ಸೋಮವಾರ ಶಿವನನ್ನ ಹೇಗೆ ಪೂಜೆ ಮಾಡಬೇಕು- ಬೆಳಗ್ಗೆ ಮತ್ತು ಸಂಜೆ ಪೂಜೆ ಹೇಗಿರಬೇಕು ಗೊತ್ತಾ?

ನಾವು ಮನೆಯಲ್ಲಿ ಮಾಡುವ ಪ್ರತಿಯೊಂದು ಪೂಜೆ, ಪುನಸ್ಕಾರಗಳು ಅದರದ್ದೇ ಆದ ನಿಯಮಗಳನ್ನು, ಪದ್ಧತಿಗಳನ್ನು, ಸಂಪ್ರದಾಯಗಳನ್ನು, ವಿಧಿ – ವಿಧಾನಗಳನ್ನು ಒಳಗೊಂಡಿರುತ್ತದೆ. ಯಾವುದೇ ನಿಯಮಗಳನ್ನು ಪಾಲಿಸದೇ ಮಾಡಿದ ಪೂಜೆಯು ನಿಮಗೆ ಏನೂ ಪ್ರಯೋಜನವನ್ನು ನೀಡುವುದಿಲ್ಲ . ಶಿವನ ಪೂಜೆ ಕೂಡ ಸರಿಯಾದ ಕ್ರಮದಲ್ಲಿ ಮಾಡಬೇಕು. ಯಾವತ್ತುು ಕೂಡ ಕಾಟಚಾರಕ್ಕೆ ಪೂಜೆಯನ್ನ ಮಾಡಬಾರದು. ಹಾಗಿದ್ರೆ ಶಿವನ ಪೂಜೆಯನ್ನ ಯಾವ ಸಮಯದಲ್ಲಿ ಹೇಗೆ ಮಾಡಬೇಕು ಅನ್ನೋದ್ದನ್ನ ನೋಡೋಣ..
ಇದನ್ನೂ ಓದಿ:ಸೋಮವಾರ ಪಠಿಸಬೇಕಾದ ಆ ಪುಟ್ಟ ಶಿವ ಮಂತ್ರ ಯಾವುದು.? – ಪ್ರಯೋಜನಗಳೇನು ಗೊತ್ತಾ?
ಬೆಳಗ್ಗೆ ಪೂಜೆ
ಸಾಮಾನ್ಯವಾಗಿ ಜನರಿಗೆ ಶಿವನನ್ನು ಪೂಜಿಸುವ ವಿಧಾನ, ಮಹತ್ವಗಳು ತಿಳಿದಿರುತ್ತದೆ. ಆದರೆ, ಸೋಮವಾರದ ದಿನದಂದು ಸಂಜೆ ಸಮಯದಲ್ಲಿ ಶಿವನನ್ನು ಹೇಗೆ ಪೂಜಿಸಬೇಕೆಂಬುದು ಅನೇಕರಿಗೆ ತಿಳಿದಿಲ್ಲ. ಸೋಮವಾರದ ದಿನದಂದು ಮುಂಜಾನೆ ನಾವು ಶಿವ ಪೂಜೆಯನ್ನು ಬ್ರಹ್ಮ ಮುಹೂರ್ತದಲ್ಲಿ ಮಾಡಬೇಕು. ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ಗಂಗಾಜಲವನ್ನು ದೇವರ ಕೋಣೆಯಲ್ಲಿ ಸಿಂಪಡಿಸಿ. ನಂತರ ಶಿವನಿಗೆ ಹಾಲು, ನೀರು, ಗಂಗಾಜಲ ಇತ್ಯಾದಿಗಳನ್ನು ಅರ್ಪಿಸಿ. ಬಳಿಕ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು. ತದನಂತರ ಶಿವನಿಗೆ ಬಿಲ್ವಪತ್ರೆ, ಹೂವು, ದೀಪ, ಧೂಪ ಇತ್ಯಾದಿಗಳಿಂದ ಪೂಜೆಯನ್ನು ಮಾಡಬೇಕು. ಶಿವನನ್ನು ಪೂಜಿಸುವಾಗ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಪಠಿಸಬೇಕು.
ಸಂಜೆ ಪೂಜೆ
ಹಾಗೆಯೇ ಸಂಜೆ ಪೂಜೆ ಮಾಡುವವರು ಕೆಲವಂದಿಷ್ಟು ನಿಯಮವನ್ನು ಪಾಲಿಸಬೇಕಾಗುತ್ತೆ. ಅವುಗಳೆಂದರೆ, ಸೂರ್ಯಾಸ್ತದ ಮೊದಲು ಸ್ನಾನ ಮಾಡಬೇಕು. ನಂತರ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಪಂಚಾಮೃತದಿಂದ ಕ್ರಮಬದ್ಧವಾಗಿ ಅಭಿಷೇಕ ಮಾಡಿ. ಬಳಿಕ ಶ್ರೀ ಗಂಧವನ್ನು ಹಚ್ಚಬೇಕು. ಹಾಗೆಯೇ ಬಿಲ್ವಪತ್ರೆ, ಬಿಳಿ ಹೂವುಗಳು, ಧಾತುರ ಇತ್ಯಾದಿಗಳನ್ನು ಅರ್ಪಿಸಬೇಕು. ತದನಂತರ ದೇವರ ಎದುರು ತುಪ್ಪದ ದೀಪವನ್ನು ಬೆಳಗಿಸಿ, ಶಿವ ಚಾಲೀಸಾ ಅಥವಾ ಮಹಾಮೃತ್ಯುಂಜಯವನ್ನು ಪಠಿಸಿ. ಅದಾದ ಬಳಿಕ ಶಿವನಿಗೆ ಸಿಹಿತಿಂಡಿಗಳನ್ನು ಅರ್ಪಿಸಬೇಕು. ಮುಖ್ಯವಾಗಿ ಸೋಮವಾರ ನೀವು ಸಂಜೆ ಸಮಯದಲ್ಲಿ ಶಿವನನ್ನು ಪೂಜಿಸುವುದಾದರೆ ಸೂರ್ಯಾಸ್ತದ ಒಂದು ಗಂಟೆ ಮೊದಲು ಮತ್ತು ಸಂಜೆ ಸೂರ್ಯಾಸ್ತದ ಒಂದು ಗಂಟೆಯ ನಂತರ ಸಮಯವನ್ನು ಶಿವನ ಪೂಜೆಗೆ ಬಹಳ ಒಳ್ಳೆಯದು ಎಂದು ಹೇಳಲಾಗಿದೆ.

ನೋಡಿರಿ

