ಸಿಡಿಲಬ್ಬರದ ಓಪನರ್‌ಗಳ ಭರ್ಜರಿ ಮುಖಾಮುಖಿ – ಸೂರ್ಯವಂಶಿ VS ಎಸ್ಆರ್‌ಹೆಚ್‌ ಬೌಲರ್‌ಗಳ ಸೇಡಿನ ಸಮರ

ಸಿಡಿಲಬ್ಬರದ ಓಪನರ್‌ಗಳ ಭರ್ಜರಿ ಮುಖಾಮುಖಿ – ಸೂರ್ಯವಂಶಿ VS ಎಸ್ಆರ್‌ಹೆಚ್‌ ಬೌಲರ್‌ಗಳ ಸೇಡಿನ ಸಮರ

ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಕಾದಾಟ ನಡೆಸಲಿದೆ.

ಇದನ್ನೂ ಓದಿ:ಗುಜರಾತ್ ವಿರುದ್ಧ ರಜತ್ ರೌದ್ರಾವತಾರ – ಚಾಂಪಿಯನ್ ಆಗಲು ಇನ್ನೊಂದೇ ಹೆಜ್ಜೆ ಬಾಕಿ..!

ಮುಲ್ಲಾನ್‌ಪುರ್ ಪಿಚ್‌ನಲ್ಲಿ ಗುಡುಗು ಸಿಡಿಲಿನ ಅಬ್ಬರಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡೂ ತಂಡಗಳಲ್ಲಿರುವ ಆರಂಭಿಕರು ಸ್ಫೋಟಕ ದಾಂಡಿಗರು. ಹೀಗಾಗಿ ಬುಧವಾರದ ಪ್ಲೇ-ಆಫ್‌ ಪಂದ್ಯದಲ್ಲಿ ರನ್‌ ಮಳೆಗಾಗಿ ಕಾಯುತ್ತಿದ್ದಾರೆ ಕ್ರಿಕೆಟ್ ಫ್ಯಾನ್ಸ್. ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಬುಧವಾರ ಎಲಿಮಿನೇಟರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದರಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಆರಂಭಿಕ 4 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದು ನಿಧಾನವಾಗಿ ಗೆಲುವಿನ ಹಳಿಗೆ ಮರಳಿದ್ದ ಸನ್‌ರೈಸರ್ಸ್‌ ಬಳಿಕ ಅಮೋಘ ಪ್ರದರ್ಶನ ನೀಡಿದೆ. ತಂಡ ಆಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು 18 ಅಂಕ ಗಳಿಸಿತ್ತು. ಮತ್ತೊಂದೆಡೆ, ರಾಜಸ್ಥಾನ ಆರಂಭಿಕ 4 ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿತ್ತು. ಬಳಿಕ 8 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು ಇನ್ನೇನು ಪ್ಲೇ-ಆಫ್‌ ರೇಸ್‌ನಿಂದಲೇ ಹೊರಬೀಳಲಿದೆ ಅನ್ನೋ ಹಂತದಲ್ಲಿ ಗೆದ್ದು ಪ್ಲೇಆಫ್ ತಲುಪಿದೆ.

ಈ ಎಲಿಮಿನೇಟರ್‌ ಪಂದ್ಯ ಸ್ಫೋಟಕ ಬ್ಯಾಟರ್‌ಗಳ ನಡುವಿನ ಸೆಣಸಾಟ ಎಂದೇ ಪರಿಗಣಿಸಲಾಗುತ್ತಿದೆ.ಆರ್‌ಆರ್‌ ಬ್ಯಾಟರ್  ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಬ್ಯಾಟಿಂಗ್‌ನಲ್ಲಿ ಸಖತ್ ಸೌಂಡ್ ಮಾಡಿದ್ದಾರೆ. ಮತ್ತೊಂದೆಡೆ ಸನ್‌ರೈಸರ್ಸ್‌ ತಂಡ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿದೆ. 606 ರನ್‌ ಗಳಿಸಿರುವ ಹೆನ್ರಿಚ್‌ ಕ್ಲಾಸೆನ್‌ ಟೂರ್ನಿಯ 3ನೇ ಗರಿಷ್ಠ ಸ್ಕೋರರ್‌. ಇಶಾನ್‌ ಕಿಶನ್‌ 569, ಅಭಿಷೇಕ್‌ ಶರ್ಮಾ 563, ಟ್ರ್ಯಾವಿಸ್‌ ಹೆಡ್‌ 393 ರನ್‌ ಕಲೆಹಾಕಿದ್ದಾರೆ. ಈ ನಾಲ್ವರೂ 155+ ಸ್ಟ್ರೈಕ್‌ರೇಟ್‌ ಹೊಂದಿದ್ದು, ರಾಜಸ್ಥಾನದ ಬೌಲಿಂಗ್‌ ಪಡೆಗೆ ಕಠಿಣ ಸವಾಲೊಡ್ಡಬಹುದು. ಮುಲ್ಲಾನ್‌ಪುರದ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು. ಹರಿಯಬಹುದು.

Sulekha

Leave a Reply

Your email address will not be published. Required fields are marked *