ಗುಜರಾತ್ ವಿರುದ್ಧ ರಜತ್ ರೌದ್ರಾವತಾರ – ಚಾಂಪಿಯನ್ ಆಗಲು ಇನ್ನೊಂದೇ ಹೆಜ್ಜೆ ಬಾಕಿ..!

ಗುಜರಾತ್ ವಿರುದ್ಧ ರಜತ್ ರೌದ್ರಾವತಾರ – ಚಾಂಪಿಯನ್ ಆಗಲು ಇನ್ನೊಂದೇ ಹೆಜ್ಜೆ ಬಾಕಿ..!

ಆರ್‌ಸಿಬಿ ಫ್ಯಾನ್ಸ್ ಮಂಗಳವಾರ ರಾತ್ರಿಯಿಂದ ಕೂತಲ್ಲಿ ಕೂತಿರಲ್ಲ.. ನಿಂತಲ್ಲಿ ನಿಂತಿರಲ್ಲ.. ಯಾಕೆಂದರೆ ಆರ್‌ಸಿಬಿ ಬ್ಯಾಟಿಂಗ್ ಸಿಕ್ಕಾಪಟ್ಟೆ ಜೋಶ್ ನೀಡಿದೆ. 20 ಓವರ್‌ನಲ್ಲಿ ಆರ್‌ಸಿಬಿ 254 ರನ್ ಗಳಿಸಿತ್ತು. ಫೋರ್. ಸಿಕ್ಸರ್‌ಗಳ ಸುರಿಮಳೆಯಲ್ಲಿ ಫ್ಯಾನ್ಸ್ ತೇಲಿಹೋಗಿದ್ದರು.. ಇದರ ಪರಿಣಾಮ ಗುಜರಾತ್ ತಂಡ ಬೆಂಗಳೂರು ಎದುರು ಸೋಲಬೇಕಾಯಿತು.

ಇದನ್ನೂ ಓದಿ:RCB & SRH 200+ ರನ್ಸ್ ಆರ್ಭಟ – ಹ್ಯಾಟ್ರಿಕ್ ಸೋಲಿಲ್ಲದೇ ನುಗ್ಗಿದವರೆಷ್ಟು?

ಧರ್ಮಶಾಲಾ ಮೈದಾನದಲ್ಲಿ ನಡೆದ ಕ್ವಾಲಿಫೈಯರ್​​ 1 ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ  ಆರ್​ಸಿಬಿ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿತ್ತು. 255 ರನ್​ಗಳ ದಾಖಲೆಯ ಮೊತ್ತವನ್ನ ಬೆನ್ನಟ್ಟಿದ ಗುಜರಾತ್ ಬ್ಯಾಟಿಂಗ್‌ಗೆ ಬರುವಾಗಲೇ ಸೋಲೊಪ್ಪಿಕೊಂಡು ಬಂದಂತೆ ಕಾಣಿಸಿದೆ. ಯಾವುದೇ ಹಂತದಲ್ಲೂ ಸ್ಪರ್ಧೆಯನ್ನೂ ನೀಡಲಾಗದೇ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ಮಾಡಿದರು. ಕೊನೆಗೂ 162 ರನ್​ಗಳಿಗೆ ಆಲೌಟ್ ಆಗುವ ಮೂಲಕ ಗುಜರಾತ್ ತಂಡ ಆರ್‌ಬಿಸಿ ಎದುರು ಹೀನಾಯವಾಗಿ ಸೋಲು ಕಂಡಿತು.

