ಸೂರ್ಯವಂಶಿ ಸಿಡಿಲಿಗೆ SRH ಭಸ್ಮ – ವೈಭವ್ ಏಟಿಗೆ ದಾಖಲೆಗಳೂ ದಿಕ್ಕಾಪಾಲು
GT ಬೇಟೆಗೆ ಬಾಸ್ ಬೇಬಿ ರೆಡಿ

ಸೂರ್ಯವಂಶಿ ಸಿಡಿಲಿಗೆ SRH ಭಸ್ಮ – ವೈಭವ್ ಏಟಿಗೆ ದಾಖಲೆಗಳೂ ದಿಕ್ಕಾಪಾಲುGT ಬೇಟೆಗೆ ಬಾಸ್ ಬೇಬಿ ರೆಡಿ

ದಾಖಲೆಗಳು ಇರೋದೇ ಬ್ರೇಕ್ ಮಾಡೋಕೆ. ಪ್ರತಿ ಐಪಿಎಲ್ ಸೀಸನ್​ನಲ್ಲೂ ಹೊಸ ಹೊಸ ರೆಕಾರ್ಡ್ಸ್  ಕ್ರಿಯೇಟ್ ಆಗ್ತಾನೇ ಇರುತ್ತೆ. ಆದ್ರೆ ವೈಭವ್ ಸೂರ್ಯವಂಶಿ ಆಟಕ್ಕೆ ದಾಖಲೆಗಳು ಬರೀ ಬ್ರೇಕ್ ಆಗ್ತಿಲ್ಲ. ಅಕ್ಷರಶಃ ಪುಡಿ ಪುಡಿ ಮಾಡ್ತಿದ್ದಾರೆ.

ಇದನ್ನೂ ಓದಿ : ಬೇಬಿ ಬಾಸ್‌ ವೈಭವ್‌ಗೆ ಯೂನಿವರ್ಸಲ್ ಬಾಸ್ ಗೇಲ್‌ ಮೆಚ್ಚುಗೆ- ಸೂರ್ಯವಂಶಿಯನ್ನ ಹಾಡಿಹೊಗಳಿದ ಸಚಿನ್ ತೆಂಡೂಲ್ಕರ್

ಯಾರೋ ಹತ್ತು ಜನ ಹೊಡ್ದು ನಾನು ಡಾನ್ ಆದವ್ನಲ್ಲ. ನಾನು ಹೊಡ್ದಿರೋ ಹತ್ತೂ ಜನನೂ ಡಾನ್ ಅನ್ನೋ ಥರ ವೈಭವ್ ಸೂರ್ಯವಂಶಿ ಯಾರೋ ಲೋಕಲ್ಸ್ ಬಾಯ್ಸ್​ಗೋ ಅಥವಾ ಡೊಮೆಸ್ಟಿಕ್ ಬೌಲರ್ಸ್​ನೋ ಚೆಂಡಾಡ್ತಿಲ್ಲ. ವರ್ಲ್ಡ್ ಕ್ರಿಕೆಟ್​ನ ಟಾಪ್ ಮೋಸ್ಟ್ ಬೌಲರ್​ಗಳ ಎದುರಲ್ಲೇ ಫಿಯರ್​ಲೆಸ್ ಆಗಿ ಬ್ಯಾಟ್ ಬೀಸ್ತಿರುವಂಥದ್ದು. ಈಗ ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ ಐಪಿಎಲ್ ಇತಿಹಾಸದಲ್ಲೇ ಫಾಸ್ಟೆಸ್ಟ್ ಹಂಡ್ರೆಡ್​ ಜಸ್ಟ್ ಮಿಸ್ ಆಗಿದೆ. ಆದ್ರೆ ಯುನಿವರ್ಸಲ್ ಬಾಸ್ ಅವ್ರ ದಶಕದ ದಾಖಲೆಯನ್ನ ಐಪಿಎಲ್​ಗೆ ಕಾಲಿಟ್ಟ ಎರಡನೇ ವರ್ಷದಲ್ಲೇ ಕುಟ್ಟಿ ಪುಡಿ ಪುಡಿ ಮಾಡಿದ್ದಾನೆ.

