ಚಾಮುಂಡಿ ಮುಂದೆ ಕ್ಷಮೆ ಕೇಳಿದ ರಣವೀರ್ ಸಿಂಗ್ – ದೈವದ ಅವಹೇಳನಕ್ಕೆ ಬಾಲಿವುಡ್‌ ನಟನ ಪಶ್ಚಾತ್ತಾಪ

ಚಾಮುಂಡಿ ಮುಂದೆ ಕ್ಷಮೆ ಕೇಳಿದ ರಣವೀರ್ ಸಿಂಗ್ – ದೈವದ ಅವಹೇಳನಕ್ಕೆ ಬಾಲಿವುಡ್‌ ನಟನ ಪಶ್ಚಾತ್ತಾಪ

ಬಾಲಿವುಡ್ ನಟ ರಣವೀರ್ ಸಿಂಗ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ಶಕ್ತಿ ದೇವತೆಯ ದರ್ಶನ ಮಾಡಿದ್ದಾರೆ. ರಾಜ್ಯದ ಅಧಿದೇವತೆ ಚಾಮುಂಡಿಯ ಮುಂದೆ ಮಂಡಿಯೂರಿ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯಾನ್ – ಚಿತ್ರರಂಗದಿಂದ ನಿಷೇಧ ಹೇರಿದ್ದು ಯಾಕೆ?

ಒಂದೆಡೆ ಚಿತ್ರರಂಗದಿಂದ ಬ್ಯಾನ್ ಆಗಿರುವ ಶಾಕ್ ಮತ್ತೊಂದೆಡೆ ದೈವ ನಿಂದನೆಯಿಂದ ವಿವಾದ.. ಕೊನೆಗೂ ಬಾಲಿವುಡ್ ನಟ ರಣವೀರ್ ಸಿಂಗ್ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. ನಾಡಿನ ಶಕ್ತಿದೇವತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಡಾನ್ 3 ಸಿನಿಮಾದಿಂದ ದಿಢೀರ್ ಹೊರನಡೆದ ರಣವೀರ್ ಸಿಂಗ್ ಒಂದು ವಾರದಿಂದ ಚರ್ಚೆಯಲ್ಲಿದ್ದರು. ಸಿನಿಮಾ ನೌಕರರ ಒಕ್ಕೂಟ ನಟನ ವಿರುದ್ಧ ಗಂಭೀರ ಆದೇಶ ಹೊರಡಿಸಿತ್ತು. ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ಪರೋಕ್ಷವಾಗಿ ಬ್ಯಾನ್  ಮಾಡಲಾಗಿದೆ. ಸೋಮವಾರ ಆದೇಶ ಹೊರಡಿಸಿದ್ದು, ಮಂಗಳವಾರವೇ ರಣವೀರ್ ಸಿಂಗ್ ಅವರು ಚಾಮುಂಡಿ ದೇವಿಯ ದರ್ಶನ ಮಾಡಿದ್ದಾರೆ. ಇದು ಕೇವಲ ಪ್ರಾರ್ಥನೆಯಲ್ಲ.. ತಾಯಿ ಚಾಮುಂಡೇಶ್ವರಿ ಮುಂದೆ ರಣವೀರ್ ಸಿಂಗ್ ಕ್ಷಮೆ ಕೇಳಿರುವುದು ಎಂದು ಹೇಳಲಾಗಿದೆ.

ಕಾಂತಾರ ಸಿನಿಮಾದ ಕುರಿತು ಬಾಲಿವುಡ್ ನಟ ರಣವೀರ ಸಿನಿಮಾ ಇವೆಂಟ್ ಒಂದರಲ್ಲಿ ಅವಹೇಳನ ಮಾಡಿ ದೆವ್ವಕ್ಕೆ ಹೋಲಿಸಿದರು. ಈ ವಿಚಾರವಾಗಿ ಹಿರಿಯ ವಕೀಲ ಪ್ರಶಾಂತ್ ತೀವ್ರ ಹೋರಾಟ ನಡೆಸಿ ಕೋರ್ಟ್ ಮೊರೆ ಹೋಗಿ ರಣ್‌ವೀರ್ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದರು. ನಂತರ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ತಾಯಿ ಚಾಮುಂಡಿ ಎದುರು ಕ್ಷಮೆ ಕೇಳಿದ್ರೆ ಕೇಸಿನಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಅದರಂತೆ ರಣವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಕ್ಷಮೆ ಕೇಳಿದ್ದಾರೆ.

Sulekha

Leave a Reply

Your email address will not be published. Required fields are marked *