವಿಧಾನವೇ ನನ್ನ ಧರ್ಮ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮುಖ್ಯಮಂತ್ರಿ ಪಟ್ಟ ತೊರೆದ ಸಿದ್ದರಾಮಯ್ಯ – ಅಹಿಂದ ನಾಯಕ ನಡೆದು ಬಂದ ಹಾದಿ ಹೇಗಿತ್ತು?

ಸಿದ್ದರಾಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಡಾ ರಾಜ್‌ಕುಮಾರ್‌ ಅವರನ್ನು ನೆನೆದಿದ್ದಾರೆ. ಅಭಿಮಾನಿಗಳೇ ನಮ್ಮನೆ ದೇವ್ರು ಎಂಬ ಡಾ. ರಾಜ್‌ಕುಮಾರ್ ಅವರ ಸರಳ ನುಡಿಯನ್ನು ಸ್ಮರಿಸಿದರು. ಅವರಂತೆ ನಾನು ಕೂಡಾ ಮತದಾರರೇ ನಮ್ಮನೆ ದೇವ್ರು ಎಂದು ನಂಬಿದ್ದೇನೆ ಎಂದು ಹೇಳಿದರು. ಕನ್ನಡ ನಾಡಿನ 7 ಕೋಟಿ ಜನರ ಸೇವೆ ಮಾಡೋ ಅವಕಾಶಸಿಕ್ಕಿತು. 2 ಬಾರಿ ವಿರೋಧ ಪಕ್ಷದ ನಾಯಕನಾಗೋ ಅವಕಾಶ ಸಿಕ್ಕಿತು. ಈ ಅವಕಾಶ ನೀಡಿದ ಸೋನಿಯಾ ಗಾಂಧಿಯವ್ರಿಗೆ, ರಾಹುಲ್ ಗಾಂಧಿಯವ್ರಿಗೆ, ಖರ್ಗೆಯವ್ರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಹೈಕಮಾಂಡ್ ಹೇಳಿದಂತೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದ ಸಿದ್ದು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಭವನದಲ್ಲಿ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ರಾಜ್ಯಪಾಲರು ಊರಿನಲ್ಲಿಲ್ಲ, ಆದ್ದರಿಂದ ರಾಜೀನಾಮೆ ಪತ್ರವನ್ನು ಅವರ ಕಚೇರಿ, ಅವರ ಕಾರ್ಯದರ್ಶಿ ಅವರ ಬಳಿ ಕೊಟ್ಟಿದ್ದೇನೆ. ನಾನು ಮೊದಲಿಂದಲೂ ಹೇಳುತ್ತಿದ್ದೆ, ಅನೇಕ ಸಾರಿ ಹೇಳಿದ್ದೇನೆ ಹೈಕಮಾಂಡ್ ಅವ್ರು ಯಾವಾಗ ಸೂಚಿಸ್ತಾರೆ ಆವಾಗ ರಾಜೀನಾಮೆಯನ್ನು ಕೊಡ್ತೇನೆ ಅಂತ ಹೇಳಿದ್ದೇನೆ. ಅದರ ಪ್ರಕಾರ ಮೊನ್ನೆ ಹೈಕಮಾಂಡ್ ಅವ್ರು ಹೇಳಿದ್ರು. ಹೀಗಾಗಿ ನಾನು ರಾಜೀನಾಮೆ ಸಲ್ಲಿಸ್ತಿದ್ದೇನೆ.

ಇನ್ನು ಸುದ್ದಿಗೋಷ್ಠಿ ಕೊನೆಯಲ್ಲಿ ಸಿದ್ದು ಮತ್ತೊಮ್ಮೆ ಯಾರ ಒತ್ತಡಕ್ಕೂ ಮಣಿದಿಲ್ಲ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ರಾಷ್ಟ್ರರಾಜಕಾರಣಕ್ಕೆ ಬನ್ನಿ ಎಂದು ಕರೆದರು. ನನಗೆ ಇನ್ನೂ ಎರಡು ವರ್ಷಗಳ ಅವಧಿಯಿದೆ. ಹೀಗಾಗಿ ನಾನು ರಾಜ್ಯ ರಾಜಕಾರಣದಲ್ಲಿಯೇ ಉಳಿಯುತ್ತೇನೆ. ರಾಜ್ಯಸಭೆಗೆ ಆಫರ್ ಹೈಕಮಾಂಡ್ ನೀಡಿದರು. ನಾನು ಅದನ್ನು ನಿರಾಕರಿಸಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Sulekha