ಸಾಲ್ಟ್ ಬಂದ್ರೆ ವೆಂಕಿಗಿಲ್ವಾ SLOT? – ಜಿತೇಶ್ ಕೀಪಿಂಗ್ ಮಾಡಿದ್ರಷ್ಟೇ ಸಾಕಾ?
RCB ಫೈನಲ್ ಗೆ ಹೇಗಿದೆ ಪ್ಲೇಯಿಂಗ್ 11?

ಟೇಬಲ್ ಟಾಪರ್ ಆಗಿ ಲೀಗ್ ಹಂತವನ್ನ ಫಿನಿಶ್ ಮಾಡಿರೋ ಆರ್ಸಿಬಿ ಈಗ ಕ್ವಾಲಿಫೈಯರ್ 1 ಸುತ್ತಿಗೆ ರೆಡಿಯಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಮಂಗಳವಾರ ಧರ್ಮಶಾಲಾದಲ್ಲಿ ಮ್ಯಾಚ್ ಫಿಕ್ಸ್ ಆಗಿದೆ. ಈ ಪಂದ್ಯ ಗೆದ್ರೆ ಸೀದಾ ಫೈನಲ್. ಬೆಂಗಳೂರು ವರ್ಸಸ್ ಗುಜರಾತ್ ಬ್ಯಾಟಲ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಎರಡೂ ತಂಡಗಳು ಕೂಡ ಈ ಸೀಸನ್ನಲ್ಲಿ ಸ್ಟ್ರಾಂಗೆಸ್ಟ್ ಟೀಮ್ಗಳೇ ಆಗಿದ್ದು 2 ಸಲ ಮುಖಾಮುಖಿಯಾಗಿದ್ರು. ಌಂಡ್ ಇಬ್ಬರೂ ತಲಾ ಒಂದೊಂದು ಪಂದ್ಯವನ್ನ ಗೆದ್ದಿದ್ದಾರೆ. ಹಾಗೇ ಇಬ್ಬರೂ ಐಪಿಎಲ್ನಲ್ಲಿ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು ಕ್ವಾಲಿಫೈಯರ್ 1 ಗೆದ್ದು ಫೈನಲ್ಗೆ ನುಗ್ಗೋಕೆ ಕಾಯ್ತಿದ್ದಾರೆ. ಸೋ ಈ ಫೈಟ್ ಗೆಲ್ಲೋಕೆ ಆರ್ಸಿಬಿ ಬಲಿಷ್ಠ ಪ್ಲೇಯಿಂಗ್ 11ನೇ ಕಣಕ್ಕಿಳಿಸಬೇಕು. ಈ ಪಂದ್ಯಕ್ಕೆ ಒಂದು ಗುಡ್ ನ್ಯೂಸ್ ಏನಂದ್ರೆ ಫಿಲ್ ಸಾಲ್ಟ್ ಕಂ ಬ್ಯಾಕ್. ಬಟ್ ಕನ್ಫ್ಯೂಷನ್ ಏನಂದ್ರೆ ವೆಂಕಟೇಶ್ ಅಯ್ಯರ್ ಸ್ಲಾಟ್.
ಇದನ್ನೂ ಓದಿ : RRಗೆ ಲಕ್.. ಟಾಪ್-4 ಫೈನಲ್ – ಅದೃಷ್ಟದ ಆಟದಲ್ಲಿ ಸೋತ PBKS
ಕೊಹ್ಲಿ ಜೊತೆ ಸಾಲ್ಟ್ ಓಪನರ್.. ನಂಬರ್ 5ನಲ್ಲಿ ಆಡ್ತಾರಾ ವೆಂಕಿ?
