ಮೈದಾನದಲ್ಲಿ ಕೊಹ್ಲಿ ಈಗಲೂ ಜಗಜಟ್ಟಿ – ಕೆಣಕಿದ ಹೆಡ್ ಗೆ ಕಾದಿದ್ಯಾ ರಿವೇಂಜ್?
ಮತ್ತೆ ಎದುರಾಗ್ತಾರಾ RCB Vs SRH?

ಬೆಂಗಳೂರು ವರ್ಸಸ್ ಹೈದ್ರಾಬಾದ್ ಮ್ಯಾಚ್ ಮುಗೀತು. ಬೆಂಗಳೂರು ಟಾಪ್-1ನಲ್ಲೇ ಇದೆ. ಹೈದ್ರಾಬಾದ್ ಟಾಪ್-3ನಲ್ಲಿದೆ. ಆದ್ಮೇಲೆ ಈ ಪಂದ್ಯ ಆದ್ಮೇಲೆ ನೋ ಶೇಕ್ ಹ್ಯಾಂಡ್ ಕಾಂಟ್ರವರ್ಸಿ ಜೋರಾಗಿದೆ. ಪಂದ್ಯ ಮುಗಿದ್ಮೇಲೆ ಹೈದ್ರಾಬಾದ್ ಆಟಗಾರ ಟ್ರಾವಿಸ್ ಹೆಡ್ ಅವ್ರಿಗೆ ಆರ್ಸಿಬಿ ಕಿಂಗ್ ವಿರಾಟ್ ಕೊಹ್ಲಿ ಕೈಕುಲುಕಲಿಲ್ಲ ಅನ್ನೋದು.
ಇದನ್ನೂ ಓದಿ : ಟಾಪ್-1ಗಾಗಿ ಟಾರ್ಗೆಟ್ ಬಿಟ್ಟ RCB – SMART ಅಲ್ಲ ಸೋಲಿನ SHAME
ಆರ್ಸಿಬಿ ವರ್ಸಸ್ ಎಸ್ಆರ್ಹೆಡ್ ನಡುವಿನ ಮ್ಯಾಚಲ್ಲಿ ನೋ ಶೇಕ್ ಹ್ಯಾಂಡ್ ವಿವಾದ ಹಲ್ಚಲ್ ಎಬ್ಬಿಸಿದೆ. ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಟ್ರಾವಿಡ್ ಹೆಡ್ ನಡುವೆ ಶುರುವಾದ ಟಾಕ್ ವಾರ್ ಪಂದ್ಯ ಮುಗಿದ ಮೇಲೆಯೂ ಕಂಟಿನ್ಯೂ ಆಯ್ತು. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಹೈದ್ರಾಬಾದ್ 255 ರನ್ಗಳನ್ನ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು 200 ರನ್ಗಳನ್ನ ಸ್ಕೋರ್ ಮಾಡಿ 55 ರನ್ಗಳಿಂದ ಸೋಲೊಪ್ಪಿಕೊಂಡ್ರು. ಆದ್ರೆ ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಕೈಕುಲುಕುವಾಗ ವಿರಾಟ್ ಕೊಹ್ಲಿ ಹೈದ್ರಾಬಾದ್ ಆಟಗಾರ ಟ್ರಾವಿಸ್ ಹೆಡ್ ಕೈಕುಲುಕಲಿಲ್ಲ. ಶೇಕ್ ಹ್ಯಾಂಡ್ ಕೊಡಲು ಟ್ರಾವಿಸ್ ಹೆಡ್ ಕೈಚಾಚಿದ್ರೂ ಕೂಡ ಕೊಹ್ಲಿ ನೋಡಿಯೂ ನೋಡದಂತೆ ಮುಂದೆ ಸಾಗಿದ್ದಾರೆ. ಕೊಹ್ಲಿಯವ್ರ ಇದೇ ವರ್ತನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾರ್ಮಲಿ ವಿರಾಟ್ ಯಾರನ್ನೂ ಇಷ್ಟೊಂದು ಪರ್ಸನಲ್ ಆಗಿ ತಗೊಳಲ್ಲ. ಮೈದಾನದ ವಿಚಾರಗಳನ್ನ ಪಂದ್ಯದ ಬಳಿಕ ಕ್ಯಾರಿ ಮಾಡಲ್ಲ. ಆದ್ರೆ ಹೆಡ್ ವಿಚಾರದಲ್ಲಿ ಯಾಕೆ ಈ ಥರ ರೂಡ್ ಆಗಿ ಬಿಹೇವ್ ಮಾಡಿದ್ರು ಅನ್ನೋದೇ ಕೆಲವರ ಪ್ರಶ್ನೆಯಾಗಿದೆ. ಇದಕ್ಕೆ ಕಾರಣ ಟ್ರಾವಿಸ್ ಹೆಡ್ ಅವ್ರ ಅಧಿಕಪ್ರಸಂಗ. ಮೈದಾನದಲ್ಲಿ ಪಂದ್ಯದ ವೇಳೆ ನಡೆದ ಕೆಲ ಟಾಂಟ್ಗಳು.