ಹೈದ್ರಾಬಾದ್ ಗೆ ಗೇಸ್ ಪಾಸ್ ಕೊಟ್ಟ ಸೂರ್ಯವಂಶಿ!

ಪ್ಲೇಆಫ್ಸ್​ಗೆ ಕ್ವಾಲಿಫೈ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಬುಧವಾರ ಎಲಿಮಿನೇಟರ್ ಮ್ಯಾಚಲ್ಲಿ ಮುಖಾಮುಖಿ ಆಗಿದ್ವು.ಈ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ರಾಜಸ್ಥಾನ ಪರ ವೈಭವ್ ಸೂರ್ಯವಂಶಿ ಸಿಡಿಲು ಗುಡುಗಿನಂತೆ ಆರ್ಭಟಿಸಿದ್ರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ 28 ಬಾಲಲ್ಲೇ 97 ರನ್ಸ್ ಕಲೆ ಹಾಕಿದ್ರು. ಇನ್ನೊಂದು ಬಾಲಲ್ಲಿ ಬೌಂಡರಿ ಅಥವಾ ಸಿಕ್ಸರ್ ಬಂದಿದ್ರೆ ಐಪಿಎಲ್ ಇತಿಹಾಸದಲ್ಲೇ ಫಾಸ್ಟೆಸ್ಟ್ ಹಂಡ್ರೆಡ್ ಆಗ್ತಿತ್ತು. ಕ್ರಿಸ್ ಗೇಲ್ 30 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದ್ರೆ ಬ್ಯಾಡ್ ಲಕ್ 29ನೇ ಬಾಲಲ್ಲಿ ವಿಕೆಟ್ ಒಪ್ಪಿಸಿದ್ರು. ವೈಭವ್ ಬಳಿಕ ಧ್ರುವ್ ಜುರೆಲ್ ಕೇವಲ 21 ಎಸೆತಗಳಲ್ಲಿ 50 ರನ್ ಗಳಿಸಿದರು. ಇಬ್ರಿಬ್ಬರ ಬ್ಯಾಟಿಂಗ್ ಧಮಾಕದಿಂದ  ರಾಜಸ್ಥಾನ್ 20 ಓವರ್‌ಗಳಲ್ಲಿ 243 ರನ್‌ ಗಳಿಸತು.  244 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಹೈದ್ರಾಬಾದ್  19.2 ಓವರ್​ಗಳಲ್ಲಿ 196 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು. ಈ ಮೂಲಕ ಟೂರ್ನಿಯಿಂದಲೂ ಹೊರಬಿತ್ತು. ವೈಭವ್ ಭರ್ಜರಿ ಆಟದಿಂದ ಕ್ವಾಲಿಫೈಯರ್ 2ಗೆ ಸೆಲೆಕ್ಟ್ ಆಗಿರೋ ರಾಜಸ್ಥಾನಕ್ಕೆ ಈಗ ಗುಜರಾತ್ ತಂಡದ ವಿರುದ್ಧ ಅಖಾಡಕ್ಕಿಳಿಯಲಿದೆ. ಇಲ್ಲಿ ಗೆದ್ದವ್ರು ಆರ್​ಸಿಬಿ ಜೊತೆ ಫೈನಲ್ಸ್​ ಆಡ್ತಾರೆ.

ಯುನಿವರ್ಸಲ್ ಬಾಸ್ ದಾಖಲೆ ಪುಡಿಗಟ್ಟಿದ ಬಾಸ್ ಬೇಬಿ!

