RCB ಫ್ಲವರ್ ಅಲ್ಲ ಫೈಯರ್ – FINALಗೂ ಮೊದಲೇ ಬಿಗ್ ಮೆಸೇಜ್
‘ಈ ಸಲನೂ ಕಪ್ ನಮ್ದು’ ಪಕ್ಕಾ?

RCB ಫ್ಲವರ್ ಅಲ್ಲ ಫೈಯರ್ – FINALಗೂ ಮೊದಲೇ ಬಿಗ್ ಮೆಸೇಜ್‘ಈ ಸಲನೂ ಕಪ್ ನಮ್ದು’ ಪಕ್ಕಾ?

2008 ರಿಂದ 2024ರವರೆಗೂ ಒಂದು ಲೆಕ್ಕ.. 2025ರಿಂದ ಈಚೆಗೆ ಬೇರೆಯದ್ದೇ ಲೆಕ್ಕ. ಇನ್ಮುಂದೆ ನಾವು ಐಪಿಎಲ್​ನಲ್ಲಿ ಬರೀ​ ಆಡಲ್ಲ ಆಳ್ತೀವಿ ಅಂತಾ ಆರ್ಭಟಿಸ್ತಾ ಇರೋದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈಗ ಕ್ವಾಲಿಫೈಯರ್ 1ನಲ್ಲಿ ಗುಜರಾತ್ ವಿರುದ್ಧ ಭರ್ಜರಿಯಾಗಿ ಗೆದ್ದು ಫೈನಲ್​ಗೆ ನುಗ್ಗಿದ್ದಾರೆ. ಆರ್​ಸಿಬಿ ಪಾಲಿಗೆ ಇದು ಬರೀ ಗೆಲುವಲ್ಲ ಎದುರಾಳಿ ತಂಡಗಳಿಗೆ ಕೊಟ್ಟ ಖಡಕ್ ಸಂದೇಶ. ಡಿಪೆಂಡಿಂಗ್ ಚಾಂಪಿಯನ್ಸ್ ಹಿಂಗೇ ಆಡೋದು ಅನ್ನೋ ಥರ ಟ್ರೆಂಡ್ ಸೆಟ್ ಮಾಡಿದ್ದಾರೆ.

ಇದನ್ನೂ ಓದಿ : ಗುಜರಾತ್ ವಿರುದ್ಧ ರಜತ್ ರೌದ್ರಾವತಾರ – ಚಾಂಪಿಯನ್ ಆಗಲು ಇನ್ನೊಂದೇ ಹೆಜ್ಜೆ ಬಾಕಿ..!

ಐಪಿಎಲ್​ನಲ್ಲಿ ಹೈಯೆಸ್ಟ್ ಫ್ಯಾನ್ ಬೇಸ್ ಇರೋ ಟೀಂ ಆರ್​ಸಿಬಿಯೇ ಆಗಿದ್ರೂ ಟ್ರೋಲ್ ಆಗೋದ್ರಲ್ಲೂ ಬೆಂಗಳೂರೇ ನಂಬರ್ 1 ಇತ್ತು. ಯಾಕಂದ್ರೆ ಘಟಾನುಘಟಿಗಳೇ ತುಂಬಿದ್ರೂ ಕಪ್ ಗೆಲ್ಲೋಕೆ ಆಗಿಲ್ಲ. ಹಾಗೇ ಬಿಗ್ ಸ್ಟೇಜ್​ನಲ್ಲಿ ಆಡಲ್ಲ ಅನ್ನೋದು. ಅಷ್ಟೇ ಯಾಕೆ ಹಿಂದೆಲ್ಲಾ ಫಾರ್ಮ್ ಇಲ್ಲದ ಪ್ಲೇಯರ್ಸ್ ಅಥವಾ ಟೀಂ ಇದ್ರೆ ಆರ್​ಸಿಬಿ ವಿರುದ್ಧ ಆಡಿದ್ರೆ ಫಾರ್ಮ್​ಗೆ ಬರ್ತಾರೆ ಅಂತಾ ಆಡಿಕೊಳ್ಳೋ ಟೈಂ ಅದು. ಆದ್ರೆ ಈಗ ಗೇಲಿ ಮಾಡಿದವ್ರ ಲೆಕ್ಕಗಳನ್ನೆಲ್ಲಾ ಚುಕ್ತಾ ಮಾಡ್ತಿರೋ ಬೆಂಗಳೂರು ನಡೆದಿದ್ದೇ ದಾರಿಯಾಗಿದೆ. ಲಾಸ್ಟ್ ಸೀಸನ್ ವಿನ್ನರ್ಸ್.. ಈ ಸೀಸನ್ ಫೈನಲಿಸ್ಟ್. ಅದೂ ರಾಯಲ್ ಆಗೇ ಫೈನಲ್​ಗೆ ಎಂಟ್ರಿ ಕೊಟ್ಟಿರುವಂಥದ್ದು.

