ಬಾಲಿವುಡ್‌ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ – ಬಂದರ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಜೊತೆ ಕನ್ನಡಿಗನ ಖದರ್

ಬಾಲಿವುಡ್‌ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ – ಬಂದರ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಜೊತೆ ಕನ್ನಡಿಗನ ಖದರ್

ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಬಂದರ್. ಹಿಂದಿ ಸಿನಿಮಾ ರಂಗದಲ್ಲಿ ಹೊಸ ಅಲೆ ಎಬ್ಬಿಸುವ ಸಿನಿಮಾ ಎಂದೇ ಹೇಳಲಾಗುತ್ತಿದೆ. ಇದೀಗ ಈ ಸಿನಿಮಾದ ಟ್ರೈಲರ್ನಲ್ಲಿ ಕನ್ನಡಿಗ ರಾಜ್ ಬಿ ಶೆಟ್ಟಿಯವರ ನಗು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇದನ್ನೂ ಓದಿ:ರುಕ್ಮಿಣಿ ವಸಂತ್‌ಗೆ ಡೀಪ್‌ಪೇಕ್‌ ಕಾಟ – ಖಡಕ್ ಎಚ್ಚರಿಕೆ ನೀಡಿದ ಕಾಂತಾರ ಬೆಡಗಿ

ಬಾಲಿವುಡ್ ನಟ ಬಾಬಿ ಡಿಯೋಲ್ ಅಭಿನಯದ ಬಂದರ್ ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಬಂದರ್ ಸಿನಿಮಾ ಜೂನ್ 5 ರಂದು ರಿಲೀಸ್ ಆಗಲಿದೆ. ಈಗಾಗಲೇ ಬಂದರ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸ್ಪೆಷಲ್ಲಾಗಿ ಕಾಣಿಸಿಕೊಂಡಿದ್ದಾರೆ. ನೈಜ ಘಟನೆಗಳ್ನಾಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ಈ ಸಿನಿಮಾದಲ್ಲಿ ಸಮೀರ್ ಮೆಹರಾ ಅನ್ನೋ ಪಾತ್ರದಲ್ಲಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ.

ಸಮೀರ್ ಮೆಹರಾ ಜೈಲಿಗೆ ಹೋದಾಗ ಅಲ್ಲಿ ರಾಜ್ ಬಿ ಶೆಟ್ಟಿ ಸಿಗುವ ಹಾಗೆ ಚಿತ್ರದ ಕಥೆ ನಿರೂಪಿಸಲಾಗಿದೆ. ರಾಜ್ ಬಿ ಶೆಟ್ಟಿ ಅವರ ಪಾತ್ರದ ಪರಿಚಯ ಈ ಒಂದು ಟ್ರೈಲರ್ ಅಲ್ಲಿಯೇ ಆಗುತ್ತದೆ. ಒಂದೇ ಒಂದು ಸೀನ್ ನಲ್ಲಿ ರಾಜ್ ಬಿ ಶೆಟ್ಟಿ ಬಂದು ಹೋಗುತ್ತಾರೆ. ಈ ಸಿನಿಮಾದಲ್ಲಿ ರಾಜ್ ಪಾತ್ರ ಮಾಡಿದ್ದಾರೆ. ರಾಜ್ ಬಿ ಶೆಟ್ಟಿಯವರ ನಗುವೇ ಈ ಟ್ರೇಲರ್ ಹೈಲೆಟ್ಸ್ ಆಗಿದೆ. ಜೂನ್-5 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಅಧಿಕೃತವಾಗಿಯೇ ಸಿನಿಮಾ ತಂಡ ಹೇಳಿಕೊಂಡಿದೆ.

ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಬಂದರ್ ಸಿನಿಮಾದಲ್ಲಿ ಬಾಬಿಡಿಯೋಲ್ ಜೊತೆ ರಾಜ್ ಬಿ ಶೆಟ್ಟಿ ಪಾತ್ರ ವಿಶಿಷ್ಟವಾಗಿದೆ. ಒಂದು ವಿಲಕ್ಷಣ ನಗುವಿನ ಮೂಲಕ ರಾಜ್ ಶೆಟ್ಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಬಾಲಿವುಡ್ ಫೇಮಸ್ ಡೈರೆಕ್ಟರ್ ಅನುರಾಗ್ ಕಶ್ಯಪ್ ರಾಜ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ರಾಜ್ಗಾಗಿ ಪಾತ್ರವನ್ನು ಹೆಣೆದಿದ್ದಾರೆ ಎಂದು ಹೇಳಲಾಗಿದೆ.

Sulekha

Leave a Reply

Your email address will not be published. Required fields are marked *