ದೇಶದ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್ – ಪೆಟ್ರೋಲ್ 2.61ರೂ ಹಾಗೂ ಡೀಸೆಲ್ 2.71 ರೂ ಹೆಚ್ಚಳ

ದೇಶದ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್ – ಪೆಟ್ರೋಲ್  2.61ರೂ ಹಾಗೂ ಡೀಸೆಲ್ 2.71 ರೂ ಹೆಚ್ಚಳ

ದೇಶದ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಯುದ್ಧದಿಂದ  ಸಾಕಷ್ಟು ಪೆಟ್ಟು ತಿಂದ ದೇಶದ ಜನತೆಗೆ ಈಗ   ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕೈ ಸುಟ್ಟುಕೊಳ್ಳುವಂತಾಗಿದೆ. ಇವತ್ತು ಒಂದು ಲೀಟರ್ ಪೆಟ್ರೋಲ್ ಬೆಲೆ 2.61ರೂ. ಹಾಗೂ ಡೀಸೆಲ್ ಬೆಲೆ 2.71 ರೂ. ಏರಿಕೆಯಾಗಿದೆ. ಜಸ್ಟ್ ಒಂದೇ ಒಂದು ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 4 ಸಲ ಏರಿಕೆಯಾಗಿದೆ.

ಮೇ 15 ರಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಟ್ಟಾರೆಯಾಗಿ ಲೀಟರ್‌ಗೆ ಸುಮಾರು ₹7.5 ರಷ್ಟು ದುಬಾರಿಯಾದಂತಾಗಿದೆ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಮೇ ತಿಂಗಳಲ್ಲಿ ತೈಲ ಕಂಪನಿಗಳು ಹಂತ ಹಂತವಾಗಿ ಗ್ರಾಹಕರ ಮೇಲೆ ಹೊರೆ ಹಾಕುತ್ತಾ ಬಂದಿವೆ.

ಇದನ್ನೂ ಓದಿ: 19ನೇ IPL ಸೀಸನ್ ಲೀಗ್ ಹಂತ ಮುಕ್ತಾಯ – KKR ವಿರುದ್ಧ ಗೆದ್ದು ಈ ಸೀಸನ್‌ಗೆ ಅಂತ್ಯ ಹಾಡಿದ DC

 

ದಿನಾಂಕಪೆಟ್ರೋಲ್ ಏರಿಕೆ (ಲೀಟರ್‌ಗೆ)ಡೀಸೆಲ್ ಏರಿಕೆ (ಲೀಟರ್‌ಗೆ)
ಮೇ 15₹3.00₹3.00
ಮೇ 1990 ಪೈಸೆ90 ಪೈಸೆ
ಮೇ 2387 ಪೈಸೆ91 ಪೈಸೆ
ಮೇ 25₹2.61₹2.71

 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನರು  ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ. ದಿನ ನಿತ್ಯ ಹೇಗೆ ಬೆಲೆ ಏರಿಕೆಯಾದ್ರೆ ನಾವು ಹೇಗೆ ಜೀವನ ಮಾಡುವುದು.. ನಮ್ಮ ಬದುಕು ಸಾಗಿಸೋದು ಹೇಗೆ? ಮಕ್ಕಳನ್ನ ಸಾಕುವುದು ಹೇಗೆ ಅಂತ ಪ್ರಶ್ನೆ ಮಾಡುತ್ತಾ ಸರ್ಕಾರದ  ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

Kishor KV