ಭಟ್ಕಳ ಕಪ್ಪೆಚಿಪ್ಪು ದುರಂತ – ಕಾಣೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಪತ್ತೆ

ಭಟ್ಕಳ ಕಪ್ಪೆಚಿಪ್ಪು ದುರಂತಕ್ಕೆ ಇಡೀ ರಾಜ್ಯವೇ ಮೌನವಾಗಿದೆ. ನಿನ್ನೆ ಮಧ್ಯಾಹ್ನ ನಡೆದ ದುರಂತದಲ್ಲಿ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ನಡೆದ ಕಪ್ಪೆಚಿಪ್ಪು ದುರಂತದಲ್ಲಿ ನಿನ್ನೆ ಸಂಜೆ ತನಕ 10 ಜನರ ಮೃತದೇಹ ಸಿಕ್ಕಿತ್ತು.ಆದ್ರೆ ಇವತ್ತು ಮತ್ತೊಬ್ಬ ವ್ಯಕ್ತಿಯ ಮೃತ ದೇಹ ಸಿಕ್ಕಿದ್ದು ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮಾದೇವ್ ನಾಯ್ಕ್ ಮೃತದೇಹ ಪತ್ತೆ
ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ದೇಶದ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್ – ಪೆಟ್ರೋಲ್ 2.61ರೂ ಹಾಗೂ ಡೀಸೆಲ್ 2.71 ರೂ ಹೆಚ್ಚಳ
ಬದುಕಿನ ಬಂಡಿ ಓಡಿಸೋಕೆ ನೀರಿನ ಜೊತೆ ಜೀವ ಪಣಕ್ಕಿಟ್ಟು ಒಂದೇ ಕುಟುಂಬದ ಇವೆರಲ್ಲಾ ಕಪ್ಪುಚಿಪ್ಪು ಎತ್ತುವ ಕೆಲಸ ಮಾಡುತ್ತಿದ್ದರು. ಆದ್ರೆ ವಿಧಿಯ ಲೆಕ್ಕಚಾರವೇ ಬೇರೆಯಾಗಿತ್ತು. ಶನಿವಾರ ಈ ನದಿಯ ಪರಿಸರದಲ್ಲಿ ಮಳೆಯಾಗಿತ್ತು. ಇದರಿಂದ ನದಿಯ ಮಟ್ಟ ಏರಿಕೆಯಾಗಿರುವ ಸಾಧ್ಯತೆಗಳಿವೆ. ಇದನ್ನರಿಯದೇ ಇಳಿದ ಜನರು ನೀರುಪಾಲಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಥವಾ ಒಬ್ಬರನ್ನ ಒಬ್ಬರು ರಕ್ಷಿಸಲು ಹೋಗಿ ಎಲ್ಲರೂ ನೀರುಪಾಲಾಗಿದ್ದಾರೆ ಅಂತ ಅಂದಾಜಿಸಲಾಗಿದೆ. ಆದ್ರೆ ಈ ದುರಂತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ.
ಮೃತ ಪಟ್ಟವರು ಒಂದೇ ಕುಟುಂಬದ ಸದಸ್ಯರು
ಮೃತರೆಲ್ಲರೂ ಭಟ್ಕಳ ತಾಲೂಕಿನ ಶಿರಾಲಿ ಮೂಲದ ಒಂದೇ ಕುಟುಂಬದವರಾಗಿದ್ದಾರೆ. ಒಟ್ಟು ಈ ದುರಂತದಲ್ಲಿ 11 ಜನ ಮೃತಪಟ್ಟಿದ್ದಾರೆ. ಕರಾವಳಿ ಭಾಗದಲ್ಲಿ ಮೊದಲ ಬಾರಿ ಇಂತಹದೊಂದು ದುರಂತ ನಡೆದಿದ್ದು, ಈ ದುರಂತದಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.

ನೋಡಿರಿ

