KING Vs PRINCE.. ಗೆಲ್ಲೋದ್ಯಾರು? – ಪವರ್ ಪ್ಲೇ ಸೂಪರ್ ಸ್ಟ್ರೈಕರ್ ಯಾರು?
FINAL ಟಿಕೆಟ್ RCBಗೋ.. GTಗೋ?

KING Vs PRINCE.. ಗೆಲ್ಲೋದ್ಯಾರು? – ಪವರ್ ಪ್ಲೇ ಸೂಪರ್ ಸ್ಟ್ರೈಕರ್ ಯಾರು?FINAL ಟಿಕೆಟ್ RCBಗೋ.. GTಗೋ?

ಬೆಂಗಳೂರು ವರ್ಸಸ್ ಗುಜರಾತ್ ನಡುವಿನ ಕ್ವಾಲಿಫೈಯರ್ 1 ಮ್ಯಾಚ್​​ಗೆ ಧರ್ಮಶಾಲಾ ಅಖಾಡ ಸಿದ್ಧವಾಗಿದೆ. ಗೆದ್ದವ್ರು ಸೀದಾ ಫೈನಲ್.. ಸೋತವ್ರಿಗೆ ಇನ್ನೊಂದು ಚಾನ್ಸ್ ಇದ್ರೂ ಮತ್ತೆ ಫೈನಲ್​ಗೆ ಬರ್ತಾರೆ ಅನ್ನೋ ಗ್ಯಾರಂಟಿ ಇರಲ್ಲ. ಹೀಗಾಗೇ ಫಸ್ಟ್ ಅಟೆಂಪ್ಟ್​ನಲ್ಲೇ ಗೆಲ್ಲೋದು ಇಬ್ಬರ ಟಾರ್ಗೆಟ್ ಕೂಡ ಆಗಿರುತ್ತೆ. ಅದ್ರಲ್ಲೂ ಈ ಮ್ಯಾಚ್ ಕಿಂಗ್ ವರ್ಸಸ್ ಪ್ರಿನ್ಸ್ ಅನ್ನೋ ಥರನೇ ಪ್ರೆಡಿಕ್ಟ್ ಮಾಡಲಾಗ್ತಿದೆ.

ಇದನ್ನೂ ಓದಿ : RCB & SRH 200+ ರನ್ಸ್ ಆರ್ಭಟ – ಹ್ಯಾಟ್ರಿಕ್ ಸೋಲಿಲ್ಲದೇ ನುಗ್ಗಿದವರೆಷ್ಟು?

ಲೀಗ್ ಹಂತದ 70 ಪಂದ್ಯಗಳು ಮುಗಿದು ಈಗ ನಾಕೌಟ್ ಸುತ್ತಿನ ಮೊದಲ ಮ್ಯಾಚ್​ಗೆ ವೇದಿಕೆ ಸಿದ್ಧವಾಗಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಕ್ವಾಲಿಫೈಯರ್ 1 ರಲ್ಲಿ ಮುಖಾಮುಖಿ ಆಗ್ತಾರೆ. ಈ ಮ್ಯಾಚಲ್ಲಿ ಪ್ರತೀ ಆಟಗಾರರ ಮೇಲೆ ರೆಸ್ಪಾನ್ಸಿಬಿಲಿಟಿ ಇದ್ದೇ ಇರುತ್ತೆ. ಅದ್ರಲ್ಲೂ ಈ ಪಂದ್ಯ ಕಿಂಗ್ ವರ್ಸಸ್ ಪ್ರಿನ್ಸ್ ಬ್ಯಾಟಲ್ ಅಂತಾನೇ ಪ್ರೆಡಿಕ್ಟ್ ಮಾಡಲಾಗ್ತಿದೆ. ವಿರಾಟ್ ಕೊಹ್ಲಿ ಆರ್​ಸಿಬಿ ಬ್ಯಾಟಿಂಗ್​ನ ಬಹುದೊಡ್ಡ ಶಕ್ತಿ. ಹಾಗೇ ಜಿಟಿಯ ನಾಯಕ ಗಿಲ್ ಪ್ರೈಮರಿ ರನ್-ಮೇಕರ್..  ಈ ಸೀಸನ್​ನಲ್ಲೂ ತಂಡಗಳ ಟಾಪ್-2 ಪೊಸಿಷನ್ಸ್ ಹಿಂದೆ ಇಬ್ಬರ ಪರ್ಫಾಮೆನ್ಸ್ ಬಿಗ್ ಇಂಪ್ಯಾಕ್ಟ್ ಮಾಡಿರುವಂಥದ್ದು.

ಕೊಹ್ಲಿ Vs ಗಿಲ್ ಸಮರ!