ಪ್ರಚಂಡ ಪುಟಾಣಿ, ಬಾಸ್​ ಬೇಬಿ, ವಂಡರ್ ಕಿಡ್ ಅಂತೆಲ್ಲಾ ಕರೆಸಿಕೊಳ್ಳೋ15 ವರ್ಷದ ವೈಭವ್ ಸೂರ್ಯವಂಶಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ದಾಖಲೆಗಳನ್ನ ಪುಡಿಗಟ್ಟಿದ್ದಾರೆ. ಹಾಗೇ ಈ ಐಪಿಎಲ್​ನಲ್ಲಿ ಹಲವು ರೆಕಾರ್ಡ್ಸ್ ಕ್ರಿಯೇಟ್ ಮಾಡಿದ್ದಾರೆ.

ದಾಖಲೆಗಳ ರಣಧೀರ ವೈಭವ್!

15 ಪಂದ್ಯಗಳಲ್ಲಿ 680 ರನ್, ಆರೆಂಜ್ ಕ್ಯಾಪ್, 600 ಪ್ಲಸ್ ರನ್ಸ್ ಗಳಿಸಿದ ಕಿರಿಯ

65 ಸಿಕ್ಸರ್ಸ್ ಸಿಡಿಸಿ ಒಂದೇ ಸೀಸನ್ ನ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ

2012ರಲ್ಲಿ ಕ್ರಿಸ್ ಗೇಲ್ 1 ಸೀಸನ್ ನಲ್ಲಿ 59 ಸಿಕ್ಸರ್ ಬಾರಿಸಿದ್ದು ಹಿಂದಿನ ದಾಖಲೆ

ನಾಕೌಟ್ ಹಂತಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದ ದಾಖಲೆ

ಪವರ್‌ ಪ್ಲೇಯಲ್ಲಿ ವೈಭವ್ ಐದನೇ ಅರ್ಧಶತಕ ಗಳಿಸಿದ ಎರಡನೇ ಆಟಗಾರ

ಪವರ್ ಪ್ಲನಲ್ಲೇ 8 ಸಿಕ್ಸರ್ ಬಾರಿಸಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ

ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ, 490 ರನ್ಸ್ ಗಳಿಕೆ

ಹೀಗೆ ವೈಭವ್ ಸೂರ್ಯವಂಶಿ ನಡೆದಿದ್ದೇ ದಾರಿಯಾಗಿದೆ. ಲೆಜೆಂಡರಿ ಆಟಗಾರರಿಂದಲೂ ಸಾಧ್ಯವಾಗದ ದಾಖಲೆಗಳನ್ನ ಬರೀತಿದ್ದಾರೆ. ವೈಭವ್ ಆಟ ಮೆಚ್ಚಿರುವಂಥ ಕ್ರಿಸ್ ಗೇಲ್, ಪಂದ್ಯ ನೇರಪ್ರಸಾರದ ಕೆಲವು ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡು, ಅದ್ಭುತ. ಹೊಸ ಸಿಕ್ಸ್ ಮಷಿನ್ ಎಂದು ಬರೆದಿದ್ದಾರೆ. ಌಕ್ಚುಲಿ 14 ವರ್ಷಗಳ ಹಿಂದೆ ದೈತ್ಯ ಗೇಲ್ ಬರೆದಿದ್ದ ದಾಖಲೆ ವೇಳೆ ವೈಭವ್ ಒಂದು ವರ್ಷದ ಕೂಸು. ಅದೇ ಕೂಸು ಈಗ ಕ್ರಿಕೆಟ್ ಆಡಲ್ಲ ಆಳೋಕೆ ಬಂದಿದ್ದೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಜಗತ್ತಿನ ದಂತಕತೆಗಳಾಗಿರೋ ದಿಗ್ಗಜ ಆಟಗಾರರೂ ಕೂಡ ವೈಭವ್ ಆಟವನ್ನ ಮನಸಾರೆ ಮೆಚ್ಚಿಕೊಂಡಿದ್ದಾರೆ. ಒಟ್ನಲ್ಲಿ ವೈಭವ್ ಈಗ ಕ್ರಿಕೆಟ್ ಲೋಕದ ಸೆನ್ಸೇಷನಲ್ ಪ್ಲೇಯರ್.

Shantha Kumari

Leave a Reply

Your email address will not be published. Required fields are marked *