ಆರ್ಸಿಬಿಯ ಜರ್ನಿ ಚೆನ್ನಾಗಿದ್ರೂ ಸೆಕೆಂಡ್ ಆಫ್ಸ್ನಲ್ಲಿ ಕೈಕೊಟ್ಟಿರೋದು ಓಪನಿಂಗ್ ಪೇರ್. ಒಂದ್ಕಡೆ ವಿರಾಟ್ ಕೊಹ್ಲಿ ಚೆನ್ನಾಗಿ ಆಡಿದ್ರೂ ಜೇಕಬ್ ಬೆಥೆಲ್ ಕಡೆಯಿಂದ ಅವ್ರಿಗೆ ಸಪೋರ್ಟ್ ಸಿಕ್ತಾ ಇರ್ಲಿಲ್ಲ. ಸಾಲ್ಟ್ ಜಾಗದಲ್ಲಿ ಆಡ್ತಿದ್ದ ಬೆಥೆಲ್ ಅಕ್ಷರಶಃ ಭಾರವಾಗಿದ್ರು. ಹೈದ್ರಾಬಾದ್ ವಿರುದ್ಧದ ಕೊನೇ ಮ್ಯಾಚ್ಗೆ ರೆಸ್ಟ್ ಕೊಟ್ಟು ವೆಂಕಟೇಶ್ ಅಯ್ಯರ್ನ ಆಡಿಸಿದಾಗ ವೆಂಕಿ ಚೆನ್ನಾಗಿ ಪರ್ಫಾಮ್ ಮಾಡಿದ್ರು. ಬಟ್ ಈಗ ಸಾಲ್ಟ್ ವಾಪಸ್ ಆಗಿರೋದ್ರಿಂದ ಗುಜರಾತ್ ವಿರುದ್ಧದ ಮ್ಯಾಚಲ್ಲಿ ಸಾಲ್ಟ್ ಓಪನರ್ ಆಗಿ ಕಣಕ್ಕಿಳಿತಾರೆ. ಹಾಗಾದ್ರೆ ವೆಂಕಿಗೆ ಸ್ಲಾಟ್ ಇಲ್ವಾ ಅಂದ್ರೆ ಸ್ಲಾಟ್ ಮಾಡಿಕೊಡ್ಬೇಕು. ನಂಬರ್ 5ನಲ್ಲಿ ಬ್ಯಾಟಿಂಗ್ಗೆ ಬರೋಕೆ ಬೆಸ್ಟ್ ಆಪ್ಶನ್ ವೆಂಕಿ. ನಂಬರ್ 3 ಪಡಿಕ್ಕಲ್, ನಂಬರ್ 4 ರಜತ್ವರೆಗೂ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ. ಆದ್ರೆ ನಂಬರ್ 5ನಲ್ಲಿ ಯಾರು ಅನ್ನೋದಕ್ಕೆ ಕ್ಲಾರಿಟಿ ಸಿಕ್ಕಿಲ್ಲ. ಜಿತೇಶ್, ಡೇವಿಡ್, ಕೃನಾಲ್, ವೆಂಕಿ ಹೀಗೆ ಸಾಕಷ್ಟು ಸಲ 5ನೇ ಸ್ಲಾಟಲ್ಲಿ ಪ್ಲೇಯರ್ ಚೇಂಜ್ ಮಾಡಿದ್ದಾರೆ. ಜಿತೇಶ್ ಅಂತೂ ವಿಕೆಟ್ ಕೀಪಿಂಗ್ ಅಷ್ಟೇ ನನ್ ಕೆಲ್ಸ ಅಂಥಾ ಮೆಂಟಲಿ ಫಿಕ್ಸ್ ಆಗಿದ್ದಾರೆ ಅನ್ಸುತ್ತೆ. ಹೀಗಾಗಿಈ ಸ್ಲಾಟ್ಗೆ ದಿ ಬೆಸ್ಟ್ ಆಪ್ಶನ್ ಅಂದ್ರೆ ವೆಂಕಟೇಶ್ ಅಯ್ಯರ್. ಡೆತ್ ಓವರ್ಸ್ ಅಂತಾ ಬಂದ್ರೆ ಸ್ಪೋಟಕ ಇನ್ನಿಂಗ್ಸ್ ಆಡ್ತಾರೆ ಇಲ್ಲ ಟಾಪ್ ಆರ್ಡರ್ ವಿಕೆಟ್ಸ್ ಬೇಗ ಬಿದ್ದಿದೆ ಅಂದ್ರೆ ವೇಯ್ಟಿಂಗ್ ಗೇಮ್ ಆಡ್ತಾರೆ. ಸೋ ಅವ್ರ ಮೇಲೆ ಡಿಪೆಂಡ್ ಆಗ್ಗೋದು. ಹೀಗಾಗಿ ವೆಂಕಿನೂ ಪ್ಲೇಯಿಂಗ್ 11ನಲ್ಲಿ ಇರ್ಬೇಕಾಗುತ್ತೆ.
ಹೇಗಿರುತ್ತೆ ಪ್ಲೇಯಿಂಗ್ 11?
