PLAY OFFS ಪ್ರಚಂಡ ಪಾಟಿದಾರ್ – ಅವಮಾನ ಮೆಟ್ಟಿ ಅದೃಷ್ಟವಂತನಾಗಿದ್ದೇಗೆ?
ರಜತ್ ಗೆ ತೆರೆಯುತ್ತಾ T-20I ಬಾಗಿಲು?

PLAY OFFS ಪ್ರಚಂಡ ಪಾಟಿದಾರ್ – ಅವಮಾನ ಮೆಟ್ಟಿ ಅದೃಷ್ಟವಂತನಾಗಿದ್ದೇಗೆ?ರಜತ್ ಗೆ ತೆರೆಯುತ್ತಾ T-20I ಬಾಗಿಲು?

ಗುಜರಾತ್ ವಿರುದ್ಧದ ಕ್ವಾಲಿಫೈಯರ್ 1 ಪಂದ್ಯದ ಬಳಿಕ ರಜತ್ ಪಾಟಿದಾರ್ ಫುಲ್ ಟ್ರೆಂಡಿಂಗ್ ನಲ್ಲಿದ್ದಾರೆ. ಅದಕ್ಕೆ ಕಾರಣ ಅವ್ರ ಧಮಾಕೇಧಾರ್ ಪರ್ಫಾಮೆನ್ಸ್. ಕ್ಯಾಪ್ಟನ್ ಆಗಿ ಮೊದಲ ಸೀಸನ್ ನಲ್ಲೇ ಬೆಂಗಳೂರು ತಂಡಕ್ಕೆ ಕಪ್ ಗೆಲ್ಲಿಸಿದ್ದ ಪಾಟಿದಾರ್ ಈಗ ಎರಡನೇ ಸೀಸನ್ ನಲ್ಲಿ ಮತ್ತೆ ಫೈನಲ್ ಗೆ ತಂದು ಕೂರಿಸಿದ್ದಾರೆ.

ಇದನ್ನೂ ಓದಿ : RCB ಫ್ಲವರ್ ಅಲ್ಲ ಫೈಯರ್ – FINALಗೂ ಮೊದಲೇ ಬಿಗ್ ಮೆಸೇಜ್

ನಿನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗಿದ್ರೆ ಬರೀ ಒಂದು ಯುದ್ಧ ಗೆಲ್ಬಹುದು. ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಆಗ ಇಡೀ ಪ್ರಪಂಚವನ್ನೇ ಗೆಲ್ಬೋದು. ಇದು ಕೆಜಿಎಫ್ ಚಿತ್ರದಲ್ಲಿ ಬರೋ ಮಾಸ್ ಡೈಲಾಗ್. ಈ ಡೈಲಾಗ್ ಈಗ ಆರ್​ಸಿಬಿಗೆ ಕರೆಕ್ಟ್ ಆಗೇ ಸಿಂಕ್ ಆಗ್ತಿದೆ. ನಾಯಕ ರಜತ್ ಪಾಟಿದಾರ್ ಬ್ಯಾಟ್ ಹಿಡಿದು ಕ್ರೀಸ್​ನಲ್ಲಿ ಇದ್ದಾರೆ ಅಂದ್ರೆ ಆರ್​​ಸಿಬಿ ಡಗೌಟ್ ಅಷ್ಟೇ ಅಲ್ಲ ಫ್ಯಾನ್ಸ್ ಕೂಡ ರಿಲ್ಯಾಕ್ಸ್ ಆಗಿರ್ತಾರೆ. ಯಾಕಂದ್ರೆ ಅದು ಅವ್ರ ಮೇಲಿರೋ ನಂಬಿಕೆ. ಅದ್ರಲ್ಲೂ ಪ್ಲೇ ಆಫ್ಸ್ ಅಂತಾ ಬಂದಾಗ ರಜತ್ ಅಕ್ಷರಶಃ ಬೆಂಕಿಚೆಂಡಿನಂತಾಗ್ತಾರೆ.

33 ಎಸೆತ.. 93* ರನ್ಸ್.. ಒಂದೇ ಒಂದು ಡಾಟ್ ಬಾಲ್!

