RCB & SRH 200+ ರನ್ಸ್ ಆರ್ಭಟ – ಹ್ಯಾಟ್ರಿಕ್ ಸೋಲಿಲ್ಲದೇ ನುಗ್ಗಿದವರೆಷ್ಟು?
GAME CHANGERS ಯಾರೆಲ್ಲಾ?

ಪ್ಲೇಆಫ್ಸ್ ಬ್ಯಾಟಲ್ಗೆ ಸಿದ್ಧವಾಗಿರೋ ನಾಲ್ಕೂ ತಂಡಗಳೂ ಸೂಪರ್ ಸ್ಟ್ರಾಂಗ್ ಟೀಮ್ಗಳೇ. ಹಾಗೇ ಈ ನಾಲ್ಕೂ ತಂಡಗಳಲ್ಲೂ ಸಾಕಷ್ಟು ಕಾಮನ್ ಫ್ಯಾಕ್ಟರ್ಸ್ ಕೂಡ ಇದೆ. ಟಾಪ್-4ನಲ್ಲಿ ಕ್ವಾಲಿಫೈ ಆಗಿ ಕಪ್ ಮೇಲೆ ಕಣ್ಣಿಟ್ಟಿರೋ ನಾಲ್ಕೂ ತಂಡಗಳ ಜರ್ನಿ ಡಿಫ್ರೆಂಟ್ ಆಗಿ ಕಂಡ್ರೂ ಕೆಲ ವಿಚಾರಗಳಲ್ಲಿ ಒಬ್ಬರನ್ನೊಬ್ಬರು ಹೋಲಿಕೆ ಮಾಡೋ ಥರನೇ ಇದ್ದಾರೆ. ಟಾಪ್ ಆರ್ಡರ್ ಬ್ಯಾಟಿಂಗ್, ಟಾಪ್ 3 ಬೌಲರ್ಸ್, 200+ ರನ್ಸ್ ಸ್ಕೋರ್, ಕನ್ಸಿಸ್ಟೆನ್ಸಿ ಹೀಗೆ ಒಬ್ಬರನ್ನೊಬ್ಬರು ಮ್ಯಾಚ್ ಮಾಡ್ಕೊಂಡೇ ಬಂದಿದ್ದಾರೆ. ಅದ್ರಲ್ಲೂ ಈ ಸೀಸನ್ನಲ್ಲಿ ಬ್ಯಾಟರ್ಸ್ ಅಂತೂ ಧೂಳೆಬ್ಬಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಈ ಸೀಸನ್ನಲ್ಲಿ 5 ತಂಡಗಳ ಟಾಪ್ ಆರ್ಡರ್ನ ಮೂವರು ಬ್ಯಾಟರ್ಸ್ 1,300ಕ್ಕೂ ಹೆಚ್ಚು ರನ್ಸ್ ಸ್ಕೋರ್ ಮಾಡಿದ್ದಾರೆ. ಈ ಲಿಸ್ಟ್ನಲ್ಲಿ ಪಂಜಾಬ್ ಇದ್ರೂ ಕೂಡ ಕ್ವಾಲಿಫೈ ಆಗೋಕೆ ಸಾಧ್ಯವಾಗಿಲ್ಲ. ಌಂಡ್ ಈ ಐದು ತಂಡಗಳನ್ನ ಬಿಟ್ಟು ಉಳಿದ ಐದು ತಂಡಗಳ ಟಾಪ್-3 ಬ್ಯಾಟರ್ಸ್ 1,200 ರನ್ಗಳನ್ನ ಕಲೆ ಹಾಕೋಕೂ ಸಾಧ್ಯವಾಗಿಲ್ಲ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯ 07:07 ಮೆಸೇಜ್ ಹಿಂದಿರೋ ಸೀಕ್ರೆಟ್ ಏನು? – CSK ತಂಡ ಸೇರ್ತಾರಾ ಮುಂಬೈ ಕ್ಯಾಪ್ಟನ್?
ಬೆಂಗಳೂರು ಪರ ಬ್ಯಾಟಿಂಗ್ ಧಮಾಕ!
ಆಟಗಾರ ರನ್ಸ್
ವಿರಾಟ್ ಕೊಹ್ಲಿ 557
ದೇವದತ್ ಪಡಿಕ್ಕಲ್ 433
ರಜತ್ ಪಾಟಿದಾರ್ 393
ಒಟ್ಟು ರನ್ಸ್ 1383
ಗುಜರಾತ್ ಪರ ಬ್ಯಾಟಿಂಗ್ ಧಮಾಕ!
ಆಟಗಾರ ರನ್ಸ್
ಸಾಯಿ ಸುದರ್ಶನ್ 638
ಶುಭ್ ಮನ್ ಗಿಲ್ 616
ಜೋಸ್ ಬಟ್ಲರ್ 469
ಒಟ್ಟು ರನ್ಸ್ 1723
ಹೈದರಾಬಾದ್ ಪರ ಬ್ಯಾಟಿಂಗ್ ಧಮಾಕ!
