19ನೇ IPL ಸೀಸನ್ ಲೀಗ್ ಹಂತ ಮುಕ್ತಾಯ – KKR ವಿರುದ್ಧ ಗೆದ್ದು ಈ ಸೀಸನ್‌ಗೆ ಅಂತ್ಯ ಹಾಡಿದ DC

19ನೇ IPL ಸೀಸನ್ ಲೀಗ್ ಹಂತ ಮುಕ್ತಾಯ – KKR ವಿರುದ್ಧ ಗೆದ್ದು ಈ ಸೀಸನ್‌ಗೆ ಅಂತ್ಯ ಹಾಡಿದ DC

ಸಾಕಷ್ಟು ಹಲ್‌ಚಲ್ ಎಬ್ಬಿಸಿದ ಐಪಿಎಲ್‌ ಸೀಸನ್ 2026ರ ಲೀಗ್ ಹಂತಕ್ಕೆ ತೆೆರೆ ಬಿದ್ದಿದೆ. ಲೀಗ್ ಹಂತದ ಕೊನೇ ಪಂದ್ಯ ಕೆಕೆಆರ್ ಮತ್ತು ಡಿಸಿ ನಡುವೆ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 40 ರನ್‌ ಅಂತರದ ಗೆಲುವು ಸಾಧಿಸುವುದರೊಂದಿಗೆ ಲೀಗ್‌ ಹಂತ ಮುಕ್ತಾಯ ಕಂಡಿತು. ಡೆಲ್ಲಿ ಪರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್‌ ರಾಹುಲ್‌ ತಂಡದ ಕೊನೆಯ ಲೀಗ್‌ ಪಂದ್ಯದಲ್ಲಿಯೂ ಭರ್ಜರಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು.

ಇದನ್ನೂ ಓದಿ: ರಾಜಸ್ಥಾನಕ್ಕೆ ಸಿಕ್ಕಿತು ಪ್ಲೇಆಫ್ ಸ್ಥಾನ – ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ರಾಯಲ್ಸ್ ಕದನ

ಇನ್ನೂ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಅಭಿಷೇಕ್‌ ಪೊರೆಲ್‌  ಹಾಗೂ ಕನ್ನಡಿಗ ಕೆಎಲ್ ರಾಹುಲ್‌ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 40 ರನ್‌ ಸೇರಿಸಿತು. ಭರವಸೆಯ ಯುವ ಆಟಗಾರ ಸಾಹಿಲ್ ಪರಾಖ್‌ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್ ಬಾರಿಸಿ ಇಲ್ಲದ ರನ್‌ ಹೊಡೆಯಲು ಹೋಗಿ ಔಟ್ ಆದರು. ಇವರು ಔಟ್ ಆಗುವ ಮುನ್ನ ರಾಹುಲ್ ಜೊತೆಗೆ ಸಾಹಿಲ್ 47 ರನ್‌ ಸಿಡಿಸಿದರು.

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ 30 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 60 ರನ್‌ ಬಾರಿಸಿದರು. ನಾಯಕ ಅಕ್ಷರ್ ಪಟೇಲ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್‌ ಸಿಡಿಸಿದರು. ಡೇವಿಡ್ ಮಿಲ್ಲರ್ 28 ರನ್ ಬಾರಿಸಿದರೆ, ಆಶುತೋಷ್ ಶರ್ಮಾ ಅಜೇಯ 18 ರನ್‌ ಬಾರಿಸಿದ್ರು.  ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203 ರನ್‌ ಸೇರಿಸಿತು. ಈ ಗುರಿ ಬೆನ್ನತ್ತಿದ ಕೆಕೆಆರ್ ಕೋಲ್ಕತ್ತಾ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯ್ತು.

Kishor KV