ಬೇಬಿ ಬಾಸ್‌ ವೈಭವ್‌ಗೆ ಯೂನಿವರ್ಸಲ್ ಬಾಸ್ ಮೆಚ್ಚುಗೆ- ಸೂರ್ಯವಂಶಿಯನ್ನ ಹಾಡಿಹೊಗಳಿದ ಕ್ರಿಕೆಟ್ ದೇವರು

ಬೇಬಿ ಬಾಸ್‌ ವೈಭವ್‌ಗೆ ಯೂನಿವರ್ಸಲ್ ಬಾಸ್ ಮೆಚ್ಚುಗೆ- ಸೂರ್ಯವಂಶಿಯನ್ನ ಹಾಡಿಹೊಗಳಿದ ಕ್ರಿಕೆಟ್ ದೇವರು

ವೈಭವ್ ಸೂರ್ಯವಂಶಿ ಆಟಕ್ಕೆ ಇಡೀ ಜಗತ್ತೇ ಬೆಕ್ಕಸ ಬೆರಗಾಗಿ ಹೋಗಿದೆ.  ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಎಲ್ಲರ ಗಮನ ಸೆಳೆದರು. ಈ ನಡುವೆ ಸಚಿನ್ ತೆಂಡೂಲ್ಕರ್  ಮತ್ತು ಯೂನಿರ್ವಸಲ್ ಬಾಸ್‌ ಕ್ರಿಸ್ ಗೇಲ್ ವೈಭವ್‌ನನ್ನ ಹಾಡಿ ಹೊಗಳಿದ್ದಾರೆ. ವೈಭವ್ ಆಟಕ್ಕೆ ಈ ದಿಗ್ಗಜ ಆಟಗಾರರೇ ಫಿದಾ ಆಗಿದ್ದು, ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿಯವರ ಬ್ಯಾಟ್ ಬೀಸುವ ಶೈಲಿ ಅದ್ಭುತ

ವೈಭವ್ ಸೂರ್ಯವಂಶಿಯವರ ಬ್ಯಾಟಿಂಗ್‌ನ್ನ ಸಚಿನ್ ತೆಂಡೂಲ್ಕರ್ ಹಾಡಿಹೊಗಳಿದ್ದಾರೆ.  ವೈಭವ್ ಸೂರ್ಯವಂಶಿಯವರ ಬ್ಯಾಟ್ ಬೀಸುವ ಶೈಲಿ ಅದ್ಭುತ. ಅದಕ್ಕಿಂತಲೂ ಅವರು ಮುಂದಿನ ಪಾದವನ್ನು ಸುಂದರವಾಗಿ ಕ್ಲಿಯರ್ ಮಾಡಿಕೊಂಡು ತಮ್ಮದೇ ರೀತಿಯಲ್ಲಿ ಮುಕ್ತವಾಗಿ ಬ್ಯಾಟಿಂಗ್ ಮಾಡುವುದೇ ಹೆಚ್ಚು ಗಮನ ಸೆಳೆಯುತ್ತೆ.  ಈ ಇನ್ನಿಂಗ್ಸ್ ಅದ್ಭುತಕ್ಕಿಂತ ಕಡಿಮೆಯೋನೂ ಇಲ್ಲವೆಂದು ಹಾಡಿ ಹೊಗಳಿದ್ದಾರೆ.   

ಇದನ್ನೂ ಓದಿ: ರೋಗಿ ಜೊತೆ 5 ವರ್ಷ ಅನೈತಿಕ ಸಂಬಂಧ – ಖ್ಯಾತ ವೈದ್ಯನಿಗೆ ಚಪಲವೇ ಮುಳ್ಳಾಯ್ತು..!

ಬೇಬಿ ಬಾಸ್‌ ವೈಭವ್‌ಗೆ ಯೂನಿವರ್ಸಲ್ ಬಾಸ್ ಗೇಲ್‌ ಮೆಚ್ಚುಗೆ

ಯೂನಿವರ್ಸಲ್ ಬಾಸ್ ಗೇಲ್‌ ಬೇಬಿ ಬಾಸ್ ವೈಭವ್ ಸೂರ್ಯವಂಶಿಯನ್ನ ಹಾಡಿ ಹೊಗಳಿದ್ದಾರೆ. SRH ವಿರುದ್ಧದ ಪಂದ್ಯದಲ್ಲಿ ವೈಭವ್ ಅಬ್ಬರ ನೋಡಿದ  ಕ್ರಿಸ್ ಗೇಲ್  ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.   ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ, ಈತ ಹೊಸ ಸಿಕ್ಸರ್ ಮಷಿನ್ ಅಂತ ಗೇಲ್ ಬಣ್ಣಿಸಿದ್ದಾರೆ.

SRH ವಿರುದ್ಧದ ಪಂದ್ಯದಲ್ಲಿ ಕೇವಲ 3 ರನ್‌ಗಳ ಅಂತರದಲ್ಲಿ ಅವರು ಶತಕ ವಂಚಿತರಾದರು. 2012ರ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ 59 ಸಿಕ್ಸರ್ ಸಿಡಿಸಿದ್ದರು. ಈ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಸೂರ್ಯವಂಶಿ ಒಟ್ಟು ಈ ಋತುವಿನಲ್ಲಿ ಒಟ್ಟು 65 ಸಿಕ್ಸರ್ ಸಿಡಿಸಿ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Sulekha