ಆಟಗಾರ ರನ್ಸ್
ಅಭಿಷೇಕ್ ಶರ್ಮಾ 563
ಇಶಾನ್ ಕಿಶನ್ 569
ಹೆನ್ರಿಕ್ ಕ್ಲಾಸೆನ್ 606
ಒಟ್ಟು ರನ್ಸ್ 1738
ರಾಜಸ್ಥಾನ ಪರ ಬ್ಯಾಟಿಂಗ್ ಧಮಾಕ!
ಆಟಗಾರ ರನ್ಸ್
ವೈಭವ್ ಸೂರ್ಯವಂಶಿ 583
ಧ್ರುವ್ ಜುರೇಲ್ 458
ಯಶಸ್ವಿ ಜೈಸ್ವಾಲ್ 397
ಒಟ್ಟು ರನ್ಸ್ 1438
ಇದಿಷ್ಟು ಬ್ಯಾಟಿಂಗ್ ನಲ್ಲಿ ಅಬ್ಬರಿಸಿರೋ ಆಟಗಾರರು. ಇನ್ನು ಬೌಲಿಂಗ್ ಅಂತಾ ಬಂದಾಗ್ಲೂ ಕೂಡ ಈ ನಾಲ್ಕೂ ತಂಡಗಳಲ್ಲೂ ಕಾಮನ್ ಫ್ಯಾಕ್ಟರ್ ಇದೆ. ಒಂದು ತಂಡದ ಪರ ಮೂವರು ಬೌಲರ್ಸ್ 45 ಅಥವಾ ಅದಕ್ಕಿಂತ ಜಾಸ್ತಿ ವಿಕೆಟ್ಸ್ ತಗೊಂಡಿದ್ದಾರೆ. ಈ ಸೀಶನ್ನಲ್ಲಿ ಒಟ್ಟು 5 ತಂಡಗಳಲ್ಲಿ ಮೂವರು ಬೌಲರ್ಸ್ 45ಪ್ಲಸ್ ವಿಕೆಟ್ಸ್ ತಗೊಂಡಿದ್ದಾರೆ. ಅದ್ರಲ್ಲೂ ಚೆನ್ನೈನ ಟಾಪ್-3 ಬೌಲರ್ಸ್ 48 ವಿಕೆಟ್ಸ್ ಪಡೆದಿದ್ರೂ ಚೆನ್ನೈ ಕ್ವಾಲಿಫೈ ಆಗಿಲ್ಲ. ಉಳಿದ ನಾಲ್ಕೂ ತಂಡಗಳೂ ಸ್ಥಾನ ಪಡೆದಿರುವಂಥದ್ದು. ಆರ್ಸಿಬಿ ಪರ ಭುವಿ, ರಸಿಕ್, ಹಾಗೇ ಹೇಜಲ್ವುಡ್ ಮೂರೂ ಜನ ಸೇರಿ 50 ವಿಕೆಟ್ಸ್ ಬೇಟೆಯಾಡಿದ್ದಾರೆ. ಗುಜರಾತ್ ಪರ ಕಗಿಸೋ ರಬಾಡ, ರಶೀದ್ ಖಾನ್, ಮೊಹಮ್ಮದ್ ಸಿರಾಜ್ ಮೂರೂ ಜನ 60 ವಿಕೆಟ್ಸ್ ಬೇಟೆಯಾಡಿದ್ದಾರೆ. ಹಾಗೇ ಹೈದ್ರಾಬಾದ್ ಪರ ಇಶಾನ್ ಮಲಿಂಗಾ, ಸಾಕಿಬ್ ಹುಸೇನ್ ಮತ್ತು ಪ್ರಫುಲ್ ಹಿಂಗೆ ಮೂವರೂ 45 ವಿಕೆಟ್ಸ್ ತೆಗೆದಿದ್ದಾರೆ. ಇನ್ನು ರಾಜಸ್ಥಾನ ಪರ ಜೋಫ್ರಾ ಆರ್ಚರ್, ಬ್ರಿಜೇಶ್ ಶರ್ಮಾ ಹಾಗೂ ನಾಂಡ್ರೆ ಬರ್ಗರ್ 45 ವಿಕೆಟ್ಸ್ ತೆಗೆದಿದ್ದಾರೆ. ಉಳಿದಂತೆ ದೆಹಲಿ, ಲಕ್ನೋ, ಮುಂಬೈ ಮತ್ತು ಪಂಜಾಬ್ ತಂಡಗಳ ಅತ್ಯುತ್ತಮ ಮೂರು ಬೌಲರ್‌ಗಳು ಒಟ್ಟಾಗಿ 40 ವಿಕೆಟ್‌ಗಳನ್ನು ಸಹ ಪಡೆದಿಲ್ಲ. ಕೋಲ್ಕತ್ತಾದ ಅತ್ಯುತ್ತಮ ಮೂವರು ಬೌಲರ್‌ಗಳು 44 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಬೌಲಿಂಗ್ ಕಥೆಯಾದ್ರೆ 200+ ರನ್ಸ್ ಬ್ಯಾಟಿಂಗ್ ನಲ್ಲೂ ಟಾಪ್-4 ಟೀಮ್ಸ್ ಸದ್ದು ಮಾಡಿವೆ.