ಐಪಿಎಲ್ ಇತಿಹಾಸದ ಪ್ಲೇಆಫ್ಸ್​ನಲ್ಲಿ ರಜತ್ ಪಾಟಿದಾರ್ ಕಡೆಯಿಂದ್ತೊಂದು ಬಿಗ್​ ಇನ್ನಿಂಗ್ಸ್ ಬಂದಿದೆ. ಕೇವಲ 33 ಎಸೆತಗಳಲ್ಲೇ ಅಜೇಯ 93 ರನ್ ಸಿಡಿಸಿದರು. 5 ಬೌಂಡರಿ ಹಾಗೇ 9 ಸಿಕ್ಸರ್ ಗಳಿದ್ವು. ಇಂಟ್ರೆಸ್ಟಿಂಗ್ ಅಂದ್ರೆ ಅವ್ರು ಆಡಿದ್ದೇ ಒಂದೇ ಒಂದು ಡಾಟ್ ಬಾಲ್ ಮಾತ್ರ. ಇದುವರೆಗೆ ಐಪಿಎಲ್ ಪ್ಲೇ ಆಫ್ಸ್ ಅಂತಾ ಬಂದಾಗ ಆರು ಇನ್ನಿಂಗ್ಸ್‌ ಅಡಿ ಒಂದು ಶತಕ ಎರಡು ಅರ್ಧಶತಕ ಸಹಿತ 338 ರನ್ ಚಚ್ಚಿದ್ದಾರೆ.  ಐಪಿಎಲ್‌ ಪ್ಲೇ ಆಫ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ಪಾಟೀದಾರ್ ಇದೀಗ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಪಾಟೀದಾರ್ ಇದುವರೆಗೂ 24 ಸಿಕ್ಸರ್ ಸಿಡಿಸಿದ್ದಾರೆ. ಸುರೇಶ್ ರೈನಾ 40 ಸಿಕ್ಸರ್​ಗಳೊಂದಿಗೆ ನಂಬರ್ 1ಸ್ಥಾನದಲ್ಲಿದ್ದಾರೆ. ಇವತ್ತು ಆರ್​ಸಿಬಿ ಸಕ್ಸಸ್  ಬಳಿಕ ಪಾಟಿದಾರ್​ರನ್ನ ಎಲ್ಲರೂ ಕೊಂಡಾಡ್ತಿದ್ದಾರೆ. ಆದ್ರೆ ನಾಲ್ಕು ವರ್ಷಗಳ ಹಿಂದೆ ಸಿಚುಯೇಷನ್ ಬೇರೆಯದ್ದೇ ಇತ್ತು.

ಅವಮಾನದಿಂದ ಸನ್ಮಾನದವರೆಗೆ!

2021ರಲ್ಲಿ ಆರ್ ಸಿಬಿ ಸೇರ್ಪಡೆ.. 2022ರಲ್ಲಿ ಅನ್ ಸೋಲ್ಡ್

2022ರಲ್ಲಿ ಲುವ್ನಿತ್ ಸಿಸೋಡಿಯಾ ಗಾಯದಿಂದ ರಜತ್ ರಿಪ್ಲೇಸ್

8 ಇನಿಂಗ್ಸ್‌, 333 ರನ್ಸ್.. ಎಲಿಮಿನೇಟರ್‌ ಮ್ಯಾಚಲ್ಲಿ 112 ರನ್ಸ್

ಇಂಜುರಿ ಸಮಸ್ಯೆ ಕಾರಣದಿಂದ 2023ರಲ್ಲಿ ಐಪಿಎಲ್ ಆಡಲ್ಲ

2024ರಲ್ಲಿ ಮತ್ತೆ ಆರ್ ಸಿಬಿಗೆ ಮರಳಿದ ಪಾಟಿದಾರ್ ಒಳ್ಳೆಯ ಪ್ರದರ್ಶನ

2025ರಲ್ಲಿ ಕ್ಯಾಪ್ಟನ್ಸಿ.. ಚೊಚ್ಚಲ ಆವೃತ್ತಿಯಲ್ಲೇ ತಂಡಕ್ಕೆ ಟ್ರೋಫಿ ಗೆಲುವು

2026ರಲ್ಲಿ ಮತ್ತೆ ಬೆಂಗಳೂರು ತಂಡವನ್ನು ಫೈನಲ್ ಗೆ ಮುನ್ನಡೆಸಿದ್ರು

ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ರೆ 3ನೇ ನಾಯಕ ಆಗಬಹುದು

ಈ ಬಾರಿ 197ರ ಸ್ಟ್ರೈಕ್ ರೇಟ್ ನಲ್ಲಿ 486 ರನ್ಸ್ ಕಲೆಹಾಕಿದ ನಾಯಕ

ಹೀಗೆ ರಜತ್ ಪಾಟಿದಾರ್ ಈಗ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ಬೆಂಗಳೂರು ತಂಡಕ್ಕೆ ಮೊದಲ ಕಪ್ ರುಚಿ ತೋರಿಸಿದ ಪಾಟಿದಾರ್ ಈಗ ಎರಡನೇ ಕಪ್ ಗೆಲ್ಲಿಸೋಕೆ ಇನ್ನೊಂದೇ ಹೆಜ್ಜೆ ಬಾಕಿ ದೂರದಲ್ಲಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ತಂಡ ಡೌನ್ ಫಾಲ್ ಆಗ್ತಿದೆ ಅಂದಾಗ ಮುಂದೆ ನಿಂತು ಆಡೋದೇ ನಾಯಕನ ಜವಾಬ್ದಾರಿ. ಅದನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದ್ದಾರೆ. ಇದೇ ಕಾರಣಕ್ಕೆ ಪಾಟಿದಾರ್ ಟಿ-20ಐಗೆ ಸೆಲೆಕ್ಟ್ ಆಗಲಿ ಅನ್ನೋ ಕೂಗು ಎದ್ದಿದೆ.

ಭಾರತ ಟಿ-20 ತಂಡಕ್ಕೆ ಪಾಟಿದಾರ್ ಬೇಕು ಎಂದ ರಾಯುಡು!

ಆರ್​ಸಿಬಿ ಕಂಡ್ರೆ ಯಾವಾಗ್ಲೂ ಕೊಂಕು ಮಾತನಾಡೋ ಅದೇ ಅಂಟಿ ರಾಯುಡು ಈಗ ಆರ್​ಸಿಬಿ ಕ್ಯಾಪ್ಟನ್ ಪ್ರದರ್ಶನದ ಬಗ್ಗೆ ಇಂಥಾದ್ದೊಂದು ಮಾತುಗಳನ್ನ ಹೇಳಿದ್ದಾರೆ. 2028ರ ವಟಿ-20 ವಿಶ್ವಕಪ್ ಜರ್ನಿ ಸ್ಟಾರ್ಟ್ ಆಗೋದ್ರಿಂದ ಭವಿಷ್ಯದ ಟಿ20ಐ ತಂಡವನ್ನು ನಿರ್ಮಿಸಬೇಕಾದ ಕೆಲವೇ ಆಟಗಾರರಲ್ಲಿ ಪಾಟಿದಾರ್ ಕೂಡ ಒಬ್ಬರು ಎಂದು ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ. ನಾನು ಮೊದಲು ಎರಡು ಅಥವಾ ಮೂರು ಜನರ ಹೆಸರುಗಳನ್ನು ಬರೆಯುತ್ತೇನೆ ಮತ್ತು ನಂತರ ಅವರ ಸುತ್ತ ತಂಡವನ್ನು ನಿರ್ಮಿಸುತ್ತೇನೆ. ಅದ್ರಲ್ಲಿ ಪಾಟಿದಾರ್ ಕೂಡ ಒಬ್ಬರು ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ರಜತ್ ಪಾಟಿದಾರ್ ಶೀಘ್ರದಲ್ಲೇ ಟಿ20ಐಗಳಲ್ಲಿ ಟೀಮ್ ಇಂಡಿಯಾ ಪರ ಆಡಬೇಕು ಎಂದಿದ್ದಾರೆ. ಒಟ್ನಲ್ಲಿ ರಜತ್ ಪಾಟಿದಾರ್ ಈಗ ಆರ್ ಸಿಬಿ ತಂಡದ ಲಕ್ಕಿ ಕ್ಯಾಪ್ಟನ್. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಡ್ಯಾನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹೀಗೆ ಘಟಾನುಘಟಿ ನಾಯಕರೇ ಮುನ್ನಡೆಸಿದ್ರೂ ಕಪ್ ಎತ್ತಿ ಹಿಡಿಯೋ ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಪಾಟಿದಾರ್ ಫಸ್ಟ್ ಸೀಸನ್​ನಲ್ಲೇ ಈ ಸಾಧನೆ ಮಾಡಿದ್ರು. ಈಗ ಮತ್ತೊಂದು ಟ್ರೋಫಿ ಗೆಲುವಿನ ಹತ್ತಿರದಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಆರ್​ಸಿಬಿಯನ್ನ ಮತ್ತೆ ಚಾಂಪಿಯನ್ ಪಟ್ಟದಲ್ಲೇ ಕೂರಿಸಲಿ ಅನ್ನೋದಷ್ಟೇ ಅಭಿಮಾನಿಗಳ ಆಸೆ.

Shantha Kumari

Leave a Reply

Your email address will not be published. Required fields are marked *