ಟ್ರಿಪ್ ಹೋಗುವ ಪ್ಲ್ಯಾನ್ ಇದ್ಯಾ? -ಹಾಸನದ ಈ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ

ಟ್ರಿಪ್ ಹೋಗುವ ಪ್ಲ್ಯಾನ್ ಇದ್ಯಾ? -ಹಾಸನದ ಈ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ

ಆ ದೇಶಕ್ಕೆ ಹೋಗಬೇಕು.. ಈ ದೇಶಕ್ಕೆ ಹೋಗಬೇಕು.. ಆ ರಾಜ್ಯದಲ್ಲಿ ಆ ಪ್ಲೇಸ್ ಚೆನ್ನಾಗಿದೆ ಅಂತ ಪ್ರವಾಸಕ್ಕೆ ಪ್ಲ್ಯಾನ್ ಮಾಡೋ ನಾವು. ನಮ್ಮ ಅಕ್ಕಪಕ್ಕದಲ್ಲಿರೋ ಪ್ರವಾಸಿ ತಾಣಗಳನ್ನೇ ಮರೆತು ಬಿಡುತ್ತೇವೆ. ನಿಮ್ಗೆ ನಮ್ಮ ರಾಜ್ಯದ ಹಾಸನದಲ್ಲಿರೋ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುತ್ತೇವೆ.. ನೀವು ಕೂಡ ರಜೆ ದಿನಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದು .

ಬೇಲೂರು ಹಾಗು ಹಳೇಬೀಡು

ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಾಗಿ ಗುರುತಿಸಿಕೊಂಡಿರುವ ಬೇಲೂರು ಹಾಗು ಹಳೇಬೀಡು ಆಲಯಗಳು ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಗಳಿಗೆ ಪ್ರತೀಕವಾಗಿವೆ. ಪ್ರತಿನಿತ್ಯ ಸಾವಿರಾರು ಸಂದರ್ಶಕರು ನಮ್ಮ ನೆಲದ ಕಲಾ ನೈಪುಣ್ಯತೆಯನ್ನು ಕಣ್ತುಂಬಿಕೊಳ್ಳಲು ಬರುತ್ತಾರೆ.ಒಂದು ಕಾಲದಲ್ಲಿ ಬೇಲೂರಿನಂತಹ ಸುಂದರವಾದ ನಗರವನ್ನು ವೇಲಾಪುರಿ ಎಂದು ಕರೆಯುತ್ತಿದ್ದರು. ಚೆನ್ನಕೇಶವ ಸ್ವಾಮಿಯ ಆಲಯ ಇಲ್ಲಿನ ಪ್ರಧಾನ ಆಕರ್ಷಣೆಯಾಗಿದೆ.

ಶೆಟ್ಟಿಹಳ್ಳಿ ಚರ್ಚ್

ಹಾಸನದಲ್ಲಿ ಶೆಟ್ಟಿಹಳ್ಳಿ ಚರ್ಚ್ ಕೂಡ ಒಂದು ಪ್ರವಾಸಿ ತಾಣ. ಇದು ತನ್ನ ಅದ್ಭುತವಾದ ಗೋಥಿಕ್ ವಾಸ್ತುಶಿಲ್ಪದೊಂದಿಗೆ ಕಂಗೊಳಿಸುತ್ತಿದೆ. ಫ್ರೆಂಚ್ ಮಿಷನರಿಗಳ ಪ್ರಭಾವವನ್ನು ಪ್ರತಿಬಿಂಬಿಸುವ ಈ ಚರ್ಚ್‌ ಅನ್ನು 1860 ರಲ್ಲಿ ನಿರ್ಮಿಸಲಾಯಿತು. ಇದನ್ನು ವಿಶೇಷವಾಗಿ ‘ಫ್ಲೋಟಿಂಗ್ ಚರ್ಚ್’ ಎಂದೇ ಕರೆಯುತ್ತಾರೆ. ಚರ್ಚ್ ಹೇಮಾವತಿ ನದಿಯ ದಡದಲ್ಲಿದ್ದು, ನೋಡುಗರನ್ನು ಬೆರಗುಗೊಳಿಸುತ್ತದೆ.

ಶ್ರವಣಬೆಳಗೊಳ

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ವಿಶ್ವದ ಅತಿ ಎತ್ತರದ ಏಕಶಿಲೆಯ ಪ್ರತಿಮೆ ಇದೆ. ಈ ಗೋಮಟೇಶ್ವರ ಪ್ರತಿಮೆಯು ಜೈನರಿಗೆ ಪವಿತ್ರ ಯಾತ್ರಾ ಸ್ಥಳವಾಗಿದ್ದು, 10 ನೇ ಶತಮಾನದಲ್ಲಿ ಗಂಗ ಸಾಮ್ರಾಜ್ಯದ ರಾಜ ರಾಜಮಲ್ಲನ ಸೇನಾಪತಿ ಚಾಮುಂಡರಾಯ ನಿರ್ಮಿಸಿದನು.ಈ ಸುಂದರವಾದ ಆಲಯವನ್ನು ಗೋಮಟೇಶ್ವರ ದೇವಾಲಯ ಅಥವಾ ಬಾಹುಬಲಿ ದೇವಸ್ಥಾನ ಎಂದೂ ಸಹ ಕರೆಯಲಾಗುತ್ತದೆ. 12 ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕವು ನಡೆಸಲಾಗುತ್ತದೆ. ಈ ಸಮಯದಲ್ಲಿ ದೇಶದ ಅನೇಕ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಹಾಸನಾಂಬ ದೇವಾಲ

ಹಾಸನದ ಹೆಗ್ಗುರುತುಗಳಲ್ಲಿ ಒಂದಾದ ಹಾಸನಾಂಬ ದೇವಾಲಯವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ದೇವಾಲಯವನ್ನು ಸುಮಾರು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ವರ್ಷದಲ್ಲಿ ಒಂದು ತಿಂಗಳು ಮಾತ್ರ ತೆರೆಯುವ ಈ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ತಾಯಿಯ ಕೃಪೆಗೆ ಪಾತ್ರರಾಗಲು ಬರುತ್ತಾರೆ. ಹಾಸನಾಂಬ ದೇವಾಲಯದ ಪ್ರಧಾನ ದೇವತೆಯ ಹೆಸರಿನಿಂದ ಈ ಪ್ರದೇಶಕ್ಕೆ ಹಾಸನ ಎಂದು ಹೆಸರಿಸಲಾಯಿತು.

 

ಹಾಸನದ ಪ್ರವಾಸಿ ತಾಣಗಳು

ಗೊರೂರು ಅಣೆಕಟ್ಟು

ಈಶ್ವರ ದೇವಸ್ಥಾನ

ಕೇದಾರೇಶ್ವರ ದೇವಸ್ಥಾನ

ಬೂಸೇಶ್ವರ ದೇವಾಲಯ

ಜೈನ ಮಠ

ಅಲ್ಲಾಲನಾಥ ದೇವಾಲಯ

ಹುಲಿಕೆರೆ ಕೊಳ

ಪಾರ್ವತಮ್ಮ ಬೆಟ್ಟ

ಕಪ್ಪೆ ಚೆನ್ನಿಗರಾಯ ದೇವಸ್ಥಾನ

ಭೋಗ ನರಸಿಂಹ ದೇವಾಲಯ

 

 

Kishor KV

Leave a Reply

Your email address will not be published. Required fields are marked *