ಬ್ಯಾಟಿಂಗ್ ನಲ್ಲಿ 200+ ರನ್ಸ್ ಅಬ್ಬರ!
ತಂಡ 200+ ಸ್ಕೋರ್ ಗೆಲುವು ಸೋಲು
ಬೆಂಗಳೂರು 8 5 3
ಗುಜರಾತ್ 6 3 3
ಹೈದರಾಬಾದ್ 9 7 2
ರಾಜಸ್ಥಾನ 7 5 2
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಕನಿಷ್ಠ 6 ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ರನ್ಸ್ ಗಳಿಸಿದ ತಂಡಗಳಲ್ಲಿ 5 ತಂಡಗಳಿವೆ. ಇಂಟ್ರೆಸ್ಟಿಂಗ್ ಅಂದ್ರೆ 9 ಬಾರಿ 200+ ಅಂಕಗಳನ್ನು ಗಳಿಸಿದರೂ ಟಾಪ್ -4 ರಲ್ಲಿ ಸ್ಥಾನ ಪಡೆಯಲು ವಿಫಲವಾದ ಏಕೈಕ ತಂಡ ಪಂಜಾಬ್. ಪ್ಲೇಆಫ್ ತಲುಪಿದ ತಂಡಗಳಲ್ಲಿ, ಹೈದರಾಬಾದ್ 9 ಬಾರಿ 200+, ಬೆಂಗಳೂರು 8 ಬಾರಿ, ರಾಜಸ್ಥಾನ 7 ಬಾರಿ ಮತ್ತು ಗುಜರಾತ್ 6 ಬಾರಿ ಸ್ಕೋರ್ ಮಾಡಿದೆ. ಉಳಿದ ಐದು ತಂಡಗಳು ಐದು ಬಾರಿ ಅಥವಾ ಅದಕ್ಕಿಂತ ಕಡಿಮೆ 200+ ಸ್ಕೋರ್ ಗಳಿಸಿವೆ. ಮತ್ತೊಂದೆಡೆ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೋಡೋದಾದ್ರೆ ಪ್ಲೇಆಫ್ ಗೆ ಪ್ರವೇಶಿಸಿದ ನಾಲ್ಕು ತಂಡಗಳಲ್ಲಿ, ಬೆಂಗಳೂರು, ಗುಜರಾತ್ ಮತ್ತು ಹೈದರಾಬಾದ್ ತಂಡಗಳು ಸೀಸನ್ ಉದ್ದಕ್ಕೂ ಸತತ 2 ಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತಿಲ್ಲ. ರಾಜಸ್ಥಾನ ಮಾತ್ರ ಸತತ 3 ಪಂದ್ಯಗಳನ್ನು ಒಮ್ಮೆ ಸೋತಿದೆ. ಗುಜರಾತ್ ಮತ್ತು ಹೈದರಾಬಾದ್ ತಂಡಗಳು ಅತಿ ಹೆಚ್ಚು ಗೆಲುವಿನ ಸರಣಿಯನ್ನು ಸೃಷ್ಟಿಸಿವೆ. ಈ ತಂಡಗಳು ತಲಾ 5 ಪಂದ್ಯಗಳನ್ನು ಕಂಟಿನ್ಯೂಯಸ್ ಆಗಿ ಗೆದ್ದಿರುವಂಥದ್ದು. ಹೀಗೆ ಪ್ಲೇಆಫ್ಸ್ಗೆ ಕ್ವಾಲಿಫೈ ಆಗಿರೋ ನಾಲ್ಕೂ ತಂಡಗಳ ಜರ್ನಿಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ಆದ್ರೆ ಇನ್ಮುಂದಿನ ಪಂದ್ಯಗಳಲ್ಲಿ ಡಾಮಿನೇಟ್ ಮಾಡಿದವ್ರು ಫೈನಲ್ಗೆ ಹೋಗ್ತಾರೆ. ಅಲ್ಲೂ ಅಬ್ಬರಿಸಿದವ್ರು ಕಪ್ ಗೆದ್ದು ಬೀಗ್ತಾರೆ.

ನೋಡಿರಿ

