ರೋಗಿ ಜೊತೆ 5 ವರ್ಷ ಅನೈತಿಕ ಸಂಬಂಧ – ಖ್ಯಾತ ವೈದ್ಯನಿಗೆ ಚಪಲವೇ ಮುಳ್ಳಾಯ್ತು..!

ರೋಗಿ ಜೊತೆ 5 ವರ್ಷ ಅನೈತಿಕ ಸಂಬಂಧ – ಖ್ಯಾತ ವೈದ್ಯನಿಗೆ ಚಪಲವೇ ಮುಳ್ಳಾಯ್ತು..!

ಇಡೀ ನಗರಕ್ಕೆ ಆತನೊಬ್ಬನೇ ಮೂಳೆತಜ್ಞ. ಎಂಥಾ ಮೂಳೆ ತೊಂದರೆಯಿದ್ದರೂ ಆ ವೈದ್ಯನ ಬಳಿ ಬಂದರೆ ಗುಣವಾಗುತ್ತಿತ್ತು. ಅದರಲ್ಲೂ ನಿರ್ದಿಷ್ಟ ಬೆನ್ನುಮೂಳೆಯ ತಜ್ಞರಾಗಿದ್ದ ಆತ ತುಂಬಾ ಫೇಮಸ್ ಡಾಕ್ಟರ್ ಕೂಡಾ ಹೌದು. ಆದರೆ, ರೋಗಿ ಜೊತೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧ, ಲೈಂಗಿಕ ಚಪಲ ವೈದ್ಯ ವೃತ್ತಿಗೆ ಕುತ್ತು ತಂದಿದೆ.

ಇದನ್ನೂ ಓದಿ:ಬೆಂಗಳೂರಿಗೂ ವಕ್ಕರಿಸಿತಾ ಮಹಾಮಾರಿ ಎಬೋಲಾ? –  ಉಗಾಂಡ ಮಹಿಳೆ ಲ್ಯಾಬ್‌ ರಿಪೋರ್ಟ್‌ನಲ್ಲೇನಿದೆ?

ಭಾರತ ಮೂಲದ ಇಂಗ್ಲೆಂಡ್ ವೈದ್ಯರೊಬ್ಬರು ರೋಗಿಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಕ್ಕೆ ಅವರ ವೈದ್ಯಕೀಯ ಲೈಸೆನ್ಸ್ ರದ್ದಾಗಿದೆ. ವೈದ್ಯರ ಹೆಸರು ಡಾ. ಚಿರಾಗ್ ಪಟೇಲ್. ಇವರು ಕಾರ್ಡಿಫ್‌ನ ‘ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್’ನಲ್ಲಿ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಆಗಿ 2018ರಿಂದ ಸೇವೆ ಸಲ್ಲಿಸುತ್ತಿದ್ದರು. ಇಡೀ ವೇಲ್ಸ್ ಭಾಗದಲ್ಲಿ ಈ ನಿರ್ದಿಷ್ಟ ಬೆನ್ನುಮೂಳೆಯ ಕಾಯಿಲೆಗೆ ಚಿಕಿತ್ಸೆ ನೀಡಬಲ್ಲ ಏಕೈಕ ವೈದ್ಯ ಇವರಾಗಿದ್ದರು. 2019ರ ಫೆಬ್ರವರಿಯಲ್ಲಿ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಡಾ. ಚಿರಾಗ್ ಪಟೇಲ್ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. 2019ರ ಆಗಸ್ಟ್​​ನಲ್ಲಿ ಆಕೆಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ಮಾಡಿದ ನಂತರ, ತುರ್ತು ವೈದ್ಯಕೀಯ ಕಾರಣಗಳಿಗಾಗಿ ಸಂಪರ್ಕಿಸಲು ವೈದ್ಯರು ತಮ್ಮ ವೈಯಕ್ತಿಕ ಫೋನ್ ನಂಬರ್ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಯಕ್ತಿಕ ಸಂಬಂಧ ಆರಂಭವಾಗಿ, ಅದು ಲೈಂಗಿಕ ಸಂಬಂಧಕ್ಕೆ ತಿರುಗಿತು. ಈ 6 ತಿಂಗಳ ಸಂಬಂಧದ ಅವಧಿಯಲ್ಲಿ ವೈದ್ಯರು ತಮ್ಮ ನಗ್ನ ಚಿತ್ರಗಳನ್ನು ಸಹ ಆಕೆಗೆ ಕಳುಹಿಸಿದ್ದರು. 2021ರ ಡಿಸೆಂಬರ್ ತಿಂಗಳಲ್ಲಿ ವೈದ್ಯರು ಆಕೆಗೆ ಮೂರನೇ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಇವರಿಬ್ಬರ ನಡುವಿನ ನಿಕಟ ಸಂಬಂಧ ಜನವರಿ 2023ರವರೆಗೆ ಮುಂದುವರಿದಿತ್ತು. ಈ ಸಮಯದಲ್ಲಿ ಡಾ. ಚಿರಾಗ್ ಪಟೇಲ್ ಆಕೆಗೆ ಅಪಾಯಕಾರಿ ಮಾದಕ ದ್ರವ್ಯಗಳಾದ ‘ಮಾರ್ಫಿನ್ ಸಲ್ಫೇಟ್’ ಮತ್ತು ‘ಡಯಾಜೆಪಮ್’ ಮಾತ್ರೆಗಳನ್ನು ಆಸ್ಪತ್ರೆಯ ಅಧಿಕೃತ ದಾಖಲೆಗಳಿಗೆ ಸೇರಿಸದೆಯೇ ಅಕ್ರಮವಾಗಿ ನೀಡುತ್ತಿದ್ದರು.

