ಬೇಸಿಗೆಗಾಲದಲ್ಲಿ ಐಸ್ ಆಪಲ್ ತಿನ್ನೋದು ಬೆಸ್ಟ್! – ಈ ಸೂಪರ್ ಫುಡ್ನಿಂದ ಎಷ್ಟೊಂದು ಆರೋಗ್ಯ ಲಾಭ!

ಈ ಬಾರಿ ತಾಪಮಾನ ವಿಪರೀತ ಹೆಚ್ಚಾಗಿದೆ. ಬಿಸಿಲಿನ ಬೇಗೆಗೆ ದೇಹ ಆಯಾಸದಿಂದ ಬಳಲುತ್ತಿದೆ. ಎಷ್ಟೇ ನೀರು ಕುಡಿದರೂ ಬಾಯಾರಿಕೆ, ದಾಹ ತೀರುತ್ತಿಲ್ಲ. ಹವಾಮಾನ ಬದಲಾವಣೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಬೇಕಾದರೆ ನಾವು ಕೆಲವೊಂದು ಮುನ್ನೆಚ್ಚರಿಕಾ ತಯಾರಿಗಳನ್ನು ಮಾಡಿಕೊಳ್ಳಲೇಬೇಕು. ಹೀಗಾಗಿ ಬೇಸಿಗೆಗಾಲದಲ್ಲಿ ಅನೇಕರ ಹಣ್ಣುಗಳನ್ನು ಸೇವಿಸುತ್ತಾರೆ. ಅದ್ರಲ್ಲಿ ಐಸ್ ಆಪಲ್ ಕೂಡ ಒಂದು.
ಇದನ್ನೂ ಓದಿ: ಇನ್ಮುಂದೆ ರಸ್ತೆಗಳಲ್ಲಿ ನಮಾಜ್ ಮಾಡುವಂತಿಲ್ಲ, ಪ್ರಾಣಿ ಬಲಿ ಕೊಡುವಂತಿಲ್ಲ! – ಬಕ್ರೀದ್ ಹಬ್ಬಕ್ಕೆ ಹೊಸ ರೂಲ್ಸ್!
ಬೇಸಿಗೆಗಾಲದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುವುದು ಸಹಜ. ಆದ್ರೆ ಇದನ್ನ ನಿರ್ಲಕ್ಷ್ಯ ಮಾಡುವಂತಿಲ್ಲ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಬೇಸಿಗೆ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿಸಲು ನೈಸರ್ಗಿಕವಾಗಿ ಹಲವಾರು ತಿನಿಸುಗಳು ನಮಗಾಗಿ ಇರುತ್ತವೆ. ಎಳನೀರು, ನಿಂಬೆ ಜ್ಯೂಸ್, ಕಲ್ಲಂಗಡಿ ಜ್ಯೂಸ್ ಕರ್ಬುಜಾ ಜ್ಯೂಸ್, ಹಲಸಿನ ಜ್ಯೂಸ್ ಸೇರಿ ಇತರೆ ಜ್ಯೂಸ್ಗಳು ದೇಹವನ್ನು ತಂಪಾಗಿಲು ಸಹಾಯ ಮಾಡುತ್ತವೆ. ಆದ್ರೆ ಐಸ್ ಆಪಲ್ ಸೇವಿಸಿದ್ರೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
ತಾಳೆಕಾಯಿ ಹೆಚ್ಚಿನ ನಾರಿನ ಅಂಶವಿರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಸಮಸ್ಯೆಗಳು ಮತ್ತು ಅಲರ್ಜಿಗಳನ್ನು ಕಡಿಮೆ ಮಾಡಲು ಸಹ ಈ ಐಸ್ ಆಪಲ್ ಉಪಯುಕ್ತವಾಗಿವೆ. ತಾಳೆಕಾಯಿಯ ತಿರುಳನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ. ಚರ್ಮದ ಶುಷ್ಕತೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಐಸ್ ಆಪಲ್ ನೀರಿನ ಅಂಶವನ್ನು ಅಧಿಕವಾಗಿ ಹೊಂದಿರುತ್ತದೆ. ಹೀಗಾಗಿಯೇ ಬೇಸಿಗೆಯಲ್ಲಿ ಈ ಐಸ್ ಆಪಲ್ ತಿನ್ನುವುದರಿಂದ ದೇಹವನ್ನು ನಿರ್ಜಲೀಕರಣದಿಂದ ರಕ್ಷಣೆ ಮಾಡುತ್ತದೆ. ಬಿಸಿಲಿನಲ್ಲಿ ದೀರ್ಘಕಾಲ ಕಳೆದ ನಂತರ ಅವುಗಳನ್ನು ತಿನ್ನುವುದರಿಂದ ದೇಹವು ತಕ್ಷಣವೇ ಉಲ್ಲಾಸಗೊಳ್ಳುತ್ತದೆ. ಐಸ್ ಆಪಲ್ ತಿನ್ನುವುದರಿಂದ ನಮ್ಮ ದೇಹದಲ್ಲಿನ ಶಾಖ ಕಡಿಮೆ ಆಗುತ್ತದೆ. ದೇಹವನ್ನು ತಂಪಾಗಿ ಇಡುತ್ತದೆ. ಇದು ಅಲ್ಲದೇ ಬಿಸಿಲಿನ ಬೇಗೆಯ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ.