ಕೊಹ್ಲಿ-ಹೆಡ್ ಕಾಳಗಕ್ಕೆ ಕಾರಣ!
ಸ್ಫೋಟಕ ಆರಂಭ ಪಡೆದ ಟ್ರಾವಿಸ್ ಹೆಡ್ 26(16) ರನ್ ಗೆ ಔಟ್
ಹೆಡ್ ಔಟ್ ಆದಾಗ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ದ ವಿರಾಟ್
ಯಾವುದೇ ರಿಯಾಕ್ಷನ್ ಕೊಡದೆ ಮೈದಾನದಿಂದ ಹೊರನಡೆದ ಹೆಡ್
ಕೊಹ್ಲಿ ಬ್ಯಾಟಿಂಗ್ ವೇಳೆ ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡಿ ಎಂದ ಹೆಡ್
ಕಿಚಾಯಿಸಿದ್ದ ಹೆಡ್ ಗೆ ಇಂಪ್ಯಾಕ್ಟ್ ಪ್ಲೇಯರ್ ಅಲ್ಲ ನೀನು ಎನ್ನುವ ಸಿಂಬಲ್
2 ಓವರ್ ಬೌಲಿಂಗ್ ಮಾಡುವಂತೆ ಹೆಡ್ ಗೆ ಹೇಳಿದ್ದ ವಿರಾಟ್ ಕೊಹ್ಲಿ
15(11) ರನ್ ಗಳಿಗೆ ಔಟ್ ಆಗಿ ಪೆವಿಲಿಯನ್ ಗೆ ಹೋಗುತ್ತಿದ್ದ ವಿರಾಟ್
ಕೊಹ್ಲಿ ಔಟ್ ಆದಾಗ ವ್ಯಂಗ್ಯವಾಗಿ ಮಾತನಾಡಿದ್ದ ಟ್ರಾವಿಸ್ ಹೆಡ್
ನಾನು ಬೌಲಿಂಗ್ ಮಾಡೋ ಮೊದಲೇ ಔಟ್ ಆದ್ರಿ ಫ್ರೆಂಡ್ ಎಂದು ಟೀಸ್
ಹೆಡ್ ಅಧಿಕ ಪ್ರಸಂಗತನಕ್ಕೆ ಶೇಕ್ ಹ್ಯಾಂಡ್ ಕೊಡದೆ ಕೊಹ್ಲಿ ಸಿಟ್ಟು
ಹೀಗೆ ಸಣ್ಣದಾಗಿ ಶುರುವಾದ ವಾರ್ ಆ ನಂತ್ರ ದೊಡ್ಡದಾಗಿ ನೋ ಶೇಕ್ಹ್ಯಾಂಡ್ವರೆಗೂ ಹೋಯ್ತು. ಬಟ್ ಇಲ್ಲಿ ರಿಯಾಲಿಟಿ ಏನಂದ್ರೆ ವಿರಾಟ್ ಕೊಹ್ಲಿ ಇರೋದೇ ಹಾಗೇ. ಮೈದಾನದಲ್ಲಿ ಆಡ್ತಿದ್ದಾರೆ ಅಂದ್ರೆ ಅಗ್ರೆಶನ್ ಪೀಕ್ನಲ್ಲೇ ಇರುತ್ತೆ. ಅಖಾಡದಲ್ಲಿ ಜಗಜಟ್ಟಿಯೇ. ಬ್ಯಾಟಿಂಗ್ ಇರ್ಲಿ ಫೀಲ್ಡಿಂಗ್ ಇರ್ಲಿ. ತಂಡದ ಪರ ಯಾರೇ ವಿಕೆಟ್ ತಗೊಂಡ್ರೂ ಅವ್ರಿಗಿಂತ ಜಾಸ್ತಿ ಇವ್ರೇ ಸೆಲೆಬ್ರೇಟ್ ಮಾಡ್ತಾರೆ. ಜೊತೆಗಿರೋ ಬ್ಯಾಟರ್ ಸಿಕ್ಸ್, ಫೋರ್ ಹೊಡೆದ್ರೆ ಅವ್ರ ಬೆನ್ನುತಟ್ಟಿ ಗೋ ಹೆಡ್ ಅಂತಾ ಅಪ್ರಿಶಿಯೇಟ್ ಮಾಡ್ತಾರೆ. ಇಡೀ ತಂಡವನ್ನ ಚಿಯರ್ ಮಾಡ್ತಾರೆ. ಪ್ರತೀ ಮೂಮೆಂಟ್ ನೂ ಎಂಜಾಯ್ ಮಾಡ್ತಾರೆ. ತಾನು ಲೆಜೆಂಡರಿ ಕ್ರಿಕೆಟರ್. ಕೂಲ್ ಌಂಡ್ ಕಾಮ್ ಆಗಿ ಇರ್ಬೇಕು ಅದೆಲ್ಲ ಇಲ್ಲ. ಈ ಸೀಸನ್ನಲ್ಲೇ ತಗೊಳ್ಳಿ ಬ್ಯಾಕ್ ಟು ಬ್ಯಾಕ್ ಡಕ್ ಆಗಿ ಮೂರನೇ ಮ್ಯಾಚಲ್ಲಿ 1 ರನ್ ತಗೊಂಡಾಗ್ಲೂ ಅವ್ರ ಸೆಲೆಬ್ರೇಷನ್ ನೋಡಿ ಕ್ರಿಕೆಟ್ ಜಗತ್ತೇ ಬೆರಗಾಗಿತ್ತು. ಒಂದು ರನ್ಗೆ ಇಷ್ಟು ದೊಡ್ಡ ರಿಯಾಕ್ಷನ್ ಅಂತಾ. ಆದ್ರೆ ಆ 1 ರನ್ ಮಹತ್ವ ಏನು ಅನ್ನೋದು ವಿರಾಟ್ಗೆ ಗೊತ್ತಿತ್ತು. ಌಂಡ್ ಆ ಮ್ಯಾಚಲ್ಲಿ ಶತಕ ಕೂಡ ಹೊಡೀತಾರೆ. ಆದ್ರೆ ಯಾರಾದ್ರೂ ಅವ್ರ ಜೊತೆ ಲಿಮಿಟ್ ಮೀರಿ ನಡ್ಕೊಂಡ್ರೆ ವಾಪಸ್ ಕೊಡೋವರೆಗೂ ಬಿಟ್ಟಿದ್ದೇ ಇಲ್ಲ. ಈಗ ಟ್ರಾವಿಸ್ ಹೆಡ್ ಆ ಕೆಲಸ ಮಾಡಿದ್ದಾರೆ. ಌಂಡ್ ಒನ್ ಮೋರ್ ಥಿಂಗ್ ಈ ಸೀಸನ್ನಲ್ಲೇ ಮತ್ತೊಮ್ಮೆ ಆರ್ಸಿಬಿ ಮತ್ತು ಹೈದ್ರಾಬಾದ್ ತಂಡಗಳು ಮತ್ತೊಮ್ಮೆ ಮುಖಾಮುಖಿ ಆಗ್ಬೋದು. ಕ್ವಾಲಿಫೈಯರ್ 2 ಅಥವಾ ಫೈನಲ್ ಮ್ಯಾಚ್ನಲ್ಲಿ. ಆಗಂತೂ ರಿವೇಂಜ್ ತಗೊಳ್ದೇ ಬಿಡೋ ಮಾತೇ ಇಲ್ಲ. ಯಾಕಂದ್ರೆ ಇರೋದೇ ಹಾಗೇ. ಐದು ಪರ್ಸೆಂಟ್ ಕೊಟ್ರೆ 50 ಪರ್ಸೆಂಟ್ ರಿಟರ್ನ್ ಕೊಡೋಕೆ ಕಾಯ್ತಾ ಇರ್ತಾರೆ.

ನೋಡಿರಿ