5 ವರ್ಷಗಳ ಕಾಲ ಆ ಮಹಿಳೆ ಡಾ. ಚಿರಾಗ್ ಪಟೇಲ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಡಾಕ್ಟರ್ ಆಕೆಗಾಗಿ ವೈದ್ಯಕೀಯ ನಿಯಮವನ್ನು ಸಂಪೂರ್ಣವಾಗಿ ಮುರಿದಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ನಡುವಿನ ಸಂಬಂಧ ಹಾಳಾಗಲು ಶುರುವಾಯಿತು. ಅನೈತಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ನಂತರ ಆ ಮಹಿಳೆ ತಮ್ಮಿಬ್ಬರ ಸಂಬಂಧದ ವಿಷಯವನ್ನು ಎಲ್ಲರಿಗೂ ತಿಳಿಸುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಳು. ಕೊನೆಗೂ ಆಕೆಯ ಕಾಟ ತಾಳಲಾರದೆ ಮಾತ್ರೆಗಳನ್ನು ನೀಡುತ್ತಿದ್ದುದಾಗಿ ಚಿರಾಗ್ ಪಟೇಲ್ ಅವರೇ ಒಪ್ಪಿಕೊಂಡರು. ಇಬ್ಬರ ಸಂಬಂಧ ಸಂಪೂರ್ಣ ಹದಗೆಟ್ಟ ನಂತರ, ಆ ಮಹಿಳೆಯು ಪೊಲೀಸರ ಬಳಿ ಹೋಗಿ ದೂರು ನೀಡಿದ್ದರು. ಪೊಲೀಸರು ಅಧಿಕೃತವಾಗಿ ಕೇಸ್ ದಾಖಲಿಸದಿದ್ದರೂ, ಆರೋಗ್ಯ ಮಂಡಳಿಯ ವೈದ್ಯಕೀಯ ನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ಅದೇ ತಿಂಗಳು ಡಾ. ಚಿರಾಗ್ ಪಟೇಲ್ ತಾವೇ ಜನರಲ್ ಮೆಡಿಕಲ್ ಕೌನ್ಸಿಲ್  ಮುಂದೆ ಶರಣಾದರು. ಕೊನೆಗೂ ಕಾರ್ಡಿಫ್ ಆರೋಗ್ಯ ಮಂಡಳಿಯು ಡಾ. ಚಿರಾಗ್ ಪಟೇಲ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

ಇಂಗ್ಲೆಂಡ್​​ನ ವೈದ್ಯಕೀಯ ವೃತ್ತಿಯ ನೀತಿ ಸಂಹಿತೆಯ ಪ್ರಕಾರ ವೈದ್ಯರು ತಮ್ಮ ರೋಗಿಗಳೊಂದಿಗೆ ಯಾವುದೇ ರೀತಿಯ ವೈಯಕ್ತಿಕ ಅಥವಾ ಲೈಂಗಿಕ ಸಂಬಂಧವನ್ನು ಹೊಂದುವಂತಿಲ್ಲ. ಆದರೆ ಡಾ. ಚಿರಾಗ್ ಪಟೇಲ್ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದರು. ತಮ್ಮ ರೋಗಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಆಕೆಗೆ ಅಫೀಮು ಆಧರಿತ ಮಾದಕ ದ್ರವ್ಯ ನೀಡಿದ್ದರು. ಈ ಕಾರಣದಿಂದಾಗಿ ಅವರ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ.

Sulekha

Leave a Reply

Your email address will not be published. Required fields are marked *