ಸೂರ್ಯ ಸುಡಲಿಲ್ಲ.. ಬುಮ್ರಾ ಸಿಡಿಲಿಲ್ಲ- STARS ಸಂಸ್ಕೃತಿ MIಗೆ ಬ್ಯಾಕ್ ಫೈರ್
ಮುಂಬೈಗೆ ಮರುಕಳಿಸುತ್ತಾ ಆ ದಿನಗಳು?

ಐಪಿಎಲ್ ಇತಿಹಾಸದಲ್ಲಿ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಬಾರಿ ಅಂದ್ರೆ ಐಪಿಎಲ್ ಸೀಸನ್-19ರಲ್ಲಿ ಲತ್ತೆ ಹಿಡಿದಂತಿದೆ. ಟೂರ್ನಿ ಆರಂಭಕ್ಕೂ ಮುನ್ನ ಅತ್ಯಂತ ಬಲಿಷ್ಠ ತಂಡ ಎಂದು ಬಿಂಬಿತವಾಗಿದ್ದ ಹಾರ್ದಿಕ್ ಪಾಂಡ್ಯ ಪಡೆ ಈ ಸೀಸನ್‌ನಲ್ಲಿ ಹೊಪ್ಲಸ್ ಪ್ರದರ್ಶನ ನೀಡಿದೆ. ಸ್ಟಾರ್ ಆಟಗಾರರು, ಟೀಂ ಇಂಡಿಯಾದ ಶಕ್ತಿಗಳೇ ಮುಂಬೈ ತಂಡದಲ್ಲಿದ್ದರೂ 2026ರ ಐಪಿಎಸ್ ಸೀಸನ್‌ನಲ್ಲಿ ಕಳಪೆ ಪ್ರದರ್ಶನವನ್ನ ನೀಡಿದೆ. ಮುಂಬೈ ಇಂಡಿಯನ್ಸ್ ಫೆಲ್ಯೂರ್‌ಗೆ ಕಾರಣವೇನು ಅನ್ನೋದ್ದನ್ನ ನೋಡೋದಾದ್ರೆ.
ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟ ನೋಡಿದವರು ಇದು 5 ಸಲ ಕಪ್ ಗೆದ್ದ ಟೀಂನಾ ಆಟನಾ ಅಂತ ಕೇಳ್ತಿದ್ದಾರೆ. ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಲಾಸ್ಟ್‌ನಲ್ಲಿರೋ ಮುಂಬೈ ಇಂಡಿಯನ್ಸ್ ಗೆದ್ದಿರೋ ಪಂದ್ಯ ಕೇವಲ ನಾಲ್ಕೇ ನಾಲ್ಕು.. ನಾವು ಯಾಕೆ ಮುಂಬೈ ತಂಡ ಇಷ್ಟು ಕಳಪೆ ಪ್ರದರ್ಶನ ನೀಡ್ತಿದೆ ಅಂತ ನೋಡುವುದ್ದಕ್ಕೆ ಹೋದ್ರೆ ಸಾಕಷ್ಟು ಕಾರಣಗಳು ಸಿಗುತ್ತೆ..
ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್
ಭಾರತಕ್ಕೆ ಟಿ-20 ವಿಶ್ವಕಪ್ ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ಮುಂಬೈ ಈ ಬಾರಿ ಅತಿ ಹೆಚ್ಚು ನಂಬಿಕೆ ಇಟ್ಟಿತ್ತು. ಈ ಸೀಸನ್‌ನಲ್ಲಿ ಸೂರ್ಯ ಸಂಪೂರ್ಣ ಮಂಕಾಗಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕ ಗಳಿಸಿರುವುದನ್ನು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಅವರ ಅಬ್ಬರ ಕಾಣುತ್ತಿಲ್ಲ. ಸೂರ್ಯನ ಅಸ್ಥಿರ ಬ್ಯಾಟಿಂಗ್ ತಂಡದ ಮೊತ್ತದ ಮೇಲೆ ಭಾರೀ ಪರಿಣಾಮ ಬೀರಿದೆ.
ಫ್ಲಾಪ್ ಶೋ ಕೊಟ್ಟ ತಿಲಕ್
ಮಿಡಲ್ ಆರ್ಡರ್ ಆಧಾರಸ್ತಂಭ ಎಂದೇ ನಂಬಲಾಗಿದ್ದ ತಿಲಕ್ ವರ್ಮಾ ಈ ಸೀಸನ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯ ಒಂದು ಸೆಂಚುರಿ ಬಿಟ್ರೆ ಉಳಿದೆಲ್ಲಾ ಪಂದ್ಯದಲ್ಲಿ ಸಿಂಗಲ್ ಡಿಜಿಟ್ ಸ್ಕೋರ್‌ಗೆ ಔಟ್ ಆಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಮುಂಬೈ ತಂಡದ ಮಿಡಲ್ ಆರ್ಡರ್ ಕುಸಿಯಲು ತಿಲಕ್ ಅವರ ಫಾರ್ಮ್ ಕೊರತೆಯೇ ಮುಖ್ಯ ಕಾರಣ.
