ರಾಜಸ್ಥಾನಕ್ಕೆ ಸಿಕ್ಕಿತು ಪ್ಲೇಆಫ್ ಸ್ಥಾನ – ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ರಾಯಲ್ಸ್ ಕದನ

ರಾಜಸ್ಥಾನ ರಾಯಲ್ಸ್ ಕೊನೆಗೂ ಪ್ಲೇಆಫ್‌ಗೆ ಎಂಟ್ರಿಕೊಟ್ಟಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ರಾಜಸ್ಥಾನ ರಾಯಲ್ಸ್ ನಾಲ್ಕನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ:CSKಗೆ ಇಡ್ಲಿ, ದೋಸೆ ತಿನ್ನಿಸಿದ RCB – ಟ್ರೋಲ್ ಸಿಗ್ನಲ್ ಕೊಟ್ಟ KKRಗೆ ಗುನ್ನಾ
ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನಾಕೌಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ಗಳ ಸವಾಲಿನ ಮೊತ್ತ ದಾಖಲಿಸಿತ್ತು. 206 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಮತ್ತದೇ ಕಳಪೆ ಆರಂಭ ಪಡೆದುಕೊಂಡಿತು. ಚೇಸಿಂಗ್ ಆರಂಭಿಸಿದ ಮುಂಬೈಗೆ ಆರ್ಚರ್ ಮೊದಲ ಓವರ್ನಲ್ಲೇ ಶಾಕ್ ಕೊಟ್ಟರು. ರೋಹಿತ್ ಶರ್ಮಾರನ್ನ ಡಕ್ ಔಟ್ ಮಾಡಿ ಮುಂಬೈಗೆ ಆಘಾತ ನೀಡಿದರು. 3ನೇ ಓವರ್ನಲ್ಲಿ ಮತ್ತೆ ಬಂದ ಆರ್ಚರ್ 6 ರನ್ಗಳಿಸಿದ್ದ ನಮನ್ ಧೀರ್ರನ್ನ ಬೌಲ್ಡ್ ಮಾಡಿ ಡಬಲ್ ಶಾಕ್ ಕೊಟ್ಟರು. ರಿಕಲ್ಟನ್ 7 ಎಸೆತಗಳಲ್ಲಿ 12 ರನ್ಗಳಿಸಿ ಔಟಾದರು. ತಿಲಕ್ ವರ್ಮಾ ಕೂಡ ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೊನೆಗೂ ಸೂರ್ಯಕುಮಾರ್ ಯಾದವರ್ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು. ಇನ್ನು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ 34 ರನ್ ಗಳಿಸಿದರು. ಕೊನೆಗೂ ಮುಂಬೈ ರಾಜಸ್ಥಾನ ಎದುರು ಸೋತು ಶರಣಾಯಿತು. ಸೋಲಿನೊಂದಿಗೆ ಈ ಸೀಸನ್‌ಗೆ ವಿದಾಯ ಹೇಳಿತು.
ಈ ಗೆಲುವಿನೊಂದಿಗೆ ರಾಜಸ್ಥಾನ ತಂಡ ಪ್ಲೇಆಫ್‌ನಲ್ಲಿ ಕೊನೆಗೂ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು. ಶನಿವಾರ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಪ್ಲೇಆಫ್ ರೇಸ್ ಕನಸು ಕಂಡಿರುವಾಗಲೇ ರಾಜಸ್ಥಾನ್ ರಾಯಲ್ಸ್ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದೆ. ರಾಜಸ್ಥಾನ ರಾಯಲ್ಸ್ ತ 16 ಅಂಕಗಳನ್ನು ಗಳಿಸಿ ಇದೀಗ ಪ್ಲೇಆಫ್‌ಗೆ ಎಂಟ್ರಿ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ.

ನೋಡಿರಿ