ಗುಜರಾತ್ ಬೌಲರ್ ಗಳನ್ನ ಚೆಂಡಾಡಿದ ರೆಡ್ ಆರ್ಮಿ ರಣವಿಕ್ರಮರು!

19ನೇ ಸೀಸನ್​ನಲ್ಲಿ ಮೋಸ್ಟ್ ಡೇಂಜರಸ್ ಬೌಲಿಂಗ್ ಸ್ಕ್ವಾಡ್ ಹೊಂದಿರೋ ಟೀಂ ಅಂದ್ರೆ ಅದು ಗುಜರಾತ್ ಟೈಟಾನ್ಸ್.. ಆದ್ರೆ ಅದೇ ಗುಜರಾತ್ ಬೌಲರ್​ಗಳನ್ನ ಚಾರ್ಜ್ ಮಾಡಿದ ಬೆಂಗಳೂರು ಬ್ಯಾಟರ್ಸ್ ಬರೋಬ್ಬರಿ 254 ರನ್​ಗಳನ್ನ ಬಾರಿಸಿದ್ರು. ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಬಿಗ್ಗೆಸ್ಟ್ ಸ್ಕೋರ್ ಇದು. 2023ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ತಂಡ 233 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್ ಆಗಿತ್ತು. ಇದೇ ಭರ್ಜರಿ ಬ್ಯಾಟಿಂಗ್​ನೊಂದಿಗೆ ಫೈನಲ್​ನಲ್ಲೂ ನಾವೇ ಕಪ್ ಗೆಲ್ಲೋದು ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ.

ಇದು ಚರಿತ್ರೆ ಸೃಷ್ಟಿಸೋ ಅವತಾರ!

ಪ್ಲೇಆಫ್ಸ್ ಪಂದ್ಯದಲ್ಲಿ ತಂಡವೊಂದರ ಗರಿಷ್ಟ ಬೌಂಡರಿಗಳ ಕಂಡ ಪಂದ್ಯ

14 ಸಿಕ್ಸರ್ ಮತ್ತು 24 ಫೋರ್.. ಒಟ್ಟಾರೆ 38 ಬೌಂಡರಿಗಳನ್ನ ಸಿಡಿಸಿದ್ರು

ಪ್ಲೇ ಆಫ್ಸ್ ನಲ್ಲಿ  ಅತೀ ಹೆಚ್ಚು ರನ್(92)​ಗಳ ಅಂತರದಿಂದ ಗೆದ್ದ ಟೀಮ್

ಸತತ ನಾಲ್ಕು ಆವೃತ್ತಿಗಳಲ್ಲಿ 600+ ರನ್ ಗಳಿಸಿದ ಮೊದಲ ಆಟಗಾರ ಕೊಹ್ಲಿ

ಐಪಿಎಲ್ ಇತಿಹಾಸದಲ್ಲಿ 254 ರನ್ ಗಳು ತಂಡದ 3ನೇ ಗರಿಷ್ಠ ಸ್ಕೋರ್

ಹೀಗೆ ಬೆಂಗಳೂರು ತಂಡ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಕಂಪ್ಲೀಟ್ ಡಾಮಿನೇಟ್ ಮಾಡಿಕೊಂಡೇ ಫೈನಲ್​ಗೆ ಲಗ್ಗೆ ಇಟ್ಟಿದೆ. ಮೇ31ಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಮ್ ಎದುರಾಳಿ ಅಂತಾ ಅಂಂತಾ ಕಾಯ್ತಿದ್ದಾರೆ. ಬೆಂಗಳೂರು ತಂಡದ ಇದೇ ಪ್ರದರ್ಶನ ನೆಕ್ಸ್​ಟ್ ಫೈನಲ್​ಗೆ ಪ್ರವೇಶ ಪಡೆಯೋ ತಂಡಕ್ಕೂ ನಡುಕ ಹುಟ್ಟಿಸಿದೆ.

ಬೆಂಗಳೂರು ಫ್ಲವರ್ ಅಲ್ಲ ಫೈಯರ್!

2026ರ ಸೀಸನ್ ನಲ್ಲಿ 3ನೇ ಬಾರಿ 240+ ರನ್ಸ್ ಕಲೆ ಹಾಕಿದ ತಂಡ

ಟಾಪ್-5 ಬ್ಯಾಟರ್ಸ್ 150+ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್

ಕೊಹ್ಲಿ ಮತ್ತು ಪಡಿಕ್ಕಲ್ 7ನೇ ಬಾರಿಗೆ 50+ ರನ್‌ಗಳ ಜೊತೆಯಾಟ

ಟಾಪ್ ಆರ್ಡರ್ ಅಷ್ಟೇ ಅಲ್ಲ ಮಿಡಲ್ ಆರ್ಡರ್ ಕೂಡ ರನ್ಸ್ ಬರ್ತಿದೆ

ಜಿಟಿ, ಆರ್ ಆರ್, ಹೈದ್ರಾಬಾದ್ ಗೆ ಹೋಲಿಸಿದ್ರೆ ಫಿನಿಶರ್ಸ್ ಬೆಸ್ಟ್

ಬೌಲಿಂಗ್ ನಲ್ಲಿ ಡಫಿ, ಭುವಿ & ಜೋಶ್ ಕಾಂಬಿನೇಷನ್ ಸೂಪರ್ ಸ್ಟ್ರಾಂಗ್

26 ವಿಕೆಟ್ ಗಳನ್ನ ಪಡೆದು ಪರ್ಪಲ್ ಕ್ಯಾಪ್ ನಾಯಕನಾಗಿರೋ ಭುವಿ

ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ಕೃನಾಲ್ ಬಿಗ್ ಇಂಪ್ಯಾಕ್ಟ್

ಹೀಗೆ ಪ್ಲೇಯಿಂಗ್ 11ನಲ್ಲಿ ಆಡುವ ಪ್ರತಿಯೊಬ್ಬರೂ ಕೂಡ ಗೇಮ್ ಚೇಂಜರ್ಸ್ ಆಗ್ತಿದ್ದಾರೆ. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಸ್ಕೋರ್ ಬೋರ್ಡ್ ಪ್ರೆಶರ್ ಅನ್ನೋ ಮೈಂಡ್​ಸೆಟ್​ನಿಂದ ಹೊರಬಿದ್ದು ನಾವು ಆಡಿದ್ದೇ ಆಟ ಅನ್ನೋ ಡಾಮಿನೇಷನ್ ಮಾಡ್ತಿರುವಂಥದ್ದು. ಒಟ್ನಲ್ಲಿ 18 ವರ್ಷಗಳ ಕಪ್ ಗೆದ್ದ ಬೆಂಗಳೂರು ಈಗ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಹತ್ತಿರದಲ್ಲೇ ಇದೆ. ಚಾಂಪಿಯನ್ ಪಟ್ಟವನ್ನ ಮತ್ತೆ ತನ್ನಲ್ಲೇ ಇಟ್ಟುಕೊಳ್ಳಲು ಇನ್ನೊಂದೇ ಒಂದು ಹೆಜ್ಜೆಯಷ್ಟೇ ದೂರದಲ್ಲಿದೆ. ಬೆಂಗಳೂರು ತಂಡ ಈಗ ಫ್ಲವರ್ ಅಲ್ಲ ಫೈಯರ್ ಅನ್ನೋದು ಎದುರಾಳಿ ತಂಡಗಳಿಗೆ ಮನದಟ್ಟಾಗಿದೆ.

Shantha Kumari

Leave a Reply

Your email address will not be published. Required fields are marked *