ಸಿಡಿಯದ ಜಸ್ಮಿತ್ ಬೂಮ್ರಾ ಬೌಲಿಂಗ್
ವಿಶ್ವದ ನಂಬರ್ 1 ವೇಗಿ ಜಸ್ಮಿತ್ ಬೂಮ್ರಾ ಅವರು ಮುಂಬೈ ಪಾಲಿಗೆ ಈ ಸೀಸನ್‌ನಲ್ಲಿ ವಿಲನ್ ಆದ್ರು. ಈ ಸಲ ವಿಕೆಟ್ ಪಡೆಯಲು ಬೂಮ್ರಾ ಅಕ್ಷರಶಃ ಪರದಾಡಿದ್ರು. ಮೊದಲಿನಂತೆ ವೇಗವಾಗಿ ಬೌಲ್ ಮಾಡುವ ಬದಲು ಕ್ಲೋವರ್ ಬಾಲ್‌ಗಳ ಮೊರೆ ಹೋಗುತ್ತಿರುವುದು ತಂಡಕ್ಕೆ ದೊಡ್ಡ ಹೊಡೆತ ಕೊಡ್ತು. ಮುಂಬೈನ ಪ್ರಮುಖ ಅಸ್ತ್ರವಾಗಿದ್ದ ಬೂಮ್ರಾ ಅವರ ವೈಫಲ್ಯ ತಂಡ ಹೀನಾಯ ಪ್ರದರ್ಶನಕ್ಕೆ ಒಂದು ದೊಡ್ಡ ಕಾರಣ ಅಂತಲೇ ಹೇಳಬಹುದು.
ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವೇಸ್ಟ್
ಸೋಲಿಗೆ ಎಲ್ಲಕ್ಕಿಂತ ದೊಡ್ಡ ಕಾರಣವೆಂದರೆ ನಾಯಕ ಹಾರ್ದಿಕ್ ಪಾಂಡ್ಯ. ತಂಡದಲ್ಲಿರುವ ಸೂಪರ್ ಸ್ಟಾರ್ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಹಾರ್ದಿಕ್ ವಿಫಲರಾಗಿದ್ದಾರೆ. ಹಾರ್ದಿಕ್ ಅವರ ‘ಒನ್ ಮ್ಯಾನ್ ಶೋ’ ಧೋರಣೆಯಿಂದಾಗಿ ಡ್ರೆಸಿಂಗ್ ರೂಮ್ ವಾತಾವರಣ ಹದಗೆಟ್ಟಿದೆ ಎಂಬ ಮಾತುಗಳು ಕೇಳಿ ಬಂತು. ಕ್ರಿಕೆಟ್ ಎಂಬುದು ಟೀಮ್ ಗೇಮ್ ಎಂಬ ಸತ್ಯವನ್ನು ಹಾರ್ದಿಕ್ ಮರೆತಂತೆ ವರ್ತಿಸುತ್ತಿರುವುದು ತಂಡದ ಪಾಲಿಗೆ ಶಾಪವಾಯ್ತು. ವೈಯಕ್ತಿಕವಾಗಿ ರನ್‌ಗಳಿಸುವುದ್ದಕ್ಕೆ ಪಾಂಡ್ಯ ಪರದಾಡಿದ್ದು, ಮುಂಬೈ ಹೀನಾಯ ಪ್ರದರ್ಶನಕ್ಕೆ ಮುಖ್ಯ ಕಾರಣವಾಯ್ತು.
ರೋಹಿತ್ ಶರ್ಮಾಗೆ ಗಾಯದ ಸಮಸ್ಯೆ
ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಗಾಯದ ಕಾರಣದಿಂದ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು ತಂಡಕ್ಕೆ ಶಾಪವಾಯ್ತು. ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದ್ದು ತಂಡದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಿದ್ದು ಎದ್ದು ಕಾಣುತಿತ್ತು. ಅಭಿಮಾನಿಗಳ ಆಕ್ರೋಶ ಮತ್ತು ತಂಡದೊಳಗಿನ ಭಿನ್ನಾಭಿಪ್ರಾಯಗಳು ಮುಂಬೈ ಕಳಪ ಪ್ರದರ್ಶನಕ್ಕೆ ಮುಖ್ಯ ಕಾರಣವಾಯ್ತು.
ಸೀಸನ್-19ರಲ್ಲಿ ಮುಂಬೈ ಇಂಡಿಯನ್ಸ್ ಒಂದು ಸೆಟಲ್ಸ್ ಟೀಮ್ನನಂತೆ ಕಾಣುತ್ತಿಲ್ಲ. ಪ್ರತಿ ಪಂದ್ಯದಲ್ಲೂ ಅನಾವಶ್ಯಕ ಪ್ರಯೋಗಗಳನ್ನು ಮಾಡುತ್ತಾ ಮ್ಯಾನೇಜ್‌ಮೆಂಟ್ ಕೈಸುಟ್ಟುಕೊಳ್ಳುತ್ತಿದೆ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರಮುಖ ಆಟಗಾರರನ್ನು ಕೈಬಿಡುವುದು ಮತ್ತು ಬ್ಯಾಟಿಂಗ್ ಆರ್ಡರ್ ಬದಲಾವಣೆ ಮಾಡುತ್ತಿರುವುದು ತಂಡಕ್ಕೆ ದೊಡ್ಡ ಹೊಡೆತ ನೀಡ್ತು.

ನೋಡಿರಿ