ಕ್ವಾಲಿಫೈಯರ್ 1 ರಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿತ್ತು. ಮೊದಲ ಓವರ್‌ನಲ್ಲಿ 3 ಬೌಂಡರಿ ಸಿಡಿಸಿದ್ದ ವೆಂಕಟೇಶ್ ಅಯ್ಯರ್ 2ನೇ ಓವರ್‌ನಲ್ಲಿ ಔಟಾದರು. ಅಯ್ಯರ್ 7 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ನಂತರ ಬಂದ ಪಡಿಕ್ಕಲ್ 2ನೇ ವಿಕೆಟ್‌ಗೆ ಕೊಹ್ಲಿ ಜೊತೆ ಸೇರಿ ಕೇವಲ 38 ಎಸೆತಗಳಲ್ಲಿ 72 ರನ್ ಸೇರಿಸಿದರು. ಸ್ಫೋಟಕ ಆಟವಾಡುತ್ತಿದ್ದ ಈ ಜೋಡಿ ಒಂದೇ ಓವರ್‌ನಲ್ಲಿ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 25 ಎಸೆತಗಳಲ್ಲಿ 43 ರನ್‌ಗಳಿಸಿ ಬೌಲ್ಡ್ ಆದರೆ, ಪಡಿಕ್ಕಲ್ 19 ಎಸೆತಗಳಲ್ಲಿ 30 ರನ್‌ಗಳಿಸಿ ಕ್ಯಾಚ್ ಔಟಾದರು. ನಾಯಕ ರಜತ್ ಪಾಟೀದಾರ್ ಹಾಗೂ ಕೃನಾಲ್ ಪಾಂಡ್ಯ ಒಂದೆರಡು ಓವರ್ ಎಚ್ಚರಿಕೆಯಿಂದ ಆಡಿ ನಂತರ ಮತ್ತೆ ತಮ್ಮ ಅಬ್ಬರ ಶುರುಮಾಡಿಕೊಂಡರು. ಈ ಇಬ್ಬರು ಅನುಭವಿಗಳು 4ನೇ ವಿಕೆಟ್ ಜೊತೆಯಾಟದಲ್ಲಿ 95 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. 28 ಎಸೆತಗಳಲ್ಲಿ 43 ರನ್‌ಗಳಿಸಿದ್ದ ಕೃನಾಲ್ ಪಾಂಡ್ಯ ರಬಾಡಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಫೋಟಕ ಆಟಗಾರ ಟಿಮ್ ಡೇವಿಡ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಕೊನೆಯ ಓವರ್​ವರೆಗೂ ಆಡಿದ ನಾಯಕ ರಜತ್ ಪಾಟೀದಾರ್ 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್‌ಗಳ ಸಹಿತ ಅಜೇಯ 93 ರನ್‌ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

255 ರನ್‌ಗಳ ದಾಖಲೆಯ ಮೊತ್ತವನ್ನ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಕೆಟ್ಟ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ಮುಗಿಯುವುದರೊಳಗೆ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಬೃಹತ್ ಮೊತ್ತದ ಗುರಿಯ ಒತ್ತಡಕ್ಕೆ ಸಿಲುಕಿದ ಟೈಟನ್ಸ್ ಬ್ಯಾಟರ್​ಗಳು  ಆರ್​ಸಿಬಿ ವೇಗಿಗಳ ದಾಳಿಗೆ ಉತ್ತರಿಸಲಾಗದೇ ಸತತ ವಿಕೆಟ್ ಕಳೆದುಕೊಂಡರು. ಆರಂಭಿಕ ಸಾಯಿ ಸುದರ್ಶನ್ ದುರಾದೃಷ್ಟಕರ ರೀತಿಯಲ್ಲಿ ಹಿಟ್ ವಿಕೆಟ್ ಆಗಿ ನಿರಾಶೆ ಮೂಡಿಸಿದರು. ಡಫಿ ಬೌಲಿಂಗ್‌ನಲ್ಲಿ ಶಾಟ್ ಮಾಡಿದರು. ಆದರೆ ಬ್ಯಾಟ್ ಕೈಜಾರಿ ಸ್ಟಂಪ್ ಮೇಲೆ ಬಿದ್ದು ಔಟ್ ಆದರು. ಶುಭ್​ಮನ್ ಗಿಲ್ ಕೇವಲ 2 ರನ್‌ಗಳಿಸಿ ಔಟಾದರು. ಜೋಸ್ ಬಟ್ಲರ್ 29 ರನ್‌ಗಳಿಸಿ ಔಟಾದರು. 53ಕ್ಕೆ3 ವಿಕೆಟ್ ಕಳೆದುಕೊಂಡ ಗುಜರಾತ್,  88 ರನ್‌ಗಳಾಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜಿಟಿ 100ರ ಗಡಿ ದಾಟೋದು ಅನುಮಾನ ಎನ್ನಲಾಗಿತ್ತು. ಆರ್​ಸಿಬಿ 100-150ರನ್​ಗಳ ಅಂತರದಲ್ಲಿ ಗೆಲ್ಲಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರಾಹುಲ್ ತೆವಾಟಿಯಾ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು. 9ನೇ ವಿಕೆಟ್ ಜೊತೆಯಾಟದಲ್ಲಿ ಮೊಹಮ್ಮದ್ ಸಿರಾಜ್ ಜೊತೆ ಸೇರಿ 68 ರನ್ ಸೇರಿಸಿ ತಂಡದ ಮೊತ್ತವನ್ನ 150 ರನ್ ಗಡಿದಾಟಿಸಿದರು. ತೆವಾಟಿಯಾ 43 ಎಸೆತಗಳಲ್ಲಿ 68 ರನ್‌ಗಳಿಸಿ ಔಟಾದರು.  ಈ ಗೆಲುವಿನ ಮೂಲಕ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯಲು ಕೇವಲ ಒಂದು ಜಯದ ಅಂತರದಲ್ಲಿದೆ.

Sulekha

Leave a Reply

Your email address will not be published. Required fields are marked *