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ವೆಂಕಟೇಶ್ ಅಯ್ಯರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಜೋಶ್ ಹೇಜಲ್ ವುಡ್
ರಸಿಕ್ ಸಲಾಂ ದಾರ್
ಜೇಕಬ್ ಡಫಿ
ಇದು ಬೆಸ್ಟ್ ಕಾಂಬಿನೇಷನ್ ಅನ್ಸುತ್ತೆ. ಹೌದು ರೊಮ್ಯಾರಿಯೋ ಶೆಫರ್ಡ್ನ ಚೂಸ್ ಮಾಡಿಲ್ಲ. ಬಟ್ ಅವ್ರ ಕಡೆಯಿಂದ ಈ ಸೀಸನ್ ಚೆನ್ನಾಗಿಲ್ಲ ಅಂದಾಗ ರಿಸ್ಕ್ ತಗೊಳ್ಳೋಕೆ ಆಗಲ್ಲ. 6ನೇ ಬೌಲರ್ ಬೇಕು ಅನ್ಸಿದ್ರೆ ವೆಂಕಿ ಕೈಯಲ್ಲಿ ಬಾಲ್ ಹಾಕಿಸ್ಬೋದು. ಅವ್ರು ಕೂಡ ಆಲ್ರೌಂಡರ್. ಸುಯಾಶ್ ಶರ್ಮಾರನ್ನು ಬೇಕಿದ್ರೆ ಕೂರಿಸಬಹುದು. ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಆರ್ಸಿಬಿ ಪರ ಐವರು ಬೌಲರ್ಗಳೇ ಓವರ್ಗಳನ್ನ ಫಿನಿಶ್ ಮಾಡಿದ್ರು. ಆಗ ಬ್ಯಾಟಿಂಗ್ ಡೆಪ್ತ್ ಕೂಡ ಚೆನ್ನಾಗಿರುತ್ತೆ. ಬೌಲಿಂಗ್ ಕೂಡ ಸ್ಟ್ರಾಂಗ್ ಆಗಿ ಕಾಣುತ್ತೆ. ಇದು ಆರ್ಸಿಬಿ ಪ್ಲೇಯಿಂಗ್ 11 ಆದ್ರೆ ಗುಜರಾತ್ ತಂಡದಲ್ಲಿ ಬಿಗ್ ಚೇಂಜಸ್ ಅಂತಾ ಏನು ಇರಲ್ಲ ಅನ್ಸುತ್ತೆ. ಌಸ್ ಯೂಶುಯಲ್ ಬೆಸ್ಟ್ ಓಪನಿಂಗ್ ಪೇರ್ ಆಗಿರೋ ಸಾಯಿ ಸುದರ್ಶನ್ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಓಪನ್ ಮಾಡ್ತಾರೆ. ಆಮೇಲೆ ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಕ್ಯಾರಿ ಮಾಡ್ತಾರೆ. ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್ ಜಾಯ್ನ್ ಆಗ್ತಾರೆ. ಅಲ್ಲಿಗೆ ಗುಜರಾತ್ ಕೂಡ ಸ್ಟ್ರಾಂಗ್ ಆಗಿ ಕಾಣ್ತಿದೆ. ಬಟ್ ಗುಜರಾತ್ನ ಮೇನ್ ಸ್ರೆಂಥ್ ಮತ್ತು ವೀಕ್ನೆಸ್ ಅವ್ರ ಟಾಪ್ ಆರ್ಡರ್ ಬ್ಯಾಟಿಂಗ್. ಇನ್ನು ಧರ್ಮಶಾಲಾ ಮೈದಾನದ ಬಗ್ಗೆ ಹೇಳೋದಾದ್ರೆ ಈ ಸೀಸನ್ನಲ್ಲಿ ಒಟ್ಟು ಮೂರು ಪಂದ್ಯಗಳನ್ನ ಇಲ್ಲಿ ಆಡಿಸಲಾಗಿದೆ. ಈ ಪೈಕಿ ಎರಡು ಬಾರಿ ಚೇಸಿಂಗ್ ಮಾಡಿದ ತಂಡಗಳೇ ವಿನ್ ಆಗಿವೆ. ಪಿಚ್ನಲ್ಲಿ ಬೌನ್ಸ್ ಜಾಸ್ತಿ ಇರೋದ್ರಿಂದ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಆಗಿದೆ. ಫಸ್ಟ್ ಇನ್ನಿಂಗ್ಸ್ನಲ್ಲಿ ಆವರೇಜ್ 211 ರನ್ಗಳನ್ನ ನಿರೀಕ್ಷೆ ಮಾಡ್ಲಾಗಿದೆ. ಹೀಗಾಗಿ ಕ್ವಾಲಿಫೈಯರ್ 1 ಗೇಮ್ ಕೂಡ ಹೈಸ್ಕೋರ್ ಮ್ಯಾಚ್ ಆಗ್ಬೋದು.

ನೋಡಿರಿ

