ರುಕ್ಮಿಣಿ ವಸಂತ್‌ಗೆ ಡೀಪ್‌ಪೇಕ್‌ ಕಾಟ – ಖಡಕ್ ಎಚ್ಚರಿಕೆ ನೀಡಿದ ಕಾಂತಾರ ಬೆಡಗಿ

ರುಕ್ಮಿಣಿ ವಸಂತ್‌ಗೆ ಡೀಪ್‌ಪೇಕ್‌  ಕಾಟ –  ಖಡಕ್ ಎಚ್ಚರಿಕೆ ನೀಡಿದ ಕಾಂತಾರ ಬೆಡಗಿ

ಇದು AI ಜಮಾನ.. ಇಲ್ಲಿ ಸುಳ್ಳು ನಿಜವಾಗುತ್ತೆ.. ಇಲ್ಲದ್ದನ್ನ ಇದ್ದಂತೆ ತೋರಿಸಲಾಗುತ್ತೆ.. ಸಾಕಷ್ಟು ಜನರು ತಂತ್ರಜ್ಞಾನವನ್ನ ಬಳಸಿ ಮಣ್ಣು ತಿನ್ನೋ ಕೆಲಸ ಮಾಡುತ್ತಿದ್ದಾರೆ. ಈಗ  ಕಾಂತಾರ ಬೆಡಗಿ  ರುಕ್ಮಿಣಿ ವಸಂತ್‌ಗೆ AIಯಿಂದ ಸಂಕಷ್ಟ ಎದುರಾಗಿದೆ.  AI ತಂತ್ರಜ್ಞಾನ ಬಳಸಿ ರುಕ್ಮಿಣಿ ವಸಂತ್‌ ಅವರ  ಫೇಕ್ ಫೋಟೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗುತ್ತಿದೆ. ಇದರ ವಿರುದ್ಧ ಈಗ ಕಾನೂನು  ಹೋರಾಟಕ್ಕೆ ನಟಿ ಮುಂದಾಗಿದ್ದಾರೆ.

ಇದನ್ನೂ ಓದಿ: ಧೋನಿ ಪ್ರಾಕ್ಟೀಸ್ ಫೋಟೋ ಹಾಕಿ ನಂಬಿಕೆ ಹುಟ್ಟಿಸಿದ್ರು– ಧೋನಿ ಹೆಸರಲ್ಲಿ CSK ಮ್ಯಾನೇಜ್ ಮೆಂಟ್ ಮೋಸ ?

ಈ ತಮ್ಮ ಅಧಿಕೃತ ಹೇಳಿಕೆಯಲ್ಲಿ ನೀಡಿರುವ ನಟಿ  ರುಕ್ಮಿಣಿ ವಸಂತ್‌ಗೆ  “ನನ್ನ ತಂಡ ಮತ್ತು ನಾನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಎಐ-ಜನರೇಟೆಡ್ ಚಿತ್ರಗಳನ್ನು ಗಮನಿಸಿದ್ದೇವೆ. ಅವುಗಳಲ್ಲಿ ನನ್ನನ್ನು ತೋರಿಸಿರುವ ರೀತಿ ಸಂಪೂರ್ಣ ನಕಲಿ, ಕೃತಕವಾಗಿ ಸೃಷ್ಟಿಸಲ್ಪಟ್ಟವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಇಂತಹ ಚಿತ್ರಗಳನ್ನು ಸೃಷ್ಟಿಸಿ ಹರಡುವವರ ವಿರುದ್ಧ ಕಿಡಿಕಾರಿರುವ ನಟಿ, “ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಒಬ್ಬರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಸೃಷ್ಟಿಸುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ. ಇದು ಕೇವಲ ಸುಳ್ಳು ಮಾಹಿತಿ ಹಂಚುವುದಲ್ಲ, ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆ ಎಂದಿದ್ದಾರೆ. ನಕಲಿ ಫೋಟೋ ಹಂಚುವವರ ವಿರುದ್ಧ ಕಾನೂನು ಕ್ರಮ ಹಾಗೂ ಸೈಬರ್ ಕ್ರೈಂ ದೂರು ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Kishor KV

Leave a Reply

Your email address will not be published. Required fields are marked *