ಇವುಗಳಲ್ಲಿ ಪೊಟ್ಯಾಷಿಯಮ್ ಸಮೃದ್ಧವಾಗಿರುವುದರಿಂದ ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತವೆ. ರಕ್ತದೊತ್ತಡ ಹೃದಯದ ಆರೋಗ್ಯ ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುವಲ್ಲಿ ಸಹ ಉಪಯುಕ್ತವಾಗಿವೆ ಎಂದು ತಜ್ಞರು ಹೇಳುತ್ತಾರೆ. ಅವು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸ್ವಲ್ಪಮಟ್ಟಿಗೆ ಸಹಾಯ ಮಾಡುತ್ತವೆ. ಎಳೆಯ ಐಸ್ ಆಪಲ್ಗಳು ಕೂಡ ಅಧಿಕ ನೀರನ್ನು ಹೊಂದಿರುತ್ತವೆ. ತೆಂಗಿನ ನೀರಿನಂತೆಯೇ ಇರುತ್ತವೆ. ಅವು ದೇಹಕ್ಕೆ ತುಂಬಾ ಉಪಯೋಗವಾಗಿರುತ್ತವೆ.
ತಾಳೆಕಾಯಿ ಹೆಚ್ಚು ಕಾಲ ಉಳಿಯುವುದಿಲ್ಲ. ಅದಕ್ಕಾಗಿಯೇ ನೀವು ಅವುಗಳನ್ನು ಖರೀದಿಸಿದ ತಕ್ಷಣ ಅವುಗಳನ್ನು ತಾಜಾವಾಗಿ ಇರುವಾಗಲೇ ತಿನ್ನುವುದು ಉತ್ತಮ. ನೀವು ಅವುಗಳನ್ನು ಫ್ರಿಜ್ನಲ್ಲಿ ಇಟ್ಟರೂ ಸಹ, ಅವುಗಳನ್ನು ಎರಡು ಮೂರು ದಿನಗಳಲ್ಲಿ ಸೇವಿಸಬೇಕು. ಐಸ್ ಆಪಲ್ ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವುದಲ್ಲದೆ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ನೈಸರ್ಗಿಕ ವರದಾನವಾಗಿದೆ. ಇವುಗಳಲ್ಲಿ ಪೌಷ್ಟಿಕ ಸತ್ವಗಳು ಎನ್ನಲಾದ ಸೋಡಿಯಂ, ಪೋಟ್ಯಾಷಿಯಂ ಅಂಶಗಳು ಅಧಿಕ ಇವೆ. ಕೆಲವರಿಗೆ ರಕ್ತದ ಒತ್ತಡದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸುಸ್ತು, ಆಯಾಸ, ದಣಿವು, ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಗಂಭೀರ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಐಸ್ ಆಪಲ್ ಉತ್ತಮವಾದ ಆಯ್ಕೆ ಆಗಿದೆ ಎನ್ನಬಹುದು.
ಇವುಗಳಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಹೇಗೆಂದರೆ ನಮ್ಮ ದೇಹದಲ್ಲಿರುವ ಎಲ್ಲ ವಿಧದ ಎಲೆಕ್ಟ್ರೋಲೈಟ್ ಅಂಶಗಳ ಸಮತೋಲನವನ್ನು ಕಾಯ್ದುಕೊಂಡು ಆರೋಗ್ಯ ಸುಧಾರಿಸುತ್ತದೆ. ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಿಂದ ನೀರಿನ ಅಂಶ ನಷ್ಟವಾಗುತ್ತದೆ. ಇಂತಹ ವೇಳೆ ಐಸ್ ಆಪಲ್ ಸೇವನೆ ಮಾಡುವುದು ಅತ್ಯುತ್ತಮ ಮಾರ್ಗವಾಗಿದೆ. ವಿಪರೀತ ಆಯಾಸ ಆಗುತ್ತಿದ್ರೆ, ಈ ಐಸ್ ಆಪಲ್ನ ತೊಳೆಗಳನ್ನು ತಿನ್ನುತ್ತಿದ್ರೆ, ದೀರ್ಘ ಕಾಲದವರೆಗೆ ದೇಹದಲ್ಲಿ ಚೈತನ್ಯ ಹಾಗೇ ಉಳಿಯುತ್ತದೆ. ಐಸ್ ಆಪಲ್ ಅನ್ನು ನಿಯಮಿತವಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತದೆ.

ನೋಡಿರಿ