ಕೊಹ್ಲಿ 339 ಎಸೆತ, 164.31ರ ಸ್ಟ್ರೈಕ್ ರೇಟ್​ ​ನಲ್ಲಿ 557 ರನ್ ಗಳಿಕೆ

ಗಿಲ್ 381 ಎಸೆತ, 161.68 ಸ್ಟ್ರೈಕ್ ರೇಟ್‌ ನಲ್ಲಿ 616 ರನ್ ಗಳಿಕೆ

ಕೊಹ್ಲಿ ಮೊದಲ ಆರು ಓವರ್‌ಗಳಲ್ಲಿ 176 ಎಸೆತಗಳಲ್ಲಿ 291 ರನ್ಸ್

ಪವರ್ ಪ್ಲೇನಲ್ಲಿ ಗಿಲ್ 175 ಎಸೆತಗಳಲ್ಲಿ 289 ರನ್ ಗಳಿಸಿದ್ದಾರೆ

ಕೊಹ್ಲಿಯ ಪವರ್‌ಪ್ಲೇ ಡಾಟ್-ಬಾಲ್ ಶೇ. 24.43 & ಗಿಲ್ 36.57

ಕೊಹ್ಲಿ 44 ಬಾಲಲ್ಲಿ 81 ರನ್ಸ್, ಗಿಲ್ 24 ಬಾಲಲ್ಲಿ 32 ರನ್ಸ್

ರಿವೇಂಜ್ ಮ್ಯಾಚಲ್ಲಿ ಕೊಹ್ಲಿ 13 ಬಾಲಲ್ಲಿ 28 ರನ್ಸ್, ಗಿಲ್ 18 ಬಾಲಲ್ಲಿ 43 ರನ್ಸ್

ಇನ್ನು ಈ ಮ್ಯಾಚ್​ನಲ್ಲಿ ಈ ಇಬ್ಬರೂ ಆಟಗಾರರು ಕ್ರೀಸ್ ಕಚ್ಚಿ ನಿಲ್ಲೋದು ಆಯಾ ತಂಡಗಳಿಗೆ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿ ಬ್ಯಾಟಿಂಗ್​ನಲ್ಲಿ ನಿಂತಷ್ಟೂ ಬ್ಯಾಟಿಂಗ್ ಚೆನ್ನಾಗಿರುತ್ತೆ. ಪವರ್ ಪ್ಲೇ ಫೈಟ್ ಗೆದ್ರೂ ಅಂದ್ರೆ ಈಸಿಯಾಗ್ತಾ ಹೋಗುತ್ತೆ. ಬಟ್ ಕಿಂಗ್ ಕೊಹ್ಲಿ ಇರೋ ಥ್ರೆಟ್ ಅಂದ್ರೆ ಕಗಿಸೋ ರಬಾಡ.  16 ಟಿ20 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಯನ್ನು ಐದು ಬಾರಿ ಔಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಈ ವೇಗಿ ಈ ಸೀಸನ್​ನಲ್ಲೂ 24 ವಿಕೆಟ್ ತೆಗೆದು ಬ್ಯಾಟರ್​ಗಳ ಎದೆಯಲ್ಲಿ ನಡುಕ ಹುಟ್ಟಿಸಿರುವತದ್ದು. ಇದೇ ಕಾರಣಕ್ಕೆ ಜಿಟಿ ಕೊಹ್ಲಿಯನ್ನೇ ಟಾರ್ಗೆಟ್ ಮಾಡ್ಕೊಂಡು ಬರುತ್ತೆ. ಕೊಹ್ಲಿಯನ್ನು ಬೇಗನೆ ಔಟ್ ಮಾಡಿದರೆ, ಆರ್‌ಸಿಬಿ ಇನ್ನಿಂಗ್ಸ್‌ನ ಸಂಪೂರ್ಣ ಚಿತ್ರಣವೇ ಬದಲಾಗುತ್ತೆ. ಆದ್ರೆ ಗುಜರಾತ್ ಓಪನಿಂಗ್ ಪೇರ್ ಡಿಫ್ರೆಂಟಾಗೇ ಇದ್ದಾರೆ. ಗಿಲ್ ಮತ್ತು ಸಾಯಿ ಸುದರ್ಶನ್ ಈ ಸೀಸನ್​ನಲ್ಲಿ ಒಟ್ಟಾರೆ ಪವರ್‌ಪ್ಲೇನಲ್ಲಿ ಸರಾಸರಿ 58 ರನ್‌ಗಳನ್ನು ಗಳಿಸುತ್ತಾರೆ. ಇದು ಈ ಸೀಸನ್​ನ ಅತ್ಯುತ್ತಮ ಆರಂಭಿಕ ಜೊತೆಯಾಟ. ಌಂಡ್ 50 ಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿರುವ ಏಕೈಕ ಜೋಡಿಯೂ ಇವ್ರದ್ದೇ. ಗುಜರಾತ್ ತಂಡದ ಬ್ಯಾಟಿಂಗ್ ಬಲವೇ ನಾಲ್ವರು. ಗುಜರಾತ್ ಗಳಿಸಿದ ರನ್‌ಗಳಲ್ಲಿ ಸುಮಾರು ಶೇ. 68 ರಷ್ಟು ಗಿಲ್, ಸುದರ್ಶನ್, ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದ ಬಂದಿವೆ. ರಾಹುಲ್ ತೆವಾಟಿಯಾ ಅಥವಾ ಶಾರುಖ್ ಖಾನ್ 100 ರನ್‌ಗಳನ್ನು ದಾಟಿಲ್ಲ. ಸೋ ಈ ನಾಲ್ಕು ವಿಕೆಟ್ಸ್ ತೆಗೆದ್ರೆ ಜಿಟಿಯನ್ನ ಸುಲಭವಾಗಿ ಕಟ್ಟಿಹಾಕಬಹುದು. ಒಟ್ನಲ್ಲಿ ಕಿಂಗ್ ವರ್ಸಸ್ ಪ್ರಿನ್ಸ್ ಫೈಟ್ ನೋಡೋಕೆ ಎಲ್ರೂ ಕಾಯ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *